Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-36 — ಕ್ರೈಸ್ತ ಶಿಕ್ಷಣ

    ಜಗತ್ತಿನ ಇತಿಹಾಸದ ಮುಕ್ತಾಯದ ಸಂದಿಗ್ಧ ಪರಿಸ್ಥಿತಿ ಅತಿ ಶೀಘ್ರವಾಗಿ ಬರಲಿದೆಅಡ್ವೆಂಟಿಸ್ಟ್ ಕ್ರೈಸ್ತಶಾಲೆಗಳಲ್ಲಿ ನೀಡುವ ಶಿಕ್ಷಣದ ಪ್ರಯೋಜನಗಳು ಇತರ ಶಾಲೆಗಳುಕೊಡುವ ಶಿಕ್ಷಣಕ್ಕಿಂತ ವ್ಯತ್ಯಾಸವಾಗಿವೆ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳುವುದುಪ್ರಾಮುಖ್ಯವಾಗಿದೆ.KanCCh 246.1

    ಶಿಕ್ಷಣದ ಬಗ್ಗೆ ನಮಗೆ ಸಂಕುಚಿತ ಮನೋಭಾವನೆ ಇದೆ. ಇದರ ಬಗ್ಗೆ ವಿಶಾಲವಾದಹಾಗೂ ಉನ್ನತವಾದ ಗುರಿ ಹೊಂದಿರಬೇಕಾದ ಅಗತ್ಯವಿದೆ. ನಿಜವಾದ ಶಿಕ್ಷಣವುಒಂದು ನಿರ್ದಿಷ್ಟ ಪಠ್ಯಕ್ರಮ ಮಾಡುವುದಕ್ಕಿಂತಲೂ ಹೆಚ್ಚಿನ ಅರ್ಥ ಒಳಗೊಂಡಿದೆ.ಈಗಿನ ಜೀವನಕ್ಕಿಂತಲೂ ಮುಂದೆ ಬರಲಿರುವ ಉನ್ನತ ಜೀವನಕ್ಕೆ ಸಿದ್ಧತೆಮಾಡಿಕೊಳ್ಳುವುದೆಂಬ ಅರ್ಥವನ್ನು ಕ್ರೈಸ್ತ ಶಿಕ್ಷಣ ನೀಡುತ್ತದೆ. ಈ ಶಿಕ್ಷಣವು ಸಂಪೂರ್ಣವ್ಯಕ್ತಿಯನ್ನು ಒಳಗೊಂಡಿದ್ದು, ಅವನು ಬದುಕಿರುವ ತನಕ ಮುಂದುವರೆಯುತ್ತದೆ.ಇದು ವಿದ್ಯಾರ್ಥಿಯ ಶಾರೀರಿಕ, ಮಾನಸಿಕ ಹಾಗೂ ಆತ್ಮೀಕ ಸಾಮರ್ಥ್ಯಗಳ ಸಾಮರಸ್ಯಬೆಳವಣಿಗೆಯಾಗಿದೆ. ಕ್ರೈಸ್ತ ಶಿಕ್ಷಣವು ವಿದ್ಯಾರ್ಥಿಯನ್ನು ಈ ಲೋಕದಸೇವೆಯನ್ನುಸಂತೋಷದಿಂದ ಮಾಡಲು ಮಾತ್ರವಲ್ಲದೆ, ಮುಂದೆಬರಲಿರುವ ನೂತನಲೋಕದಲ್ಲಿಇನ್ನೂ ಹೆಚ್ಚಿನ ಸೇವೆಯನ್ನು ಅಧಿಕ ಹರ್ಷದಿಂದ ಮಾಡುವಂತೆ ಸಿದ್ಧಪಡಿಸುತ್ತದೆ.KanCCh 246.2

    ಶಿಕ್ಷಣದ ಕಾರ್ಯ ಮತ್ತು ವಿಮೋಚನಾಕಾರ್ಯ. ಈ ಎರಡೂ ಉನ್ನತ ಭಾವನೆಯಿಂದನೋಡುವಾಗ ಒಂದೇರೀತಿಯಾಗಿವೆ. ನಮ್ಮ ರಕ್ಷಣೆಯೆಂಬ ವಿಮೋಚನೆಯಲ್ಲಿ“ಯೇಸುಕ್ರಿಸ್ತನೇ ಅಸ್ತಿವಾರವು; ಆ ಅಸ್ತಿವಾರವಲ್ಲದೆ ಮತ್ತೊಂದು ಆಸ್ತಿವಾರವನ್ನು ಬೇರೆಯಾರೂ ಹಾಕಲಾರರಷ್ಟೆ” (1 ಕೊರಿಂಥ 3:11) ಅದೇ ರೀತಿಯಲ್ಲಿ ಕ್ರೈಸ್ತ ಶಿಕ್ಷಣದಅಸ್ತಿವಾರವೂ ಸಹ ಕ್ರಿಸ್ತನೇ ಆಗಿದ್ದಾನೆ.KanCCh 246.3

    ಮಾನವರನ್ನು ದೇವರೊಂದಿಗೆ ತಿರುಗಿ ಸಾಮರಸ್ಯ ಹೊಂದುವಂತೆ ಮಾಡುವುದುಹಾಗೂ ಪುನಃ ಅವರ ನೈತಿಕಸ್ವಭಾವವನ್ನು ಉನ್ನತವೂ ಹಾಗೂ ಶ್ರೇಷ್ಠವೂ ಆಗುವಂತೆಮಾಡಿ ಸೃಷ್ಟಿಕರ್ತನಾದ ದೇವರ ಸ್ವರೂಪವನ್ನು ಪ್ರತಿಫಲಿಸುವಂತೆ ಮಾಡುವುದೇ ಕ್ರೈಸ್ತಶಿಕ್ಷಣದ ಮಹಾ ಉದ್ದೇಶವೂ ಹಾಗೂ ಜೀವನದ ಶಿಸ್ತುಕ್ರಮವೂ ಆಗಿದೆ. ಈ ಕಾರ್ಯವುಎಷ್ಟೊಂದು ಮಹತ್ವವೂ, ಪ್ರಾಮುಖ್ಯವೂ ಆಗಿದೆಯೆಂದರೆ, ಇಂತಹ ಉನ್ನತಜೀವನವನ್ನುಮನುಷ್ಯರು ಹೇಗೆ ಪಡೆದುಕೊಳ್ಳಬೇಕೆಂಬುದನ್ನು ತೋರಿಸಿಕೊಡುವುದಕ್ಕೆ ನಮ್ಮ ರಕ್ಷಕನುಪರಲೋಕದ ಉನ್ನತಸ್ಥಾನವನ್ನು ಬಿಟ್ಟು ಈ ಲೋಕದಲ್ಲಿ ಮನುಷ್ಯಾವತಾರ ತಳೆದನು.KanCCh 246.4

    ಲೌಕಿಕವಾದ ಯೋಜನೆಗಳು, ವಿಧಾನಗಳು ಮತ್ತು ಆಚಾರವಿಚಾರ ಸಂಪ್ರದಾಯಗಳಿಗೆಮರುಳಾಗಿ ಒಲವು ತೋರಿಸುವುದು ಹಾಗೂ ನೋಹನ ಕಾಲದಲ್ಲಿದ್ದ ಜನರಂತೆ ಯಾವ ಕಾಲದಲ್ಲಿ ಜೀವಿಸುತ್ತೇವೆಂಬ ಆಲೋಚನೆಯಿಲ್ಲದೆ, ಅಥವಾ ಮಾಡಬೇಕಾದಮಹಾಕಾರ್ಯದ ಅರಿವಿಲ್ಲದೆ ಈ ಲೋಕದ ಕಾರ್ಯದಲ್ಲಿ ಮಗ್ನರಾಗಿರುವುದು ಸುಲಭ.ದೇವರು ಕೊಡದಿದ್ದಂತ ಆಚಾರ ವಿಚಾರಗಳು, ಸಂಪ್ರದಾಯಗಳನ್ನು ಯೆಹೂದ್ಯರುಹೇಗೆ ಅನುಸರಿಸಿದರೋ, ಅದೇ ರೀತಿಯಾದ ಅಪಾಯಕ್ಕೆ ನಮ್ಮ ಶಿಕ್ಷಣತಜ್ಞರು ಒಳಗಾಗುವಸಂಭವ ಯಾವಾಗಲೂ ಇದೆ. ಅವರು ಅಗತ್ಯವಿಲ್ಲದಿದ್ದರೂ, ತಮ್ಮ ರಕ್ಷಣೆಯು ಈವಿಷಯಗಳ ಮೇಲೆಯೇ ಆಧಾರಗೊಂಡಿದೆ ಎಂಬಂತೆ ಹಳೆಯ ಅಭ್ಯಾಸಗಳನ್ನು ಪಟ್ಟಾಗಿಹಿಡಿದುಕೊಂಡಿರುತ್ತಾರೆ. ಈ ರೀತಿ ಮಾಡುವುದರ ಮೂಲಕ ಅವರು ದೇವರವಿಶೇಷಕಾರ್ಯದಿಂದ ವಿಮುಖರಾಗಿ, ವಿದ್ಯಾರ್ಥಿಗಳಿಗೆ ತಪ್ಪಾದ ಶಿಕ್ಷಣ ನೀಡುತ್ತಾರೆ.KanCCh 246.5

    ನಮ್ಮ ಯೌವನಸ್ಥರನ್ನು ವಿಶೇಷವಾದ ಕಾರ್ಯಕ್ಕೆ ತರಬೇತಿನೀಡಿ, ಇತರ ಆತ್ಮಗಳನ್ನುಕ್ರಿಸ್ತನ ಬಳಿಗೆ ತರುವಂತೆ ಸಭೆಯಲ್ಲಿ ಸೇವೆಮಾಡುವುದಕ್ಕೆ ಯೋಗ್ಯರಾದ ಮಹಿಳೆ ಮತ್ತುಪುರುಷರು ಇರಬೇಕಾಗಿದೆ. ಅಡ್ವೆಂಟಿಸ್ಟ್ ಕ್ರೈಸ್ತರಾದ ನಾವು ಸ್ಥಾಪಿಸುವ ಶಾಲೆಗಳು ಈಮುಖ್ಯ ಉದ್ದೇಶವನ್ನು ಗಮನದಲ್ಲಿಟ್ಟು ಕೊಂಡಿರಬೇಕೇ ಹೊರತು, ಇತರ ಕ್ರೈಸ್ತ ಸಭೆಗಳುಅಥವಾ ಅನ್ಯರು ಸ್ಥಾಪಿಸುವ ಶಾಲಾ ಕಾಲೇಜುಗಳಂತಿರಬಾರದು. ನಮ್ಮ ಶಾಲೆಗಳುಉನ್ನತವಾದ ಕ್ರಮವನ್ನು ಅನುಸರಿಸಬೇಕು. ಅವುಗಳಲ್ಲಿ ನಾಸ್ತಿಕತೆ ಕಂಡುಬರಬಾರದು.ಇಲ್ಲವೆ ಅಂತದ್ದಕ್ಕೆ ಪ್ರೋತ್ಸಾಹ ಕೊಡಲೂ ಬಾರದು. ವಿದ್ಯಾರ್ಥಿಗಳಿಗೆ ಕ್ರಿಯಾಶೀಲವಾದಅಂದರೆ ಅನುಸರಿಸುವುದರಲ್ಲಿ ಒಲವುಳ್ಳ ಕ್ರೈಸ್ತತ್ವದಲ್ಲಿ ಶಿಕ್ಷಣ ಕೊಡಬೇಕು ಹಾಗೂಸತ್ಯವೇದವನ್ನು ಅತ್ಯಂತ ಉನ್ನತವಾದ ಹಾಗೂ ಪ್ರಾಮುಖ್ಯವಾದ ಪಠ್ಯಪುಸ್ತಕವೆಂದುಎಣಿಸಬೇಕು.KanCCh 247.1