Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಶಾಲೆಯ ಗೌರವ ಉಳಿಸುವುದರಲ್ಲಿ ವಿದ್ಯಾರ್ಥಿಯ ಜವಾಬ್ದಾರಿ

  ದೇವರನ್ನು ಪ್ರೀತಿಸುವ ಹಾಗೂ ಆತನ ಸತ್ಯಕ್ಕೆ ವಿಧೇಯರಾಗುವ ವಿದ್ಯಾರ್ಥಿಗಳು ತಮ್ಮನ್ನು ನಿಯಂತ್ರಿಸಿಕೊಳ್ಳುವ ಮತ್ತು ಧಾರ್ಮಿಕತತ್ವಗಳ ಬಲವನ್ನು ಹೊಂದಿರಬೇಕು.ಆಗ ಅವರು ಶಾಲಾಕಾಲೇಜುಗಳಲ್ಲಾಗಲಿ, ಬೋರ್ಡಿಂಗ್‌ನಲ್ಲಾಗಲಿ (ಹಾಸ್ಟೆಲ್) ಅಥವಾಎಲ್ಲೇಇರಲಿ, ಶೋಧನೆಗಳು ಬಂದಾಗ ಅದರ ವಿರುದ್ಧವಾಗಿ ದೃಢವಾಗಿ ನಿಲ್ಲುವರು.ದೇವಾಲಯಕ್ಕೆ ಹೋಗುವುದು ಧಾರ್ಮಿಕತೆಯಲ್ಲ, ಬದಲಾಗಿ ಧಾರ್ಮಿಕತತ್ವಗಳುಸಂಪೂರ್ಣ ಜೀವನದಲ್ಲಿ ಕಂಡುಬರಬೇಕು.KanCCh 260.3

  ಜೀವಜಲವಾದ ಕ್ರಿಸ್ತನಲ್ಲಿ ಆತ್ಮೀಕ ದಾಹದಿಂದ ತೃಪ್ತಿ ಹೊಂದಿದವರು, ಲೋಕದಜನರಂತೆ ಬದಲಾವಣೆಗಾಗಿ ಮತ್ತು ಲೌಕಿಕ ಸುಖ ಸಂತೋಷಕ್ಕಾಗಿ ಹಾತೊರೆಯುವುದಿಲ್ಲ.ದೇವರ ಮುಂದೆ ಅವರು ತಮ್ಮೆಲ್ಲಾ ಕಷ್ಟ ತೊಂದರೆಗಳನ್ನು ಪ್ರತಿದಿನವೂ ಇಡುವುದರಿಂದಅವರಲ್ಲಿ ಆತ್ಮೀಕ ವಿಶ್ರಾಂತಿ, ಸಮಾಧಾನ ಮತ್ತು ಸಂತೋಷ ಕಂಡುಬರುವುದು. ದೇವರಿಗೆವಿಧೇಯರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರಿಂದ, ಅವರು ಸಂತೃಪ್ತಿ ಹಾಗೂಹರ್ಷದಿಂದಿರುವರು. ಅಂತಹ ವಿದ್ಯಾರ್ಥಿಗಳು ತಮ್ಮ ಇತರ ಸಹಪಾಠಿಗಳ ಮೇಲೆಉತ್ತಮ ಪ್ರಭಾವ ಬೀರುವುದರಿಂದ, ಇದು ಎಲ್ಲರಿಗೂ ತಿಳಿದುಬರುವುದು.KanCCh 261.1

  ಇಂತಹ ಪ್ರಾಮಾಣಿಕರಾದ ಗುಂಪಿಗೆ ಸೇರಿದ ವಿದ್ಯಾರ್ಥಿಗಳು ತಮ್ಮೆಲ್ಲಾ ಪ್ರಯತ್ನಗಳಲ್ಲಿತಮ್ಮ ಶಿಕ್ಷಕರು ಹಾಗೂ ಪ್ರಾಧ್ಯಾಪಕರುಗಳನ್ನು ಚೈತನ್ಯಗೊಳಿಸಿ ಬಲಪಡಿಸುವರು. ಅವರಕಾರ್ಯವು ದೇವರ ಮಹಾದಿನದಲ್ಲಿ ಅಂದರೆ ಕ್ರಿಸ್ತನ ಎರಡನೇಬರೋಣದಲ್ಲಿನಾಶವಾಗುವುದಿಲ್ಲ. ಬದಲಾಗಿ ಪರಲೋಕದಲ್ಲಿ ಅವರ ಲೆಕ್ಕಕ್ಕೆ ಎಣಿಸಲ್ಪಡುವುದು ಈಲೋಕದಲ್ಲಿ ಇಂತಹ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತೋರಿದ ಪ್ರಭಾವವು,ಯುಗಯುಗಾಂತರಗಳವರೆಗೂ ಹೇಳಲ್ಪಡುವುದು.KanCCh 261.2

  ಶಾಲೆಯಲ್ಲಿರುವ ಪ್ರಾಮಾಣಿಕನಾದ, ನ್ಯಾಯನಿಷ್ಠನಾದ ಹಾಗೂ ನಂಬಿಗಸ್ತನಾದಒಬ್ಬ ಯೌವನಸ್ಥನು ಅಮೂಲ್ಯ ನಿಧಿಯಂತಿದ್ದಾನೆ. ಪರಲೋಕದ ದೇವದೂತರುಅವನನ್ನು ಪ್ರೀತಿಯಿಂದ ನೋಡುವರು. ರಕ್ಷಕನಾದ ಕ್ರಿಸ್ತನು ಅವನನ್ನು ಪ್ರೀತಿಸುವನುಹಾಗೂ ಪರಲೋಕದ ಪುಸ್ತಕದಲ್ಲಿ ಈ ಯೌವನಸ್ಥನು ಮಾಡುವ ಒಂದೊಂದು ರೀತಿಯಕಾರ್ಯ ಅವನು ಜಯಿಸಿದ ಶೋಧನೆಗಳೆಲ್ಲವೂ ಬರೆಯಲ್ಪಡುತ್ತವೆ. ಇಂತಹವಿದ್ಯಾರ್ಥಿಯು ನಿತ್ಯಜೀವಕ್ಕಾಗಿ ಉತ್ತಮ ಆಸ್ತಿವಾರ ಹಾಕುತ್ತಾನೆ.ದೇವರು ತನ್ನ ಸುವಾರ್ತಾಸೇವೆಯ ಅಭಿವೃದ್ಧಿಗೋಸ್ಕರ ಶಾಲಾ ಕಾಲೇಜುಗಳನ್ನುಒಂದು ಸಾಧನವನ್ನಾಗಿ ರೂಪಿಸಿದ್ದಾನೆ. ಅವುಗಳನ್ನು ಉಳಿಸಿ ಮುಂದುವರಿಸಿಕೊಂಡುಹೋಗುವ ದೊಡ್ಡ ಜವಾಬ್ದಾರಿ ಕ್ರೈಸ್ತ ಯೌವನಸ್ಥರ ಮೇಲಿದೆ. ಕಾರ್ಯಶೀಲರಾಗಿರುವಇಂತಹ ಯುವಕ ಯುವತಿಯರಿಗೆ ಗಂಭೀರವಾದ ಹೊಣೆಗಾರಿಕೆ ಕೊಡಲ್ಪಟ್ಟಿದೆ. ದೇವರುಕ್ರೈಸ್ತ ಯೌವನಸ್ಥರನ್ನು ತನ್ನ ಸೇವೆಯಲ್ಲಿ ಸಾಧನವಾಗಿ ಉಪಯೋಗಿಸುವಂತೆ ಅವರುಈ ಮಹಾಕಾರ್ಯಕ್ಕಾಗಿ ಅರ್ಹರಾಗುವುದು ಬಹಳ ಪ್ರಾಮುಖ್ಯವಾಗಿದೆ. ಸೃಷ್ಟಿಕರ್ತನಾದ ದೇವರು ಅವರ ಮೇಲೆ ತನ್ನವರೆಂದು ಅಧಿಕಾರ ಹೊಂದಿದ್ದಾನೆ.KanCCh 261.3

  ಜೀವದಾಯಕನಾದ ದೇವರು ಯುವಕಯುವತಿಯರು ಹೊಂದಿರುವ ಎಲ್ಲಾ ಶಾರೀರಿಕಮತ್ತು ಮಾನಸಿಕ ಸಾಮರ್ಥ್ಯವನ್ನು ಅವರಿಗೆ ಕೊಟ್ಟಿದ್ದಾನೆ. ಅವರು ನಿತ್ಯನಿತ್ಯಕ್ಕಾಗಿಉಳಿಯುವಂತ ಕೆಲಸವನ್ನು ಅವರಿಗೆ ಒಪ್ಪಿಸಿ ಅದಕ್ಕೆ ಬೇಕಾದ ಎಲ್ಲಾ ಜ್ಞಾನ, ತಿಳುವಳಿಕೆ,ವಿವೇಕ ಮುಂತಾದ ಸಾಮರ್ಥ್ಯವನ್ನೂ ಸಹ ದೇವರು ಯೌವನಸ್ಥರಿಗೆ ದಯಪಾಲಿಸಿದ್ದಾನೆ.ತಾನು ದಯಪಾಲಿಸಿರುವ ಈ ಮಹಾವರಗಳಿಗೆ ಪ್ರತಿಯಾಗಿ ದೇವರು ಅವರಿಗಿರುವಬೌದ್ಧಿಕ ಮತ್ತು ನೈತಿಕ ಸಾಮರ್ಥ್ಯಗಳನ್ನು ತನ್ನ ಸೇವೆಗಾಗಿ ಉಪಯೋಗಿಸಬೇಕೆಂದುಬಯಸುತ್ತಾನೆ. ಮನರಂಜನೆಗಾಗಿ ಅಥವಾ ತನ್ನ ಚಿತ್ರಕ್ಕೆ ವಿರುದ್ಧವಾಗಿ ಕಾರ್ಯ ಮಾಡಿಅವುಗಳನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕಾಗಿ ದೇವರು ಕ್ರೈಸ್ತ ಯೌವನಸ್ಥರಿಗೆಇಂತಹ ನೈತಿಕ, ಬೌದ್ಧಿಕ ಜ್ಞಾನವನ್ನು ಕೊಟ್ಟಿಲ್ಲ. ಬದಲಾಗಿ ಈ ಲೋಕದಲ್ಲಿ ಸತ್ಯದಜ್ಞಾನಮತ್ತು ತನ್ನ ಪಾವಿತ್ರತೆಯನ್ನು ಇತರರಿಗೆ ತಿಳಿಸಬೇಕೆಂಬ ಉದ್ದೇಶದಿಂದ ಇವುಗಳನ್ನುನೀಡಿದ್ದಾನೆ. ದೇವರು ತನ್ನ ಅಪಾರವಾದ ಕರುಣೆ, ದಯೆಗಾಗಿ ಅವರಿಂದ ಕೃತಜ್ಞತೆ.ಆರಾಧನೆ ಹಾಗೂ ಪ್ರೀತಿಯನ್ನು ಬಯಸುತ್ತಾನೆ. ಯೌವನಸ್ಥರು ತನ್ನ ಆಜ್ಞೆಗಳಿಗೂಹಾಗೂ ವಿವೇಕಯುತವಾದ ಎಲ್ಲಾ ನೀತಿನೇಮಗಳಿಗೂ ವಿಧೇಯರಾಗಬೇಕೆಂದು ದೇವರುನ್ಯಾಯಸಮ್ಮತವಾಗಿ ಬಯಸುತ್ತಾನೆ. ಇದು ಅವರನ್ನು ಸೈತಾನನ ಎಲ್ಲಾ ವಿಧವಾದತಂತ್ರೋಪಾಯ, ಶೋಧನೆಗಳಿಂದ ತಪ್ಪಿಸಿ ಶಾಂತಿಯ ಮಾರ್ಗದಲ್ಲಿ ನಡೆಸುತ್ತದೆ.KanCCh 262.1

  ನಮ್ಮ ಯೌವನಸ್ಥರು ಅಡ್ವೆಂಟಿಸ್ಟ್ ಸಂಸ್ಥೆಗಳ ನೀತಿನಿಯಮಗಳಿಗೆ ಅನುಸಾರವಾಗಿನಡೆದಲ್ಲಿ, ಸಮಾಜದಲ್ಲಿ ಅವರ ಸ್ಥಾನ ಉನ್ನತವಾಗುವುದು. ಅವರ ಗುಣಸ್ವಭಾವವುಶ್ರೇಷ್ಟವಾಗುವುದು ಹಾಗೂ ಅವರ ಮನಸ್ಸು ಉದಾತ್ತವಾಗಿ ಸಂತೋಷವು ಹೆಚ್ಚಾಗುವುದು.ಆಗ ನಮ್ಮ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ನ್ಯಾಯಸಮ್ಮತವಾದ ಹಾಗೂವಿವೇಚನಾಯುಕ್ತವಾದ ನೀತಿನಿಯಮಗಳಿಗೆವಿರುದ್ಧವಾಗಿ ತಿರುಗಿ ಬೀಳುವುದಿಲ್ಲ ಮತ್ತುಇವುಗಳಿಗೆ ವಿರುದ್ಧವಾಗಿ ಸಂದೇಹದಿಂದ ಪೂರ್ವಗ್ರಹಪೀಡಿತ ದ್ವೇಷ ವ್ಯಕ್ತಪಡಿಸುವುದಿಲ್ಲ.ಬದಲಾಗಿ ನಮ್ಮ ಯೌವನಸ್ಥರು ಚೈತನ್ಯಶೀಲರಾಗಿ ಸಂಸ್ಥೆಗಳಿಗೆ ನಿಷ್ಠೆ ತೋರಿಸುವರು.ಆಗ ಖಂಡಿತವಾಗಿಯೂ ಯಶಸ್ಸು ದೊರೆಯುವುದು. ಇಂದಿನ ಆಧುನಿಕ ಕಾಲದಅನೇಕ ಯುವಕ ಯುವತಿಯರಲ್ಲಿರುವ ದುಡುಕು ಸ್ವಭಾವದ ಅನಾಗರೀಕ ಮತ್ತುಅವಿವೇಕತನ ವರ್ತನೆಯು ನಮಗೆ ಖಿನ್ನತೆ ತರುತ್ತದೆ. ಇದಕ್ಕೆ ಮುಖ್ಯಕಾರಣತಂದೆತಾಯಿಯರು. ದೇವರಲ್ಲಿ ಭಯಭಕ್ತಿಯಿಲ್ಲದಿದ್ದರೆ, ಯಾರೂ ಸಹ ನಿಜವಾಗಿಸಂತೋಷವಾಗಿರಲಾರರು.KanCCh 262.2

  *****

  Larger font
  Smaller font
  Copy
  Print
  Contents