Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಮನಸ್ಸು ಹಾಗೂ ಶರೀರದ ಮೇಲೆ ಮಾಂಸಾಹಾರದ ಪರಿಣಾಮಗಳು

  ಮಾಂಸಾಹಾರ ಸೇವನೆಯಿಂದಾಗುವ ಶಾರೀರಿಕ ಕಾಯಿಲೆಗಳಂತೆಯೇ ನೈತಿಕಪರಿಣಾಮಗಳೂ ಎದ್ದು ಕಾಣುತ್ತವೆ. ನಮ್ಮ ಆಹಾರದಂತೆಯೇ, ನಮ್ಮ ಆರೋಗ್ಯವೂಇರುತ್ತದೆ. ಹೆಚ್ಚಾಗಿ ಮಾಂಸತಿನ್ನುವುದು ಬೌದ್ಧಿಕ ಚಟುವಟಿಕೆಯನ್ನುಕುಂಠಿತಗೊಳಿಸುತ್ತದೆ.ವಿದ್ಯಾರ್ಥಿಗಳು ಮಾಂಸತಿನ್ನದಿದ್ದಲ್ಲಿ ಶೈಕ್ಷಣಿಕವಾಗಿ ಇನ್ನೂ ಹೆಚ್ಚಾಗಿ ಸಾಧಿಸಬಲ್ಲರು.ಇದರ ಸೇವನೆಯಿಂದ ಶರೀರದಲ್ಲಿ ಪ್ರಾಣಿಯಂತ ವರ್ತನೆ ಹೆಚ್ಚಾದಂತೆ, ಅದಕ್ಕೆ ಸರಿಪ್ರಮಾಣದಲ್ಲಿ ಬೌದ್ಧಿಕಸಾಮರ್ಥ್ಯವು ಕಡಿಮೆಯಾಗುತ್ತದೆ. ಮಾಂಸಾಹಾರವು ಆರೋಗ್ಯಕ್ಕೆಹಾನಿಕರ, ಆದುದರಿಂದ ಶರೀರವನ್ನು ಬಾಧಿಸುವಂತದ್ದು. ಮನಸ್ಸಿನ ಮೇಲೆಯೂ ಸಹಅನುಗುಣವಾದ ಪರಿಣಾಮ ಉಂಟುಮಾಡುತ್ತದೆ.KanCCh 285.2

  ಮಾಂಸಸೇವನೆಯು ಸ್ವಾಭಾವಿಕ ಮನೋಭಾವನೆ ಬದಲಾಯಿಸಿ ಮೃಗೀಯವರ್ತನೆಯನ್ನುಬಲಿಷ್ಠಗೊಳಿಸುತ್ತದೆ. ಅತ್ಯಂತ ಸರಳವಾದ ಸಸ್ಯಾಹಾರ ಸೇವಿಸುವುದಕ್ಕೆ ಈಗ ಅತ್ಯಂತ ಸೂಕ್ತ ಸಮಯವಾಗಿದೆ. ಮಕ್ಕಳಿಗೆ ಮಾಂಸ ಕೊಡಬಾರದು. ಇದರಸೇವನೆಯು ಭಾವೋದ್ರೇಕವನ್ನು ಕೆರಳಿಸಿ, ನೈತಿಕ ಸಾಮರ್ಥ್ಯವನ್ನು ಕುಂದಿಸುತ್ತದೆ.KanCCh 285.3

  ಕ್ರಿಸ್ತನ ಶೀಘ್ರ ಬರೋಣಕ್ಕಾಗಿ ಕಾದು ಕೊಂಡಿದ್ದೇವೆಂದು ಹೇಳಿಕೊಳ್ಳುವವರಲ್ಲಿ ಈವಿಷಯವಾಗಿ ಒಂದು ಮಹಾಸುಧಾರಣೆ ಕಂಡುಬರಬೇಕು. ಇದುವರೆಗೂಮಾಡಲಾಗದಿರುವಂತ ಕಾರ್ಯವು ಆರೋಗ್ಯದ ವಿಷಯದಲ್ಲಿ ಉತ್ತಮ ಬದಲಾವಣೆಮಾಡಿಕೊಳ್ಳುವುದರಿಂದ ಕಂಡುಬರುವುದು. ಮಾಂಸಹಾರದಿಂದ ಉಂಟಾಗುವಅಪಾಯಗಳ ಬಗ್ಗೆ ನಾವು ಎಚ್ಚರಗೊಳ್ಳಬೇಕಾಗಿದೆ. ಆದರೆ ಇನ್ನೂ ಅದನ್ನು ಸೇವಿಸುವವರುಶಾರೀರಿಕ, ಮಾನಸಿಕ ಮತ್ತು ಆತ್ಮೀಕ ಆರೋಗ್ಯವನ್ನು ಹಾನಿಮಾಡಿಕೊಳ್ಳುವರು. ಈವಿಷಯದಲ್ಲಿ ಇನ್ನೂ ಸಂದೇಹವುಳ್ಳವರು ದೇವಜನರಿಂದ ದೂರವಾಗುವರು.KanCCh 286.1

  ಸತ್ಯವನ್ನು ನಂಬಿದ್ದೇವೆಂದು ಹೇಳಿಕೊಳ್ಳುವವರು, ತಮ್ಮ ನಡೆನುಡಿಗಳಿಂದ ದೇವರಿಗೆಅಗೌರವವುಂಟಾಗದಂತೆ ತಮ್ಮ ಮನಸ್ಸು ಹಾಗೂ ಶರೀರದ ಸಾಮರ್ಥ್ಯಗಳನ್ನುಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಅವರು ತಮ್ಮ ಅಭ್ಯಾಸ, ಆಚರಣೆಗಳನ್ನು ದೇವರಚಿತ್ತಕ್ಕೆ ಒಳಪಡಿಸಬೇಕು. ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ದೇವರಮಕ್ಕಳಾದನಾವು ಮಾಂಸಾಹಾರ ಸೇವನೆಯ ವಿರುದ್ಧವಾಗಿ ದೃಢನಿರ್ಧಾರ ತೆಗೆದುಕೊಳ್ಳಬೇಕೆಂದುದೇವರು ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.KanCCh 286.2

  Larger font
  Smaller font
  Copy
  Print
  Contents