Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಸಭೆಯ ಜವಾಬ್ದಾರಿಗಳು

    ಶ್ರೀಮತಿವೈಟಮ್ಮನವರು ಒಂದುರಾತ್ರಿ ಪ್ರಾರ್ಥನಾಕೂಟದಲ್ಲಿ ಭಾಗವಹಿಸಿದ್ದಾಗ,ಅಲ್ಲಿ ನೆರೆದಿದ್ದವರ ಮನಸ್ಸಿನಲ್ಲಿ ಶಿಕ್ಷಣದ ವಿಷಯದ ಬಗ್ಗೆ ಕಳವಳ ಉಂಟಾಗಿತ್ತು. ಬಹಳಕಾಲದಿಂದ ಜಾರಿಯಲ್ಲಿದ್ದ ಶಿಕ್ಷಣ ಪದ್ಧತಿಯನ್ನು ಬದಲಾಯಿಸುವುದಕ್ಕೆ ಅಲ್ಲಿದ್ದ ಕೆಲವರುವಿರೋಧ ವ್ಯಕ್ತಪಡಿಸುತ್ತಿದ್ದರು. ಆಗ ಅಲ್ಲಿ ಅನೇಕ ವರ್ಷಗಳಿಂದ ಅನುಭವಿ ಶಿಕ್ಷಕರಾಗಿದ್ದಒಬ್ಬರು “ಶಿಕ್ಷಣದ ವಿಷಯವು ಎಲ್ಲಾ ಸೆವೆಂತ್ ಡೇ ಅಡ್ವೆಂಟಿಸ್ಟರಲ್ಲಿ ಆಸಕ್ತಿ ಹುಟ್ಟಿಸಬೇಕು“ಎಂದು ಹೇಳಿದರು.KanCCh 247.2

    ನಮ್ಮ ಮಕ್ಕಳು ಶಾಲೆಯಲ್ಲಿ ಅಥವಾ ಬೇರಾವುದೇ ಸಹವಾಸದ ಕೆಟ್ಟ ಅಭ್ಯಾಸಗಳಿಂದಪ್ರಭಾವಿತರಾಗದಂತೆ, ಶಿಕ್ಷಣನೀಡಿ ತರಬೇತಿಗೊಳಿಸುವ ವಿಶೇಷವಾದ ಜವಾಬ್ದಾರಿ ಅಡ್ವೆಂಟಿಸ್ಟ್ ಸಭೆಯ ಮೇಲಿದೆ. ಲೋಕವು ದುಷ್ಟತನದಿಂದ ಕೂಡಿದ್ದು, ದೇವರು ಬಯಸುವಕಾರ್ಯಗಳನ್ನು ನಿರ್ಲಕ್ಷಿಸುತ್ತದೆ. ಈಗಿನ ನಗರಗಳು ಲೋಟನ ಕಾಲದಸೊದೋಮ್‌ಪಟ್ಟಣದಂತೆ ಬಹಳ ಕೆಟ್ಟತನದಿಂದ ಕೂಡಿದ್ದು, ನಮ್ಮ ಮಕ್ಕಳು ಪ್ರತಿದಿನವೂಅನೇಕ ವಿಧವಾದ ಕೆಟ್ಟತನದ ಪಾಪಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಇತರ ಸಾರ್ವಜನಿಕಶಾಲೆಗಳಲ್ಲಿ ಓದುತ್ತಿರುವ ಕ್ರೈಸ್ತವಿದ್ಯಾರ್ಥಿಗಳು ಶಾಲೆಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿಬೀದಿಯಲ್ಲಿನ ಶಿಕ್ಷಣ ಪಡೆದುಕೊಳ್ಳುವ ಸಂಭವವಿದೆ. ಯುವಕ ಯುವತಿಯರ ಹೃದಯಗಳುಶೀಘ್ರವಾಗಿ ಪ್ರಭಾವಕ್ಕೆ ಒಳಗಾಗುತ್ತವೆ. ಅವರ ಗೆಳೆಯರು ಉತ್ತಮ ಸ್ವಭಾವ ಹೊಂದಿರದಿದ್ದಲ್ಲಿ,ಸೈತಾನನು ಇಂತವರ ಮೂಲಕ ಒಳ್ಳೆಯ ಶಿಕ್ಷಣ ಪಡೆದುಕೊಂಡಿರುವವರ ಮೇಲೆ ಕೆಟ್ಟಪರಿಣಾಮ ಬೀರುತ್ತಾನೆ. ಏನಾಗುತ್ತದೆ ಎಂಬುದನ್ನು ಅಥೈಂಟಿಸ್ಟ್ ತಂದೆ ತಾಯಿಯರುಅರಿಯುವ ಮುನ್ನವೇ, ಮಕ್ಕಳು ಕೆಟ್ಟತನ ಕಲಿತು ಅವರ ಮನಸ್ಸು ಮಲಿನಗೊಳ್ಳುತ್ತದೆ.KanCCh 247.3

    ಅನೇಕ ತಂದೆತಾಯಿಯರು ತಮ್ಮ ಮಕ್ಕಳನ್ನು ಅಡ್ವೆಂಟಿಸ್ಟ್ ಕ್ರೈಸ್ತ ಶಿಕ್ಷಣಪಡೆದುಕೊಳ್ಳಬೇಕೆಂದು ಬೋರ್ಡಿಂಗ್ ಶಾಲೆಗಳಿಗೆ ಕಳಿಸುತ್ತಾರೆ. ಅಲ್ಲಿ ಅವರು ತಮ್ಮಒಡೆಯನಾದ ಕ್ರಿಸ್ತನಿಗೆ ಉತ್ತಮ ಸೇವೆಮಾಡಬಹುದು. ಸಭಿಕರು ತಮ್ಮ ಸ್ಥಳೀಯಸಭೆಗಳುಅಡ್ರೆಂಟಿಸ್ಟ್ ಶಾಲೆಗಳನ್ನು ತೆರೆಯುವಂತೆ ಉತ್ತೇಜನ ನೀಡಬೇಕು. ಅಲ್ಲಿ ಮಕ್ಕಳು ನಮ್ಮಹತೋಟಿಯಲ್ಲಿಯೇ ಇರುವುದಲ್ಲದೆ ಸರ್ವತೋಮುಖವಾದ ಹಾಗೂ ಕ್ರಿಯಾಶೀಲವಾದಕ್ರೈಸ್ತ ಶಿಕ್ಷಣ ಪಡೆದುಕೊಳ್ಳುತ್ತಾರೆ. ನಗರಗಳಲ್ಲಿರುವ ದೊಡ್ಡ ಸಭೆಗಳು ಆತ್ಮೀಕವಾಗಿಚಟುವಟಿಕೆಯಾಗಿರುವುದಿಲ್ಲ. ಈ ಕಾರಣದಿಂದ ಸಭಿಕರು ಚಿಕ್ಕ ಸಭೆಗಳಲ್ಲಿಯೇ ದೇವರಸೇವೆಯನ್ನು ಉತ್ತಮವಾಗಿ ಮಾಡಲಿಕ್ಕೆ ಸಾಧ್ಯವಿದೆ. ಶಾಲೆಗಳಲ್ಲಿ ತಮ್ಮನ್ನು ದೇವರಸೇವೆಗಾಗಿ ಸಮರ್ಪಿಸಿಕೊಂಡ ಕ್ರೈಸ್ತ ಶಿಕ್ಷಕ ಶಿಕ್ಷಕಿಯರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು.ಅವರು ನಮ್ಮ ಮಕ್ಕಳನ್ನು ದೈವನಿಯಮಿತ ಸೇವೆ ಮಾಡಲಿಕ್ಕೆ ಉತ್ತಮ ಶಿಕ್ಷಣನೀಡಬೇಕು.KanCCh 248.1

    ನಮ್ಮ ಮಕ್ಕಳನ್ನು ಲೋಕಕ್ಕಲ್ಲ. ಬದಲಾಗಿ ದೇವರಿಗಾಗಿ ಜೀವಿಸುವಂತೆಯೂ ಹಾಗೂಆತನನ್ನು ಪ್ರೀತಿಸಿ, ಭಯಭಕ್ತಿಯಿಂದ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವಂತೆಮಾಡಬೇಕಾದ ಗಂಭೀರವೂ ಪವಿತ್ರವೂ ಆದ ಒಡಂಬಡಿಕೆಯನ್ನು ತಂದೆತಾಯಿಯರಾದನಾವು ದೇವರೊಂದಿಗೆ ಮಾಡಿಕೊಂಡಿದ್ದೇವೆ. ಮಕ್ಕಳು ಸೃಷ್ಟಿಕರ್ತನಾದ ದೇವರ ಸ್ವರೂಪದಲ್ಲಿಉಂಟು ಮಾಡಲ್ಪಟ್ಟಿದ್ದಾರೆ ಹಾಗೂ ಕ್ರಿಸ್ತನ ಮಾದರಿಯಲ್ಲಿ ನಡೆಯಬೇಕೆಂದು ಪೋಷಕರಾದನಾವು ಅವರ ಮನಸ್ಸಿನಲ್ಲಿ ಪ್ರಭಾವ ಉಂಟುಮಾಡಬೇಕು. ರಕ್ಷಣೆಯ ತಿಳುವಳಿಕೆನೀಡುವ ಹಾಗೂ ಜೀವನ ಮತ್ತು ಶೀಲಸ್ವಭಾವವು ದೈವೀಕರೀತಿಗೆ ಅನುಗುಣವಾದಶಿಕ್ಷಣ ನೀಡುವುದಕ್ಕೆ ಹೆಚ್ಚು ಗಮನ ಕೊಡಬೇಕು.KanCCh 248.2

    ಬೆಳೆಯು ಅಪಾರವಾಗಿದೆ, ಆದರೆ ಕೆಲಸಗಾರರು ಕಡಿಮೆ. ಆದುದರಿಂದ ಕ್ರಿಯಾತ್ಮಕವಾದಜ್ಞಾನ ಮತ್ತು ಸತ್ಯವೇದದ ಸತ್ಯದಲ್ಲಿ ಭರವಸವುಳ್ಳ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುವಂತೆಜಗತ್ತಿನ ಎಲ್ಲಾ ದೇಶಗಳಲ್ಲಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಬೇಕೆಂಬುದು ದೇವರಬಯಕೆಯಾಗಿದೆ. ಇಂತಹ ವ್ಯಕ್ತಿಗಳು ತಮ್ಮ ಸೇವೆಯಲ್ಲಿ ನಿರತರಾಗಿರುವಾಗ, ಹೊಸಸ್ಥಳಗಳಲ್ಲಿವರ್ತಮಾನಕಾಲದ ಸತ್ಯವನ್ನು ತಿಳಿಸುತ್ತಾರೆ.KanCCh 248.3

    ವಿದೇಶದಿಂದ ಬರುವ ದೇವರ ಸೇವಕರೊಂದಿಗೆ, ಆಯಾ ದೇಶಗಳಲ್ಲಿಯೂ ಸಹಸೇವೆ ಮಾಡಲಿಕ್ಕೆ ಸ್ಥಳೀಯರನ್ನು ತರಬೇತಿಗೊಳಿಸಬೇಕು. ಅವರು ಸೇವೆ ಮಾಡುವದೇಶದಲ್ಲಿಯೇ ಶಿಕ್ಷಣ ತರಬೇತಿ ಹೊಂದುವುದು ಒಳ್ಳೆಯದು. ವಿದೇಶದಲ್ಲಿ ತರಬೇತಿಪಡೆಯುವುದು ಸೇವೆ ಮಾಡುವವರಿಗಾಗಲಿ ಇಲ್ಲವೆ ಸುವಾರ್ತಾಸೇವೆಯ ಬೆಳವಣಿಗೆಗಾಗಲಿಸಹಾಯಕವಾಗುವುದು ಅತ್ಯಂತ ವಿರಳ. ಸಭೆಯಾಗಿ ಹಾಗೂ ಅದರ ಸದಸ್ಯರಾಗಿ,ನಮ್ಮ ಯೌವನಸ್ಥರು ದೇವರು ನಮಗೆ ಕೊಟ್ಟಿರುವ ಮಹಾಕಾರ್ಯದ ವಿವಿಧ ಶಾಖೆಗಳಲ್ಲಿಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ಅವರಿಗೆ ತರಬೇತಿ ನೀಡುವವಿಷಯದಲ್ಲಿ ನಾವು ಉದಾರವಾಗಿ ಪ್ರಯತ್ನಿಸಿ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕು.ಕ್ರಿಸ್ತನ ಸೇವೆಯಲ್ಲಿ ಉತ್ತಮ ಕೌಶಲವುಳ್ಳ ಕೆಲಸಗಾರರ ಕೊರತೆ ಉಂಟಾಗದಂತೆ, ತಲಾಂತು,ಪ್ರತಿಭೆಗಳನ್ನು ಹೊಂದಿರುವ ಯೌವನಸ್ಥರ ಬುದ್ಧಿವಂತಿಕೆಯನ್ನು ಬಲಪಡಿಸುವಂತೆಸಭಾಹಿರಿಯರು ಹಾಗೂ ನಾಯಕರು ವಿವೇಕವುಳ್ಳ ಯೋಜನೆಗಳನ್ನು ರೂಪಿಸಬೇಕು.ಇಂತಹವರು ದೇವರ ಸುವಾರ್ತಾಸೇವೆಯನ್ನು ಶ್ರದ್ಧೆ, ಆಸಕ್ತಿ ಹಾಗೂ ನಿಷ್ಠೆಯಿಂದಮಾಡುವರು.KanCCh 249.1

    Larger font
    Smaller font
    Copy
    Print
    Contents