Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎಲ್ಲರ ಬಗ್ಗೆ ಒಳ್ಳೆಯದನ್ನೇ ಚಿಂತಿಸಬೇಕು

    ನಮ್ಮ ಸಹೋದರನ ಬಗ್ಗೆ ಇತರರು ಮಾಡಿದ ನಿಂದನೆಯನ್ನು ನಾವು ಕೇಳಿದಾಗ, ಆ ನಿಂದನೆಯನ್ನು ನಾವು ತೆಗೆದುಕೊಳ್ಳುತ್ತೇವೆ. “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವುದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು? ಎಂದು ಪ್ರಶ್ನೆ ಕೇಳಿದ ದಾವೀದನು ಅದಕ್ಕೆ ತಾನೇ ಉತ್ತರವನ್ನೂ ಕೊಡುತ್ತಾನೆ : “ಅವನು ಸಜ್ಜನನೂ, ನೀತಿವಂತನೂ, ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು. ಅವನು ಚಾಡಿಹೇಳದವನೂ, ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ, ಯಾರನ್ನೂ ನಿಂದಿಸದವನೂ ಆಗಿರಬೇಕು” (ಕೀರ್ತನೆ 15:1-3).KanCCh 203.4

    ಇನ್ನೊಬ್ಬರ ತಪ್ಪನ್ನು ನಿಮ್ಮ ಮುಂದೆ ಹೇಳುವ ವ್ಯಕ್ತಿಯು ಅವಕಾಶ ದೊರೆತಾಗ ನಿಮ್ಮ ತಪ್ಪುಗಳ ಬಗ್ಗೆಯೂ ಯಾವುದೇ ಸಂಕೋಚವಿಲ್ಲದೆ ರಾಜಾರೋಷವಾಗಿ ಇತರರ ಮುಂದೆ ಹೇಳುತ್ತಾನೆಂಬುದನ್ನು ನೀವು ನೆನಪಿನಲ್ಲಿಡಬೇಕು. ಆಗ ಇಂತಹ ತಲೆ ಬುಡವಿಲ್ಲದ ಗಾಳಿ ಮಾತುಗಳನ್ನು ಎಷ್ಟೋ ಮಟ್ಟಿಗೆ ತಪ್ಪಿಸಬಹುದು. ಎಲ್ಲರಬಗ್ಗೆ ಅದರಲ್ಲಿಯೂ ಕ್ರೈಸ್ತಸಹೋದರರ ವಿಷಯದಲ್ಲಿ ನೀವು ಒಳ್ಳೆಯದಾಗಿಯೇ ತಿಳಿದುಕೊಂಡಿರಬೇಕು. ತರಾತುರಿಯಿಂದ ಅವರ ಬಗ್ಗೆ ಕೆಟ್ಟ ಮಾಹಿತಿ ಹರಡಬಾರದು. ದ್ವೇಷ ಅಥವಾ ಅಪಾರ್ಥದ ಕಾರಣದಿಂದ ಇಲ್ಲವೆ ಸಂಪೂರ್ಣವಾದ ವಿಷಯ ತಿಳಿಸದೆ ಉತ್ತೇಕ್ಷೆ ಮಾಡುವ ಕಾರಣದಿಂದ ಈ ರೀತಿ ದುಡುಕಿ ಒಬ್ಬರು ಮಾತಾಡಬಹುದು. ಹೊಟ್ಟೆಕಿಚ್ಚು ಮತ್ತು ಸಂದೇಹವುKanCCh 204.1

    ನಮ್ಮಲ್ಲಿ ಹುಟ್ಟಿದಾಗ, ಗಾಳಿಯಿಂದ ಹಾರಿಹೋಗುವ ಬೀಜದಂತೆ ಎಲ್ಲಾ ಕಡೆಯೂ ಪ್ರಸಾರವಾಗುವುದು. ಆಗ ಆ ಸಹೋದರನು ಕ್ರೈಸ್ತ ಮಾರ್ಗದಿಂದ ದೂರ ಹೋಗಬಹುದು. ಆಗ ನೀವು ಅವನ ಬಗ್ಗೆ ನಿಜವಾಳ ಕಳಕಳಿ ತೋರಿಸುವ ಸಮಯವಾಗಿದೆ. ಅವನನ್ನು ಕರುಣೆಯಿಂದ ಮಾತನಾಡಿಸಿ, ಪ್ರಾರ್ಥಿಸಿ, ಎಲ್ಲರ ರಕ್ಷಣೆಗಾಗಿ ಕ್ರಿಸ್ತನು ಮಾಡಿದ ಅಮೂಲ್ಯವಾದ ತ್ಯಾಗವನ್ನು ಅವನಿಗೆ ಜ್ಞಾಪಕ ಪಡಿಸಿ, ಈ ರೀತಿ ಮಾಡುವುದರಿಂದ ನೀವು ಬಹು ಪಾಪಗಳನ್ನು ಮುಚ್ಚಿ ಆ ವ್ಯಕ್ತಿಯನ್ನು ನಿತ್ಯಮರಣದಿಂದ ತಪ್ಪಿಸಬಹುದು. KanCCh 204.2

    ಒಂದು ಮಾತು, ಒಂದು ನೋಟ ಅಷ್ಟೇಕೆ ನಮ್ಮ ಧ್ವನಿಯಲ್ಲಾಗುವ ಏರಿಳಿತವೂ ಸಹ ಒಬ್ಬ ವ್ಯಕ್ತಿಯ ಹೃದಯಕ್ಕೆ ಚೂಪಾದಬಾಣದಂತೆ ಚುಚ್ಚಿ, ಗುಣವಾಗಲಾರದಂತ ಗಾಂತು ಉ೦ಟು ಮಾಡ ಬಹುದು. ದೇವರು ತನ್ನ ಸೇವೆ ೦ರಲ್ಲಿ ಉಪಯೋಗಿಸಿಕೊಳ್ಳಬಹುದಾಗಿದ್ದಂತ ವ್ಯಕ್ತಿಯ ಬಗ್ಗೆ ನಮಗುಂಟಾದ ಸಂದೇಹ, ಅವನ ಮೇಲೆ ನಾವು ಮಾಡಿದ ತಪ್ಪುನಿಂದನೆಯಿಂದ ಅವನ ಪ್ರತಿಭೆ, ತಲಾಂತುಗಳು ಮೊಳಕೆಯಲ್ಲಿಯೇ ಚಿವುಟು ಹಾಕಲ್ಪಟ್ಟು, ಅವನ ಉಪಯುಕ್ತತೆಯು ನಾಶವಾಗಬಹುದು. ಪ್ರಾಣಿಗಳ ಕೆಲವು ಜಾತಿಗಳಲ್ಲಿ ಯಾವುದಾದರೂ ಒಂದು ಪ್ರಾಣಿಯು ಗಾಯಗೊಂಡುಬಿದ್ದಲ್ಲಿ, ಆದೇಜಾತಿಯ ಇತರಪ್ರಾಣಿಗಳು ಅದರ ಮೇಲೆ ಆಕ್ರಮಣಮಾಡಿ ಅದನ್ನು ಚಿಂದಿ ಮಾಡುತ್ತವೆ. ಕ್ರೈಸ್ತರೆಂದು ಹೇಳಿಕೊಳ್ಳುವ ಸ್ತ್ರೀಪುರುಷರು ಇತರರ ಬಗ್ಗೆ ಸುಳ್ಳಾದ ನಿಂದನೆ, ಅಪವಾದ ಹೊರಿಸಿ ಅವರ ಚಾರಿತ್ರ್ಯವಧೆ ಮಾಡಿದಾಗ, ಅವರಲ್ಲಿಯೂ ಸಹ ಇಂತದ್ದೇ ಪ್ರಾಣಿಯ ಕ್ರೂರಸ್ವಭಾವವು ಕಂಡುಬರುತ್ತದೆ. ಫರಿಸಾಯರು ತಮಗಿಂತಲೂ ಕಡಿಮೆ ತಪ್ಪು ಮಾಡಿದವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಬಯಸಿದಂತ ಅದೇ ಮನೋಭಾವ ಇವರಲ್ಲಿಯೂ ಕಂಡುಬರುವುದು. ಕೆಲವರು ತಮ್ಮ ತಪ್ಪದೋಷಗಳನ್ನು ಮುಚ್ಚಿಕೊಳ್ಳುವುದಕ್ಕೆ ಇಲ್ಲವೆ ದೇವರು ಹಾಗೂ ಆತನ ಸಭೆಯ ಬಗ್ಗೆ ಬಹಳ ಉತ್ಸಾಹ ತಮ್ಮಲ್ಲಿದೆ ಎಂದು ತೋರಿಸಿಕೊಳ್ಳುವುದಕ್ಕೆ ಇತರ ಕ್ರೈಸ್ತ ಸಹೋದರರ ತಪ್ಪುಗಳನ್ನು ಎತ್ತಿ ತೋರಿಸುವರು. KanCCh 204.3

    ಕ್ರೈಸ್ತಸೇವಕರ ಉದ್ದೇಶಗಳು ಹಾಗೂ ಕಾರ್ಯಗಳನ್ನು ನಿಂದಿಸಿ, ಎತ್ತಿ ಆಡುವುದಕ್ಕೆ ಬದಲಾಗಿ ಆ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುವುದು ಉತ್ತಮ. ಅನೇಕ ಸಂದರ್ಭಗಳಲ್ಲಿ ಇತರರಲ್ಲಿ ತಪ್ಪು ಹುಡುಕುತ್ತೇವೆ. ಆದರೆ ಅವರ ಬಗ್ಗೆ ನಿಜ ಸಂಗತಿ ತಿಳಿದಾಗ ನಮ್ಮ ಅಭಿಪ್ರಾಯವು ಬದಲಾಗಬಹುದು. ಆದರೆ ಅವರನ್ನು ನಿಂದಿಸಿ, ಅವರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದಕ್ಕೆ ಬದಲಾಗಿ “ನನ್ನ ರಕ್ಷಣೆಗಾಗಿ ನಾನು ಪ್ರಯತ್ನಿಸಬೇಕು. ನನ್ನನ್ನು ರಕ್ಷಿಸಲು ಬಯಸುವ ಕ್ರಿಸ್ತನೊಂದಿಗೆ ನಾನೂ ಸಹಕಾರ ತೋರಿಸಬೇಕು. ಆದುದರಿಂದ ನನ್ನನ್ನು ನಾನೇ ಶ್ರದ್ಧೆಯಿಂದ ಕಾಪಾಡಿಕೊಳ್ಳಬೇಕು. ನನ್ನ ಜೀವನದಿಂದ ಎಲ್ಲಾ ಕೆಟ್ಟತನವನ್ನು ತೆಗೆದುಹಾಕಿ, ಕ್ರಿಸ್ತನಲ್ಲಿ ನೂತನ ಸೃಷ್ಟಿಯಾಗಬೇಕು. ಎಲ್ಲಾ ಪಾಪಗಳನ್ನು ಮೆಟ್ಟಿ ನಿಲ್ಲಬೇಕು. ಕೆಟ್ಟತನವನ್ನು ಜಯಿಸಬೇಕೆಂದು ಪ್ರಯತ್ನಿಸುತ್ತಿರುವವರನ್ನು ನನ್ನKanCCh 205.1

    ಟೀಕೆ, ದೂಷಣೆಯಿಂದ ದುರ್ಬಲಗೊಳಿಸುವುದಕ್ಕೆ ಬದಲಾಗಿ, ನನ್ನ ಪ್ರೋತ್ಸಾಹದ ಮಾತುಗಳಿಂದ ಅವರನ್ನು ಬಲಪಡಿಸುತ್ತೇನೆ” ಎಂದು ನಾವು ಪ್ರತಿಯೊಬ್ಬರೂ ಹೇಳಿಕೊಳ್ಳಬೇಕು.KanCCh 205.2