Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕಥೋಲಿಕ್ ಸಭೆಯು ತಾನು ಕಳೆದುಕೊಂಡಿದ್ದ ಪರಮಾಧಿಕಾರವನ್ನು ತಿರುಗಿಪಡಕೊಳ್ಳುವುದು

    ಕೊನೆಯ ಕಾಲದ ಇಕ್ಕಟ್ಟಿನ ಸಮಯವು ಸಮೀಪಿಸಿದಂತೆ, ಕರ್ತನ ಜನರಲ್ಲಿ ಸಾಮರಸ್ಯ ಹಾಗೂ ಒಗ್ಗಟ್ಟು ಇರಬೇಕಾದದ್ದು ಪ್ರಾಮುಖ್ಯವಾಗಿದೆ. ಜಗತ್ತಿನಲ್ಲಿ ಹಿಂಸಾಚಾರ, ಯುದ್ಧ, ಭಿನ್ನಾಭಿಪ್ರಾಯಗಳು ತುಂಬಿತುಳುಕುತ್ತಿದೆ. ಆದಾಗ್ಯೂ ಎಲ್ಲಾ ಜನರೂ ಕಥೋಲಿಕ್ ಸಭೆಯ ಅಧಿಕಾರದಡಿಯಲ್ಲಿ ದೇವರ ಸಾಕ್ಷಿಗಳನ್ನು ವಿರೋಧಿಸುವ ಮೂಲಕ ಈ ಐಕ್ಯತೆಯು ಪರಸ್ಪರ ಗಟ್ಟಿಯಾಗುತ್ತದೆ (ಟೆಸ್ಟಿಮೊನೀಸ್, ಸಂಪುಟ 7, ಪುಟ 182, 1902).ಕೊಕಾಘ 75.3

    ಅಮೇರಿಕಾ ದೇಶವು ಪ್ರಜಾಪ್ರಭುತ್ವ, ಧಾರ್ಮಿಕ ಸ್ವಾತಂತ್ರ ಹಾಗೂ ಗಣರಾಜ್ಯವೆಂಬ ಸಿದ್ದಾಂತಗಳೊಂದಿಗೆ ಸ್ಥಾಪಿಸಲ್ಪಟ್ಟಿದೆ. ಆದರೆ ಭಾನುವಾರವೇ ಸಬ್ಬತ್ತೆಂದು ಆಚರಿಸಬೇಕೆಂಬ ನಿಯಮವು ಶಾಸನವಾಗಿ ಜಾರಿಯಾದಾಗ, ದೇಶದಾದ್ಯಂತ ಧರ್ಮಭ್ರಷ್ಟತೆ ಉಂಟಾಗುತ್ತದೆ. ದೇಶಗಳ ನಾಯಕರು, ಆಡಳಿತಗಾರರು ಕಥೋಲಿಕ್ ಧರ್ಮವನ್ನು ಅಂಗೀಕರಿಸುವರು ಮತ್ತು ದೇವರಾಜ್ಞೆಗಳು ರದ್ದುಮಾಡಲ್ಪಟ್ಟು ನಿರರ್ಥಕವಾಗುವವು (1906).ಕೊಕಾಘ 75.4

    ಮಹಾಬೌದ್ದಿಕ ಅಜ್ಞಾನವೆಂಬ ಅಂಧಕಾರದ ಸಮಯವು (ಮಧ್ಯಯುಗದಲ್ಲಿ ಕಥೋಲಿಕ್ ಸಭೆಯ ಯಶಸ್ಸಿಗೆ ಸಹಾಯಕವಾಗಿತ್ತು. ಅದೇ ರೀತಿಯಲ್ಲಿ ಮಹಾಬೌದ್ದಿಕಜ್ಞಾನವೆಂಬ ಬೆಳಕೂ ಸಹ ಕಥೋಲಿಕ್ ಸಭೆಯು ಯಶಸ್ವಿಯಾಗಲು ಅಷ್ಟೇ ಸಮಾನವಾಗಿ ಕಾರಣವಾಗುವುದು ಮುಂದೆ ಕಾಣಬರಲಿದೆ (ಸ್ಪಿರಿಟ್ ಆಫ್ ಪ್ರಾಫಸಿ, ಸಂಪುಟ 4, ಪುಟ 390, 1884).ಕೊಕಾಘ 75.5

    ಅಮೇರಿಕಾ ದೇಶದ ಸರ್ಕಾರದ ಬೆಂಬಲ ಪಡೆದುಕೊಳ್ಳಲು ಪ್ರೊಟೆಸ್ಟೆಂಟ್ ಸಭೆಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದಾಗ, ಅವರು ಕಥೋಲಿಕ್ ಸಭೆಯನ್ನು ಅನುಸರಿಸುತ್ತಿದ್ದಾರೆಂದು ತಿಳಿಯಬಹುದು. ಅದಕ್ಕಿಂತಲೂ ಹೆಚ್ಚಾಗಿ ಕಥೋಲಿಕ್ ಸಭೆಯು ಕಳೆದುಕೊಂಡಿರುವ ಪರಮಾಧಿಕಾರವನ್ನು ತಿರುಗಿ ಪಡೆದುಕೊಳ್ಳಲು ಪ್ರೊಟೆಸ್ಟೆಂಟರು ಮಾರ್ಗ ಮಾಡುತ್ತಿದ್ದಾರೆ (ಗ್ರೇಟ್ ಕಾಂಟ್ರೊವರ್ಸಿ ಪುಟ 573, 1911).ಕೊಕಾಘ 76.1