Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಮನುಷ್ಯನ ಏಕೈಕ ನಿರೀಕ್ಷೆ

    ಕ್ರೈಸ್ತಧರ್ಮವು ಶರೀರ ಅಥವಾ ಮನಸ್ಸಿನ ಆರೋಗ್ಯಕ್ಕೆ ಹಾನಿಕರವಲ್ಲ. ದೇವರಾತ್ಮನಪ್ರಭಾವವು ಎಲ್ಲಾ ರೋಗಗಳಿಗೆ ಅತ್ಯುತ್ತಮ ಔಷಧವಾಗಿದೆ. ಪರಲೋಕದಲ್ಲಿ ಪರಿಪೂರ್ಣಆರೋಗ್ಯವಿದೆ. ಅದರ ಪ್ರಭಾವವನ್ನು ಹೆಚ್ಚು ಆಳವಾಗಿ ಮನವರಿಕೆ ಮಾಡಿಕೊಂಡಷ್ಟು,ರೋಗವು ಶೀಘ್ರವಾಗಿ ಗುಣವಾಗುವುದು ಅಷ್ಟೇ ಖಚಿತವಾಗಿದೆ, ಕ್ರೈಸ್ತಧರ್ಮದ ನಿಜವಾದಸಿದ್ಧಾಂತಗಳು/ ತತ್ವಗಳು ಅಮೂಲ್ಯವಾದ ಬುಗ್ಗೆಯಾಗಿದ್ದು, ಕ್ರೈಸ್ತರು ಅದರಿಂದ ಹೇರಳವಾಗಿಜೀವಜಲವನ್ನು ಕುಡಿಯಬಹುದು, ಅದು ಎಂದಿಗೂ ಬತ್ತಿಹೋಗುವುದಿಲ್ಲ.KanCCh 266.1

    ಮಾನಸಿಕ ಸ್ಥಿತಿಯು ಶಾರೀರಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸುಯಾವುದೇ ಒತ್ತಡವಿಲ್ಲದೆ ಮುಕ್ತವಾಗಿಯೂ ಸಂತೋಷವಾಗಿಯೂ ಇದ್ದಲ್ಲಿ, ಇತರರಿಗೂಸಂತೋಷತರುವಲ್ಲಿ ಸಂತೃಪ್ತಿಹೊಂದಿದ್ದಲ್ಲಿ, ಅದರಿಂದಾಗುವ ಹರ್ಷಾನಂದವು ಶರೀರದಎಲ್ಲಾ ಅಂಗಗಳ ಮೇಲೆ ಪ್ರತಿಕ್ರಿಯೆ ತೋರಿಸುತ್ತದೆ. ಇದರಿಂದ ರಕ್ತಸಂಚಾರವು ಸರಾಗವಾಗಿ,ಸಂಪೂರ್ಣ ದೇಹವು ಉಲ್ಲಾಸಿತವಾಗುತ್ತದೆ. ದೇವರ ಆಶೀರ್ವಾದವು ಗುಣಪಡಿಸುವಶಕ್ತಿಯಾಗಿದ್ದು, ಇತರರಿಗೆ ಧಾರಾಳವಾಗಿ ಸಹಾಯ ಮಾಡುವವರು ತಮ್ಮ ಜೀವ ಮತ್ತುಹೃದಯದ ಮೇಲಾಗುವ ಅದ್ಭುತ ಆಶೀರ್ವಾದಗಳನ್ನು ಮನವರಿಕೆ ಮಾಡಿಕೊಳ್ಳುವರು.KanCCh 266.2

    ಕೆಟ್ಟ ಅಭ್ಯಾಸ ಮತ್ತು ಪಾಪಪೂರಿತವಾದ ಕಾರ್ಯಗಳಲ್ಲಿ ತೊಡಗಿದ್ದವರು ದೈವೀಕಸತ್ಯವನ್ನು ಅಂಗೀಕರಿಸಿಕೊಂಡಾಗ ಹಾಗೂ ಅದನ್ನು ಅನುಸರಿಸಿ ನಡೆದಾಗ, ನಿಷ್ಕ್ರಿಯವಾಗಿದ್ದನೈತಿಕ ಸಾಮರ್ಥ್ಯಗಳು ಪುನಃ ಚೈತನ್ಯಗೊಳ್ಳುತ್ತವೆ. ಕ್ರಿಸ್ತನೆಂಬ ನಿತ್ಯವಾದ ಬಂಡೆಯಲ್ಲಿತಾನು ಬಲವಾದ ಆಶ್ರಯ ಹೊಂದಿದ್ದೇನೆಂಬ ಭಾವನೆ ಅವನಲ್ಲಿ ಬಂದಾಗ, ಅವನಶಾರೀರಿಕ ಆರೋಗ್ಯವೂ ಸಹ ಸುಧಾರಣೆಯಾಗುವುದು. ದೇವರಿಗೆ ವಿಧೇಯರಾಗುವುದರಿಂದಬರುವ ಪರಿಪೂರ್ಣ ಆಶೀರ್ವಾದದಿಂದ ಮನುಷ್ಯರು ಕ್ರಿಸ್ತನ ಕೃಪೆಯನ್ನು ತಮಗಾಗಿಪಡೆದುಕೊಳ್ಳುವರು. ಆತನ ಕೃಪೆಯು ತಾನೇ ದೇವರಾಜ್ಞೆಗಳಿಗೆ ವಿಧೇಯರಾಗುವುದಕ್ಕೆಬಲ ಕೊಡುತ್ತದೆ. ಕೆಟ್ಟ ಅಭ್ಯಾಸಗಳೆಂಬ ದಾಸತ್ವದಿಂದ ಬಿಡುಗಡೆ ಪಡೆಯಲು ಈ ಕೃಪೆಯುಮಾನವರಿಗೆ ಸಾಮರ್ಥ್ಯಕೊಡುತ್ತದೆ. ಈ ಸಾಮರ್ಥ್ಯವು ಮಾತ್ರ ಅವರನ್ನು ಸರಿಯಾದಮಾರ್ಗದಲ್ಲಿ ದೃಢವಾಗಿ ನಡೆಯಲು ಸಹಾಯಮಾಡುತ್ತದೆ.KanCCh 266.3

    ಸುವಾರ್ತೆಯನ್ನು ಅದರ ಬಲ ಹಾಗೂ ಪರಿಶುದ್ಧತೆಯಿಂದ ಸ್ವೀಕರಿಸಿದಾಗ,ಪಾಪದಿಂದಬರುವ ಎಲ್ಲಾರೋಗಗಳಿಗೆ ಅದು ಪರಿಹಾರವಾಗಿದೆ. “ದೇವರ ನೀತಿಯೆಂಬಸೂರ್ಯನು ಸ್ವಸ್ಥತೆಯನ್ನುಂಟು ಮಾಡುವ ಕಿರಣಗಳುಳ್ಳವನಾಗಿ ಮೂಡುವನು“(ಮಲಾಕಿಯ 4:2). ಈ ಲೋಕವು ಕೊಡುವಯಾವುದೂ ಸಹ ಒಡೆದ ಹೃದಯವನ್ನುಗುಣಪಡಿಸಲಾಗದು ಅಥವಾ ಮನಸ್ಸಮಾಧಾನ ನೀಡದು ಇಲ್ಲವೆ ಚಿಂತೆಯನ್ನು ನಿವಾರಿಸದುಅಥವಾ ರೋಗ ಪರಿಹರಿಸದು, ಕೀರ್ತಿ, ಮೇಧಾವಿತನ, ಪ್ರತಿಭೆ - ಇವೆಲ್ಲವೂ ಸಹಹೃದಯದ ದುಃಖವನ್ನು ಹೋಗಲಾಡಿಸಿ ಹರ್ಷ ಕೊಡಲಾರದು ಅಥವಾ ಕಳೆದುಹೋದ ವ್ಯರ್ಥಜೀವಿತವನ್ನು ಮರಳಿ ನೀಡುವುದಕ್ಕೆ ಶಕ್ತಿಹೀನವಾಗಿದೆ. ನಮ್ಮ ಶರೀರದಲ್ಲಿದೇವರ ಜೀವವು ತಾನೇ ನಮಗೆ ಏಕೈಕ ನಿರೀಕ್ಷೆಯಾಗಿದೆ. ಪರಿಪೂರ್ಣ ಆರೋಗ್ಯದಮೂಲಕ ಕ್ರಿಸ್ತನು ಪ್ರಸರಿಸುವ (ಕೊಡುವ) ಪ್ರೀತಿಯು ದೇಹವನ್ನು ಚೈತನ್ಯಗೊಳಿಸುವಶಕ್ತಿಹೊಂದಿದೆ. ಶರೀರದ ಪ್ರಮುಖ ಭಾಗಗಳಾದ ನರಗಳು, ಮೆದುಳು, ಹೃದಯವನ್ನುಅದು ಗುಣಪಡಿಸುತ್ತದೆ. ಇದರಿಂದ ಅಂಗಗಳಲ್ಲಿರುವ ಉನ್ನತವಾದ ಶಕ್ತಿಸಾಮರ್ಥ್ಯಗಳುಚಟುವಟಿಕೆಗೊಳ್ಳಲು ಪ್ರಚೋದಿಸಲ್ಪಡುತ್ತವೆ. ಇದು ನಮ್ಮ ಮನಸ್ಸನ್ನು ತಪ್ಪಿತಸ್ಥಭಾವನೆ,ದುಃಖ, ತಲ್ಲಣ, ಮೊದಲಾದ ಜೀವನದ ಚಿಂತೆಗಳಿಂದ ಮುಕ್ತಗೊಳಿಸುತ್ತದೆ. ಇದರೊಂದಿಗೆನೆಮ್ಮದಿ ಹಾಗೂ ಪ್ರಶಾಂತತೆ ಉಂಟಾಗುತ್ತವೆ. ಲೋಕವು ಎಂದೆಂದಿಗೂನಾಶಮಾಡಲಾಗದಂತ ಆರೋಗ್ಯನೀಡುವ ಮತ್ತು ಜೀವನೀಡುವ ಪವಿತ್ರಾತ್ಮನಹರ್ಷಾನಂದವನ್ನು ನಮ್ಮ ಹೃದಯವು ಅನುಭವಿಸುವುದು.KanCCh 267.1

    “ಎಲೈ ಕಷ್ಟಪಡುವವರೇ.... ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ” (ಮತ್ತಾಯ 11:28)ಎಂಬ ಕರ್ತನ ಮಾತುಗಳು ನಮ್ಮ ಶಾರೀರಿಕ, ಮಾನಸಿಕ ಹಾಗೂ ಆತ್ಮೀಕ ರೋಗಗಳನ್ನುಗುಣಪಡಿಸುವ ಚಿಕಿತ್ಸೆಯಾಗಿದೆ. ಮನುಷ್ಯರಾದ ನಾವು ನಮ್ಮದೇ ಆದ ತಪ್ಪಿನಿಂದ, ಕೆಟ್ಟಅಭ್ಯಾಸಗಳಿಂದ ರೋಗರುಜಿನ, ಸಂಕಟಗಳನ್ನು ತಂದುಕೊಂಡರೂ, ದೇವರು ನಮ್ಮಮೇಲೆ ಅನುಕಂಪ ತೋರಿಸುತ್ತಾನೆ. ಆತನಲ್ಲಿ ನಾವು ಸಹಾಯಹೊಂದುತ್ತೇವೆ. ಆತನಲ್ಲಿಭರವಸ ಇಟ್ಟವರಿಗೆ ಆತನು ಅದ್ಭುತ ಕಾರ್ಯಗಳನ್ನು ಮಾಡುತ್ತಾನೆ.KanCCh 267.2

    Larger font
    Smaller font
    Copy
    Print
    Contents