Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹುಟ್ಟಿದ ಹಬ್ಬ - ದೇವರನ್ನು ಸ್ತುತಿಸುವ ಸಮಯ

    ಯೆಹೂದ್ಯರ ಸಂಪ್ರದಾಯದಲ್ಲಿ ದೇವರ ಆದೇಶದ ಅನುಸಾರ ಮಕ್ಕಳು ಹುಟ್ಟಿದಾಗ ತಂದೆ-ತಾಯಿಯರು ಕಾಣಿಕೆ ಕೊಡಬೇಕಾಗಿತ್ತು. ಆದರೆ ಈ ದಿನಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡಲು ತಂದೆ-ತಾಯಿಯರು ವಿಶೇಷ ಪ್ರಯತ್ನ ಮಾಡಿ, ದೇವರನ್ನು ಗೌರವಿಸುವ ಬದಲು ಹುಟ್ಟುಹಬ್ಬದಂದು ತಮ್ಮ ಮಕ್ಕಳನ್ನು ಗೌರವಿಸುವ ಸಮಯವನ್ನಾಗಿ ಮಾಡಿಕೊಂಡಿದ್ದಾರೆ. ಸೈತಾನನು ಈ ವಿಷಯದಲ್ಲಿ ತನ್ನದೇ ಆದ ಮಾರ್ಗಗಳನ್ನು ಹುಡುಕಿ, ಉಡುಗೊರೆಗಳ ಮೂಲಕ ಜನರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಾನೆ. ಈ ಕಾರಣದಿಂದ ತಾವು ವಿಶೇಷ ದಯೆಗೆ ಪಾತ್ರರಾಗದಂತ ರೀತಿಯಲ್ಲಿ, ಮಕ್ಕಳ ಗಮನ ಸ್ವತಃ ಅವರ ಕಡೆಗೆ ಹರಿಯುತ್ತದೆ.KanCCh 184.4

    ಹುಟ್ಟುಹಬ್ಬದ ಸಂದರ್ಭದಲ್ಲಿ ದೇವರು ತನ್ನ ಮಹಾಪ್ರೀತಿಯಿಂದಲೂ ಹಾಗೂ ಕೃಪೆಯಿಂದಲೂ ಮಕ್ಕಳಿಗೆ ಮತ್ತೊಂದು ವರ್ಷವನ್ನು ದಯಪಾಲಿಸಿದ್ದಾನೆಂದು ಆತನಿಗೆ ಕೃತಜ್ಞತೆ ಸಲ್ಲಿಸುವ ಸಮಯವಾಗಿದೆ ಎಂದು ಅವರಿಗೆ ತಂದೆ-ತಾಯಿಯರಾದ ನಾವು ಮನವರಿಕೆ ಮಾಡಬೇಕು. ಈ ರೀತಿಯಾಗಿ ಅಮೂಲ್ಯವಾದ ಪಾಠಗಳನ್ನು ಕಲಿಸಬಹುದು. ನಮ್ಮ ಜೀವ, ಆರೋಗ್ಯ, ಅನ್ನಾಹಾರ ವಸ್ತ್ರಗಳು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನಮಗೆ ದೇವರು ಕೊಟ್ಟ ನಿತ್ಯಜೀವದ ನಿರೀಕ್ಷೆಗಾಗಿ ನಾವು ಆತನಿಗೆ ಋಣಿಯಾಗಿ ಕೃತಜ್ಞತೆ ತೋರಿಸಬೇಕು ಹಾಗೂ ಆತನ ವರಗಳನ್ನು ಅರಿತುಕೊಂಡು, ನಮಗೆ ಎಲ್ಲವನ್ನೂ ಕೃಪೆಯಿಂದಲೇ ಯಾವುದೇ ಕೊರತೆ ಉಂಟಾಗದಂತೆ ನೀಡಿದಾತನಿಗೆ ಉಪಕಾರ ಸ್ತುತಿ ಮಾಡಿ ಕಾಣಿಕೆ ಸಮರ್ಪಿಸಬೇಕು. ಹುಟ್ಟುಹಬ್ಬದ ಇಂತಹ ಉಡುಗೊರೆಗಳು ಪರಲೋಕಕ್ಕೆ ಮೆಚ್ಚುಗೆಯಾಗುತ್ತವೆ.KanCCh 184.5

    ಮಕ್ಕಳಿಗೆ ಅವರ ಹುಟ್ಟುಹಬ್ಬದಲ್ಲಿ ಕಳೆದ ವರ್ಷದ ಅವರ ಜೀವಿತವನ್ನು ಪರಾಮರ್ಶಿಸುವಂತೆಯೂ ಹಾಗೂ ಪರಲೋಕ ಪುಸ್ತಕದಲ್ಲಿ ಅದರ ಬಗ್ಗೆ ಬರೆದಿರುವ ದಾಖಲೆಗಳನ್ನು ನೋಡುವಾಗ ಅವರಿಗೆ ಅದು ಸಂತೋಷ ತರುವುದೋ ಎಂಬುದನ್ನು ಪರಿಗಣಿಸುವಂತೆ ತಂದೆ-ತಾಯಿಯರು ತಿಳಿಸಬೇಕು. ತಮ್ಮ ಮಾತುಗಳು, ಕಾರ್ಯಗಳು ಹಾಗೂ ನಡವಳಿಕೆಗಳು ದೇವರಿಗೆ ಮೆಚ್ಚುಗೆಯಾಗುವಂತಿದೆಯೇ ಎಂಬುದರ ಬಗ್ಗೆ ಮಕ್ಕಳು ಗಂಭೀರವಾಗಿ ಆಲೋಚಿಸಬೇಕು. ಅವರ ಜೀವನವು ದೇವರ ದೃಷ್ಟಿಯಲ್ಲಿ ಕ್ರಿಸ್ತನ ಜೀವಿತದಂತೆ ಮನೋಹರವೂ, ಚೆಲುವಾಗಿಯೂ ಹಾಗೂ ಶ್ರೇಷ್ಠವಾಗಿಯೂ ಇದೆಯೇ? ಮಕ್ಕಳಿಗೆ ದೇವರ ಜ್ಞಾನ, ಆತನ ಮಾರ್ಗಗಳು ಹಾಗೂ ಆಜ್ಞೆಗಳ ಬಗ್ಗೆ ಬೋಧಿಸಬೇಕು.KanCCh 185.1

    ಶ್ರೀಮತಿ ವೈಟಮ್ಮನವರು ತಮ್ಮ ಕುಟುಂಬದವರಿಗೂ ಮತ್ತು ಸ್ನೇಹಿತರಿಗೂ ತಮಗೆ ಕ್ರಿಸ್ಮಸ್ ಅಥವಾ ಹುಟ್ಟು ಹಬ್ಬದ ಉಡುಗೊರೆ ಕೊಡಬಾರದು. ಕೊಟ್ಟರೂ ಅದನ್ನು ಅಡ್ವೆಂಟಿಸ್ಟ್ ಸಭೆಯ ಸ್ಥಾಪನೆಗೋಸ್ಕರ ಉಪಯೋಗಿಸುವುದಕ್ಕೆ ನಿಮ್ಮ ಅನುಮತಿಯಿಂದ ದೇವರ ಭಂಡಾರಕ್ಕೆ ಅದನ್ನು ಕೊಡುತ್ತೇನೆಂದು ಹೇಳಿದ್ದಾರೆ.KanCCh 185.2

    *****