Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ-28 — ಆಟ ಪಾಠ ವಿನೋದಗಳು

  ಕ್ರೈಸ್ತರು ಸಂತೋಷವಾಗಿರಲು ಅನೇಕ ಮಾರ್ಗಗಳಿವೆ. ಯಾವ ರೀತಿಯ ಸಂತೋಷವು ನ್ಯಾಯಸಮ್ಮತವಾದದ್ದು ಹಾಗೂ ಸರಿಯಾದುದೆಂದು ಅವರು ಖಚಿತವಾಗಿ ಹೇಳಬಹುದು. ಕ್ರೈಸ್ತರು ತಮ್ಮ ಮನಸ್ಸನ್ನು ಚಂಚಲಗೊಳಿಸುವ ಅಥವಾ ದೇಹವನ್ನು ಹೀನಾಯ ಸ್ಥಿತಿಗೆ ತರುವಂತಹ ಮನರಂಜನೆಯಲ್ಲಿ ಸಂತೋಷಪಡಬಾರದು. ಇಲ್ಲವೆ ನಿರಾಶೆಗೊಳಿಸುವ ಹಾಗೂ ಆತ್ಮಗೌರವ ನಷ್ಟಪಡಿಸುವಂತ ಮನರಂಜನೆಯಲ್ಲಿಯೂ ತೊಡಗಬಾರದು. ಅವರು ಕ್ರಿಸ್ತನಲ್ಲಿ ನೆಲೆಗೊಂಡು ಪ್ರಾರ್ಥನಾ ಪೂರ್ವಕ ಜೀವಿತದಲ್ಲಿ ನಿರತರಾಗಿದ್ದಲ್ಲಿ ಇಂತಹ ಮನರಂಜನೆಗೆ ಒಳಗಾಗದೆ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ.KanCCh 186.1

  ನಂಬಿಕೆಯಿಂದ ದೇವರ ಆಶೀರ್ವಾದ ಕೇಳಿಕೊಳ್ಳುವಂತ ಯಾವುದೇ ರೀತಿಯ ಆಟಪಾಟ, ವಿನೋದವು ಅಪಾಯಕರವಲ್ಲ. ಆದರೆ ನಿಮ್ಮ ವೈಯಕ್ತಿಕ ಪ್ರಾರ್ಥನೆ ಅಥವಾ ಪ್ರಾರ್ಥನಾಕೂಟಗಳಿಗೆ ಅನರ್ಹರನ್ನಾಗಿ ಮಾಡುವಂತ ಮನರಂಜನೆಯು ಸುರಕ್ಷಿತವಲ್ಲದೆ, ಅಪಾಯಕಾರಿಯೂ ಆಗಿದೆ.KanCCh 186.2

  ಕ್ರೈಸ್ತರಾದ ನಾವು ಪ್ರತಿದಿನವೂ ನಮ್ಮ ಜೀವಿತದ ಮೂಲಕ ದೇವರಿಗೆ ಈ ಲೋಕದಲ್ಲಿ ಮಹಿಮೆ ತರುವುದು ಒಂದು ಸದವಕಾಶವಾಗಿದೆ ಎಂದು ನಂಬಿರುವ ಗುಂಪಿಗೆ ಸೇರಿದ್ದೇವೆ. ಈ ಲೋಕದಲ್ಲಿ ನಾವು ಕೇವಲ ನಮ್ಮ ಮನರಂಜನೆಗಾಗಿ ಅಥವಾ ನಮ್ಮನ್ನು ಸಂತೋಷಪಡಿಸುವುದಕ್ಕಾಗಿ ಜೀವಿಸುವವರಲ್ಲ. ನಾವು ಮಾನವರಿಗೆ ಪ್ರಯೋಜನಕರವೂ ಮತ್ತು ಸಮಾಜಕ್ಕೆ ಆಶೀರ್ವಾದಕರವಾಗಿಯೂ ಜೀವಿಸಬೇಕಾಗಿದೆ. ಆದರೆ ನಾವು ನಮ್ಮ ಮನಸ್ಸನ್ನು ಚಂಚಲಗೊಳಿಸಿ ಕೆಡಿಸುವಂತಹ ವ್ಯರ್ಥವಾದ ಆಟಪಾಟ ವಿನೋದ ವಿಹಾರಗಳಲ್ಲಿ ಮಗ್ನರಾದಲ್ಲಿ ನಾವು ಹೇಗೆ ಸಮುದಾಯಕ್ಕೂ, ಸಮಾಜಕ್ಕೂ ಪ್ರಯೋಜನಕಾರಿಯಾಗಿರುತ್ತೇವೆ? ಹೇಗೆ ಆಶೀರ್ವಾದ ತರುತ್ತೇವೆ? ನಮ್ಮ ದಿನನಿತ್ಯದ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಲು ನಮ್ಮನ್ನು ಅಯೋಗ್ಯರನ್ನು ಮಾಡುವ ಯಾವುದೇ ರೀತಿಯ ಮನರಂಜನೆ, ಆಟಪಾಠಗಳಲ್ಲಿ ನಾವು ಭಾಗಿಯಾಗಬಾರದು.KanCCh 186.3

  ಕ್ರೈಸ್ತರು ತಮ್ಮ ಪ್ರಾಣ ಶರೀರಗಳನ್ನು ಚೈತನ್ಯಗೊಳಿಸಿ ಉಲ್ಲಾಸಗೊಳಿಸುವಂತ ಹಾಗೂ ಕೆಡಕು ಮಾಡದಂತ ವಿನೋದಗಳಲ್ಲಿ ಭಾಗವಹಿಸಬೇಕು. ತಮ್ಮ ಶಾರೀರಿಕ ಹಾಗೂ ಮಾನಸಿಕ ಸಾಮರ್ಥ್ಯಗಳನ್ನು ದೇವರ ಮಹಿಮೆಗಾಗಿ ಉಪಯೋಗಿಸುವ ಉದ್ದೇಶ ಹೊಂದಿರಬೇಕು. ಅವುಗಳು ಅರ್ಥವಿಲ್ಲದ, ಅವಿವೇಕಿತನದ ಆಮೋದವಾಗಿರಬಾರದು. ಕ್ರೈಸ್ತರಾದ ನಾವು ನಾವು ನಮ್ಮೊಂದಿಗೆ ಒಡನಾಡುವವರು ತಮ್ಮ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ನೆರವಾಗುವಂತೆ ಉತ್ತೇಜನ ನೀಡುವ ಆಟಪಾಟ ವಿನೋದಗಳನ್ನು ನಡೆಸಬೇಕು.KanCCh 186.4

  ಶಾರೀರಿಕ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುವುದು ಕಾಲಹರಣವಲ್ಲ. ಯೋಗ್ಯವಾದ ವ್ಯಾಯಾಮಗಳು ನಮ್ಮ ದೇಹದ ಪ್ರತಿಯೊಂದು ಅಂಗವೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾಗಿವೆ. ಮೆದುಳು ಮಾತ್ರ ಹೆಚ್ಚು ಕಾರ್ಯನಿರತವಾಗಿದ್ದು, ಶರೀರದ ಇತರ ಅಂಗಗಳು ನಿಷ್ಕ್ರಿಯವಾಗಿದ್ದಲ್ಲಿ, ಶಾರೀರಿಕ ಹಾಗೂ ಮಾನಸಿಕ ಬಲಹೀನತೆ ಉಂಟಾಗುತ್ತದೆ. ಶಾರೀರಿಕ ವ್ಯವಸ್ಥೆಯು ತನ್ನ ಆರೋಗ್ಯಕರ ಸುಸ್ಥಿತಿಯನ್ನು ಹಾಗೂ ಮನಸ್ಸು ತನ್ನ ಚೈತನ್ಯ ಕಳೆದುಕೊಳ್ಳುತ್ತದೆ. ಆಗ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಓದುವವರು ವಿರಾಮ ತೆಗೆದುಕೊಳ್ಳಬೇಕು. ಮನಸ್ಸು ನಿರಂತರವಾಗಿ ಗಾಢವಾದ ಆಲೋಚನೆಯಲ್ಲಿ ನಿರತವಾಗಬಾರದು. ಇದರಿಂದ ಮನಸ್ಸಿಗೆ ಸಂಬಂಧಪಟ್ಟ ಸೂಕ್ಷ್ಮ ನರಗಳು ಸವೆದುಹೋಗುತ್ತವೆ. ಶರೀರ ಹಾಗೂ ಮನಸ್ಸುಗಳೆರಡನ್ನೂ ಚೈತನ್ಯಗೊಳಿಸುವ ವ್ಯಾಯಾಮ ಮಾಡಬೇಕು.KanCCh 187.1