Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-30 — ಓದುವ ಆಯ್ಕೆ

    ಶಿಕ್ಷಣವೆಂದರೆ ನಮ್ಮ ಶಾರೀರಿಕ, ಬೌದ್ಧಿಕ ಮತ್ತು ಆತ್ಮೀಕ ಸಾಮರ್ಥ್ಯಗಳನ್ನು ಮತ್ತು ಜೀವನದ ಎಲ್ಲಾ ಕರ್ತವ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲಿಕ್ಕೆ ಸಿದ್ದತೆ ಮಾಡಿಕೊಳ್ಳುವುದೇ ಆಗಿದೆ. ಮೆದುಳಿನ ಸಹನಾಶಕ್ತಿ, ಸಾಮರ್ಥ್ಯ ಹಾಗೂ ಚಟುವಟಿಕೆಯು ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಇವುಗಳನ್ನು ಹೇಗೆ ಉಪಯೋಗಿಸುತ್ತೇವೆಂಬುದರ ಮೇಲೆ ಆಧಾರಗೊಂಡಿದೆ. ಮೆದುಳಿನ ಎಲ್ಲಾ ಸಾಮರ್ಥ್ಯಗಳು ಸಾಮರಸ್ಯದಿಂದ ಬೆಳವಣಿಗೆ ಹೊಂದುವಂತೆ ಇದನ್ನು ನಿಯಂತ್ರಿಸಬೇಕು.KanCCh 195.1

    ಯುವಕರಿಗೆ ಪುಸ್ತಕಗಳನ್ನು ಓದಲು ತವಕಪಡುತ್ತಾರೆ. ತಮಗೆ ಸಿಕ್ಕುವುದೆಲ್ಲವನ್ನೂ ಓದಲು ಬಯಸುತ್ತಾರೆ. ಅವರು ಓದುವ ಹಾಗೂ ಕೇಳುವ ಪುಸ್ತಕಗಳ ಬಗ್ಗೆ ಎಚ್ಚರಿಕೆವಹಿಸಲಿ. ಯುವಕರು ಅಶ್ಲೀಲ ಪುಸ್ತಕಗಳನ್ನು ಓದುವುದರಿಂದ ಅವರ ನಡತೆ ಕೆಡುವ ಮಹಾ ಅಪಾಯಕ್ಕೆ ಒಳಗಾಗುವರೆಂದು ಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದ್ದಾನೆ. ಯೌವನಸ್ಥರ ಮನಸ್ಸನ್ನು ಅಸ್ಥಿರಗೊಳಿಸಲು ಸೈತಾನನಿಗೆ ಸಾವಿರಾರು ಮಾರ್ಗಗಳಿವೆ. ಒಂದು ಕ್ಷಣವೂ ಸಹ ಅವರು ಎಚ್ಚರ ತಪ್ಪಬಾರದು. ಶತ್ರುವಿನ ಶೋಧನೆಗಳ ಆಕರ್ಷಣೆಗೆ ಒಳಗಾಗದಂತೆ ಅವರಿಗೆ ಮನಸ್ಸನ್ನು ದೃಢಮಾಡಿಕೊಳ್ಳಬೇಕು.KanCCh 195.2