Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಭೆಯು ಬಿದ್ದು ಹೋಗುವಂತೆ ಕಂಡುಬರಬಹುದು

    ದೇವರು ಗೋಧಿಯನ್ನು ಹೊಟ್ಟಿನಿಂದ ಬೇರ್ಪಡಿಸುವಾಗ ಜನರು ತರಗೆಲೆಯಂತೆ ಹಾರಿಹೋಗುವರು (ಟೆಸ್ಟಿಮೋನೀಸ್‌ ಸಂಪುಟ 4, ಪುಟ 79, 1876), ಸಮೃದ್ಧಿಯಾದ ಗೋಧಿಯಿರುವಂತ ಸ್ಥಳದಿಂದಲೂ, ಹೊಟ್ಟಿನಂತ ಮೋಡವು ಗಾಳಿಯಿಂದ ತೂರಿ ಹೋಗುವುದು (ಟೆಸ್ಟಿಮೊನೀಸ್, ಸಂಪುಟ 5, ಪುಟ 81, 1882). ಶೀಘ್ರದಲ್ಲಿಯೇ ದೇವರ ಮಕ್ಕಳು ತೀಕ್ಷ್ಣವಾದ ಕಷ್ಟ ಸಂಕಟಗಳಿಂದ ಪರೀಕ್ಷೆಗೆ ಒಳಪಡುವರು. ಈಗ ಯಥಾರ್ಥವಂತರೆಂದು ಕಂಡುಬರುವ ಹೆಚ್ಚಿನವರು ಆಗ ಹೀನವಾದ ಬಳಕೆಗೆ ಉಪಯೋಗಿಸಲ್ಪಡುವ ಪಾತ್ರೆಯೆಂದು ಕಂಡುಬರುವರು.ಕೊಕಾಘ 103.6

    ಕ್ರೈಸ್ತಧರ್ಮವು ಅತ್ಯಂತ ತಿರಸ್ಕಾರಕ್ಕೆ ಹಾಗೂ ದೇವರ ಆಜ್ಞೆಗಳು ಹೆಚ್ಚಿನ ಅಪಹಾಸ್ಯಕ್ಕೆ ಗುರಿಯಾದಾಗ, ನಮ್ಮ ಉತ್ಸಾಹವು ಚೈತನ್ಯದಿಂದ ಕೂಡಿರಬೇಕು ಹಾಗೂ ನಮ್ಮ ಧೈರ್ಯ ಮತ್ತು ದೃಢಸಂಕಲ್ಪವು ಹಿಂಜರಿಕೆಯಾಗಬಾರದು. ಹೆಚ್ಚಿನವರು ನಮ್ಮನ್ನು ತೊರೆದಾಗ, ಕರ್ತನಿಗೆ ಹೋರಾಟ ಮಾಡುವ ಶೂರರು ಕಡಿಮೆಯಾಗಿರುವಾಗ, ಸತ್ಯ ಹಾಗೂ ನೀತಿಯ ಸಮರ್ಥನೆಗಾಗಿ ನಿಲ್ಲಬೇಕಾದದ್ದು ನಮಗೆ ಬರುವ ಪರೀಕ್ಷೆಯಾಗಿದೆ. ಆ ಸಮಯದಲ್ಲಿ ನಾವು ಇತರರ ನಿರುತ್ಸಾಹದಿಂದ ಉತ್ಸಾಹವನ್ನೂ, ಹೇಡಿಗಳಿಂದ ಧೈರ್ಯವನ್ನೂ ಮತ್ತು ದ್ರೋಹಿಗಳಿಂದ ನಿಷ್ಠೆಯನ್ನು ತಂದುಕೊಳ್ಳಬೇಕು (ಟೆಸ್ಟಿಮೋನಿಸ್‌ ಸಂಪುಟ 5, ಪುಟ 136, 1882).ಕೊಕಾಘ 104.1

    ಸಭೆಯು ಬೀಳುವಂತೆ ಕಾಣಬಹುದು. ಆದರೆ ಬೀಳುವುದಿಲ್ಲ. ಚೀಯೋನಿನಲ್ಲಿ ಪಾಪಿಗಳು ಜರಡಿ ಹಿಡಿದು ಹೊರಕ್ಕೆ ಹಾಕಲ್ಪಡುವಾಗ, ಸಭೆಯು ಉಳಿದಿರುವುದು, ಅಮೂಲ್ಯವಾದ ಗೋಧಿಯಿಂದ ಹೊಟ್ಟು ಬೇರ್ಪಡಿಸಲ್ಪಡುವುದು, ಇದು ಒಂದು ಭಯಂಕರವಾದ ಆಗ್ನಿಪರೀಕ್ಷೆಯಾಗಿದೆ. ಆದಾಗ್ಯೂ ಅದು ನಡೆಯಲೇಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 380, 1886).ಕೊಕಾಘ 104.2

    ಅಡ್ವೆಂಟಿಸ್ಟರಿಗೆ ಹಿಂಸೆಯೆಂಬ ಬಿರುಗಾಳಿ ಬೀಸುವ ಸಮಯ ಹತ್ತಿರವಾದಾಗ, ಸತ್ಯಕ್ಕೆ ಅವಿಧೇಯರಾಗಿ ಶುದ್ದೀಕರಿಸಲ್ಪಡದ, ಆದರೆ ಮೂರನೇ ದೂತನ ವರ್ತಮಾನದಲ್ಲಿ ನಂಬಿಕೆಯಿಟ್ಟಿದೇವೆಂದು ಹೇಳಿಕೊಳ್ಳುವ ದೊಡ್ಡ ಗುಂಪಿನ ಜನರು, ಸತ್ಯ ಸಭೆಯನ್ನು ಬಿಟ್ಟು ವಿರೋಧಿಗಳೊಂದಿಗೆ ಸೇರಿಕೊಳ್ಳುವದು (ಗ್ರೇಟ್ ಕಾಂಟ್ರೊವರ್ಸಿ, ಪುಟ 608, 1911).ಕೊಕಾಘ 104.3