Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ನಿರ್ಧಾರ ದೃಢವಾಗಿರಲಿ

    ಸೆವೆಂತ್ ಡೇ ಅಡ್ವೆಂಟಿಸ್ಟರು ಪ್ರಾಮುಖ್ಯವಾದ ಸತ್ಯಗಳನ್ನು ಹೊಂದಿದ್ದಾರೆ. 1863ನೇಇಸವಿಯಲ್ಲಿ ದೇವರು ಶ್ರೀಮತಿ ವೈಟಮ್ಮನವರಿಗೆ ಆರೋಗ್ಯ ಸುಧಾರಣೆಯ ಸಂದೇಶದಬಗ್ಗೆ ವಿಶೇಷ ಬೆಳಕನ್ನು ಕೊಟ್ಟನು. ನಾವು ಆ ಬೆಳಕಿನಲ್ಲಿ ಹೇಗೆ ನಡೆಯುತ್ತಿದ್ದೇವೆ?ದೇವರ ಹಿತವಚನೆಗಳಿಗೆ ಅನುಗುಣವಾಗಿ ನಡೆಯಲು ಎಷ್ಟೊಂದು ಜನರುನಿರಾಕರಿಸುತ್ತಿದ್ದಾರೆ? ನಮಗೆ ಕೊಟ್ಟ ಸತ್ಯದ ಬೆಳಕಿನ ಪ್ರಮಾಣಕ್ಕೆ ತಕ್ಕಂತೆ ನಾವು ಆತ್ಮಿಕಬೆಳವಣಿಗೆ ಹೊಂದಬೇಕು. ಆರೋಗ್ಯ ಸುಧಾರಣೆಯ ಸಿದ್ಧಾಂತಗಳನ್ನು ತಿಳಿದುಕೊಂಡುಅದರಂತೆ ನಡೆಯುವುದು ನಮ್ಮ ಕರ್ತವ್ಯ ಮಿತ ಸಂಯಮದ ವಿಷಯದಲ್ಲಿ ಇತರೆಲ್ಲಾಜನಾಂಗಗಳಿಗಿಂತ ನಾವು ಮುಂದಿರಬೇಕು. ಆದಾಗ್ಯೂ ನಮ್ಮ ಸಭೆಯಲ್ಲಿ ಉತ್ತಮಶಿಕ್ಷಣ ಹೊಂದಿದ ಸದಸ್ಯರು, ಅಷ್ಟೇಕೆ, ಸುವಾರ್ತಾಸೇವಕರೂ ಸಹ ಆರೋಗ್ಯದ ವಿಷಯದಲ್ಲಿ ದೇವರು ಕೊಟ್ಟ ಬೆಳಕಿನ ಬಗ್ಗೆ ಗೌರವ ಹೊಂದಿಲ್ಲ. ತಮ್ಮಿಷ್ಟದಂತೆ ಅವರು ತಿನ್ನುತ್ತಾರೆಮತ್ತು ತಮ್ಮಿಷ್ಟದಂತೆ ಕೆಲಸ ಮಾಡುತ್ತಾರೆ.KanCCh 290.4

    ಸಭೆಯ ನಾಯಕರು, ಬೋಧಕರು, ಶಿಕ್ಷಕರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸತ್ಯವೇದದಸಂದೇಶಕ್ಕೆ ತಕ್ಕಂತೆ ದೃಢವಾಗಿ ನಿಲ್ಲಬೇಕು. ಮತ್ತು ಲೋಕದ ಇತಿಹಾಸ ಕೊನೆಯದಿನಗಳಲ್ಲಿಜೀವಿಸುತ್ತೇವೆಂದು ನಂಬಿರುವವರಿಗೆ ಈ ವಿಷಯದಲ್ಲಿ ನೇರವಾದ ಸಾಕ್ಷ ಕೊಡಬೇಕು.ದೇವರಿಗಾಗಿ ಸೇವೆ ಮಾಡುವವರು ಮತ್ತು ತಮಗಾಗಿ ಸೇವೆಮಾಡಿಕೊಳ್ಳುವವರ ನಡುವೆಒಂದು ಸ್ಪಷ್ಟವಾದ ವ್ಯತ್ಯಾಸವಿರಬೇಕು.KanCCh 291.1

    ಶ್ರೀಮತಿ ವೈಟಮ್ಮನವರಿಗೆ 110-150 ವರ್ಷಗಳ ಹಿಂದೆ ಕೊಡಲ್ಪಟ್ಟ ಸಂದೇಶಗಳಸಿದ್ಧಾಂತಗಳು ಇಂದಿಗೂ ಸಹ ಪ್ರಾಮುಖ್ಯವಾಗಿವೆ ಎಂದು ದೇವರು ಅವರ ಮೂಲಕನಮಗೆ ಸೂಚನೆ ನೀಡುತ್ತಾನೆ. ಆಹಾರಕ್ರಮದ ವಿಷಯದಲ್ಲಿ ದೇವರು ಕೊಟ್ಟ ಬೆಳಕನ್ನುಎಂದೂ ಸಹ ಅನುಸರಿಸದವರು ಇದ್ದಾರೆ. ಕೊಳಗದಲ್ಲಿ ಮುಚ್ಚಿಟ್ಟಿರುವ ಬೆಳಕನ್ನುತೆಗೆದು ಎಲ್ಲರಿಗೂ ಸ್ಪಷ್ಟವಾಗಿ ಪ್ರಕಾಶಿಸಬೇಕಾದ ಸಮಯ ಇದಾಗಿದೆ.KanCCh 291.2

    ಆರೋಗ್ಯಕರ ಜೀವನದ ಸಿದ್ಧಾಂತಗಳು ಅಡ್ರೆಂಟಿಸ್ಪರಾದ ನಮಗೆ ವ್ಯಕ್ತಿಗತವಾಗಿಯೂಮತ್ತು ಉಳಿದಸಭೆಯ ಜನಾಂಗವಾಗಿಯೂ ಬಹಳ ಪ್ರಾಮುಖ್ಯವಾಗಿದೆ. ಆರೋಗ್ಯದಈ ಸಂದೇಶ ಮೊದಲು ಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದಾಗ,ಅವರು ಬಹಳ ದುರ್ಬಲರಾಗಿದ್ದು, ಆಗಾಗ ಜ್ಞಾನ ತಪ್ಪುತ್ತಿದ್ದರು. ಅವರು ಆರೋಗ್ಯಕ್ಕಾಗಿದೇವರಲ್ಲಿ ಮೊರೆಯಿಟ್ಟಾಗ, ಆತನು ಅವರಿಗೆ ಆರೋಗ್ಯ ಸುಧಾರಣೆಗೆ ಸಂಬಂಧಪಟ್ಟಂತೆಮಹಾಸಂದೇಶ ನೀಡಿದನು. ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವರು, ಆತನೊಂದಿಗೆಪವಿತ್ರ ಸಂಬಂಧ ಹೊಂದಬೇಕು ಮತ್ತು ತಿನ್ನುವುದರಲ್ಲಿ ಹಾಗೂ ಕುಡಿಯುವುದರಲ್ಲಿಮಿತ ಸಂಯಮಿಗಳಾಗಿದ್ದು ಆತನ ಸೇವೆಗೆ ತಮ್ಮ ಶರೀರ, ಮನಸ್ಸುಗಳನ್ನು ಉತ್ತಮಸ್ಥಿತಿಯಲ್ಲಿರಿಸಿಕೊಳ್ಳಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿಸೂಚಿಸಿದನು. ಈ ದರ್ಶನವು ಅವರಿಗೆ ಅಪಾರ ಆಶೀರ್ವಾದಕರವಾಯಿತು. ದೇವರು ತನ್ನನ್ನು ಬಲಪಡಿಸುತ್ತಾನೆಂದು ತಿಳಿದು ಅವರು ಆರೋಗ್ಯದ ನಿಯಮಗಳನ್ನು ಅನುಸರಿಸುವನಿರ್ಧಾರ ಕೈಗೊಂಡರು. ಈ ಕಾರಣದಿಂದ ತಾವು ಯೌವನದಲ್ಲಿದ್ದಕ್ಕಿಂತಲೂ, ವಯಸ್ಸಾದಾಗ ಹೆಚ್ಚು ಆರೋಗ್ಯವಂತರಾಗಿದ್ದೇನೆಂದು ಶ್ರೀಮತಿ ವೈಟಮ್ಮನವರು ತಿಳಿಸುತ್ತಾರೆ.KanCCh 291.3

    Larger font
    Smaller font
    Copy
    Print
    Contents