ಕ್ರೈಸ್ತ ಶಿಕ್ಷಣದ ಫಲಿತಾಂಶಗಳು
ಯೆರೂಸಲೇಮಿನ ದೇವಾಲಯದಲ್ಲಿ ಮಕ್ಕಳು “ಜಯ (ಹೊಸನ್ನ) ಕರ್ತನ ಹೆಸರಿನಲ್ಲಿಬರುವವನಿಗೆ ಆಶೀರ್ವಾದ....” ಎಂದು ಹಾಡಿದರು (ಮಾರ್ಕ 11:10). ಅದೇ ರೀತಿಯಾಗಿಅಂತ್ಯಕಾಲದಲ್ಲಿ ಪಾಪದಿಂದ ನಾಶವಾಗುತ್ತಿರುವ ಈ ಲೋಕಕ್ಕೆ ಕೊನೆಯ ಎಚ್ಚರಿಕೆಯಸಂದೇಶ ನೀಡಲು ಮಕ್ಕಳ ಸ್ವರವು ಕೇಳಿ ಬರುವುದು. ದೊಡ್ಡವರು ಸತ್ಯವನ್ನು ಹೇಳಲುಅನುಮತಿಯಿಲ್ಲವೆಂದು ದೇವರು ನೋಡಿದಾಗ, ಆತನ ಆತ್ಮವು ಮಕ್ಕಳಮೇಲೆ ಬರುವುದು.ವಯಸ್ಕರಾದ ಕೆಲಸಗಾರರ ಸೇವೆಗೆ ಅಡ್ಡಿ ಉಂಟಾದಾಗ, ದೇವರಾತ್ಮನಿಂದ ಪ್ರೇರಿತರಾದಮಕ್ಕಳುಸತ್ಯವನ್ನು ಸಾರುವ ಕಾರ್ಯಮಾಡುವರು.KanCCh 259.1
ನಮ್ಮ ಅಡ್ವೆಂಟಿಸ್ಟ್ ಸಭೆಯ ಶಾಲೆಗಳು ಈ ಮಹಾಕಾರ್ಯ ಮಾಡಲು ಮಕ್ಕಳನ್ನುತರಬೇತಿಗೊಳಿಸಿ ಸಿದ್ಧ ಮಾಡುವುದಕ್ಕಾಗಿ ಪ್ರತಿಷ್ಟಿಸಲ್ಪಟ್ಟಿವೆ. ಶಾಲೆಗಳಲ್ಲಿ ಈ ಅಂತ್ಯಕಾಲಕ್ಕೆಸಂಬಂಧಪಟ್ಟಂತೆ ವಿಶೇಷವಾದ ಸತ್ಯಗಳ ಬಗ್ಗೆ ಹಾಗೂ ಪ್ರಾಯೋಗಿಕವಾದ (Practical) ದೇವರಸೇವೆಗಾಗಿ ಶಿಕ್ಷಣನೀಡಬೇಕು, ರೋಗರುಜಿನ, ಬಾಧೆಗಳಿಂದ ಕಷ್ಟಪಡುವವರಿಗೆಸಹಾಯಮಾಡಲು ಕೆಲಸಗಾರರ ಬೆಂಬಲ ಪಡೆದುಕೊಳ್ಳಬೇಕು. ಮಕ್ಕಳುವೈದ್ಯಕೀಯಸೇವೆಯಲ್ಲಿ ಭಾಗವಹಿಸಬಹುದು. ಅವರ ಸೇವೆಯು ಅಲ್ಪವಾಗಿರಬಹುದು.ಆದರೆ ಅವರ ಈ ಸಹಾಯ ಮತ್ತು ಪ್ರಯತ್ನದಿಂದ ಅನೇಕರನ್ನು ಸತ್ಯಮಾರ್ಗಕ್ಕೆ ತರಬಹುದು. ಅವರ ಮೂಲಕ ದೇವರ ಸಂದೇಶ ಹಾಗೂ ಆತನು ಆರೋಗ್ಯದಾಯಕನೆಂಬವಿಷಯವು ಅನೇಕರಿಗೆ ತಿಳಿದು ಬರುವುದು. ಅನಂತರ ಸಭೆಯು ಹೊಸಬರಾದವಿಶ್ವಾಸಿಗಳನ್ನು ಪೋಷಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಮಕ್ಕಳು ದೇವರಸ್ವಾಸ್ತ್ಯವಾಗಿರುವುದರಿಂದ, ಅವರಿಗೆ ಆತನ ಸೇವೆಮಾಡುವುದಕ್ಕಾಗಿ ಶಿಕ್ಷಣ ಹಾಗೂತರಬೇತಿ ನೀಡಬೇಕು.KanCCh 259.2
ಸಭೆಯ ಶಾಲೆಗಳು ಕ್ರೈಸ್ತ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆದಲ್ಲಿ, ಅವು ಇರುವಂತಸ್ಥಳಗಳಲ್ಲಿ ಸತ್ಯವನ್ನು ಎತ್ತಿಹಿಡಿಯುವ ಮಾಧ್ಯಮವಾಗಿರುತ್ತವೆ. ಕ್ರೈಸ್ತಶಿಕ್ಷಣ ಪಡೆದಮಕ್ಕಳು ಕ್ರಿಸ್ತನಿಗಾಗಿ ಸಾಕ್ಷಿಗಳಾಗಿರುತ್ತಾರೆ. ಕ್ರಿಸ್ತನು ದೇವಾಲಯದಲ್ಲಿ ಯಾಜಕರು ಮತ್ತುಅಧಿಕಾರಿಗಳಿಗೆ ತಿಳಿಯದಂತ ವಿಷಯಗಳನ್ನು ಹೇಗೆ ಪರಿಹರಿಸಿದನೋ, ಅದೇರೀತಿಅಂತ್ಯಕಾಲದಲ್ಲಿ ಸರಿಯಾದ ಕ್ರೈಸ್ತ ಶಿಕ್ಷಣ ಪಡೆದ ಮಕ್ಕಳು ತಮ್ಮ ಸರಳತೆಯಿಂದ, ಈಲೋಕದ ವಿದ್ವಾಂಸರು ಆಶ್ಚರ್ಯಪಡುವಂತ ರೀತಿಯಲ್ಲಿ ಮಾತಾಡುವರು.KanCCh 260.1
ಅಡ್ವೆಂಟಿಸ್ಟ್ ಕಾಲೇಜುಗಳು ಆತ್ಮಗಳನ್ನು ರಕ್ಷಿಸುವಂತ ಮಹಾಕಾರ್ಯವನ್ನುನೆರವೇರಿಸುವುದಕ್ಕಾಗಿ ದೇವರಿಂದ ಸ್ಥಾಪಿಸಲ್ಪಟ್ಟಿವೆ ಎಂದು ಶ್ರೀಮತಿ ವೈಟಮ್ಮನವರಿಗೆದರ್ಶನದಲ್ಲಿ ತೋರಿಸಲಾಯಿತು. ದೇವರಾತ್ಮನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟಾಗಒಬ್ಬ ವ್ಯಕ್ತಿಯ ತಲಾಂತು (ಪ್ರತಿಭೆ)ಗಳು ಪೂರ್ಣವಾಗಿ ಉಪಯುಕ್ತವಾಗುತ್ತವೆ. ಧರ್ಮದಸಿದ್ಧಾಂತಗಳು ಹಾಗೂ ದೈವಾಜ್ಞೆಗಳು ಜ್ಞಾನವನ್ನು ಪಡೆದುಕೊಳ್ಳುವ ಮೊದಲನೆಹಂತಗಳಾಗಿದ್ದು, ನಿಜ ಶಿಕ್ಷಣದ ಆಸ್ತಿವಾರವಾಗಿದೆ. ಶ್ರೇಷ್ಟವಾದ ಉದ್ದೇಶಗಳನ್ನುನೆರವೇರಿಸುವುದಕ್ಕಾಗಿ ಜ್ಞಾನ ಮತ್ತು ವಿಜ್ಞಾನವು ದೇವರಾತ್ಮನಿಂದ ಉಜೀವನಗೊಳ್ಳಬೇಕು.ಕ್ರೈಸ್ತರು ಮಾತ್ರ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬಲ್ಲರು. ವಿಜ್ಞಾನದಯೋಗ್ಯತೆಯನ್ನು ಸಂಪೂರ್ಣವಾಗಿ ಗುರುತಿಸಬೇಕಾದಲ್ಲಿ, ಧಾರ್ಮಿಕ ದೃಷ್ಟಿಕೋನದಿಂದಮಾತ್ರ ನೋಡಬೇಕು. ದೇವರ ಕೃಪೆಯಿಂದ ಉದಾತ್ತಗೊಳಿಸಲ್ಪಟ್ಟ (Ennoble) ಹೃದಯವುಶಿಕ್ಷಣದ ನಿಜವಾದ ಮೌಲ್ಯವನ್ನು ಉತ್ತಮವಾಗಿ ಗ್ರಹಿಸುತ್ತದೆ. ದೇವರ ಸೃಷ್ಟಿಕಾರ್ಯದಲ್ಲಿಕಂಡುಬರುವ ಆತನ ವೈಶಿಷ್ಟ್ಯಗಳನ್ನು ಸೃಷ್ಟಿಕರ್ತನ ಬಗ್ಗೆ ಜ್ಞಾನ ಹೊಂದಿದ್ದಾಗ ಮಾತ್ರತಿಳಿದುಕೊಳ್ಳಬಹುದು. ಸತ್ಯದ ಮೂಲನೂ, ಸಮಸ್ತ ಲೋಕದ ಪಾಪಗಳನ್ನು ನಿವಾರಿಸುವದೇವರ ಕುರಿಮರಿಯೂ ಆದ ಕ್ರಿಸ್ತನ ಬಳಿಗೆ ಯೌವನಸ್ಥರನ್ನು ನಡೆಸಬೇಕಾದಲ್ಲಿ ಸ್ವತಃಶಿಕ್ಷಕರು ಸತ್ಯದ ಬಗ್ಗೆ ತಿಳಿದಿರುವುದು ಮಾತ್ರವಲ್ಲದೆ, ಆತನ ಪರಿಶುದ್ಧತೆಯ ಮಾರ್ಗದಅನುಭವಾತ್ಮಕ (Experimental) ಜ್ಞಾನವನ್ನೂ ಸಹ ತಿಳಿದಿರಬೇಕು. ಜ್ಞಾನವುಯಥಾರ್ಥವಾದ ಭಕ್ತಿಯೊಂದಿಗೆ ಸೇರಿದಾಗ ಬಲ ನೀಡುತ್ತದೆ.KanCCh 260.2