Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸ್ವದೇಶದತ್ತ ಹೊರಟಿರುವ ನೀತಿವಂತರು!

    ಬದುಕಿರುವ ನೀತಿವಂತರು ಕ್ರಿಸ್ತನ ಬರೋಣದಲ್ಲಿ ‘ಕಣ್ಣುರೆಪ್ಪೆ ಮುಚ್ಚುವಷ್ಟರಲ್ಲಿ’ ಮಾರ್ಪಡುವರು. ದೇವರ ಶಬ್ದವನ್ನು ಕೇಳಿದಾಗ ಅವರು ಮಹಿಮೆಯ ಶರೀರ ಧರಿಸಿಕೊಂಡು ಅಮರತ್ವ ಹೊಂದುವರು ಹಾಗೂ ಪುನರುತ್ಥಾನಗೊಂಡ ಭಕ್ತರೊಂದಿಗೆ ಸೇರಿ ಅಂತರಿಕ್ಷದಲ್ಲಿ ತಮ್ಮ ರಕ್ಷಕನನ್ನು ಎದುರುಗೊಳ್ಳಲು ಫಕ್ಕನೆ ಮೇಘವಾಹನರಾಗಿ ಒಯ್ಯಲ್ಪಡುವರು (1 ಥೆಸಲೋನಿಕ 4:16, 17), ಚಿಕ್ಕಮಕ್ಕಳನ್ನು ದೇವದೂತರು ತೆಗೆದುಕೊಂಡು ಹೋಗಿ ಅವರ ತಾಯಿಯರಿಗೆ ಕೊಡುವರು. ಮರಣದಿಂದ ಬೇರ್ಪಟ್ಟಿರುವ ಗೆಳೆಯರು ಇನ್ನೆಂದಿಗೂ ಬೇರೆಯಾಗದಂತೆ ಒಂದಾಗಿ, ಹರ್ಷಗೀತೆಯೊಡನೆ ಪರಲೋಕಕ್ಕೆ ಏರಿ ಹೋಗುವರು (ಗೇಟ್ ಕಾಂಟ್ರೊವರ್ಸಿ, 645).ಕೊಕಾಘ 164.1

    ನಾವೆಲ್ಲರೂ ಅಂದರೆ ಸತ್ತು ಪುನರುತ್ಥಾನ ಹೊಂದಿದ ನೀತಿವಂತರು ಹಾಗೂ ರೂಪಾಂತರ ಹೊಂದಿದ ಬದುಕಿರುವ ಭಕ್ತರು ಪರಲೋಕಕ್ಕೆ ಏರಿಹೋಗುವೆವು. ಅಲ್ಲಿಗೆ ಹೋಗಲು ಏಳುದಿನಗಳಾಗುತ್ತವೆ (ಅರ್ಲಿ ರೈಟಿಂಗ್, ಪುಟ 16).ಕೊಕಾಘ 164.2

    ರಥಗಳು ಪರಲೋಕಕ್ಕೆ ಹೋಗುತ್ತಿರುವಾಗ, ಚಕ್ರಗಳು ಹಾಗೂ ರೆಕ್ಕೆಗಳು ಪರಿಶುದ್ದನು, ಪರಿಶುದ್ದನು ಎಂದು ಹೇಳುವವು. ಮೇಘದ ಸುತ್ತಲೂ ಇರುವ ಪರಿಶುದ್ಧದೂತರ ಗಣಗಳು “ಸರ್ವಶಕ್ತನಾದ ದೇವರು ಪರಿಶುದ್ದನು, ಪರಿಶುದ್ಧನು, ಪರಿಶುದ್ದನು ಎಂದು ಸ್ತುತಿಸುವರು ಹಾಗೂ ಭಕ್ತಜನರು ಮಹಿಮೆ! ಹಲ್ಲೆಲೂಯಾ’ ಎಂದು ಜಯಘೋಷ ಮಾಡುವರು (ಅರ್ಲಿ ರೈಟಿಂಗ್ಸ್, 35).ಕೊಕಾಘ 164.3

    ರಕ್ಷಕನಾದ ಕ್ರಿಸ್ತನನ್ನು ಕಣ್ಣಾರೆ ಕಾಣುವುದು ಹಾಗೂ ಆತನಿಂದ ವಿಮೋಚಿಸಲ್ಪಟ್ಟವರಾಗಿ ಸ್ವಾಗತ ಪಡೆದುಕೊಳ್ಳುವುದು ಎಷ್ಟೊಂದು ಮಹಿಮೆಯಿಂದ ಕೂಡಿದ ವೈಭವವಲ್ಲವೇ? ನಾವು ದೀರ್ಘಕಾಲ ಇದಕ್ಕಾಗಿ ಕಾದುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಕುಂದಿ ಹೋಗಬಾರದು. ಹತ್ತುಸಾವಿರ ಜನರಲ್ಲಿ ಧ್ವಜಸ್ತಾಯನಾದ ರಾಜಾಧಿರಾಜನನ್ನು ನೋಡಿದಾಗ, ನಾವು ಎಂದೆಂದಿಗೂ ಆಶೀರ್ವಾದ ಹೊಂದುವವು. “ಸ್ವದೇಶದ ಹೊರಟಿದ್ದೇನೆ’ಎಂದು ಸಂತೋಷದಿಂದ ನಾನು ಜಯಘೋಷ ಮಾಡಬೇಕೆಂದು ನನಗೆ ಅನಿಸುವಂತಿದೆ ಎಂದು ಶ್ರೀಮತಿ ವೈಟಮ್ಮನವರು ತಮ್ಮ ಅನುಭವ ತಿಳಿಸುತ್ತಾರೆ (ಟೆಸ್ಟಿಮೊನೀಸ್, ಸಂಪುಟ 8, ಪುಟ 253).ಕೊಕಾಘ 164.4