Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎಲ್ಲರೂ ಸಂತೋಷಪಡುವ ಆಟಪಾಟ ವಿನೋದಗಳು

    ಯೌವನಸ್ಥರು ಮತ್ತು ಮಕ್ಕಳ ತಮ್ಮ ವಯಸ್ಸಿಗೆ ತಕ್ಕಂತೆ ಆಟಪಾಟ ವಿನೋದಗಳಲ್ಲಿ ತೊಡಗಿಸಿಕೊಳ್ಳಬೇಕು. ಪಾಪಕ್ಕೆ ಕಾರಣವಾಗುವಂತಹ ಮನರಂಜನೆ ಅವರಿಗೆ ನಿಷಿದ್ಧ. ಆದರೆ ನೈತಿಕತೆಗೆ ಕಳಂಕತರದಂತ ವಿನೋದಗಳಲ್ಲಿ ಯೌವನಸ್ಥರು ಮತ್ತು ಮಕ್ಕಳು ಭಾಗಿಯಾಗುವಂತೆ ಶಿಕ್ಷಕರು ತಂದೆ-ತಾಯಿಯರು, ಪೋಷಕರು ಅವರಿಗೆ ಉತ್ತೇಜನ ಕೊಡಬೇಕು. ತಂದೆ-ತಾಯಿಯರು ತಮ್ಮ ಮಕ್ಕಳ ಮೇಲೆ ಕಠಿಣವಾದ ಶಿಸ್ತಿನ ನೇಮಗಳನ್ನು ಬಲವಂತವಾಗಿ ಹೇರಿದಾಗ, ಅವರಿಗೆ ತಾವು ತುಳಿತಕ್ಕೆ ಒಳಗಾಗಿದ್ದೇವೆಂಬ ಭಾವನೆ ಉಂಟಾಗುತ್ತದೆ. ಈಗ ಅವರು ಅದನ್ನು ಮುರಿದು ತಮ್ಮದೇ ಆದ ಲೌಕಿಕವಾದ ಮನರಂಜನೆಯನ್ನು ಹುಡುಕಿಕೊಂಡು ನಾಶಕ್ಕೆ ಕಾರಣವಾಗುವ ಮೂರ್ಖತನದ ದಾರಿ ಹಿಡಿಯುತ್ತಾರೆ. ತಂದೆ-ತಾಯಿಯರಾದ ನೀವು ದೃಢವಾದ ಆದರೆ ಕರುಣೆಯಿಂದ ಮಕ್ಕಳ ಉದ್ದೇಶಗಳನ್ನು ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಆದರೂ ತಮ್ಮ ಒಳ್ಳೆಯದನ್ನು ಬಯಸುವುದೇ ತಂದೆ-ತಾಯಿಯರ ಉದ್ದೇಶವಾಗಿದೆ ಎಂದು ಅವರಿಗೆ ಮನವರಿಕೆಯಾಗಬೇಕು.KanCCh 187.2

    ಶರೀರ ಹಾಗೂ ಮನಸ್ಸುಗಳೆರಡಕ್ಕೂ ಪ್ರಯೋಜನಕರವಾದ ಆಟಪಾಟ, ವಿನೋದಗಳಿವೆ. ರಚನಾತ್ಮಕವಾಗಿಯೂ, ಬೋಧನಾತ್ಮಕವಾಗಿಯೂ ಇರುವ ಅನೇಕ ವಿಧವಾದ ಮನೋರಂಜನೆಗಳನ್ನು ಬುದ್ಧಿವಂತ ಯೌವನಸ್ಥರು ಕಂಡುಕೊಳ್ಳುತ್ತಾರೆ. ಬಯಲಿನಲ್ಲಿ ಮತ್ತು ಪ್ರಕೃತಿಯಲ್ಲಿ ದೇವರ ಕೈ ಕೆಲಸಗಳ ಬಗ್ಗೆ ಆಲೋಚಿಸುವಂತ ವಿನೋದಗಳು ಹೆಚ್ಚಿನ ಪ್ರಯೋಜನಕರವಾಗಿವೆ. ಶ್ರೀಮಂತರು ಬಡವರೆನ್ನದೆ ಎಲ್ಲರೂ ಸಹ ಸಮಾನವಾಗಿ ಆನಂದಪಡುವಂತ ವಿನೋದಗಳನ್ನು ದೇವರು ಕೊಟ್ಟಿದ್ದಾನೆ. ನಮ್ಮ ಆಲೋಚನೆಗಳನ್ನು ಶುದ್ಧಗೊಳಿಸುವಂತ ಮತ್ತು ನಿಸ್ವಾರ್ಥ ಚಟುವಟಿಕೆ ಮಾಡುವಂತಹ, ಕರುಣೆಯ ಮಾತುಗಳನ್ನಾಡುವುದರಿಂದಲೂ, ದಯೆ ತೋರಿಸುವುದರಿಂದಲೂ ಬರುವ ಸಂತೋಷದ ಮನರಂಜನೆಯನ್ನು ಬಡವರು ಬಲ್ಲಿದರೆನ್ನದೆ ಎಲ್ಲರಿಗೂ ದೇವರು ಕೊಟ್ಟಿದ್ದಾನೆ. ಇಂತಹ ಸೇವೆ ಮಾಡುವವರಲ್ಲಿ ಕ್ರಿಸ್ತನ ಬೆಳಕು ಪ್ರಕಾಶಿಸಿ ದುಃಖದಲ್ಲಿರುವವರ ಜೀವನದಲ್ಲಿ ಪ್ರತಿಫಲಿಸುತ್ತದೆ. ತಮಗೆ ಮಾತ್ರವಲ್ಲದೆ, ಇತರರಿಗೂ ಸಹಾಯಕವಾಗುವ ಮತ್ತು ಆಶೀರ್ವಾದಕರವಾಗುವಂತ ವಿನೋದ ವಿಹಾರಗಳಲ್ಲಿ ಯೌವನಸ್ಥರು ಮತ್ತು ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುವಂತೆ ಆಗಬೇಕು.KanCCh 187.3

    ನಮ್ಮ ಈ ಲೋಕದಲ್ಲಿ ಅಗತ್ಯವಾದ ಹಾಗೂ ಉಪಯುಕ್ತವಾದ ಕೆಲಸ ಮಾಡುವುದು ಅಪಾರವಾಗಿದೆ. ನಮ್ಮ ಮೆದುಳು, ಮೂಳೆ ಹಾಗೂ ಸ್ನಾಯುಗಳನ್ನು ಒಳ್ಳೆಯ ಉದ್ದೇಶಗಳಿಗಾಗಿ ಬಳಸಿದಲ್ಲಿ ಅವು ದೃಢತೆ ಹಾಗೂ ಬಲ ಹೊಂದುತ್ತವೆ. ಶಾರೀರಿಕ ಅಂಗಗಳನ್ನು ಬೌದ್ಧಿಕವಾಗಿ ಬಲಿಷ್ಟವಾಗಿ ಬೆಳವಣಿಗೆ ಹೊಂದುವಂತ ಆಟಪಾಟ ವಿನೋದಗಳನ್ನು ದೇವರು ಕೊಟ್ಟ ತಲಾಂತುಗಳೊಡನೆ ಉತ್ತಮವಾಗಿ ಉಪಯೋಗಿಸಿದಾಗ, ದೇವರಿಗೆ ಮಹಿಮೆ ಉಂಟಾಗುವುದು.KanCCh 188.1