Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹಿಂಗಾರು ಮಳೆಗಾಗಿ ಹಾದಿ ಸಿದ್ಧಪಡಿಸುವುದು

    ಶತ್ರುವಾದ ಸೈತಾನನ ಪ್ರತಿಯೊಂದು ಶೋಧನೆ, ಗರ್ವ, ಸ್ವಾರ್ಥ, ಲೋಕದ ಮೇಲಣ ಪ್ರೀತಿ ಮತ್ತು ತಪ್ಪಾದ ನಡೆನುಡಿಗಳ ಮೇಲೆ ಜಯಹೊಂದದ ಹೊರತು ಯಾರೂ ಸಹ ಆತ್ಮೀಕ ಚೈತನ್ಯ ಪಡೆದುಕೊಳ್ಳಲಾರರು, ಆದುದರಿಂದ ನಾವು ದೇವರೊಂದಿಗೆ ಹೆಚ್ಚಾದ ನಿಕಟ ಸಂಪರ್ಕ ಹೊಂದಿ, ಕರ್ತನ ಮಹಾದಿನದ ಆ ಯುದ್ಧದಲ್ಲಿ ಧೈರ್ಯವಾಗಿ ನಿಲ್ಲಲು ಸಾಧ್ಯವಾಗುವುದಕ್ಕೆ ಅಗತ್ಯವಾದ ಸಿದ್ದತೆಗಾಗಿ ಪ್ರಾಮಾಣಿಕವಾಗಿ ಬೇಡಿಕೊಳ್ಳಬೇಕು (ಎವಾಂಜಲಿಸಮ್, ಪುಟ 71, 1851).ಕೊಕಾಘ 111.4

    ನಮ್ಮ ಗುಣದಲ್ಲಿರುವ ದೌರ್ಬಲ್ಯಗಳನ್ನು ತೆಗೆದುಹಾಕಲು ಹಾಗೂ ಪ್ರತಿಯೊಂದು ದೋಷದಿಂದ ಹೃದಯವೆಂಬ ದೇವಾಲಯವನ್ನು ಶುದ್ಧೀಕರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆಗ ಮುಂಗಾರು ಮಳೆಯು ಪಂಚಾಶತ್ತಮ ದಿನದಲ್ಲಿ ಶಿಷ್ಯರ ಮೇಲೆ ಸುರಿದಂತೆ ನಮ್ಮ ಮೇಲೆ ಹಿಂಗಾರುಮಳೆ ಸುರಿಯುವುದು (ಟೆಸ್ಟಿಮೊನೀಸ್ ಸಂಪುಟ 5, ಪುಟ 214, 1882).ಕೊಕಾಘ 111.5

    ಬಲಹೀನತೆಯಿಂದ ನಿರುತ್ಸಾಹಗೊಂಡಿರುವ ಸಭೆಯ ಮೇಲೆ ದೇವರು ತನ್ನ ಆತ್ಮವನ್ನು ಸುರಿಸುವುದಕ್ಕಾಗಿ, ದೇವರ ಮಕ್ಕಳು ಎಲ್ಲಾ ಅಡೆತಡೆಗಳನ್ನು ನಿವಾರಿಸಿದಲ್ಲಿ, ಅದಕ್ಕೆ ಹೆದರುವಷ್ಟು ಸೈತಾನನು ಬೇರಾವುದಕ್ಕೂ ಹೆದುರುವುದಿಲ್ಲ. ಪ್ರತಿಯೊಂದು ಶೋಧನೆ, ಪ್ರತಿಯೊಂದು ವಿರೋಧವಾದ ಪಭಾವ... ಇವೆಲ್ಲವನ್ನೂ “ಬಲದಿಂದಲ್ಲ, ಪರಾಕ್ರಮದಿಂದಲ್ಲ, ಯೆಹೋವನ ಆತ್ಮನಿಂದಲೇ...’ ಯಶಸ್ವಿಯಾಗಿ ಎದುರಿಸಬಹುದೆಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ (ಜೆಕರ್ಯ 4:6) ಸೆಲೆಕ್ಟೆಡ್ ಮೆಸೇಜಸ್ ಸಂಪುಟ 1, ಪುಟ 124, 1887.ಕೊಕಾಘ 111.6