ಅಧ್ಯಾಯ-37 — ಸಂಯಮದ ಜೀವನ
ಉತ್ತಮ ಆರೋಗ್ಯವು ಬೆಲೆಕಟ್ಟಲಾಗದ ಹಾಗೂ ಅಮೂಲ್ಯವಾದ ಆಶೀರ್ವಾದವಾಗಿದ್ದು,ಮನಸ್ಸಾಕ್ಷಿ ಮತ್ತು ಧರ್ಮಕ್ಕೆ ಹೆಚ್ಚು ನಿಕಟಸಂಬಂಧ ಹೊಂದಿದೆ. ದೇವರಸೇವೆಮಾಡುವುದರಲ್ಲಿ ಒಬ್ಬನ ಸಾಮರ್ಥ್ಯವು ಅವನ ಆರೋಗ್ಯದ ಮೇಲೆ ಹೆಚ್ಚಾಗಿ ಅವಲಂಬಿಸಿದೆ.ಆದುದರಿಂದ ಆರೋಗ್ಯವನ್ನು ಬಹಳ ಪರಿಶುದ್ಧವಾಗಿ ರಕ್ಷಿಸಬೇಕು. ನಮ್ಮ ಆರೋಗ್ಯವುಹೆಚ್ಚು ಪರಿಪೂರ್ಣವಾಗಿದ್ದಷ್ಟೂ, ದೇವರ ಸುವಾರ್ತಾಸೇವೆಯ ಅಭಿವೃದ್ಧಿಯಲ್ಲಿ ಮತ್ತುಮಾನವರಿಗೆ ಆಶೀರ್ವಾದ ಉಂಟುಮಾಡುವ ನಮ್ಮ ಪ್ರಯತ್ನಗಳೂ ಸಹ ಅಷ್ಟೇಹೆಚ್ಚಾಗಿಪರಿಪೂರ್ಣವಾಗಿರುತ್ತದೆ.KanCCh 263.1
1871ನೇಇಸವಿ ಡಿಸೆಂಬರ್ 10ನೇತಾರೀಕು ಶ್ರೀಮತಿವೈಟಮ್ಮನವರಿಗೆ ಆರೋಗ್ಯದಬಗ್ಗೆ ಮತ್ತೊಂದು ದರ್ಶನವಾಯಿತು. ಅದರಲ್ಲಿ ಆರೋಗ್ಯದ ಸುಧಾರಣೆಯು ನಮ್ಮಕರ್ತನ ಎರಡನೇಬರೋಣಕ್ಕಾಗಿ ಜನರನ್ನು ಯೋಗ್ಯರನ್ನಾಗಿ ಮಾಡುವ ಮಹಾಕಾರ್ಯದಲ್ಲಿಒಂದು ಭಾಗವಾಗಿದೆ ಎಂದು ಶ್ರೀಮತಿ ವೈಟಮ್ಮನವರಿಗೆ ತೋರಿಸಲಾಯಿತು. ಶರೀರಕ್ಕೆಹೇಗೆ ಕೈಗಳು ಹೆಚ್ಚು ನಿಕಟ ಸಂಬಂಧ ಹೊಂದಿವೆಯೋ, ಆರೋಗ್ಯ ಸುಧಾರಣೆಯೂಸಹ ಮೂರನೇದೂತನ ವರ್ತಮಾನದೊಡನೆ ಅಷ್ಟೇ ನಿಕಟ ಸಂಪರ್ಕ ಹೊಂದಿದೆ.ಹತ್ತುಆಜ್ಞೆಗಳ ನಿಯಮಗಳನ್ನು ಜನರು ಅಲಕ್ಷ ಮಾಡುತ್ತಿದ್ದಾರೆ. ಆದರೆ ದೇವರುಮೊದಲು ಎಚ್ಚರಿಕೆಯ ಸಂದೇಶ ಕಳುಹಿಸದೆ, ತನ್ನ ಆಜ್ಞೆಗಳನ್ನು ಮೀರಿ ನಡೆಯುವವರನ್ನುಶಿಕ್ಷಿಸುವುದಿಲ್ಲ. ಮೂರನೇದೂತನು ಆ ಸಂದೇಶವನ್ನು ಸಾರುತ್ತಾನೆ (ಪ್ರಕಟನೆ 14:)ಮನುಷ್ಯರು ಹತ್ತುಆಜ್ಞೆಗಳ ನಿಯಮಗಳಿಗೆ ವಿಧೇಯರಾಗಿದ್ದು, ಅವುಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಂಡು ನಡೆದಿದ್ದಲ್ಲಿ, ಇಂದು ಲೋಕದಲ್ಲಿ ಹೇರಳವಾಗಿರುವರೋಗಗಳ ಶಾಪವು ಕಂಡು ಬರುತ್ತಿರಲಿಲ್ಲ.KanCCh 263.2
ಸ್ತ್ರೀ ಪುರುಷರು ಆಹಾರ, ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ನಡತೆಗೆಟ್ಟಅಪೇಕ್ಷೆ ಹಾಗೂಇಂದ್ರಿಯಭೋಗಗಳ ತೀವ್ರಾಸಕ್ತಿಯಲ್ಲಿ ತೊಡಗಬಾರದು. ಇದು ಪ್ರಕೃತಿಸಹಜ ನೇಮಗಳನ್ನು ಮೀರುವುದು ಮಾತ್ರವಲ್ಲದೆ, ದೇವರಾಜ್ಞೆಗಳ ಉಲ್ಲಂಘನೆಯೂಆಗಿದೆ. ಆದುದರಿಂದಲೇ ದೇವರು ನಮ್ಮ ಹಿತಕ್ಕಾಗಿ ಕೊಟ್ಟಿರುವ ಆಜ್ಞೆಗಳನ್ನು ಮೀರಿಪಾಪಮಾಡದಂತೆ, ಆರೋಗ್ಯ ಸುಧಾರಣೆಯ ಬೆಳಕನ್ನು ಪ್ರವಾದಿನಿಯವರಾದ ಶ್ರೀಮತಿವೈಟಮ್ಮನವರ ಮೂಲಕ ನಮಗೆ ಬೆಳಕನ್ನಾಗಿ ನೀಡಿದ್ದಾನೆ. ನಮ್ಮೆಲ್ಲಾ ಸಂತೋಷಅಥವಾ ಬಾಧೆಗಳು ಪ್ರಕೃತಿ ಸಹಜವಾದ ನಿಯಮಗಳಿಗೆ ವಿಧೇಯತೆ ತೋರಿಸುವುದುಅಥವಾ ಮೀರುವುದರ ಮೇಲೆ ಆತುಕೊಂಡಿದೆ. ಕೆಲವರು ತಿಳಿದು, ಆದರೆ ಅನೇಕರುಅಜ್ಞಾನದಿಂದ ತಿಳಿಯದೇ ದೇವರು ಸ್ಥಾಪಿಸಿರುವ ಆರೋಗ್ಯ ನಿಯಮಗಳನ್ನು ಉಲ್ಲಂಘಿಸಿಶೋಚನೀಯವಾಗಿ ಬದುಕುತ್ತಿರುವುದನ್ನು ಕೃಪೆಯುಳ್ಳ ನಮ್ಮ ಪರಲೋಕದ ತಂದೆಯುನೋಡುತ್ತಿದ್ದಾನೆ. ಮಾನವರ ಮೇಲೆ ತನಗಿರುವ ಪ್ರೀತಿ ಹಾಗೂ ಅನುಕಂಪದಿಂದಆರೋಗ್ಯ ಸುಧಾರಣೆಯ ಬೆಳಕನ್ನು ನಮಗೆ ಕೊಟ್ಟಿದ್ದಾನೆ. ಮಾನವರೆಲ್ಲರೂ ಪ್ರಕೃತಿಸಹಜ ನಿಯಮಗಳನ್ನು ಎಚ್ಚರಿಕೆಯಿಂದ ತಿಳಿದುಕೊಂಡು ಅದರೊಂದಿಗೆ ಸಾಮರಸ್ಯದಿಂದಜೀವಿಸುವ ಸಲುವಾಗಿ ತನ್ನ ಆಜ್ಞೆಗಳನ್ನು ದೇವರು ಪ್ರಕಟಿಸಿದ್ದಲ್ಲದೆ, ಅದನ್ನುಮೀರುವುದರಿಂದಾಗುವ ದಂಡನೆಯನ್ನೂ ಸಹ ತಿಳಿಸಿದ್ದಾನೆ. ತನ್ನ ಆಜ್ಞೆಗಳನ್ನು ದೇವರುಎಷ್ಟೊಂದು ವಿಶಿಷ್ಟವಾಗಿಯೂ ಹಾಗೂ ಪ್ರಾಮುಖ್ಯವಾಗಿಯೂ ತಿಳಿಸುತ್ತಾನೆಂದರೆ,ಅದು ಬೆಟ್ಟದಮೇಲೆ ಕಟ್ಟಲ್ಪಟ್ಟ ಊರಿನಂತಿದೆ. ಜವಾಬ್ದಾರಿಯುತರಾದ ಎಲ್ಲರೂ ಸಹಮನಸ್ಸಿದ್ದಲ್ಲಿ ಅದನ್ನು ತಿಳಿದುಕೊಳ್ಳಬಹುದು. ಮೂರ್ಖರು ಜವಾಬ್ದಾರಿ ಹೊಂದಿರುವುದಿಲ್ಲ.ಪ್ರಕೃತಿದತ್ತವಾದ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ಅದಕ್ಕೆ ವಿಧೇಯರಾಗುವಂತೆ ಪ್ರೇರಿಸಿನಮ್ಮನ್ನು ಕರ್ತನ ಎರಡನೇ ಬರೋಣಕ್ಕೆ ಸಿದ್ಧರಾಗುವಂತೆ ಮಾಡುವುದು ಮೂರನೇದೂತನಸಂದೇಶವಾಗಿದೆ.KanCCh 263.3