Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಯಾವ ಸಾಲವೂ ನಿಮಗೆ ಇರಬಾರದು

    ಬಂದ ಹಣವನ್ನು ತಕ್ಷಣವೇ ಖರ್ಚು ಮಾಡುವುದು ಅನೇಕ ಕುಟುಂಬಗಳು ಬಡವರಾಗಿ ಇರುವುದಕ್ಕೆ ಕಾರಣವಾಗಿದೆ. ಹಣವನ್ನು ಗಳಿಸುವುದಕ್ಕೆ ಮೊದಲೇ ವ್ಯರ್ಥ ಉದ್ದೇಶಕ್ಕಾಗಿ ಉಪಯೋಗಿಸುವುದು ಮತ್ತು ಕದಿಯುವುದು ಒಂದು ಉರುಲಾಗಿದೆ. ಸತ್ಯವೇದವನ್ನು ಅನುಸರಿಸಿ ನಡೆಯುವ ಕ್ರೈಸ್ತರು ಹಣಕಾಸಿನ ವಿಷಯದಲ್ಲಿ ಪ್ರಾಮಾಣಿಕರಾಗಿರಬೇಕೆಂದು ಅನ್ಯರು ನಿರೀಕ್ಷಿಸುವುದು ನ್ಯಾಯವಾಗಿದೆ. ಒಬ್ಬ ಕ್ರೈಸ್ತನು ಸರ್ಕಾರಕ್ಕೆ ಅಥವಾ ಇನ್ನಾರಿಗಾಗಲಿ ನ್ಯಾಯವಾಗಿ ಕೊಡಬೇಕಾದ್ದನ್ನು ಕೊಡದಿದ್ದಲ್ಲಿ, ಎಲ್ಲಾ ಕ್ರೈಸ್ತರು ಸಹ ವಿಶ್ವಾಸಕ್ಕೆ ಅರ್ಹರಲ್ಲವೆಂದು ತಿಳಿದುಕೊಳ್ಳುವ ಅಪಾಯವಿದೆ. ಭಕ್ತಿವಂತರೆಂದು ಹೇಳಿಕೊಳ್ಳುವವರು ತಮ್ಮ ಅಪ್ರಾಮಾಣಿಕತೆಯ ನಿಮಿತ್ತ ಸತ್ಯಕ್ಕೆ ದೂಷಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ಇರಬಾರದೆಂದು ಅಪೋಸ್ತಲನಾದ ಪೌಲನು ಹೇಳುತ್ತಾನೆ (ರೋಮಾಯ 13:8).KanCCh 180.3

    ಬಹಳಷ್ಟು ಜನರು ತಮ್ಮ ಆದಾಯದ ಮಿತಿಗೆ ತಕ್ಕಂತೆ ಖರ್ಚು ಮಾಡುವುದಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚುಬೇಕೆಂಬ ವಿಷಯ ಅವರಿಗೆ ತಿಳಿದಿದ್ದರೂ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದಿಲ್ಲ. ಸಾಲದ ಮೇಲೆ ಸಾಲ ಮಾಡಿ ಅದರ ಭಾರದಲ್ಲಿ ಕುಸಿದುಹೋಗಿ ಪರಿಣಾಮವಾಗಿ ನಿರಾಶೆಗೊಂಡ ಧೈರ್ಯ ಕಳೆದುಕೊಳ್ಳುತ್ತಾರೆ. ಸಾಲಮಾಡದರೀತಿಯಲ್ಲಿ ಕುಟುಂಬದ ವ್ಯವಹಾರಗಳನ್ನು ನಿರ್ವಹಿಸಬೇಕು. ಒಬ್ಬನು ಸಾಲಗಾರನಾದಲ್ಲಿ, ಅವನು ಸೈತಾನನ ಬಲೆಯಲ್ಲಿ ಬಿದ್ದವನಾಗಿರುತ್ತಾನೆ. ಸಾಲ ಮಾಡುವುದಕ್ಕಿಂತ ನಿಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಇದ್ದುದರಲ್ಲಿಯೇ ನಿರ್ವಹಿಸಲು ಕಲಿತುಕೊಳ್ಳಿ ಸಾಲ ಮಾಡುವುದು ಒಂದು ಶಾಪ, ಕುಷ್ಠರೋಗದಂತೆ ಸಾಲವನ್ನು ದೂರವಿಡಿ.KanCCh 180.4