Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆತ್ಮಗಳನ್ನು ರಕ್ಷಣೆಗೆ ನಡೆಸಿದವರಿಗೆ ಪ್ರತಿಫಲ

    ವಿಮೋಚಿಸಲಟ್ಟವರು ದೇವರ ಮುಂದೆ ನಿಂತಾಗ, ಅನೇಕರು ತಾವು ರಕ್ಷಣೆ ಹೊಂದಿ ಪರಲೋಕಕ್ಕೆ ಬರಲು ತಮ್ಮ ತಾಳ್ಮೆಯ ಪ್ರಯತ್ನ ಹಾಗೂ ಪ್ರಾಮಾಣಿಕತೆಯಿಂದ ಶ್ರಮವಹಿಸಿ ಸುವಾರ್ತೆ ಸಾರಿದವರನ್ನು ನೆನಪಿಸಿಕೊಳ್ಳುತ್ತಾರೆ. ಈ ರೀತಿಯಾಗಿ ಈ ಲೋಕದಲ್ಲಿ ದೇವರೊಂದಿಗೆ ಜೊತೆ ಕೆಲಸಗಾರರಾಗಿರುವವರು ಪರಲೋಕದಲ್ಲಿ ತಮ್ಮ ಪ್ರತಿಫಲ ಹೊಂದುವರು (ಟೆಸ್ಟಿಮೊನಿಸ್, ಸಂಪುಟ 8, 196, 197).ಕೊಕಾಘ 173.1

    ಅತ್ಯಂತ ಮನೋಹರವಾದ ಸೊಬಗಿನಿಂದ ಕೂಡಿದ ಹೊಸ ಯೆರೂಸಲೇಮ್ ಪಟ್ಟಣದ ಬಾಗಿಲುಗಳು ತೆರೆದಾಗ, ಸತ್ಯವನ್ನು ದೃಢವಾಗಿ ಹಿಡಿದುಕೊಂಡವರು ಅದರಲ್ಲಿ ಪ್ರವೇಶಿಸುವರು. ಅವರ ತಲೆಯ ಮೇಲೆ ಮಹಿಮೆಯ ಕಿರೀಟ ಹಾಕಲಡುವುದು ಹಾಗೂ ಅವರು ತಮಗೆ ದೊರೆತ ಗೌರವ ಹಾಗೂ ವೈಭವಕ್ಕೆಲ್ಲಾ ದೇವರೇ ಕಾರಣನೆಂದು ಹೇಳುವರು, ಆ ಸಮಯದಲ್ಲಿ ಕೆಲವರು ನಮ್ಮ ಬಳಿಗೆ ಬಂದು ನಿಮ್ಮ ಕರುಣೆಯ ಮಾತುಗಳು ಹಾಗೂ ಪ್ರಾಮಾಣಿಕವಾಗಿ ಕಣ್ಣೀರು ಸುರಿಸಿ ಮಾಡಿದ ಪ್ರಾರ್ಥನೆ ಮತ್ತು ಪ್ರಯತ್ನದ ಫಲವಾಗಿ ನಾನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನಾದ ರಾಜನನ್ನು ನೋಡಲು ಸಾಧ್ಯವಾಯಿತು’ ಎಂದು ಹೇಳುವರು. ಇದು ನಮಗೆ ದೊರೆಯುವ ಎಂತಹ ಅಮೂಲ್ಯ ಪ್ರತಿಫಲವಾಗಿದೆಯಲ್ಲವೇ! ಈ ಲೋಕದಲ್ಲಿ ಮನುಷ್ಯರಿಂದ ಬರುವ ಹೊಗಳಿಕೆಯು, ದೇವರಲ್ಲಿ ನಂಬಿಗಸ್ತರಾದವರಿಗೆ ಮುಂದೆ ದೊರೆಯುವ ಅಮರತ್ವದ ಜೀವನಕ್ಕೆ ಹೋಲಿಸಿದಾಗ, ಎಷ್ಟೊಂದು ನಗಣ್ಯ ಅಥವಾ ಅಲ್ಪವಾಗಿದೆಯಲ್ಲವೇ? ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ.ಕೊಕಾಘ 173.2

    ನೀವು ಪರಲೋಕದಲ್ಲಿ ದೇವರಿಗೆ ಪ್ರಿಯರಾದ ಸಂತರಾಗಬೇಕಾದಲ್ಲಿ ಮೊದಲು ಈ ಲೋಕದಲ್ಲಿ ಸಂತರಾಗಿರಬೇಕು. ಈ ಜೀವನದಲ್ಲಿರುವ ನಿಮ್ಮ ಸ್ವಾಭಾವಿಕ ಪ್ರವೃತ್ತಿಗಳು ಮರಣದಿಂದಾಗಲಿ ಇಲ್ಲವೆ ಪುನರುತ್ಥಾನದಿಂದಾಗಿ ಬದಲಾಗುವುದಿಲ್ಲ. ನೀವು ಸಮಾಧಿಯಿಂದ ಎದ್ದು ಬಂದಾಗ, ನಿಮ್ಮ ಕುಟುಂಬ ಮತ್ತು ಸಮಾಜದಲ್ಲಿ ಹೊಂದಿದ್ದ ಅದೇ ಸ್ವಾಭಾವಿಕ ಪ್ರವೃತ್ತಿಯನ್ನು ಹೊಂದಿರುವಿರಿ. ಕ್ರಿಸ್ತನು ಎರಡನೇ ಸಾರಿ ಬರುವಾಗ ತನ್ನ ಗುಣವನ್ನು ಬದಲಾಯಿಸಿಕೊಳ್ಳುವುದಿಲ್ಲ. ಪರಿವರ್ತನೆಯ (Transformation) ಕಾರ್ಯವು ಈಗಲೇ ನಡೆಯಬೇಕು. ನಮ್ಮ ದಿನನಿತ್ಯದ ಜೀವನವು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ಗುಣಸ್ವಭಾವದ ಎಲ್ಲಾ ಕುಂದುಕೊರತೆಗಳಿಗೆ ಪಾಶ್ಚಾತ್ತಾಪಟ್ಟು, ಕ್ರಿಸ್ತನ ಕೃಪೆಯಿಂದ ಹೋಗಲಾಡಿಸಿಕೊಳ್ಳಬೇಕು. ಈ ಲೋಕದಲ್ಲಿ ಯಾತ್ರಿಗಳಾಗಿರುವ ನಾವು ಪರಲೋಕಕ್ಕೆ ಅರ್ಹರಾಗುವಂತೆ, ನಮ್ಮ ಗುಣಸ್ವಭಾವಗಳನ್ನು ಉತ್ತಮ ರೀತಿಯಲ್ಲಿ ಸಾಮರಸ್ಯ ಅಂದರೆ ಹೊಂದಿಸಿಕೊಳ್ಳಬೇಕು.ಕೊಕಾಘ 173.3