Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೊನೆಯ ಕಾಲದ ಪ್ರವಾದನೆಗಳ ಬಗ್ಗೆ ಗಮನ ಅಗತ್ಯ

    ಶ್ರೀಮತಿ ವೈಟಮ್ಮನವರು ಪ್ರಕಟನೆ 14:9-11ನೇ ವಚನಗಳಲ್ಲಿ ತಿಳಿಸಿರುವ ಮೂರನೇ ದೇವದೂತನನ್ನು ನೋಡಿದರು. ಆಗ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದ ದೂತನು ಆ ಮೂರನೇ ದೂತನ ಬಗ್ಗೆ ‘ಇವನ ಕಾರ್ಯವು ಭಯಾನಕವೂ ಹಾಗೂ ಗಂಭೀರವಾದದ್ದೂ ಆಗಿದೆ. ಗೋಧಿಯನ್ನು ಹಣಜಿಯಿಂದ ಬೇರ್ಪಡಿಸುವ ಹಾಗೂ ಪರಲೋಕದ ಕಣಜಕ್ಕೆ ಗೋಧಿಯನ್ನು ಖಚಿತಪಡಿಸುವ ಕಾರ್ಯವೂ ಸಹ ಇವನದೇ ಆಗಿದೆ. ಈ ವಿಷಯದ ಬಗ್ಗೆ ನಮ್ಮ ಸಂಪೂರ್ಣವಾದ ಮನಸ್ಸು ಹಾಗೂ ಗಮನವನ್ನು ತಲ್ಲೀನಗೊಳಿಸಬೇಕು (1854).ಕೊಕಾಘ 7.2

    ಕೊನೆಕಾಲದಲ್ಲಿ ನಾವು ಈ ಲೋಕದಲ್ಲಿ ದೇವರ ಆಜ್ಞೆಗಳಿಗೆ ನಿಷ್ಠರಾಗಿರುವ ಹಾಗೂ ನಮ್ಮ ನಂಬಿಕೆಗೆ ಆಧಾರವಾದ ಕಾರಣಗಳ ಬಗ್ಗೆ ಉತ್ತರಿಸಲು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ನಿಲ್ಲಬೇಕು. ಯೌವನಸ್ಥರು ಈ ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಜಗತ್ತಿನ ಇತಿಹಾಸವು ಮುಕ್ತಾಯವಾಗುವುದಕ್ಕೆ ಮೊದಲು ಇವೆಲ್ಲವೂ ನೆರವೇರುತ್ತವೆಂದು ಅವರು ಅರಿತಿರಬೇಕು. ಇವೆಲ್ಲವೂ ನಮ್ಮ ನಿತ್ಯಜೀವಕ್ಕೆ ಸಂಬಂಧಪಟ್ಟವೆ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು (ಟೆಸ್ಟಿಮೊನೀಸ್‌ ಸಂಪುಟ 6, ಪುಟಗಳು 128, 129 (1900), ನಾವು ಜೀವಿಸುವಂತ ಈ ಕಾಲವನ್ನು ಸೂಚಿಸುವ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವಂತ ಮುಖ್ಯವಾದ ದಾರಿ ಗುರುತನ್ನು ತಿಳಿದುಕೊಳ್ಳಬೇಕು.ಕೊಕಾಘ 7.3

    ದೇವರಿಂದ ಮಾರ್ಗದರ್ಶನ ಹೊಂದಲು ತಮ್ಮನ್ನು ಆತನ ಅಧೀನಕ್ಕೆ ಒಪ್ಪಿಸಿಕೊಟ್ಟವರು ಮುಂದೆ ನಡೆಯುತ್ತದೆಂದು ದೇವರು ತಿಳಿಸಿರುವ ಘಟನೆಗಳನ್ನು ಜಾಗರೂಕತೆಯಿಂದ ಗ್ರಹಿಸಿಕೊಳ್ಳುತ್ತಾರೆ (ಟೆಸ್ಟಿಮೊನೀಸ್ ಸಂಪುಟ 1, ಪುಟ 14 (1902) ಪ್ರವಾದನೆಗಳು ನೆರವೇರಿರುವುದನ್ನು ಇತಿಹಾಸದಿಂದ ತಿಳಿದುಕೊಳ್ಳಬೇಕು. ಅಲ್ಲದೆ ಮಹಾಧಾರ್ಮಿಕ ಸುಧಾರಣಾ ಚಳುವಳಿಯಲ್ಲಿ ದೇವರ ವಿಶೇಷವಾದ ಅನುಗ್ರಹದ ಕಾರ್ಯಗಳನ್ನು ಅಧ್ಯಯನ ಮಾಡಿ, ಮಹಾಹೋರಾಟದ ಅಂತಿಮ ಸಂಘರ್ಷಕ್ಕೆ ದೇಶಗಳು ಹೇಗೆ ವ್ಯವಸ್ಥಿತವಾದ ರೀತಿಯಲ್ಲಿ ಸಿದ್ಧಗೊಳ್ಳುವಂತೆ ಮಾಡುವ ಘಟನಾವಳಿಗಳು ಸಂಭವಿಸುವುದನ್ನು ಮನವರಿಕೆ ಮಾಡಿಕೊಳ್ಳಬೇಕು (ಟೆಸ್ಟಿಮೊನೀಸ್ ಸಂಪುಟ 8, ಪುಟ 307, (1904).ಕೊಕಾಘ 7.4