Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಶಾಲಾಶಿಕ್ಷಕರ ಅರ್ಹತೆಗಳು

    ದೈಹಿಕವಾಗಿ ಬಲಶಾಲಿಯಾಗಿರುವವರು ಶಾಲೆಯ ಮುಖ್ಯಸ್ಥರಾಗಿರಬೇಕು. ಶಾಲೆಯಲ್ಲಿಶಿಸ್ತು ತರುವುದರಲ್ಲಿ ಅವರ ದೈಹಿಕ ಬಲವು ಸಹಾಯವಾಗುವುದು ಅಂತವರು ಮಕ್ಕಳಲ್ಲಿಕಾರ್ಯಶೀಲತೆ, ಶುಚಿತ್ವ ಮತ್ತು ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವುದಕ್ಕೆ ಅರ್ಹತೆಹೊಂದಿರಬೇಕು. ಯಾವ ಕೆಲಸವೇ ಆಗಲಿ, ಪ್ರಾಮಾಣಿಕವಾಗಿ ಪೂರ್ಣವಾಗಿಕಾರ್ಯ ಮಾಡಬೇಕು. ಶಿಕ್ಷಕರು ತಮ್ಮ ಸೇವೆಯಲ್ಲಿ ನಂಬಿಗಸ್ತರಾಗಿದ್ದಲ್ಲಿ, ಅನೇಕವಿದ್ಯಾರ್ಥಿಗಳು ಸುವಾರ್ತಾಸೇವಕರು, ಮತ್ತು ಸಾಹಿತ್ಯ ಸುವಾರ್ತಾಸೇವಕರಾಗಿ ಸೇವೆಮಾಡುವರು. ಎಲ್ಲಾ ಕೆಲಸಗಾರರು ಉನ್ನತ ಶಿಕ್ಷಣ ಪಡೆದಿರಬೇಕೆಂದು ನಾವುಭಾವಿಸಬಾರದು.KanCCh 252.3

    ಶಿಕ್ಷಕರನ್ನು ಆರಿಸುವಾಗ ಮುನ್ನೆಚ್ಚರಿಕೆ ವಹಿಸಬೇಕು, ಸುವಾರ್ತಾಸೇವೆಗೆ ವ್ಯಕ್ತಿಗಳನ್ನುಆರಿಸುವಷ್ಟೇ, ಶಿಕ್ಷಕರನ್ನು ಆಯ್ಕೆ ಮಾಡುವುದು ಗಂಭೀರವಾದದ್ದೂ ಹಾಗೂಮಹತ್ವಪೂರ್ಣವೂ ಆಗಿದೆಯೆಂದು ತಿಳಿದುಕೊಂಡಿರಬೇಕು. ವಿವೇಕವುಳ್ಳವರು ಶಿಕ್ಷಕರಆಯ್ಕೆಮಾಡಬೇಕು. ನಮ್ಮ ಅಡ್ವೆಂಟಿಸ್ಟ್ ಶಾಲೆಗಳ ವಿದ್ಯಾರ್ಥಿಗಳ ಎಳೆಯ ಮನಸ್ಸುಗಳನ್ನುವಿವೇಕದಿಂದ ರೂಪಿಸಿ, ಶಿಕ್ಷಣ ನೀಡುವಂತ ಅತ್ಯುತ್ತಮ ಪ್ರತಿಭೆಯುಳ್ಳವರನ್ನು ಶಿಕ್ಷಕರನ್ನಾಗಿಆರಿಸಿಕೊಳ್ಳಬೇಕು. ಸಂಕುಚಿತ ಮನಸ್ಸುಳ್ಳವರನ್ನುನಮ್ಮ ಅಡ್ವೆಂಟಿಸ್ಟ್ ಶಾಲೆಗಳಿಗೆ ಎಂದೂಶಿಕ್ಷಕರನ್ನಾಗಿ ನೇಮಿಸಿಕೊಳ್ಳಬಾರದು. ಶಾಲೆಯ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥರೂ ಅನನುಭವಿಗಳೂ ಆದ ಯೌವನಸ್ಥರನ್ನು ಶಿಕ್ಷಕರನ್ನಾಗಿತೆಗೆದುಕೊಳ್ಳಬಾರದು.KanCCh 252.4

    ದೇವರಲ್ಲಿ ಪ್ರೀತಿ ಹಾಗೂ ಭಯಭಕ್ತಿ ಇಲ್ಲದಿರುವವರನ್ನು ಎಂದೂ ಸಹ ಶಿಕ್ಷಕರನ್ನಾಗಿನೇಮಿಸಬಾರದು. ಶಿಕ್ಷಕರು ಮಹಾನ್‌ಗುರುವಾದ ಯೇಸುಕ್ರಿಸ್ತನ ಶಾಲೆಯಲ್ಲಿ ಪ್ರತಿದಿನವೂತಮ್ಮ ಪಾಠಗಳನ್ನು ಕಲಿತಲ್ಲಿ, ಅಂತವರು ಆತನ ಮಾರ್ಗದರ್ಶನದಲ್ಲಿ ಕೆಲಸ ಮಾಡುವರು.ಪ್ರತಿಯೊಬ್ಬ ಮಗು ಮತ್ತು ಯೌವನಸ್ಥನು ಅಮೂಲ್ಯರಾಗಿರುವುದರಿಂದ ಇಂತಹಶಿಕ್ಷಕರು ಅವರನ್ನು ಕ್ರಿಸ್ತನ ಮಾರ್ಗಕ್ಕೆ ನಡೆಸುವರು.KanCCh 253.1

    ಶಿಕ್ಷಕರ ಶೈಕ್ಷಣಿಕ ಪದವಿ ಮತ್ತು ಅರ್ಹತೆಗಳಿಗಿಂತಲೂ ಅವರ ಅಭ್ಯಾಸಗಳು ಮತ್ತುತತ್ವನಿಷ್ಠೆಗಳ ಬಗ್ಗೆ ಹೆಚ್ಚಾದ ಪ್ರಾಮುಖ್ಯತೆ ನೀಡಬೇಕು. ಅವರು ಪ್ರಾಮಾಣಿಕರಾದಶಿಕ್ಷಕರಾಗಿದ್ದಲ್ಲಿ, ತಮ್ಮ ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ, ನೈತಿಕ ಮತ್ತು ಆತ್ಮಿಕಶಿಕ್ಷಣಕ್ಕೆ ಸಮಾನ ಆಸಕ್ತಿತೋರಿಸುವ ಅಗತ್ಯವಿದೆಯೆಂದು ಭಾವಿಸುವರು. ಮಕ್ಕಳಲ್ಲಿಸರಿಯಾದ ಪ್ರಭಾವ ಬೀರಬೇಕಾದಲ್ಲಿ, ಶಿಕ್ಷಕರು ಸ್ವತಃ ತಮ್ಮ ಮೇಲೆ ಪರಿಪೂರ್ಣನಿಯಂತ್ರಣ ಹೊಂದಿರಬೇಕು. ಅಲ್ಲದೆ ಅವರ ನಡೆನುಡಿಗಳಲ್ಲಿ ಮತ್ತು ನೋಟಗಳಲ್ಲಿವಿದ್ಯಾರ್ಥಿಗಳ ಬಗ್ಗೆ ಪ್ರೀತಿ ಕಂಡು ಬರಬೇಕು.KanCCh 253.2

    ಶಿಕ್ಷಕರು ಯಾವಾಗಲೂ ಸಭ್ಯಸ್ತರಂತೆ ನಡೆದುಕೊಳ್ಳಬೇಕು. ತಮ್ಮ ವಿದ್ಯಾರ್ಥಿಗಳಿಗೆಅವರು ಸ್ನೇಹಿತರು ಮತ್ತು ಮಾರ್ಗದರ್ಶಕರಂತಿರಬೇಕು. ಅಡ್ವೆಂಟಿಸ್ಟ್ ಸಭೆಯ ಸಾಮಾನ್ಯಶಿಕ್ಷಕರು, ಸಭಾಪಾಲಕರು, ಬೋಧಕರು ಕ್ರೈಸ್ತ ಸೌಜನ್ಯತೆಯ ಭಾವಬೆಳೆಸಿಕೊಂಡಲ್ಲಿ, ಜನರು ಕ್ರಿಸ್ತನ ಪ್ರೀತಿಯನ್ನು ಶೀಘ್ರವಾಗಿ ತಿಳಿದುಕೊಳ್ಳುವರು ಹಾಗೂಸತ್ಯವನ್ನು ಪರೀಕ್ಷಿಸಿ ಅದನ್ನು ಅಂಗೀಕರಿಸುವರು. ಪ್ರತಿಯೊಬ್ಬ ಶಿಕ್ಷಕನೂ ಸ್ವಾರ್ಥವನ್ನುಬಿಟ್ಟು, ತನ್ನ ವಿದ್ಯಾರ್ಥಿಗಳ ಯಶಸ್ಸು ಹಾಗೂ ಏಳಿಗೆಯಲ್ಲಿ ಹೆಚ್ಚು ಆಸಕ್ತಿವಹಿಸಿ, ಅವರುದೇವರ ಆಸ್ತಿಯಾಗಿದ್ದಾರೆಂದೂ, ಮತ್ತು ಅವರ ಮನಸ್ಸುಹಾಗೂ ಸ್ವಭಾವದ ಮೇಲಾಗುವಪರಿಣಾಮಗಳಿಗೆ ತಾನು ಹೊಣೆಗಾರನಾಗಿದ್ದೇನೆಂದುತಿಳಿದುಕೊಂಡಲ್ಲಿ, ಅಂತಹ ಶಾಲೆಗಳಲ್ಲಿದೇವದೂತರು ಸುತ್ತಾಡಲು ಇಷ್ಟಪಡುತ್ತಾರೆ.KanCCh 253.3

    ನಮ್ಮ ಶಾಲೆಗಳಿಗೆ ಉನ್ನತವಾದ ನೈತಿಕ ಗುಣಸ್ವಭಾವ ಹೊಂದಿರುವ, ವಿಶ್ವಾಸಾರ್ಹರಾದ,ನಂಬಿಕೆಯಲ್ಲಿ ದೃಢವಾಗಿರುವ, ಸಮಯೋಚಿತವಾದ ಜಾಣತನ ಹಾಗೂ ತಾಳ್ಮೆಯಸ್ವಭಾವವುಳ್ಳಂತ ಶಿಕ್ಷಕರು ಬೇಕಾಗಿದ್ದಾರೆ. ಅಲ್ಲದೆ ಅವರು ದೈವಭಕ್ತಿಯುಳ್ಳವರೂ ಮತ್ತುಕೆಟ್ಟದ್ದನ್ನು ನಿರಾಕರಿಸುವವರೂಆಗಿರಬೇಕು.KanCCh 253.4

    ಅಹಂಕಾರಿಗಳೂ ಮತ್ತು ಕರುಣೆಯಿಲ್ಲದವರನ್ನು ಮಕ್ಕಳಿಗೆ ಶಿಕ್ಷಕರನಾಗಿ ನೇಮಿಸುವುದುಬಹಳ ಕೆಟ್ಟದ್ದು, ಇಂತಹ ಶಿಕ್ಷಕರು ಅವರ ಗುಣಸ್ವಭಾವಕ್ಕೆ ಹೆಚ್ಚು ಹಾನಿಯುಂಟುಮಾಡುವರು. ಶಿಕ್ಷಕರು ದೇವರಿಗೆ ಅವಿಧೇಯರೂ, ವಿದ್ಯಾರ್ಥಿಗಳನ್ನು ಪ್ರೀತಿಸದವರೂಆಗಿದ್ದಲ್ಲಿ ಅಥವಾ ತಮಗೆ ಬೇಕಾದವರಿಗೆ ಪಕ್ಷಪಾತ ತೋರಿಸುವವರೂ, ನೋಡಲುಚೆನ್ನಾಗಿಲ್ಲದವರ ಬಗ್ಗೆ ಉದಾಸೀನತೆ ತೋರಿಸುವವರೂ ಆಗಿದ್ದಲ್ಲಿ, ಅಂತವರನ್ನು ಶಿಕ್ಷಕರನ್ನಾಗಿನೇಮಿಸಿಕೊಳ್ಳಬಾರದು. ಅಂತವರ ಕೆಲಸದ ಪರಿಣಾಮವಾಗಿ ಅನೇಕರು ಕ್ರಿಸ್ತನನ್ನುಅಂಗೀಕರಿಸುವುದಿಲ್ಲ.KanCCh 253.5

    ಶಾಂತ ಮನಸ್ಸುಳ್ಳವರೂ, ಕರುಣೆಯುಳ್ಳವರೂ ಹಾಗೂ ಎಲ್ಲಾ ಮಕ್ಕಳಿಗೂಸರಿಸಮಾನವಾಗಿ ತಾಳ್ಮೆ ಮತ್ತು ಪ್ರೀತಿ ತೋರಿಸುವಂತೆ ಶಿಕ್ಷಕರು ಹೆಚ್ಚಾಗಿ ಬೇಕಾಗಿದ್ದಾರೆ.ಕ್ರೈಸ್ತಶಿಕ್ಷಕರು ಪ್ರಾರ್ಥನೆಯ ಅಗತ್ಯ ತಿಳಿಯದವರೂ, ತಮ್ಮನ್ನು ದೇವರ ಮುಂದೆತಗ್ಗಿಸಿಕೊಳ್ಳದವರೂ ಆಗಿದ್ದಲ್ಲಿ, ಅಂತವರು ಶಿಕ್ಷಣದಮಹತ್ವವನ್ನೇ ತಿಳಿಯದವರಾಗಿರುತ್ತಾರೆ.KanCCh 254.1

    ಶಿಕ್ಷಕರು ತಮ್ಮ ಶಾರೀರಿಕ ಆರೋಗ್ಯದ ಕಡೆಗೂ ಪ್ರಾಮುಖ್ಯತೆ ನೀಡಬೇಕು, ಅವರಆರೋಗ್ಯ ಪರಿಪೂರ್ಣವಾಗಿದ್ದಷ್ಟೂ, ಅವರ ಸೇವೆಯು ಹೆಚ್ಚು ಪರಿಪೂರ್ಣವಾಗಿರುತ್ತದೆ.ದುರ್ಬಲತೆ ಅಥವಾ ಕಾಯಿಲೆಯಿಂದ ಶಾರೀರಿಕವಾಗಿ ಅಸಮರ್ಥರಾಗಿದ್ದಲ್ಲಿ, ಮನಸ್ಸುಸ್ಪಷ್ಟವಾಗಿ ಯೋಚಿಸುವುದಕ್ಕೂ ಅಥವಾ ಕಾರ್ಯಮಾಡುವುದಕ್ಕೂ ಸಾಧ್ಯವಾಗದು.ಹೃದಯವು ಮನಸ್ಸಿನ ಮೂಲಕ ಮನದಟ್ಟು ಮಾಡಿದರೂ, ದೈಹಿಕ ಅಸಾಮರ್ಥ್ಯದಕಾರಣದಿಂದ, ಮನಸ್ಸು ತನ್ನ ಚೈತನ್ಯ ಕಳೆದುಕೊಳ್ಳುವುದು. ಇದರಿಂದಾಗಿ ಉನ್ನತವಾದಭಾವನೆಗಳು ಮತ್ತು ಉದ್ದೇಶಗಳ ಹರಿವು ಕುಂಠಿತಗೊಳ್ಳುವುದರಿಂದ, ಸರಿ-ತಪ್ಪುಗಳನಡುವಣ ವ್ಯತ್ಯಾಸ ಗುರುತಿಸಲು ಶಿಕ್ಷಕರಿಗೆ ಸಾಧ್ಯವಾಗದು. ಅನಾರೋಗ್ಯದಿಂದKanCCh 254.2

    ಬಾಧೆಪಡುತ್ತಿರುವಾಗ, ತಾಳ್ಮೆಯಿಂದಲೂ, ಸಂತೋಷದಿಂದಲೂ ಇರುವುದು ಅಥವಾಪ್ರಾಮಾಣಿಕವಾಗಿಯೂ, ನ್ಯಾಯವಾಗಿಯೂ ನಡೆದುಕೊಳ್ಳುವುದು ಸುಲಭವಲ್ಲ.KanCCh 254.3

    Larger font
    Smaller font
    Copy
    Print
    Contents