Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೊಟ್ಟ ಬೆಳಕಿನ ಪ್ರಕಾರ ತೀರ್ಪಿಗೊಳಗಾಗುವರು

    ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ದೇವಾಲಯದ ತಕ್ಕಡಿಯಲ್ಲಿ ತೂಗಲ್ಪಡುವುದು. ಈ ಸಭೆಗೆ ಕೊಟ್ಟ ವಿಶೇಷವಾದ ಬೆಳಕು ಹಾಗೂ ಅನುಕೂಲಗಳ ಪ್ರಕಾರ ನ್ಯಾಯತೀರ್ಪಿಗೊಳಗಾಗುವುದು. ಅಡ್ವೆಂಟಿಸ್ಟ್ ಸಭೆಯ ಆತ್ಮೀಕ ಅನುಭವವು ಕ್ರಿಸ್ತನು ಅಮೂಲ್ಯ ಕ್ರಯದಿಂದ ಅದಕ್ಕೆ ಕೊಟ್ಟ ವಿಶೇಷ ಬೆಳಕಿಗೆ ಅನುಗುಣವಾಗಿರದಿದ್ದಲ್ಲಿ ಅಥವಾ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿದ್ದೀ ಎಂದು ಕ್ರಿಸ್ತನು ಹೇಳಿದಲ್ಲಿ ಅದಕ್ಕೆ ಕೊಡಲ್ಪಟ್ಟ ಬೆಳಕು ಮತ್ತು ಅವಕಾಶಗಳಿಗೆ ತಕ್ಕಂತೆ ಸಭೆಯು ತೀರ್ಪಿಗೆ ಒಳಗಾಗುತ್ತದೆ.ಕೊಕಾಘ 35.1

    ದೇವರು ಈ ವಿಷಯದಲ್ಲಿ ನಮಗೆ ಕೊಡುವ ಗಂಭೀರವಾದ ಎಚ್ಚರಿಕೆಯನ್ನು ಸೆವಂತ್ ಡೇ ಅಡ್ವೆಂಟಿಸ್ಟ್ ಸಭೆಯು ತಿರಸ್ಕರಿಸಿತು. ಇದರ ಪರಿಣಾಮವಾಗಿ ಆ ಕಾಲದಲ್ಲಿ ಜಗತ್ತಿನಲ್ಲಿ ಪ್ರಸಿದ್ಧವಾಗಿದ್ದ ಹಾಗೂ ದೊಡ್ಡದಾಗಿದ್ದ ಬ್ಯಾಟಲ್‌ಕ್ರೀಕ್‌ನಲ್ಲಿದ್ದ ಕ್ಷಯರೋಗದ ಆಸ್ಪತ್ರೆಯು ಫೆಬ್ರವರಿ 18, 1902 ರಲ್ಲಿ ಹಾಗೂ ರಿವೂ ಅಂಡ್ ಹೆರಾಲ್ಡ್ ಪಕಟಣಾ ಸಂಸ್ಥೆಯು ಅದೇ ವರ್ಷ ಡಿಸೆಂಬರ್ 30 ರಲ್ಲಿ ಬೆಂಕಿಯಿಂದ ನಾಶವಾದವು. ಆದುದರಿಂದ ದೇವರು ನಮಗೆ “ನೀನು ಎಲ್ಲಿಂದ ಬಿದ್ದಿದ್ದೀಯೋ, ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೊ, ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು’ ಎಂದು ಎಚ್ಚರಿಕೆ ನೀಡುತ್ತಾನೆ (ಪ್ರಕಟನೆ 2:5).ಕೊಕಾಘ 35.2

    ತನ್ನ ಮೊದಲಿನ ನಂಬಿಕೆಯನ್ನು ಕಳೆದುಕೊಂಡಿರುವ ಸಭೆಯು ಪಶ್ಚಾತ್ತಾಪ ಪಟ್ಟು ಬದಲಾವಣೆ ಹೊಂದಬೇಕು. ಇಲ್ಲದಿದ್ದಲ್ಲಿ ತನಗೆ ಅಸಹ್ಯವಾಗುವ ತನಕ ಸಭೆಯು ತನ್ನ ಪಾಪದ ಫಲವನ್ನು ಅನುಭವಿಸುತ್ತದೆ. ಸಭೆಯು ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಆರಿಸಿಕೊಂಡಾಗ, ನಮ್ರತೆಯಿಂದ ದೇವರನ್ನು ಹುಡುಕಿ, ಶಾಶ್ವತವಾದ ಸತ್ಯದಲ್ಲಿ ದೃಢವಾಗಿ ನಿಂತು, ತನಗಾಗಿ ಸಿದ್ಧಪಡಿಸಿರುವುದನ್ನು ನಂಬಿಕೆಯಿಂದ ಪಡೆದುಕೊಂಡಾಗ ಅದರ ಪಾಪಗಳು ಪರಿಹಾರವಾಗುತ್ತವೆ. ಸಭೆಯು ಲೋಕದ ಎಲ್ಲಾ ಆಶಾಪಾಶಗಳಿಂದ ದೂರವಾಗಿ, ದೇವರು ದಯಪಾಲಿಸಿರುವ ಸರಳತೆ ಮತ್ತು ನಿರ್ಮಲತೆಯಿಂದ ಕಾಣಿಸಿಕೊಂಡಾಗ, ಸತ್ಯವು ತನ್ನನ್ನು ನಿಜವಾಗಿಯೂ ಬಿಡುಗಡೆ ಮಾಡಿತೆಂದು ತೋರಿಸುತ್ತದೆ. ಆಗ ಸಭೆಯು ಸದಸ್ಯರು ನಿಜವಾಗಿ ದೇವರಿಂದ ಆರಿಸಲ್ಪಟ್ಟ ಆತನ ಪ್ರತಿನಿಧಿಗಳಾಗಿರುವರು (ಟೆಸ್ಟಿಮೊನೀಸ್‌ ಸಂಪುಟ 8, ಪುಟಗಳು 247-251, 1903).ಕೊಕಾಘ 35.3