Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕಡುಸಂಕಟವು ದೇವರಮಕ್ಕಳನ್ನು ಶುದ್ದೀಕರಿಸುತ್ತದೆ

    ಶೀಘ್ರದಲ್ಲಿಯೇ ಲೋಕದಾದ್ಯಂತ ಕಷ್ಟಗಳುಂಟಾಗುತ್ತವೆ. ದೇವರನ್ನು ತಿಳಿದುಕೊಳ್ಳಲು ಎಲ್ಲರೂ ಬಯಸುವಂತಾಗುತ್ತದೆ. ತಡಮಾಡಲಿಕ್ಕೆ ನಮಗೆ ಸಮಯವಿಲ್ಲ... ಆದರೆ ತನ್ನ ಸಭೆಯ ಮೇಲೆ ದೇವರ ಪ್ರೀತಿ ಅಪರಿಮಿತವಾಗಿದೆ. ತನ್ನ ಸ್ವಾಸ್ಥ್ಯದ ಮೇಲೆ ಆತನ ಕಾಳಜಿಯು ಎಂದೂ ಸಹ ನಿಂತುಹೋಗದು, ಸಭೆಯ ಶುದ್ದೀಕರಣ ಹಾಗೂ ಅದರ ಈಗಿನ ಮತ್ತು ನಿತ್ಯವಾದ ಒಳ್ಳೆಯದಕ್ಕಾಗಿಯೇ ಹೊರತು, ಬೇರೆ ಯಾವುದೇ ಕಾರಣಕ್ಕೂ ಆತನು ತನ್ನ ಸಭೆಗೆ ಅಪಾರ ಸಂಕಟ ಮತ್ತು ವೇದನೆ ಬರುವಂತೆ ಮಾಡುವುದಿಲ್ಲ. ಕ್ರಿಸ್ತನು ಈ ಲೋಕದಲ್ಲಿ ತನ್ನ ಸೇವೆಯ ಆರಂಭ ಮತ್ತು ಮುಕ್ತಾಯದಲ್ಲಿ ದೇವಾಲಯವನ್ನು ಶುದ್ದೀಕರಿಸಿದಂತೆ, ಕೊನೆಯ ಕಾಲದಲ್ಲಿ ತನ್ನ ಸಭೆಯನ್ನು ಶುದ್ದೀಕರಿಸುತ್ತಾನೆ. ತನ್ನ ಜನರು ಹೆಚ್ಚು ದೈವಭಕ್ತಿ ಹೊಂದಿಕೊಳ್ಳುವಂತೆ ಮತ್ತು ಶಿಲುಬೆಯ ವಿಜಯವನ್ನು ಜಗತ್ತಿನಾದ್ಯಂತ ಸಾರುವುದಕ್ಕೆ ಬಲಪಡೆದುಕೊಳ್ಳುವಂತೆ ಕ್ರಿಸ್ತನು ತನ್ನ ಸಭೆಗೆ ಶೋಧನೆ ಮತ್ತು ಕಷ್ಟಸಂಕಟಗಳನ್ನು ಬರಮಾಡುತ್ತಾನೆ (ಟೆಸ್ಟಿಮೊನಿಸ್ ಸಂಪುಟ 9, ಪುಟ 228, 1909).ಕೊಕಾಘ 88.1

    ಸಂಕಟ, ವೇದನೆಗಳು, ಶೋಧನೆಗಳು, ವಿಪತ್ತುಗಳು ನಮ್ಮ ನಡೆನುಡಿಗಳನ್ನು ಉತ್ತಮಪಡಿಸಿ, ಮತ್ತು ಶುದ್ದೀಕರಿಸಿ ಪರಲೋಕಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡುವ ದೇವರ ಸಾಧನಗಳಾಗಿವೆ.ಕೊಕಾಘ 88.2

    *****