Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನ ಉದ್ದೇಶಗಳು

    ಕ್ರೈಸ್ತರಾದ ನಾವು ಬಲವಾದ ಉದ್ದೇಶಗಳಿಂದ ಪ್ರಚೋದನೆಗೊಳ್ಳಬಾರದು. ಒಳ್ಳೆಯದನ್ನು ಮಾಡುವುದರಿಂದ ಬರುವ ಅತ್ಯಧಿಕ ಪ್ರತಿಫಲ, ಪರಲೋಕದ ದೈವೀಕ ಸಂತೋಷ, ದೇವದೂತರೊಂದಿಗೆ ಹೊಕ್ಕುಬಳಕೆ, ದೇವರು ಹಾಗೂ ಆತನ ಮಗನೊಂದಿಗೆ ಅನ್ಯೋನ್ಯತೆಯ ಸಂಬಂಧ ಯುಗಯುಗಾಂತರಗಳಲ್ಲಿಯೂ ನಮ್ಮ ಶಾರೀರಿಕ, ಮಾನಸಿಕ, ಆತ್ಮೀಕ ಶಕ್ತಿಗಳ ನಿರಂತರ ಬೆಳವಣಿಗೆ - ಇವೆಲ್ಲವೂ ನಮ್ಮ ಸೃಷ್ಟಿಕರ್ತನೂ ಹಾಗೂ ವಿಮೊಚಕನೂ ಆದ ಕ್ರಿಸ್ತನಿಗೆ ಪ್ರೀತಿಯಿಂದ ಸೇವೆ ಮಾಡಲು ದೊರೆಯುವ ಬಲವಾದ ಉತ್ತೇಜನವಾಗಿದೆಯಲ್ಲವೇ? (ಸ್ಟೆಪ್ಸ್ ಟು ಕ್ರೈಸ್ಟ್, 21, 22).ಕೊಕಾಘ 167.3

    ನಾವು ಸಮಾಧಾನದಿಂದ ಕ್ರಿಸ್ತನನ್ನು ಸಂಧಿಸಿ, ಶಾಶ್ವತವಾಗಿ ರಕ್ಷಿಸಲ್ಪಟ್ಟಲ್ಲಿ ನಾವು ಅತ್ಯಂತ ಸಂತೋಷವುಳ್ಳ ವ್ಯಕ್ತಿಗಳಾಗಿದ್ದೇವೆ. ದುಷ್ಟರು ನಮ್ಮನ್ನು ಪೀಡಿಸದಿರುವ ಮತ್ತು ಹೊರೆಹೊತ್ತವರು ವಿಶ್ರಾಂತಿ ತೆಗೆದುಕೊಳ್ಳುವಂತ ಪರಲೋಕ ಸೇರುವುದು ಎಷ್ಟೊಂದು ಆನಂದಕರವಲ್ಲವೇ?ಕೊಕಾಘ 167.4

    ನಿಸರ್ಗದಲ್ಲಿರುವ ಸುಂದರವಾದದ್ದನ್ನು ನೋಡಲು ನಾವೆಲ್ಲರೂ ಬಯಕೆ ಹೊಂದಿದ್ದೇವೆ, ಈ ಲೋಕವು ಪಾಪದಿಂದ ಬಂದ ಶಾಪದಿಂದ ವಿನಾಶಕಾರಿಯಾಗಿರದಿದ್ದಲ್ಲಿ, ಇಲ್ಲಿಯೇ ನಾನು ದೇವರು ಕೊಟ್ಟ ಉತ್ತಮ ವಸ್ತುಗಳಿಂದ ಸಂಪೂರ್ಣವಾಗಿ ತೃಪಗಳಾಗಿರುತ್ತಿದ್ದನೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಆದರೆ ನಮಗೆ ನೂತನಾಕಾಶ ಮಂಡಲ ಹಾಗೂ ನೂತನ ಭೂಮಂಡಲ ಕಾದುಕೊಂಡಿದೆ. ಯೋಹಾನನು ತನ್ನ ಪವಿತ್ರ ದರ್ಶನದಲ್ಲಿ ಇದನ್ನು ಕಂಡು ‘ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು = ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ, ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು’ ಎಂದು ಹೇಳುತ್ತಾನೆ (ಪ್ರಕಟನೆ 21:3). ಓ, ಎಂತಹ ಭಾಗ್ಯಕರವಾದ ನಿರೀಕ್ಷೆ ಹಾಗೂ ಮಹಿಮೆ ಹಾಗೂ ವೈಭವದ ದೃಶ್ಯವಾಗಿದೆಯಲ್ಲವೆ!ಕೊಕಾಘ 167.5