Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕ್ರೈಸ್ತ ದೇಶಗಳಲ್ಲಿ ಈ ಹೋರಾಟವು ಕೇಂದ್ರೀಕರಿಸಲ್ಪಟ್ಟಿರುತ್ತದೆ

    ಕ್ರೈಸ್ತರೆಂದು ಹೇಳಿಕೊಳ್ಳುವ ದೇಶಗಳು ನಿರ್ಣಾಯಕವಾದ ಹಾಗೂ ಮಹತ್ವವಾದ ಕಾರ್ಯಗಳ ಕೇಂದ್ರ ಸ್ಥಾನಗಳಾಗಿರುತ್ತವೆ. ರೋಮನ್ ಕಥೋಲಿಕ್ ಸಭೆಯ ಮಾದರಿ ಅನುಸರಿಸಿ, ಈ ದೇಶಗಳ ಸರ್ಕಾರಗಳು ಮನಸ್ಸಾಕ್ಷಿಗೆ ವಿರುದ್ಧವಾದ ಶಾಸನಗಳನ್ನು ಜಾರಿಗೆ ತರುವರು, ಬಾಬೆಲ್ ತನ್ನ ಅತಿ ಜಾರತ್ವದ ದ್ರಾಕ್ಷಾರಸವನ್ನು ಎಲ್ಲಾ ಜನಾಂಗಗಳೂ ಕುಡಿಯುವಂತೆ ಮಾಡುವುದು (ಪ್ರಕಟನೆ 17:2) (ಇಲ್ಲಿ ಜಾರವೆಂದರೆ, ಆತ್ಮೀಕ ವ್ಯಭಿಚಾರ, ಅಂದರೆ ದೇವರಾಜ್ಞೆಗಳಿಗೆ ವಿರುದ್ಧವಾಗಿ ಮನುಷ್ಯರ ಆಯ್ಕೆಗಳಿಗೆ ವಿಧೇಯರಾಗುವುದು ಎಂದರ್ಥ). ಜಗತ್ತಿನ ಎಲ್ಲಾ ದೇಶಗಳೂ ಇದರಲ್ಲಿ ಸೇರಿರುವವು, ಈ ಕಾಲದ ಬಗ್ಗೆ ಯೋಹಾನನು ಪ್ರಕಟನೆ 17:13, 14, ಹಾಗೂ 183-7ನೇ ವಚನಗಳಲ್ಲಿ ತಿಳಿಸಿದ್ದಾನೆ. ಎಲ್ಲಾ ದೇಶಗಳೂ ಒಂದೇ ಮನಸ್ಸು ಹೊಂದಿರುವವು. ಸೈತಾನನ ಶಕ್ತಿಗಳು ವಿಶ್ವವ್ಯಾಪ್ತಿಯಾದ ಒಂದು ಒಕ್ಕೂಟ ರಚಿಸಿಕೊಂಡು ಸಾಮರಸ್ಯ ಹೊಂದಿರುತ್ತವೆ. ‘ಘಟಸರ್ಪನು (ಸೈತಾನನು ಆ ಮೃಗಕ್ಕೆ (ಕಥೋಲಿಕ್ ಸಭೆಗೆ ಅಧಿಕಾರವನ್ನು ಕೊಡುವನು (ಪ್ರಕಟನೆ 13:4). ಇದು ದೇವರನ್ನು ಜನರು ತಮ್ಮ ಮನಸಾಕ್ಷಿಗೆ ತಕ್ಕಂತೆ ಆರಾಧಿಸುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ದವಾಗಿದೆ. ಕಥೋಲಿಕ್ ಸಭೆಯು ಮಧ್ಯಯುಗದಲ್ಲಿ ತನ್ನ ಸಂಪ್ರದಾಯಗಳು ಹಾಗೂ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ನಿರಾಕರಿಸಿದವರನ್ನು ಹಿಂಸೆಗೊಳಿಸಿದ್ದು, ಅದರ ದಬ್ಬಾಳಿಕೆಯನ್ನು ಸೂಚಿಸುತ್ತದೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 392, 1891). ಕೊಕಾಘ 78.3

    ನಂಬಿಕೆ ಮತ್ತು ಅಪನಂಬಿಕೆಗಳು ನಡುವಣ ಮಹಾಹೋರಾಟದಲ್ಲಿ ಎಲ್ಲಾ ಕ್ರೈಸ್ತ ದೇಶಗಳೂ ಸೇರಿರುತ್ತವೆ (ರಿವ್ಯೂ ಅಂಡ್ ಹೆರಾಲ್ಡ್, ಫೆಬ್ರವರಿ 7, 1893). ಅಲ್ಲದೆ ದೇವರಾಜ್ಞೆಗಳನ್ನು ಕೈಕೊಂಡು ಯೇಸುವಿನ ಮೇಲಣ ನಂಬಿಕೆ ಹೊಂದಿರುವವರು ಮತ್ತು ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ನಮಸ್ಕರಿಸಿ ಅವನ ಗುರುತನ್ನು ಹೊಂದಿರುವರು - ಎಂಬ ಎರಡು ಮಹಾ ಗುಂಪುಗಳಾಗಿ ಎಲ್ಲಾ ಕ್ರೈಸ್ತ ದೇಶಗಳು ವಿಭಾಗಗಳಾಗುವವು (ಗ್ರೇಟ್ ಕಾಂಟ್ರೊವರ್ಸಿ, ಪುಟ 450, 1911).ಕೊಕಾಘ 78.4

    ಸಮಸ್ತ ಕ್ರೈಸ್ತ ದೇಶಗಳಲ್ಲಿ ಸಬ್ಬತ್ತು ದಿನವು ಹೋರಾಟದ ಒಂದು ವಿಶೇಷ ಅಂಶವಾಗುವುದು. ಧಾರ್ಮಿಕ ಮತ್ತು ಜಾತ್ಯಾತೀತ ಶಕ್ತಿಗಳು ಭಾನುವಾರಾಚರಣೆಯನ್ನು ಜಾರಿಗೆ ತರಲು ಒಂದುಗೂಡುವವು. ಆದರೆ ಇದನ್ನು ಒಪ್ಪಿಕೊಳ್ಳಲು ನಿರಾಕರಿಸುವ ಬಹಳ ಕಡಿಮೆ ಸಂಖ್ಯೆಯ ಅಡ್ವೆಂಟಿಸ್ಟರು ಜಗತ್ತಿನಾದ್ಯಂತ ಇತರೆಲ್ಲರ ಖಂಡನೆ ಮತ್ತು ಶಾಪದ ವಸ್ತುವಾಗುತ್ತಾರೆ (ಗ್ರೇಟ್ ಕಾಂಟ್ರೊವರ್ಸಿ, ಪುಟ 615, 1911).ಕೊಕಾಘ 78.5

    ದೇವರಾಜ್ಞೆಗಳನ್ನು ಕೈಕೊಳ್ಳುವವರ ವಿರುದ್ಧವಾಗಿ ಕ್ರೈಸ್ತ ದೇಶಗಳ ನಾಯಕರು ಶಾಸನ ಜಾರಿಮಾಡಿದಾಗ, ಸರ್ಕಾರಗಳು ಅವರ ರಕ್ಷಣೆಯ ಜವಾಬ್ದಾರಿ ಹಿಂತೆಗೆದುಕೊಂಡು ಅವರನ್ನು ವಿರೋಧಿಗಳ ವಶಕ್ಕೆ ಒಪ್ಪಿಸುತ್ತವೆ. ಆಗ ದೇವರ ಮಕ್ಕಳು ತಮ್ಮ ತಮ್ಮ ಊರುಗಳು, ನಗರಗಳನ್ನು ಬಿಟ್ಟು ಪಲಾಯನ ಮಾಡಿ ಜನ ವಸತಿಯಿಲ್ಲದ ಏಕಾಂತ ಸ್ಥಳಗಳಲ್ಲಿ ಗುಂಪಾಗಿ ವಾಸಿಸುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 626). ಕೊಕಾಘ 79.1

    ನಮ್ಮ ಸಭೆಯಲ್ಲಿ ಅನೇಕರು ಎಚ್ಚರಿಕೆಯಾಗಿಲ್ಲದಿದ್ದಲ್ಲಿ, ಭಾನುವಾರ ಕೆಲಸ ಮಾಡುವ ತಮ್ಮ ಅವಕಾಶ ತಪ್ಪಿ ಹೋಗುತ್ತದೆಂಬ ತಪ್ಪು ವರದಿಯಿಂದ ಅವರಲ್ಲಿ ಸಾತ್ವಿಕ ಕೋಪ ಉಂಟಾಗಬಹುದು. ಈ ವಿಷಯದಲ್ಲಿ ಯಾವುದೇ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ, ಎಲ್ಲವನ್ನೂ ಪ್ರಾರ್ಥನೆ ಮೂಲಕ ದೇವರ ಮುಂದೆ ವಿನಂತಿಸಿಕೊಳ್ಳಬೇಕು. ಆತನೊಬ್ಬನು ಮಾತ್ರ ಸರ್ಕಾರಗಳ ಅಧಿಕಾರವನ್ನು ನಿಯಂತ್ರಿಸಬಲ್ಲನು. ವಿವೇಚನಾ ರಹಿತವಾಗಿ ನಡೆದುಕೊಳ್ಳದೆ ತಮ್ಮ ಸ್ವಾತಂತ್ರ್ಯದ ಬಗ್ಗೆ ಅವಿವೇಕತನದಿಂದ ಕೊಚ್ಚಿಕೊಳ್ಳದೆ ದೇವರ ದಾಸರಿಗೆ ತಕ್ಕಂತೆ ‘ಎಲ್ಲರನ್ನೂ ಸನ್ಮಾನಿಸಿ, ಸಹೋದರರನ್ನು ಪ್ರೀತಿಸಬೇಕು. ದೇವರಿಗೆ ಭಯಪಟ್ಟು ಅರಸನನ್ನು ಸನ್ಮಾನಿಸಬೇಕು’ (1 ಪೇತ್ರನು 2:17).ಕೊಕಾಘ 79.2

    ಸತ್ಯವೇದದಲ್ಲಿ ತಿಳಿಸಿರುವ ಈ ಬುದ್ದಿವಾದವು ಇಂತಹ ಸನ್ನಿವೇಶಗಳನ್ನು ಎದುರಿಸಬೇಕಾದವರಿಗೆ ಒಂದು ಅಮೂಲ್ಯವಾದ ಎಚ್ಚರಿಕೆಯಾಗಿದೆ. ದುರುದ್ದೇಶಪೂರಿತ ಎಂದು ತೋರಿಸುವಂತ ರೀತಿಯಲ್ಲಿ ನಾವು ನಡೆದುಕೊಂಡು ಪ್ರತಿಭಟಿಸಬಾರದು ಅಥವಾ ಅಸಡ್ಡೆ ಮಾಡಬಾರದು (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 2, ಫುಟಗಳು 193, 194, 1898).ಕೊಕಾಘ 79.3

    Larger font
    Smaller font
    Copy
    Print
    Contents