Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗ್ರಂಥಗಳ ಗ್ರಂಥ

    ಒಬ್ಬನು ತನ್ನ ವಿರಾಮದ ಸಮಯದಲ್ಲಿ ಓದುವ ಪುಸ್ತಕಗಳು ಅವರ ಧಾರ್ಮಿಕ ಅನುಭವದ ಸ್ವಭಾವವನ್ನು ತಿಳಿಸುವುದು. ಆರೋಗ್ಯಕರ ಮನಸ್ಸು ಮತ್ತು ಆರೋಗ್ಯಕರವಾದ ಧಾರ್ಮಿಕ ಸಿದ್ಧಾಂತಗಳನ್ನು ಹೊಂದಬೇಕಾದಲ್ಲಿ, ಯೌವನಸ್ಥರು ದೇವರ ವಾಕ್ಯದ ಮೂಲಕ ಆತನೊಂದಿಗೆ ಯಾವಾಗಲೂ ಸಂಪರ್ಕ ಹೊಂದಿರಬೇಕು. ಕ್ರಿಸ್ತನ ಮೂಲಕ ರಕ್ಷಣಾ ಮಾರ್ಗವನ್ನು ತೋರಿಸುವ ಸತ್ಯವೇದವು ಉನ್ನತವಾದ ಹಾಗೂ ಉತ್ತಮವಾದ ಜೀವನಕ್ಕೆ ನಮ್ಮ ಮಾರ್ಗದರ್ಶಿಯಾಗಿದೆ. ಹಿಂದೆಂದೂ ಬರೆದಿರದಂತ ಅತ್ಯಂತ ಆಸಕ್ತಿಕರವಾದ ಮತ್ತು ಬೋಧಪ್ರದವಾದ ಇತಿಹಾಸ ಹಾಗೂ ಜೀವನ ಚರಿತ್ರೆಗಳು ಸತ್ಯವೇದದಲ್ಲಿವೆ. ಕಾಲ್ಪನಿಕವಾದ ಕತೆಗಳ ಮೂಲಕ ಮನಸ್ಸನ್ನು ಕಲುಷಿತಗೊಳಿಸಿಕೊಳ್ಳದವರು ಸತ್ಯವೇದವು ಅತ್ಯಂತ ಆಸಕ್ತಿಕರವಾದ ಗ್ರಂಥವೆಂದು ತಿಳಿದುಕೊಳ್ಳುವರು.ಸತ್ಯವೇದವು ಗ್ರಂಥಗಳ ಗ್ರಂಥವಾಗಿದೆ. ದೇವರ ವಾಕ್ಯವನ್ನು ನೀವು ಪ್ರೀತಿಸಿ ಅವಕಾಶ ಮಾಡಿಕೊಂಡು ಅದನ್ನು ಹುಡುಕಿದಾಗ, ನಿಮಗೆ ಅತ್ಯಂತ ಸಮೃದ್ಧವಾದ ಖಜಾನೆ ದೊರೆಯುವುದು. ಆಗ ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ, ಯೇಸು ಸ್ವಾಮಿ ನಿಮ್ಮನ್ನು ತನ್ನ ಬಳಿಗೆ ಎಳೆಯುತ್ತಿದ್ದಾನೆಂಬ ಭರವಸೆ ನಿಮ್ಮಲ್ಲುಂಟಾಗುವುದು. ಕ್ರಿಸ್ತನು ತಿಳಿಸಿರುವ ಪಾಠಗಳನ್ನು ಗ್ರಹಿಸಿಕೊಳ್ಳದೆ, ಪ್ರಾಸಂಗಿಕವಾಗಿ (Casual) ಸತ್ಯವೇದ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ. ಸತ್ಯವೆಂಬ ಆಳವಾದ ಗಣಿಗೆ ಇಳಿದು ಪರಿಶೋಧಿಸಿದಾಗ ಮಾತ್ರ ದೇವರ ವಾಕ್ಯದಲ್ಲಿರುವ ಸಂಪತ್ತನ್ನು ನೀವು ಕಂಡುಕೊಳ್ಳಬಹುದು. KanCCh 199.3

    ಲೌಕಿಕವಾದ ಅಂದರೆ ಲೋಕದ ಆಶಾಪಾಶಗಳಿಂದ ತುಂಬಿರುವ ಮನಸ್ಸು ಸತ್ಯವನ್ನು ತಿರಸ್ಕರಿಸುತ್ತದೆ. ಆದರೆ ದೇವರ ಕಡೆಗೆ ತಿರುಗಿಕೊಂಡ ಮನಸ್ಸಿನಲ್ಲಿ ಅದ್ಭುತ ಬದಲಾವಣೆ ಕಂಡುಬರುವುದು. ಪಾಪಿಯ ವಿರುದ್ಧವಾಗಿ ಸಾಕ್ಷಿ ಹೇಳಿ ಸತ್ಯಗಳನ್ನು ತಿಳಿಸುವ ಕಾರಣದಿಂದ ಮೊದಲು ಓದಲು ಆಸಕ್ತಿಯಿಲ್ಲದಿದ್ದಂತ ಸತ್ಯವೇದವು ಈಗ ಜೀವನದ ಸಂತೋಷವೂ, ಆದರಣೆಯೂ ಆಗಿ ಆತ್ಮೀಕ ಮನ್ನವಾಗುವುದು. ನೀತಿಯ ಸೂರ್ಯನಾದ ಕ್ರಿಸ್ತನು ಪರಿಶುದ್ಧ ಸತ್ಯವೇದಕ್ಕೆ ಬೆಳಕು ನೀಡುವನು ಹಾಗೂ ಪವಿತ್ರಾತ್ಮನು ಅದರ ಮೂಲಕ ನಮ್ಮೊಂದಿಗೆ ಮಾತಾಡುವನು. KanCCh 200.1

    ಲೌಕಿಕವಾದ ಪುಸ್ತಕಗಳ ಬಗ್ಗೆ ಪ್ರೀತಿ ಹೊಂದಿದ್ದವರು ಈಗ ಖಚಿತವಾದ ಪ್ರವಾದನೆಗಳ ಬಗ್ಗೆ ತಮ್ಮ ಗಮನ ಹರಿಸುವರು. ನಿಮ್ಮ ಸತ್ಯವೇದವನ್ನು ತೆಗೆದುಕೊಂಡು ಹೊಸದಾದ ಉತ್ಸಾಹ ಹಾಗೂ ಆಸಕ್ತಿಯಿಂದ ಹಳೆಯ ಹಾಗೂ ಹೊಸ ಒಡಂಬಡಿಕೆಗಳ ಪವಿತ್ರವಾದ ವಾಕ್ಯಗಳನ್ನು ಅಧ್ಯಯನ ಮಾಡಲು ಆರಂಭಿಸಿ. ಹೆಚ್ಚು ಸಾರಿ ಹಾಗೂ ಹೆಚ್ಚಾದ ಶ್ರದ್ಧೆಯಿಂದ ಸತ್ಯವೇದವನ್ನು ಅಧ್ಯಯನ ಮಾಡಿದಷ್ಟೂ ಅದು ಅತ್ಯಂತ ಮನೋಹರವಾಗಿ ಕಾಣಿಸುವುದು. ಆಗ ಅಶ್ಲೀಲವಾದ ಮತ್ತು ಕ್ಷಣಿಕವಾಗಿ ಮನಸ್ಸನ್ನು ಪ್ರಚೋದನೆಗೊಳಿಸುವ ಕಾಲ್ಪನಿಕ ಕತೆ, ಕಾದಂಬರಿಗಳ ಬಗ್ಗೆ ಆಸಕ್ತಿ ಕಡಿಮೆಯಾಗುವುದು. ಅಮೂಲ್ಯವಾದ ಈ ಗ್ರಂಥವನ್ನು ನಿಮ್ಮ ಹೃದಯದಲ್ಲಿ ಬಂಧಿಸಿ ಇಟ್ಟುಕೊಳ್ಳಿ, ಆಗ ಅದು ನಿಮಗೆ ಗೆಳೆಯನೂ ಮತ್ತು ಮಾರ್ಗದರ್ಶಕನೂ ಆಗಿರುವುದು.KanCCh 200.2

    *****