Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸುಳ್ಳು ತತ್ವಗಳು ಕೆಲವರನ್ನು ದೂರ ಮಾಡುತ್ತವೆ

    ತನ್ನದೇ ಆದ ಇತಿಮಿತಿ ಹೊಂದಿರುವ ಮನುಷ್ಯರು ದೇವರ ಶಕ್ತಿ ಹಾಗೂ ಅಗಾಧತೆಯನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗದ್ದರಿಂದ ವಿಜ್ಞಾನ ಮತ್ತು ಧರ್ಮವನ್ನು ಪರಸ್ಪರ ವಿರುದ್ದವಾಗಿದೆ ಎಂದು ಎಣಿಸುತ್ತಾರೆ. ಇದರ ಬಗ್ಗೆ ದೇವರು ಶ್ರೀಮತಿ ವೈಟಮ್ಮನವರಿಗೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸವಾದ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು’ (ಅ.ಕೃತ್ಯಗಳು 20:30) ಎಂದು ತಿಳಿಸಿದನು. ಇಂತ ಸ್ಥಿತಿಯು ದೇವರ ಮಕ್ಕಳಲ್ಲಿಯೂ ಖಂಡಿತವಾಗಿ ನಡೆಯುತ್ತದೆ (ಎವಾಂಜಲಿಸಮ್ 593, 1890).ಕೊಕಾಘ 101.5

    ಗೋಧಿಯನ್ನು ಹೊಟ್ಟಿನಿಂದ ಬೇರ್ಪಡಿಸಲು ಜರಡಿ ಹಿಡಿಯುವ ಸಮಯದಲ್ಲಿ ಇಂತಹ ಸುಳ್ಳು ಸಿದ್ಧಾಂತಗಳನ್ನು ಬೋಧಿಸುವಾಗ, ಸತ್ಯದಲ್ಲಿ ನೆಲೆಯೂರದಂತವರು ಎಲ್ಲಿಯೂ ಆಶ್ರಯ ಪಡೆದುಕೊಳ್ಳದೆ ಸ್ಥಳದಿಂದ ಕದಲುವ ಮರಳಿನಂತಿರುವರು. ತಮ್ಮ ಕಹಿಭಾವನೆಗಳ ರೀತಿ ನೀತಿಗಳಿಗೆ ಹೊಂದಿಕೆಯಾಗುವಂತೆ ಅವರು ಯಾವುದೇ ಸ್ಥಿತಿಗೆ ಇಳಿಯುತ್ತಾರೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 112, 1897).ಕೊಕಾಘ 102.1

    ಸತ್ಯದ ಮೇಲಿನ ಪ್ರೀತಿಯನ್ನು ಅಂಗೀಕರಿಸದ ಅವರು ವೈರಿಯಾದ ಸೈತಾನನ ವಂಚನೆಗೆ ಮರುಳಾಗುವರು. ಅವರು ದುರ್ಮಾರ್ಗಕ್ಕೆ ಪ್ರೇರಿಸುವ ದುರಾತ್ಮಗಳಿಗೂ ಹಾಗೂ ದೆವ್ವಗಳ ತತ್ವಗಳಿಗೂ ಕಿವಿಗೊಟ್ಟು ಸತ್ಯಮಾರ್ಗದ ನಂಬಿಕೆಯನ್ನು ಬಿಟ್ಟುಹೋಗುವರು (ಟೆಸ್ಟಿಮೊನೀಸ್, ಸಂಪುಟ 6, ಪುಟ 401, 1900). ವೈರಿಯಾದ ಸೈತಾನನು ಪರಲೋಕದಲ್ಲಿ ದೇವದರ್ಶನ ಗುಡಾರವಿಲ್ಲ ಎಂಬಂತ ಸುಳ್ಳು ಸಿದ್ದಾಂತಗಳನ್ನು ತರುವನು, ನಂಬಿಕೆಯನ್ನು ಬಿಟ್ಟು ಹೋಗುವುದಕ್ಕೆ ಇದು ಪ್ರಮುಖವಾದ ಅಂಶಗಳಲ್ಲಿ ಒಂದಾಗಿದೆ (ಎವಾಂಜಲಿಸಮ್, 224, 1905).ಕೊಕಾಘ 102.2