Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ನೀವು ನಿಮ್ಮ ಸ್ವಂತ ಸ್ವತ್ತಲ್ಲ

    ಕ್ರಿಸ್ತನು ಅತಿಬೇಗನೆ ಎರಡನೇಸಾರಿ ಬರಲಿದ್ದಾನೆಂಬುದನ್ನು ಕ್ರೈಸ್ತರಾದ ನಾವು ಯಾವುದೇಸಂದೇಹವಿಲ್ಲದೆ ನಂಬುತ್ತೇವೆ. ನಮಗೆ ಇದು ಯಾವುದೇ ಕಾಲ್ಪನಿಕ ಕತೆಯಲ್ಲ. ಬದಲಾಗಿವಾಸ್ತವ ವಿಷಯವಾಗಿದೆ. ಆತನು ಬಂದಾಗ ನಮ್ಮ ಪಾಪಗಳಿಂದ ನಮ್ಮನ್ನುಶುದ್ಧಿಗೊಳಿಸುವುದಿಲ್ಲ. ನಮ್ಮ ಸ್ವಭಾವದ ದೋಷಗಳನ್ನು ತೆಗೆಯುವುದಿಲ್ಲ ಅಥವಾನಮ್ಮ ಸ್ವಾಭಾವಿಕ ಪ್ರವೃತ್ತಿಯಲ್ಲಿರುವ ದೌರ್ಬಲ್ಯಗಳನ್ನು ಹೋಗಲಾಡಿಸುವುದಿಲ್ಲ. ಈಕಾರ್ಯಗಳನ್ನೆಲ್ಲಾ ಕ್ರಿಸ್ತನು ಬರುವುದಕ್ಕೆ ಮೊದಲೇ ನಾವು ಮಾಡಿಕೊಳ್ಳಬೇಕು.KanCCh 264.1

    ಕರ್ತನು ಬಂದಾಗ ಪವಿತ್ರನು ಇನ್ನೂ ಪವಿತ್ರನಾಗಿಯೇ ಇರುವನು. ತಮ್ಮ ಆತ್ಮಪ್ರಾಣಶರೀರ ಗಳನ್ನು ಪರಿಶುದ್ಧತೆ ಹಾಗೂ ಒಳ್ಳೆಂರು ನಡತೆಯಿ೦ದಗೌರವಾರ್ಹವಾಗಿರಿಸಿಕೊಂಡವರಿಗೆ ಅಮರತ್ವವನ್ನು ಆತನು ಕೊಡುವನು. ಆದರೆಅನ್ಯಾಯಗಾರರೂ, ಅಪವಿತ್ರರೂ, ನೀತಿಗೆಟ್ಟವರೂ ಅದೇ ರೀತಿಯಲ್ಲಿ ಇರುವರು. ಅವರದೋಷಗಳನ್ನು ಹೋಗಲಾಡಿಸಿಪವಿತ್ರರನ್ನಾಗಿ ಮಾಡುವ ಯಾವ ಕಾರ್ಯವೂ ಆಗನಡೆಯುವುದಿಲ್ಲ. ಕೃಪೆಯಕಾಲವಿರುವಾಗಲೇ ಈ ಕಾರ್ಯವೆಲ್ಲವೂ ನಡೆಯಬೇಕು.ಈಗ ತಾನೇ ನಾವು ಇದನ್ನು ಮಾಡಬೇಕಾಗಿದೆ.KanCCh 264.2

    ನೀತಿ, ಪರಿಶುದ್ಧಗುಣನಡತೆ, ಕೃಪೆಯಲ್ಲಿ ಆತ್ಮಿಕವಾಗಿ ಬೆಳವಣಿಗೆ ಹೊಂದುವುದನ್ನುವಿರೋಧಿಸುವ ನಲ್ಲಿ ನಾವು ಜೀವಿಸುತ್ತಿದ್ದೇವೆ. ಎಲ್ಲಿಯೇ ನೋಡಲಿ ಅಪವಿತ್ರತೆ,ನೀತಿಭ್ರಷ್ಟತೆ, ಪಾಪಗಳು ಕಂಡುಬರುತ್ತಿವೆ. ಅಮರತ್ವ ಹೊಂದಿಕೊಳ್ಳುವ ಮೊದಲೇ ನಾವುಇಲ್ಲಿ ಯಾವ ಕಾರ್ಯ ಮಾಡಬೇಕಾಗಿದೆ? ಈ ಕೊನೆಯ ಕಾಲದಲ್ಲಿ ನಮ್ಮ ಸುತ್ತಲೂಕಂಡುಬರುವ ಈ ದೋಷಗಳಿಂದ ನಮ್ಮ ಪ್ರಾಣ, ಆತ್ಮ, ಶರೀರಗಳನ್ನು ಪರಿಶುದ್ಧವಾಗಿ ಕಾಪಾಡಿಕೊಳ್ಳುವ ಕಾರ್ಯ ತಾನೇ ನಾವು ಮಾಡಬೇಕಾಗಿದೆ, “ದೇವರಿಂದ ದೊರಕಿನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆಂಬುದುನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸ್ವತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು,ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಚುರಪಡಿಸಿರಿ” (1 ಕೊರಿಂಥ6:19,20).KanCCh 264.3

    ನಾವು ನಮ್ಮ ಸ್ವಂತ ಸ್ವತ್ತಲ್ಲ. ದೇವಕುಮಾರನ ಶ್ರಮೆ, ಸಂಕಟ ಹಾಗೂ ಮರಣವೆಂಬಅಮೂಲ್ಯಕ್ರಯದಿಂದ ಕೊಳ್ಳಲ್ಪಟ್ಟವರು. ಇದನ್ನು ನಾವು ಸಂಪೂರ್ಣವಾಗಿಅರ್ಥಮಾಡಿಕೊಂಡಲ್ಲಿ, ನಾವು ದೇವರಿಗೆ ಪರಿಪೂರ್ಣ ಸೇವೆಮಾಡಲು ಸಮರ್ಥರಾಗುವಂತೆನಮ್ಮ ದೇಹಗಳನ್ನು ಅತ್ಯುತ್ತಮವಾದ ಆರೋಗ್ಯಕರ ಸ್ಥಿತಿಯಲ್ಲಿರಿಸಬೇಕೆಂಬ ದೊಡ್ಡಜವಾಬ್ದಾರಿಯ ಅರಿವು ನಮಗಾಗುತ್ತದೆ. ಆದರೆ ನಮ್ಮ ಬಲವನ್ನು ಕುಂದಿಸುವ, ಚೈತನ್ಯವನ್ನುಉಡುಗಿಸುವ ಅಥವಾ ಬೌದ್ಧಿಕ ಸಾಮರ್ಥ್ಯವನ್ನು ಮಸುಕುಗೊಳಿಸುವ ಕಾರ್ಯ ಮಾಡಿದಾಗ,ದೇವರಿಗೆ ವಿರುದ್ಧವಾಗಿ ಪಾಪ ಮಾಡುತ್ತೇವೆ. ಈ ರೀತಿ ಮಾಡಿದಲ್ಲಿ ದೇವರ ಸ್ವತ್ತಾಗಿರುವನಮ್ಮ ಶರೀರ, ಆತ್ಮ, ಪ್ರಾಣಿಗಳಿಂದ ಆತನನ್ನು ಮಹಿಮೆ ಪಡಿಸುವುದಿಲ್ಲ. ಆದರೆದೇವರದೃಷ್ಟಿಯಲ್ಲಿ ದೊಡ್ಡತಪ್ಪನ್ನು ಮಾಡಿದಂತಾಗುತ್ತದೆ.KanCCh 265.1

    Larger font
    Smaller font
    Copy
    Print
    Contents