Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಹೂಗಳು, ಹಣ್ಣು ಮತ್ತು ಪ್ರಾಣಿಗಳು

    ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಎಲ್ಲಾ ರೀತಿಯ ಹೂಗಳಿರುವ ನೈಸರ್ಗಿಕವಾದ ಬಯಲು ಪ್ರದೇಶ ನೋಡಿದರು. ಅವುಗಳನ್ನು ಅವರು ಕಿತ್ತಾಗ, ಅವು ಎಂದೆಂದಿಗೂ ಬಾಡುವುದಿಲ್ಲವೆಂದು ಅವರು ಉದ್ಗಾರ ತೆಗೆದರು. ಅನಂತರ ಅವರು ಅತ್ಯಂತ ಮನೋಹರವೂ, ಅಚ್ಚಹಸಿರಿನಿಂದ ಕೂಡಿದ್ದ ಎತ್ತರವಾಗಿ ಬೆಳೆದಿದ್ದ ಹುಲ್ಲುಗಾವಲನ್ನು ನೋಡಿದರು. ಅದು ಬೆಳ್ಳಿ ಹಾಗೂ ಬಂಗಾರದಂತಿದ್ದು ಕ್ರಿಸ್ತನ ಮಹಿಮೆಯನ್ನು ಪ್ರತಿಫಲಿಸುತ್ತಿತ್ತು. ಅನಂತರ ಚಿರತೆ, ಸಿಂಹ, ತೋಳ, ಕುರಿಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಪ್ರಾಣಿಗಳಿಂದ ಕೂಡಿದ್ದ ಸ್ಥಳಕ್ಕೆ ಶ್ರೀಮತಿ ವೈಟಮ್ಮನವರು ಹೋದರು. ಅವುಗಳ ನಡುವೆ ಇವರು ಹಾದುಹೋದಾಗ, ಅವು ಶಾಂತ ರೀತಿಯಿಂದ ಇವರನ್ನು ಹಿಂಬಾಲಿಸಿದವು. ಕೊಕಾಘ 169.2

    ಅನಂತರ ಶ್ರೀಮತಿ ವೈಟಮ್ಮನವರು ಒಂದು ಕಾಡನ್ನು ಪ್ರವೇಶಿಸಿದರು. ಖಂಡಿತವಾಗಿಯೂ ಅದು ನಮ್ಮ ಈ ಲೋಕದಲ್ಲಿರುವಂತ ದಟ್ಟವಾದ ಕತ್ತಲಿನಿಂದ ಕೂಡಿರುವ ಅರಣ್ಯವಲ್ಲ; ಬದಲಾಗಿ ವೈಭವಯುಕ್ತವಾದ ಬೆಳಕು ಎಲ್ಲೆಡೆಯೂ ಪಸರಿಸಿತ್ತು. ಅವುಗಳ ಎಲೆಗಳು ಅತ್ತಿಂದಿತ್ತ ಅಲ್ಲಾಡುತ್ತಿದವು. ಅದನ್ನು ಕಂಡ ಶ್ರೀಮತಿ ವೈಟಮ್ಮನವರು ‘ನಾವು ಅರಣ್ಯದಲ್ಲಿ ಸುರಕ್ಷಿತವಾಗಿ ವಾಸಿಸುವವು’ ಅಂದು ಕೊಂಡರು. ಅವರು ಕಾಡನ್ನು ದಾಟಿ, ಚೀಯೋನ್ ಪರ್ವತದ ಕಡೆಗೆ ಹೋದರು.ಕೊಕಾಘ 169.3

    ಚೀಯೋನ್ ಪರ್ವತದಲ್ಲಿ ಅತ್ಯಂತ ಮನೋಹರವಾದ ಎಲ್ಲಾ ರೀತಿಯ ಮರಗಳಿದ್ದವು, ಬಾಕ್ಸ್ಗಿಡ (ಕಪ್ಪು ಬಣ್ಣದ ಮಂದವಾದ ಎಲೆಗಳುಳ್ಳ ನಿತ್ಯಹರಿದ್ವರ್ಣದ ಸಸ್ಯ), ಫಿರ್ ಮರ (ಭದ್ರದಾರು, ಸೂಜಿಯಾಕಾರದ ಬಿಡಿಬಿಡಿಯಾದ ಎಲೆಗಳುಳ್ಳ, ಶಂಕುವಿನಾಕಾರದ ಕಾಯಿ ಬಿಡುವ ವೃಕ್ಷ), ಮರ್ಟಲ್ (ನೇರಳೆ ಜಾತಿಗೆ ಸೇರಿದ, ಹೊಳಪಿನ ಹಸಿರು ಎಲೆಗಳುಳ್ಳ ಸುವಾಸನೆಯುಳ್ಳ ಬಿಳಿ ಬಣ್ಣದ ಹೂ ಬಿಡುವ ಒಂದು ಪೊದೆ ಗಿಡ), ಪೀತದಾರು ಮರ, ದಾಳಿಂಬೆ ಹಾಗೂ ಸಕಾಲಕ್ಕೆ ಹಣ್ಣುಬಿಡುವ ಅಂಜೂರದ ಮರಗಳು -ಚಿಯೋನ್ ಪರ್ವತದ ವೈಭವಕ್ಕೆ ಮೆರುಗು ನೀಡುತ್ತಿದ್ದವು.ಕೊಕಾಘ 169.4

    ಅನಂತರ ಶ್ರೀಮತಿ ವೈಟಮ್ಮನವರು ಅಪ್ಪಟ ಬೆಳ್ಳಿಯಿಂದ ಮಾಡಿರುವ ಒಂದು ಮೇಜನ್ನು ದರ್ಶನದಲ್ಲಿ ನೋಡಿದರು. ಅದು ಅನೇಕ ಮೈಲುಗಳ ಉದ್ದವಾಗಿತ್ತು. ಆದರೂ ಅದರ ಮತ್ತೊಂದು ತುದಿಯನ್ನು ನೋಡಬಹುದಾಗಿತ್ತು, ಆ ಮೇಜಿನ ಮೇಲೆ ಜೀವವೃಕ್ಷದ ಹಣ್ಣು... ಮನ್ನ, ಬಾದಾಮಿ, ಅಂಜೂರ, ದ್ರಾಕ್ಷೆ, ದಾಳಿಂಬೆ ಹಾಗೂ ಇತರ ಎಲ್ಲಾ ವಿಧವಾದ ಹಣ್ಣುಗಳಿದ್ದವು. ಶ್ರೀಮತಿ ವೈಟಮ್ಮನವರು ಅವುಗಳನ್ನು ನೋಡಿದಾಗ ಅದನ್ನು ತಾನು ತಿನ್ನಬೇಕೆಂದು ಯೇಸುಸ್ವಾಮಿಯನ್ನು ಕೇಳಿಕೊಂಡರು (ಅರ್ಲಿ ರೈಟಿಂಗ್ಸ್ 18, 19)ಕೊಕಾಘ 169.5

    Larger font
    Smaller font
    Copy
    Print
    Contents