Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಜೀವನದ ಕರ್ತವ್ಯಗಳಲ್ಲಿ ತರಬೇತಿಯ ಪ್ರಾಮುಖ್ಯತೆ

    ಇಸ್ರಾಯೇಲ್ಯರ ಕಾಲದಲ್ಲಿದ್ದಂತೆಯೇ, ಇಂದೂ ಸಹ ಎಲ್ಲಾ ಯೌವನಸ್ಥರಿಗೂ ನಿಜಜೀವನದ ಕರ್ತವ್ಯಗಳ ಬಗ್ಗೆ ಸಲಹೆಗಳನ್ನು ನೀಡಬೇಕು. ಪ್ರತಿಯೊಬ್ಬರೂ ಸಹ ಶ್ರಮವಹಿಸಿದುಡಿಯುವುದನ್ನು ಕಲಿಯಬೇಕು. ಇದರಿಂದ ಮುಂದೆ ಅವರ ಜೀವನೋಪಾಯಕ್ಕೂಮಾರ್ಗವಾಗುವುದು. ಅಲ್ಲದೆ ಯೌವನಸ್ಥರ ಶಾರೀರಿಕ ಮಾನಸಿಕ ಹಾಗೂ ನೈತಿಕಬೆಳವಣಿಗೆಗೆ ಇದು ಅಗತ್ಯವಾಗಿದೆ.KanCCh 256.2

    ಅಡ್ವೆಂಟಿಸ್ಟ್ ಶಾಲೆಗಳಲ್ಲಿ ವಿವಿಧ ಕಸುಬಿಗೆ ಸಂಬಂಧಪಟ್ಟ ತರಬೇತಿ ನೀಡಬೇಕು.ಬಡಗಿ ಕೆಲಸ, ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಮತ್ತು ವ್ಯವಸಾಯಕ್ಕೆ ಸಂಬಂಧಪಟ್ಟ ಎಲ್ಲಾವಿಧವಾದ ಕಸುಬುಗಳ ಬಗ್ಗೆ ತರಬೇತಿಯಿರಬೇಕು. ಕಮ್ಮಾರಿಕೆ, ಚಿತ್ರಕಲೆ, ಬೇಕರಿ, ಮುದ್ರಣ,ಟೈಪ್‌ರೈಟಿಂಗ್ (ಈಗಿನ ಕಾಲಕ್ಕೆ ತಕ್ಕಂತೆ ಕಂಪ್ಯೂಟರ್) ಇವುಗಳ ಬಗ್ಗೆ ಶಿಕ್ಷಣ ನೀಡಬೇಕು.ಶಿಕ್ಷಕರು ತಮ್ಮೆಲ್ಲಾ ಸಾಮರ್ಥ್ಯ ಉಪಯೋಗಿಸಿ ಯೌವನಸ್ಥರಿಗೆ ತರಬೇತಿ ನೀಡಿದಲ್ಲಿ.ಅವರು ಜೀವನದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸುಸಜ್ಜಿತರಾಗುವರು.KanCCh 256.3

    ಯುವತಿಯರೂ ಸಹ ಹೊಲಿಗೆ, ಕಸೂತಿ, ತೋಟಗಾರಿಕೆ ಮುಂತಾದವುಗಳಲ್ಲಿತರಬೇತಿ ಪಡೆದುಕೊಂಡಲ್ಲಿ, ಮುಂದೆ ಅವರಿಗೆ ಬಹಳ ಉಪಯೋಗವಾಗುವುದು(ಇದು 120 ವರ್ಷಗಳಿಗೂ ಹಿಂದೆ ಶ್ರೀಮತಿ ವೈಟಮ್ಮನವರು ಬರೆದದ್ದು. ಇಂದಿನಕಾಲದಲ್ಲಿಯುವಕಯುವತಿಯರಿಗೆ ಅನೇಕ ವಿಧವಾದ ಆಧುನಿಕ ಶಿಕ್ಷಣ ತರಬೇತಿ ದೊರೆಯುತ್ತದೆ. ಅವರು ಆಗ ಹೇಳಿದ್ದು ಒಂದುವೇಳೆ ಇಂದಿಗೆ ಹೆಚ್ಚು ಅನ್ವಯವಾಗದಿರಬಹುದು. ಇದುಅನುವಾದಕರ ಮಾತು).KanCCh 256.4

    ಶರೀರದ ಮೇಲೆ ಮನಸ್ಸಿನ ಪರಿಣಾಮ ಹಾಗೂ ಮನಸ್ಸಿನ ಮೇಲೆ ಶರೀರದಪರಿಣಾಮದ ಬಗ್ಗೆ ಪ್ರಾಮುಖ್ಯತೆ ಕೊಡಬೇಕು. ಮೆದುಳಿನ ವಿದ್ಯುತ್ ಸಾಮರ್ಥ್ಯವುಮಾನಸಿಕ ಚಟುವಟಿಕೆಯಿಂದ ಉತ್ತೇಜನಗೊಂಡಾಗ, ಶರೀರದ ಸಂಪೂರ್ಣ ವ್ಯವಸ್ಥೆಯುಚೈತನ್ಯಗೊಳ್ಳುವುದು. ಇದು ರೋಗಗಳನ್ನು ಪ್ರತಿರೋಧಿಸುವುದಕ್ಕೆ ಬಹಳ ಪ್ರಾಮುಖ್ಯವಾದಸಹಕಾರಿಯಾಗಿದೆ. “ಹರ್ಷ ಹೃದಯವು ಒಳ್ಳೆಯ ಔಷಧ” ಎಂಬ ಸತ್ಯವನ್ನು ನಾವುನೆನಪಿನಲ್ಲಿಡಬೇಕು (ಜ್ಞಾನೋಕ್ತಿ 17:22).KanCCh 257.1

    ಮಕ್ಕಳು ಹಾಗೂ ಯೌವನಸ್ಥರು ಉತ್ತಮ ಆರೋಗ್ಯ, ಸಂತೋಷ ಹಾಗೂಉಲ್ಲಾಸಭರಿತರಾಗಲು ಮತ್ತು ಅವರ ಸ್ನಾಯುಗಳು, ಮೆದುಳು ಪರಿಪೂರ್ಣ ಬೆಳವಣಿಗೆಹೊಂದಬೇಕಾದಲ್ಲಿ, ಅವರು ಹೆಚ್ಚಾಗಿ ಹೊರಾಂಗಣದಲ್ಲಿರಬೇಕು. ಅಲ್ಲದೆ ನೈತಿಕತೆಮೀರದ ಮನರಂಜನೆಗೆ ಮತ್ತು ಕೆಲಸದಲ್ಲಿ ತೊಡಗಿರಬೇಕು. ಕೇವಲ ಪುಸ್ತಕದಹುಳುವಾಗಿರುವಂತವರ ದೇಹದ ಅಂಗಗಳುಉತ್ತಮ ಸ್ಥಿತಿಯಲ್ಲಿರುವುದಿಲ್ಲ. ಓದುವುದರಲ್ಲಿಮಾತ್ರ ತೊಡಗಿಸಿಕೊಂಡು, ಅದಕ್ಕೆ ಪೂರಕವಾದ ಶಾರೀರಿಕ ವ್ಯಾಯಾಮ ಮಾಡದಿದ್ದಲ್ಲಿ.ರಕ್ತವು ಮೆದುಳಿಗೆ ಹೆಚ್ಚಾಗಿ ಹೋಗುವ ಸಂಭವವಿದೆ. ಇದರಿಂದ ರಕ್ತ ಪರಿಚಲನೆಯುಅಸಮತೋಲನವಾಗುವ ಸಾಧ್ಯತೆಯಿದೆ. ಮೆದುಳಿಗೆ ಅತಿಹೆಚ್ಚಿನ ರಕ್ತಸಂಚಾರವಿದೆ, ಆದರೆಶರೀರದ ಇತರ ಅಂಗಗಳಿಗೆ ಅತಿಕಡಿಮೆ ರಕ್ತಸಂಚಾರವಿರುತ್ತದೆ. ಮಕ್ಕಳು ಮತ್ತುಯೌವನಸ್ಥರು ಓದುವ ಸಮಯವನ್ನು ನಿಗದಿಪಡಿಸಬೇಕು ಹಾಗೂ ಸ್ವಲ್ಪ ಸಮಯವನ್ನುಶಾರೀರಿಕ ಕೆಲಸಕ್ಕಾಗಿ ಮೀಸಲಿಡಬೇಕು. ಅವರು ಊಟ ಮಾಡುವ, ಮಲಗುವ ಅಭ್ಯಾಸವುಶಾರೀರಿಕ ನಿಯಮಕ್ಕೆ ಅನುಗುಣವಾಗಿದ್ದಲ್ಲಿ, ಅವರು ಶಾರೀರಿಕ ಹಾಗೂ ಮಾನಸಿಕಆರೋಗ್ಯ ಕಳೆದುಕೊಳ್ಳದೆ ಉತ್ತಮ ಶಿಕ್ಷಣ ಪಡೆದುಕೊಳ್ಳಬಹುದು.KanCCh 257.2