Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-42 — ಲೋಕದಲ್ಲಿ ಕ್ರೈಸ್ತಸಭೆ

    ದೇವರು ಆರಿಸಿಕೊಂಡವರು ಹಾಗೂ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವಒಂದು ಕ್ರೈಸ್ತಸಭೆಯು ಈ ಲೋಕದಲ್ಲಿದೆ. ಆತನು ತನ್ನ ಜನರನ್ನು ಮಾರ್ಗದರ್ಶನನೀಡಿ ನಡೆಸುತ್ತಾನೆ, ಸತ್ಯವು ಪರಿಶುದ್ಧಗೊಳಿಸುವ ಶಕ್ತಿಯಾಗಿದೆ; ಆದರೆ ಆಕ್ರಮಣಕಾರಿಯೂ,ತೀವ್ರವಾದಿಯೂ ಆದ ಸಭೆಯು ಜಯಶಾಲಿಯಾದ ಸಭೆಯಲ್ಲ. ಗೋಧಿಕಾಳುಗಳನಡುವೆ ಹಣಜಿಗಳಿವೆ. ಆಳುಗಳು ಯಜಮಾನನನ್ನು- “ಹಾಗಾದರೆ ನಾವು ಅದನ್ನುಆರಿಸಿ ತೆಗೆಯೋಣವೇ? ಎಂದು ಕೇಳಲು ಅವನು ಬೇಡ, ಹಣಜಿಯನ್ನುಆರಿಸಿ ತೆಗೆಯುವಾಗ, ಅದರ ಸಂಗಡ ಗೋಧಿಯನ್ನೆಲ್ಲಾದರೂ ಕಿತ್ತೀರಿ...” ಎಂದು ಹೇಳಿದನು(ಮತ್ತಾಯ 13:24-30), ಸುವಾರ್ತೆ ಎಂಬ ಬಲೆಯನ್ನು ಬೀಸಿದಾಗ, ಅದರಲ್ಲಿ ಒಳ್ಳೆಯಮೀನುಗಳು ಮಾತ್ರವಲ್ಲ, ಕೆಟ್ಟ ಮೀನುಗಳೂ ಸಹ ಸಿಕ್ಕುವವು. ತನ್ನವರಾರೆಂದು ಕರ್ತನು ಮಾತ್ರ ತಿಳಿದಿದ್ದಾನೆ (ಮತ್ತಾಯ 13:47-48).KanCCh 298.1

    ದೇವರೊಂದಿಗೆ ನಮ್ರತೆಯಿಂದ ನಡೆದುಕೊಳ್ಳುವುದು ನಮ್ಮ ಪ್ರತಿಯೊಬ್ಬರಕರ್ತವ್ಯವಾಗಿದೆ. ನಾವು ಅಪರಿಚಿತವಾದ ಯಾವುದೇ ಹೊಸಸಂದೇಶ ಹುಡುಕಬಾರದು.ಸಭೆಯಲ್ಲಿ ಕೆಟ್ಟದ್ದು ಈಗ ಇರುವುದಲ್ಲದೆ, ಈ ಲೋಕದ ಅಂತ್ಯದವರೆಗೂ ಇರುತ್ತದೆ.ಆದಾಗ್ಯೂ ಪಾಪದಿಂದ ಕಲುಷಿತವಾದ ಹಾಗೂ ನೀತಿಗೆಟ್ಟ ಲೋಕಕ್ಕೆ ಕ್ರೈಸ್ತ ಸಭೆಯುಈ ಕೊನೆಯ ಕಾಲದಲ್ಲಿ ಬೆಳಕಾಗಿರಬೇಕು. ಸಭೆಯು ಎಷ್ಟೇ ದುರ್ಬಲವಾಗಿದ್ದರೂ,ದೋಷದಿಂದ ಕೂಡಿದ್ದರೂ, ದೇವರು ಅದಕ್ಕೆ ಎಚ್ಚರಿಕೆ ನೀಡುತ್ತಾನೆ ಮತ್ತು ಗದರಿಸಿಬುದ್ಧಿ ಹೇಳುತ್ತಾನೆ. ಈ ಲೋಕದಲ್ಲಿ ಸಭೆಯ ಮೇಲೆ ಮಾತ್ರ ದೇವರು ತನ್ನ ಶ್ರೇಷ್ಠವಾದಪ್ರೀತಿಯನ್ನು ತೋರಿಸುತ್ತಾನೆ. ಈ ಲೋಕವು ಒಂದು ಕಾರ್ಯಾಗಾರವಾಗಿದ್ದುKanCCh 298.2

    (ವರ್ಕ್‌ಶಾಪ್), ಮಾನವರು ಹಾಗೂ ದೈವೀಕಸಹಕಾರದಿಂದ ಕ್ರಿಸ್ತನು ತನ್ನ ಕೃಪೆ ಹಾಗೂದೈವೀಕ ಕರುಣೆಯಿಂದ ಹೃದಯಗಳಲ್ಲಿ ಪ್ರಯೋಗ ಮಾಡುತ್ತಾನೆ.KanCCh 298.3

    ವಿಶಿಷ್ಟವಾದ ಜನರಿಂದ ಕೂಡಿದ ಒಂದು ಕ್ರೈಸ್ತಸಭೆಯು ಈ ಲೋಕದಲ್ಲಿ ದೇವರಿಗಿದೆ.ಇದು ಯಾವುದಕ್ಕೂ ಕಡಿಮೆಯಿಲ್ಲ. ಬದಲಾಗಿ ಸತ್ಯವನ್ನುಬೋಧಿಸುವುದರಲ್ಲಿ ಮತ್ತುದೇವರಾಜ್ಜೆಗಳು ನ್ಯಾಯಸಮ್ಮತವೂ, ಸತ್ಯವೂ ಆಗಿವೆ ಎಂದು ಸಮರ್ಥಿಸುವುದರಲ್ಲಿಬೇರೆಲ್ಲವುಗಳಿಗಿಂತ ಉನ್ನತ ಮಟ್ಟದಲ್ಲಿದೆ. ದಿನನಿತ್ಯದ ಕಾರ್ಯಗಳಲ್ಲಿ ಕಷ್ಟ ಎದುರಿಸುವಮತ್ತು ತಾನೇ ಮಾರ್ಗದರ್ಶನ ನೀಡುವ ಜನರನ್ನು ದೇವರು ಸ್ವತಃ ಆರಿಸಿದ್ದಾನೆ.ಇವರು ಲೋಕದಲ್ಲಿ ಕ್ರಿಸ್ತನರಾಜ್ಯದ ಸುವಾರ್ತೆ ಸಾರುವುದರಲ್ಲಿ ಪರಲೋಕದದೂತರೊಂದಿಗೆ ಸಹಕರಿಸುತ್ತಾರೆ. ದೇವರು ಆರಿಸಿದ ಇವರೊಂದಿಗೆ ನಾವೂಸಹ ಒಟ್ಟಾಗಿಸೇರಿ ಸೇವೆಮಾಡಿದಾಗ, ದೇವರಾಜ್ಞೆಗಳನ್ನು ಕೈಕೊಂಡು ನಡೆದು, ಯೇಸುವಿನ ವಿಷಯವಾದಸಾಕ್ಷಿ ಹೇಳುವವರೊಂದಿಗೆ ಸೇರುತ್ತೇವೆ. ಇದರಲ್ಲಿ ದೇವಜನರ ತಾಳ್ಮೆಯು ತೋರಿಬರುತ್ತದೆ.KanCCh 298.4

    Larger font
    Smaller font
    Copy
    Print
    Contents