Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪವಿತ್ರ ಚರಿತ್ರೆಯು ಪುನಃ ಪರಿಶೀಲಿಸಲ್ಪಡುತ್ತದೆ

    ವಿಮೋಚಿಸಲ್ಪಟ್ಟ ನೀತಿವಂತರು ಒಂದು ಲೋಕದಿಂದ ಮತ್ತೊಂದು ಲೋಕಕ್ಕೆ ಸುತ್ತಾಡುತ್ತಾರೆ. ಅವರು ಹೆಚ್ಚು ಸಮಯವನ್ನು ತಮ್ಮ ವಿಮೋಚನೆಯ ಮರ್ಮಗಳನ್ನು ತಿಳಿದುಕೊಳ್ಳುವುದರಲ್ಲಿಯೇ ಕಳೆಯುತ್ತಾರೆ (ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 990).ಕೊಕಾಘ 177.3

    ವಿಮೋಚನೆಯ ವಿಷಯಗಳು ರಕ್ಷಿಸಲ್ಪಟ್ಟವರ ಹೃದಯ, ಮನಸ್ಸು ಹಾಗೂ ನಾಲಿಗೆಗಳಲ್ಲಿ ಯುಗಯುಗಾಂತರಗಳವರೆಗೆ ಇರುತ್ತವೆ. ಈ ಸತ್ಯಗಳನ್ನು ರಕ್ಷಕನು ತನ್ನ ಶಿಷ್ಯರಿಗೆ ತಿಳಿಸಬೇಕೆಂದು ಬಯಸಿದರೂ, ಅದನ್ನು ಗ್ರಹಿಸಿಕೊಳ್ಳುವಷ್ಟು ನಂಬಿಕೆ ಅವರಲ್ಲಿರಲಿಲ್ಲ. ಆದರೆ ಈ ಸತ್ಯಗಳನ್ನು ರಕ್ಷಿಸಲ್ಪಟ್ಟವರು ತಿಳಿದುಕೊಳ್ಳುವರು. ಯುಗಯುಗಾಂತರಗಳಲ್ಲಿಯೂ ಕ್ರಿಸ್ತನ ಪರಿಪೂರ್ಣತೆ ಮತ್ತು ಮಹಿಮೆಯ ಬಗ್ಗೆ ಹೊಸದಾದ ವಿಷಯಗಳು ಕಂಡುಬರುತ್ತಿರುವವು (ಕ್ರೈಸ್ಟ್ ಆಬ್ಜೆಕ್ಟ್ ಲೆಸನ್ಸ್, ಪುಟ 134).ಕೊಕಾಘ 177.4

    ಅನಂತರ ರಕ್ಷಿಸಲ್ಪಟ್ಟ ಪರಲೋಕದಲ್ಲಿರುವವ ಮುಂದೆ ಆದಿಯಲ್ಲಿಯೇ ಆರಂಭವಾದ ಮಹಾಹೋರಾಟದ ಚರಿತ್ರೆಯು ತೋರಿಸಲ್ಪಡುವುದು. ಆದರೆ ಯುಗದ ಸಮಾಪ್ತಿಯದಾಗ ಮಾತ್ರ ಮುಗಿಯುವ ಮಹಾಹೋರಾಟದ ಚರಿತ್ರೆಯು ತೋರಿಸಲ್ಪಡುವುದು. ಪಾಪದ ಆರಂಭ, ಅದರ ಮೋಸದ ಕಾರ್ಯಗಳು, ಅವುಗಳಿಂದಾದ ಭಯಾನಕ ಪರಿಣಾಮಗಳು ಹಾಗೂ ಸಾವು ಅಂತಿಮವಾಗಿ ಜಯಹೊಂದಿದ್ದು - ಇವೆಲ್ಲವೂ ರಕ್ಷಿಸಲ್ಪಟ್ಟವರಿಗೆ ಪ್ರತ್ಯಕ್ಷವಾಗಿ ತೋರಿಸಲ್ಪಡುವುದು ಕಾಣುವ ಮತ್ತು ಕಾಣದಿರುವ ಜಗತ್ತಿನ ನಡುವೆ ಅಡ್ಡಿಯಾಗಿರುವ ತೆರೆಯು ತೆಗೆದು ಹಾಕಲ್ಪಟ್ಟು ಅತ್ಯದ್ಭುತವಾದ ವಿಷಯಗಳು ಪ್ರಕಟಗೊಳ್ಳುತ್ತವೆ (ಎಜುಕೇಷನ್ 304).ಕೊಕಾಘ 177.5

    ಈ ಲೋಕದಲ್ಲಿ ನಾವು ಅನುಭವಿಸಿದ ದುಃಖ, ಸಂಕಟ, ನೋವು, ಶೋಧನೆಗಳು ಕೊನೆಗೊಂಡಿದ್ದರೂ, ತಮ್ಮ ರಕ್ಷಣೆಗಾಗಿ ಕ್ರಿಸ್ತನು ಮಾಡಿದ ಅಮೂಲ್ಯ ತ್ಯಾಗ, ಬಲಿದಾನಗಳ ಬಗ್ಗೆ ದೇವಜನರು ವಿಶಿಷ್ಟವಾದ ಜ್ಞಾನ ಹೊಂದಿರುತ್ತಾರೆ... ನಮ್ಮ ವಿಮೋಚಕನಾದ ಯೇಸುಕ್ರಿಸ್ತನು ಸದಾಕಾಲವೂ ಶಿಲುಬೆಗೇರಿದಾಗ ಉಂಟಾದ ಗುರುತುಗಳನ್ನು ಹೊಂದಿರುವನು. ಆತನ ಗಾಯವಾದ ತಲೆ, ಈಟಿಯಿಂದ ತಿವಿಯಲ್ಲಟ ಪಕ್ಕೆ, ಮೊಳೆಗಳಿಂದ ಜಡಿಯಲ್ಪಟ್ಟಿದ್ದ ಕೈ ಕಾಲುಗಳಲ್ಲಿ ಉಳಿದಿರುವ ಕಲೆಗಳು ಪಾಪದಿಂದಾದ ಕ್ರೂರ ಪರಿಣಾಮಗಳಿಗೆ. ಸಾಕ್ಷಿಯಾಗಿರುತ್ತವೆ (ದಿ ಗ್ರೇಟ್ ಕಾಂಟ್ರೊವರ್ಸಿ 651, 674).ಕೊಕಾಘ 177.6