Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂದೇಹವಾದಿಗಳ ಕೆಲಸವು ದೇವರಿಗೆ ನಿಷಿದ್ಧವಾದದ್ದು

    ತಪ್ಪಾದ ಸಿದ್ಧಾಂತಗಳು, ತಪ್ಪಾದ ಸಮರ್ಥನೆ, ನಿರ್ಣಯಗಳು ಮತ್ತು ಸೈತಾನನ ಕುತರ್ಕಗಳನ್ನು ನಮ್ಮ ಮಕ್ಕಳು ಮತ್ತು ಯೌವನಸ್ಥರ ಮನಸ್ಸಿಗೆ ತುಂಬುವುದು ದೇವರಉದ್ದೇಶವಾಗಿದೆಯೇ? ವಿಗ್ರಹಾರಾಧಕರ ಮತ್ತು ನಾಸ್ತಿಕರ ಭಾವನೆಗಳನ್ನು ನಮ್ಮವಿದ್ಯಾರ್ಥಿಗಳಿಗೆ ಅಮೂಲ್ಯವಾದ ಹೆಚ್ಚಿನ ಜ್ಞಾನವೆಂದು ತಿಳಿಸಬೇಕೇ? ಬಹಳಬುದ್ಧಿವಂತನಾದ ಸಂದೇಹವಾದಿಯ ಕಾರ್ಯಗಳು ಸೈತಾನನಿಗೆ ಅಧೀನವಾದ ಮನಸ್ಸಿನಕಾರ್ಯವಾಗಿದೆ (Skeptic, ಸಂದೇಹವಾದಿ ಅಂದರೆ ಕ್ರೈಸ್ತಧರ್ಮದ ಸಿದ್ಧಾಂತಗಳಬಗ್ಗೆ ಸಂದೇಹಿಸುವ, ಸತ್ಯ ಪಾಪಪುಣ್ಯ ಮೊದಲಾದವುಗಳನ್ನು ತಿರಸ್ಕರಿಸಿ ದೂಷಿಸುವವನು,ಸಿನಿಕ), ಧಾರ್ಮಿಕ ಸುಧಾರಕರೆಂದೂ ಮತ್ತು ಮಕ್ಕಳು ಹಾಗೂ ಯೌವನಸ್ಥರನ್ನುಸರಿಯಾದ ಮಾರ್ಗದಲ್ಲಿ ನಡೆಸುತ್ತೇವೆಂದು ಹೇಳಿಕೊಂಡು ದೇವರ ಗುಣಸ್ವಭಾವವನ್ನುತಪ್ಪಾಗಿ ನಿರೂಪಿಸುವವರಿಂದ ನಮ್ಮ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕೇ? ಲೋಕವುಮಹಾಚಿಂತಕರೂ, ತತ್ವಜ್ಞಾನಿಗಳೂ ಎಂದು ಪ್ರಶಂಸಿಸುವ ನಾಸ್ತಿಕರ ಭಾವನೆಗಳನ್ನುಹಾಗೂ ನೀತಿಗೆಟ್ಟ ಲಂಪಟರ ಹೇಳಿಕೆಗಳನ್ನು ಕ್ರೈಸ್ತ ವಿದ್ಯಾರ್ಥಿಗಳು ಯೋಗ್ಯವಾದಶಿಕ್ಷಣವೆಂದು ಗಮನಕೊಡಬೇಕೇ? ದೇವರಲ್ಲಿ ವಿಶ್ವಾಸವಿಟ್ಟಿದ್ದೇವೆಂದು ಹೇಳಿಕೊಳ್ಳುವವರುಧರ್ಮವಿರೋಧಿಗಳಾದ ಈ ಲೇಖಕರ, ವಿದ್ವಾಂಸರ ಚಿಂತನೆಗಳು ಹಾಗೂ ಹೇಳಿಕೆಗಳನ್ನುಅಮೂಲ್ಯವಾದ ಆಭರಣಗಳೆಂದು ಸಂಗ್ರಹಿಸಿಟ್ಟುಕೊಳ್ಳಬೇಕೇ? ಎಂದಿಗೂ ಆಗಬಾರದು.ದೇವರು ಇದನ್ನು ನಿಷೇಧಿಸಿದ್ದಾನೆ.KanCCh 258.5