Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಮಸ್ತ ವಿಶ್ವದ ಅಪೂರ್ವ ಸಂಗತಿಗಳನ್ನು ಹುಡುಕುವುದು

    ನಮ್ಮ ಆತ್ಮೀಕ ಕಣ್ಣುಗಳು ತೆರೆಯಲ್ಪಟ್ಟಾಗ, ಈಗ ಕಂಚಿನ ದರ್ಪಣದಲ್ಲಿ (ಕನ್ನಡಿ) ಕಾಣುವಂತೆ ಮಸುಕಾಗಿರುವ ವಿಷಯಗಳು ಸಷ್ಟವಾಗಿ ಕಾಣುವವು. ಆಗ ನಾವು ಪರಲೋಕದ ಸೌಂದರ್ಯ, ಮಹಿಮ ಹಾಗೂ ವೈಭವವನ್ನು ಕಾಣುವೆವು, ಸಮಸ್ತ ವಿಶ್ವವೇ ನಮ್ಮ ದೇವರಾದ ಕರ್ತನ ವೈಭವದಿಂದ ಕಂಡುಬರುತ್ತದೆ. ಸಮಸ್ತ ವಿಶ್ವದ ಅಪೂರ್ವ ಸಂಗತಿಗಳನ್ನು ಅಧ್ಯಯನ ಮಾಡುವ ಅತ್ಯದ್ಭುತ ಅವಕಾಶ ನಮಗೆ ದೊರೆಯಲಿದೆ. ಈ ವಿಶವು ಚಾರ್ಲ್ಸ್ ಡಾರ್ವಿನ್ನನು ತಿಳಿಸಿದಂತೆ ಕೋಟ್ಯಾಂತರ ವರ್ಷಗಳಲ್ಲಿ ವಿಕಾಸಗೊಂಡಿಲ್ಲ. ಆದರೆ ಸರ್ವಶಕ್ತನು ಅದನ್ನು ಸೃಷ್ಟಿಸಿದ್ದಾನೆಂಬ ದಾಖಲೆಗಳನ್ನು ವಿಜ್ಞಾನದ ವಿದ್ಯಾರ್ಥಿಯು ನೋಡಬಹುದು. ನಾವೆಲ್ಲರೂ ನಿಸರ್ಗದ ಮಧುರಸಂಗೀತದ ಸ್ವರವನ್ನು ಕೇಳುತ್ತೇವೆ (ಲಾಸ್ಟ್ ಡೇ ಇವೆಂಟ್ಸ್, ಪುಟ 300).ಕೊಕಾಘ 176.4

    ದೇವರ ಮಕ್ಕಳಾದ ನಮಗೆ ಸಮಸ್ತ ವಿಶ್ವದ ಅಪೂರ್ವ ಸಂಗತಿಗಳನ್ನು ತಿಳಿದುಕೊಳ್ಳುವ, ಕಲಿಯುವ ಅವಕಾಶವಿದೆ. ವರ್ಣಿಸಲಾಗದಂತ ಸಂತೋಷದಿಂದ ನಾವು ಪಾಪ ಮಾಡದ ಇತರ ಅಸಂಖ್ಯಾತ ಲೋಕಗಳ ಜನರ ಜ್ಞಾನ ವಿವೇಕ ಹಾಗೂ ಹರ್ಷವನ್ನು ತಿಳಿದುಕೊಳ್ಳುವೆವು. ದೇವರ ಸೃಷ್ಟಿಯ ಬಗ್ಗೆ ಯುಗಯುಗಾಂತರಗಳವರೆಗೆ ಮಾಡಿರುವ ಅವಲೋಕನದಿಂದ ಕಲಿತಿರುವ ಅಪೂರ್ವ ಸಂಗತಿಗಳನ್ನು ಅವರೊಂದಿಗೆ ಹಂಚಿಕೊಳ್ಳುವೆವು (ಎಜುಕೇಷನ್ 307, 307).ಕೊಕಾಘ 177.1

    ಪಾಪ ಮಾಡದ ಇತರ ಲೋಕಗಳವರು ಮನುಷ್ಯರಾದ ನಾವು ಕಷ್ಟ ಸಂಕಟ ಅನುಭವಿಸುವಾಗ ದುಃಖಪಟ್ಟರು ಹಾಗೂ ಕ್ರಿಸ್ತನ ರಕ್ತದಿಂದ ವಿಮೋಚಿಸಲ್ಪಟ್ಟಾಗ, ಹರ್ಷ ಗೀತೆಗಳಿಂದ ದೇವರನ್ನು ಮಹಿಮೆ ಪಡಿಸಿದರು. ಇಂತಹ ಲೋಕಗಳಿಗೆ ಅಮರತ್ವ ಧರಿಸಿಕೊಂಡ ನಾವು ಯಾವುದೇ ಆಯಾಸವಿಲ್ಲದೆ ಹೋಗುತ್ತೇವೆ. ಎಂದಿಗೂ ದೃಷ್ಟಿ ಕಳೆದುಕೊಳ್ಳದ, ಕಳೆಗುಂದದ ಕಣ್ಣುಗಳಿಂದ ನಾವು ದೇವರ ಸೃಷ್ಟಿಗಳಾದ ಸೂರ್ಯಗಳು (Suns, ಬಹುವಚನದಲ್ಲಿ ಕೊಡಲಾಗಿದೆ), ನಕ್ಷತ್ರಗಳು ಹಾಗೂ ಸೌರಮಂಡಲದ ವ್ಯವಸ್ಥೆಯನ್ನು ನೋಡುತ್ತೇವೆ. ಇವೆಲ್ಲವೂ ದೇವರ ಸಿಂಹಾಸನದ ಸುತ್ತಲೂ ತಮಗೆ ನಿಯಮಿಸಲ್ಪಟ್ಟ ಕ್ರಮದಲ್ಲಿ ತಿರುಗುತ್ತವೆ. ಅವು ಚಿಕ್ಕದಾಗಲಿ, ದೊಡ್ಡದಾಗಲಿ ~ ಎಲ್ಲವುಗಳ ಮೇಲೆ ಸೃಷ್ಟಿಕರ್ತನ ಹೆಸರು ಬರೆಯಲ್ಪಟ್ಟಿರುತ್ತದೆ. ಹಾಗೂ ಅವೆಲ್ಲವುಗಳಲ್ಲಿ ದೇವರ ಮಹಾಶಕ್ತಿಯ ವೈಭವವು ಕಂಡುಬರುತ್ತದೆ (ದಿ ಗ್ರೇಟ್ ಕಾಂಟ್ರೊವರ್ಸಿ 677, 678).ಕೊಕಾಘ 177.2