Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಮೇರಿಕಾ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಅಂತ್ಯ

    ಸೈತಾನನ ಏಜೆಂಟರ ಮೂಲಕ ದೇವರಾಜ್ಞೆಗಳು ನಿರರ್ಥಕವಾಗುವವು. ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಕೊಚ್ಚಿಕೊಳ್ಳುವ ಅಮೇರಿಕಾದಲ್ಲಿ ಅದು ಕೊನೆಗೊಳ್ಳುವುದು ಸಬ್ಬತ್ತಿನ ಪ್ರಶ್ನೆಯ ಮೇಲೆ ಈ ವಿವಾದವು ನಿರ್ಣಯಿಸಲ್ಪಡುವುದು (ಎವಾಂಜಲಿಸಮ್, ಪುಟ 236, 1875).ಕೊಕಾಘ 82.3

    ದೇವಜನರಿಗೆ ಒಂದು ಮಹಾ ಇಕಟ್ಟು ಕಾದುಕೊಂಡಿದೆ. ಅತಿ ಶೀಘ್ರದಲ್ಲಿಯೇ ಅಮೆರಿಕಾದಲ್ಲಿ ವಾರದ ಮೊದಲನೆಯ ದಿನವು ಪರಿಶುದ್ದ ದಿನವೆಂದು ಆಚರಿಸಬೇಕೆಂದು ಶಾಸನವು ಜಾರಿಗೆ ಬರಲಿದೆ. ಆಗ ಜನರ ಮನಸ್ಸಾಕ್ಷಿಯ ಶಬಕ್ಕೆ ವಿರುದ್ದವಾಗಿ ದೇಶವು ತೀರ್ಮಾನಿಸಿರುವ ದಿನವನ್ನು ಸಬ್ಬತ್ತೆಂದು ಅನುಸರಿಸಬೇಕೆಂದು ಒತ್ತಾಯ ಮಾಡಲಿಕ್ಕೂ ಸರ್ಕಾರವು ಹಿಂಜರಿಯುವುದಿಲ್ಲ (ರಿವ್ಯೂ ಅಂಡ್ ಹೆರಾಲ್ಡ್, ಡಿಸೆಂಬರ್ 11, 1888).ಕೊಕಾಘ 82.4

    ಸೆವೆಂತ್’ ಡೇ ಅಡ್ವೆಂಟಿಸ್ಟರು ಏಳನೇ ದಿನದ ಸಬ್ಬತ್ತಿನ ವಿಷಯವಾಗಿ ಹೋರಾಡುವರು, ಅಮೇರಿಕಾ ಮತ್ತು ಇತರ ದೇಶಗಳ ಅಧಿಕಾರಿಗಳು ತಮ್ಮ ಹೆಮ್ಮೆ ಮತ್ತು ಶಕ್ತಿಯಿಂದ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸುವ ಶಾಸನಗಳನ್ನು ಮಾಡುವರು. ಅಮೇರಿಕಾ ದೇಶದ ಪ್ರೊಟೆಸ್ಟೆಂಟರು ಪ್ರೇತಾತ್ಮವಾದ (Spiritualism, ಪ್ರೇತ ಸಂಪರ್ಕ ಇದ್ದೆ ಅಂದರೆ ಮೃತದ ಪ್ರೇತಗಳು ಅರ್ಹ ಮಧ್ಯವರ್ತಿಗಳ ಮೂಲಕ ಬದುಕಿರುವ ಬಂಧುಮಿತ್ರರೊಡನೆ ಮಾತಾಡುವುದಲ್ಲದೆ ಅವರಿಗೆ ಕಾಣಿಸಿಕೊಳ್ಳುತ್ತವೆಂಬ ನಂಬಿಕೆ) ಹಾಗೂ ರೋಮನ್ ಕಥೋಲಿಕ್ ಸಭೆಯೊಂದಿಗೆ ಒಂದಾಗುವರು. ಈ ಮೂರು ವಿಧವಾದ ಶಕ್ತಿಗಳ ಸೇರುವಿಕೆಯ ಪ್ರಭಾವದಿಂದ, ಅಮೇರಿಕಾ ದೇಶವು ಮನಸ್ಸಾಕ್ಷಿಯ ಹಕ್ಕುಗಳನ್ನು ದಮನಿಸುವಲ್ಲಿ ಕಥೋಲಿಕ್ ಸಭೆಯನ್ನು ಅನುಸರಿಸುವುದು (ಗೇಟ್ ಕಾಂಟ್ರೊವರ್ಸಿ 588, 1911).ಕೊಕಾಘ 82.5