Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರೈಸ್ತ ಶಿಕ್ಷಣದಲ್ಲಿ ಸತ್ಯವೇದ

    ಬೌದ್ಧಿಕ ತರಬೇತಿಮಾರ್ಗದಲ್ಲಿ ಸತ್ಯವೇದವು ಯಾವುದೇ ಪುಸ್ತಕಕ್ಕಿಂತ ಅಥವಾಇತರೆಲ್ಲಾ ಪುಸ್ತಕಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಇದರಲ್ಲಿರುವ ವಿಷಯಗಳಔನ್ನತ್ಯ (Greatness), ವಚನಗಳ ಸರಳತೆಯ ಗಾಂಭೀರ್ಯ, ನಿರೂಪಣೆಗಳ ಸೊಬಗುನಮ್ಮ ಆಲೋಚನೆಗಳನ್ನು ಬೇರೆ ಯಾವ ಗ್ರಂಥಗಳೂ ಕೊಡದಂತಹ ರೀತಿಯಲ್ಲಿಚೈತನ್ಯ ನೀಡಿ ಮನಸ್ಸನ್ನು ಆಧ್ಯಾತ್ಮಿಕವಾಗಿ ಉನ್ನತಿಗೊಳಿಸುತ್ತವೆ. ಸತ್ಯವೇದದಲ್ಲಿಪ್ರಕಟವಾಗಿರುವ ಬೆರಗುಗೊಳಿಸುವ ಸತ್ಯಗಳನ್ನು ಮನವರಿಕೆ ಮಾಡಿಕೊಳ್ಳಲು ಮಾಡುವಪ್ರಯತ್ನಗಳಿಂದ ದೊರೆಯುವ ಮಾನಸಿಕ ಸಾ ನ್ನು ಬೇರೆ ಯಾವಅಧ್ಯಯನದಿಂದಲೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಸರ್ವಶಕ್ತನ ಆಲೋಚನೆಗಳೊಂದಿಗೆಸಂಪರ್ಕ ಹೊಂದಿದ ಮನಸ್ಸು ವಿಸ್ತಾರಗೊಂಡು ಬಲಗೊಳ್ಳುತ್ತದೆ.KanCCh 254.4

    ಆಧ್ಯಾತ್ಮಿಕ ಅಥವಾ ದೈವೀಕಸ್ವಭಾವದ ಬೆಳವಣಿಗೆಯಲ್ಲಿ ಸತ್ಯವೇದದ ಸಾಮರ್ಥ್ಯವೂಇನ್ನೂ ಮಹತ್ವದ್ದಾಗಿದೆ. ದೇವರೊಂದಿಗೆ ಅನ್ನೋನ್ಯತೆ ಹೊಂದುವ ಸಲುವಾಗಿ ಸೃಷ್ಟಿಸಲ್ಪಟ್ಟಮಾನವನು, ಅಂತಹ ಅನ್ನೋನ್ಯ ಸಂಬಂಧದಲ್ಲಿ ಮಾತ್ರ ತನ್ನ ಯಥಾರ್ಥಜೀವನಹಾಗೂ ಬೆಳವಣಿಗೆ ಕಂಡುಕೊಳ್ಳುತ್ತಾನೆ. ಅತ್ಯುನ್ನತ ಸಂತೋಷವನ್ನು ದೇವರಲ್ಲಿ ಮಾತ್ರಕಂಡುಕೊಳ್ಳಲು ಸೃಷ್ಟಿ ಮಾಡಲ್ಪಟ್ಟ ಮನುಷ್ಯನು ತನ್ನ ಹೃದಯದ ಬಯಕೆ ಹಾಗೂಆತ್ಮೀಕ ದಾಹ ಮತ್ತು ಹಸಿವೆಯನ್ನು ಬೇರೆ ಯಾವುದರಿಂದಲೂ ತೃಪ್ತಿಪಡಿಸಿಕೊಳ್ಳಲಾರನು.ಪ್ರಾಮಾಣಿಕವಾಗಿ ದೇವರ ವಾಕ್ಯದಲ್ಲಿರುವ ಸತ್ಯವನ್ನು ಗ್ರಹಿಸಿಕೊಳ್ಳಬೇಕೆಂದು ಅಧ್ಯಯನಮಾಡುವವರು ದೇವರೊಂದಿಗೆ ಸಂಪರ್ಕ ಹೊಂದುವರು. ಅಂತವರ ಆತ್ಮೀಕ ಬೆಳವಣಿಗೆಯಸಾಧ್ಯತೆಗಳಿಗೆ ಯಾವುದೇ ಮಿತಿಯಿಲ್ಲ.KanCCh 255.1

    ಪಾಠಗಳಿಗೆ ಸಂಬಂಧಪಟ್ಟಂತೆ ಸತ್ಯವೇದದ ಅತ್ಯಂತ ಪ್ರಮುಖವಾದ ಭಾಗಗಳನ್ನುನೆನಪಿನಲ್ಲಿಟ್ಟುಕೊಳ್ಳುವುದು ಒಂದು ಸದವಕಾಶವಾಗಿದೆ. ಆರಂಭದಲ್ಲಿ ನೆನಪಿನಶಕ್ತಿಯುದುರ್ಬಲವಾಗಿದ್ದರೂ ಓದುತ್ತಿದ್ದಂತೆ ಬಲಗೊಳ್ಳುವುದು. ಸ್ವಲ್ಪ ಸಮಯದ ನಂತರಅಮೂಲ್ಯವಾದ ಸತ್ಯಗಳನ್ನು ಮನಸ್ಸಿನಲ್ಲಿ ನೆನಪಿನಲ್ಲಿಟ್ಟುಕೊಳ್ಳುವುದು ಮನಸ್ಸಿಗೆಮುದನೀಡುತ್ತದೆ. ಈ ಅಭ್ಯಾಸವು ಒಬ್ಬ ವ್ಯಕ್ತಿಯ ಆತ್ಮೀಕ ಬೆಳವಣಿಗೆಯಲ್ಲಿ ಅತ್ಯಮೂಲ್ಯಪಾತ್ರವಹಿಸುತ್ತದೆ.KanCCh 255.2