ಸಭೆಗೆ ಕೊಡಲ್ಪಟ್ಟ ಅಧಿಕಾರ
ಸಭೆಯ ಮಾತಿಗೆ ಕ್ರಿಸ್ತನು ಅಧಿಕಾರ ಕೊಡುತ್ತಾನೆ. ಯೇಸು ಪೇತ್ರನಿಗೆ “...’ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ, ಅದು ಪರಲೋಕದಲ್ಲಿಯೂಕಟ್ಟಿರುವುದು ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದುಪರಲೋಕದಲ್ಲಿಯೂ ಬಿಚ್ಚಿರುವುದು” ಅಂದನು (ಮತ್ತಾಯ 16:18, 19), ದೇವರುತನ್ನ ಸಭೆಗೆ ಈ ಲೋಕದಲ್ಲಿ ಅತ್ಯುನ್ನತ ಅಧಿಕಾರ ಕೊಟ್ಟಿದ್ದಾನೆ. ಸಭೆಯಲ್ಲಿಅನ್ಯೋನ್ಯತೆಯಿಂದ ಸೇರಿರುವ ವಿಶ್ವಾಸಿಗಳು ದೇವರ ಸ್ವರಕ್ಕೆ ಗೌರವ ಕೊಡಬೇಕು.KanCCh 300.2
ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಒಬ್ಬ ವ್ಯಕ್ತಿಯ ನಿರ್ಣಯವನ್ನು ಒಪ್ಪಿಕೊಳ್ಳಬೇಕೆಂದುದೇವರ ವಾಕ್ಯವು ಅನುಮತಿಸುವುದಿಲ್ಲ ಅಥವಾ ಅವನು ಸಭೆಯ ಅಭಿಪ್ರಾಯಗಳಿಗೆವಿರುದ್ಧವಾಗಿ ತನ್ನ ಅಭಿಪ್ರಾಯಗಳನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುವುದಕ್ಕೆ ದೇವರವಾಕ್ಯವು ಸಮ್ಮತಿಸುವುದಿಲ್ಲ. ಸಭೆಯಲ್ಲಿ ನೀತಿ ನಿಯಮಗಳು, ಶಿಸ್ತು ಹಾಗೂ ಆಡಳಿತವ್ಯವಸ್ಥೆ ಇಲ್ಲದಿದ್ದಲ್ಲಿ, ಅದು ಕ್ರಿಸ್ತನಲ್ಲಿ ಒಂದೇಶರೀರವಾಗಿ ಉಳಿಯುವುದಿಲ್ಲ. ಬದಲಾಗಿಒಡೆದು ಹೋಗುತ್ತದೆ. ತಾವುಹೇಳಿದ್ದೇ ಸರಿ, ತಮಗೆ ವಿಶೇಷವಾಗಿ ದೇವರು ಮಾರ್ಗದರ್ಶನನೀಡಿದ್ದಾನೆಂದು ಹೇಳಿಕೊಳ್ಳುವ ಸಭಿಕರು ಯಾವಾಗಲೂ ಇರುತ್ತಾರೆ. ಪ್ರತಿಯೊಬ್ಬರೂತಮ್ಮದೇ ಆದ ಸಿದ್ಧಾಂತ, ತಮ್ಮದೇ ಆದ ಅಭಿಪ್ರಾಯ ಹೊಂದಿದ್ದು, ತಮ್ಮ ಅಭಿಪ್ರಾಯಗಳುದೇವರವಾಕ್ಯಕ್ಕೆ ಅನುಗುಣವಾಗಿವೆ ಎಂದು ಹೇಳಿಕೊಳ್ಳುತ್ತಾರೆ. ಪ್ರತಿಯೊಬ್ಬರ ನಂಬಿಕೆಯುಭಿನ್ನವಾಗಿದ್ದಾಗ್ಯೂ, ತಮಗೆ ದೇವರಿಂದ ವಿಶೇಷ ದರ್ಶನವಾಯಿತೆಂದು ಹೇಳಿಕೊಳ್ಳುತ್ತಾರೆ.ಇವರು ಸಭೆಯೆಂಬ ದೇಹದಿಂದ ದೂರವಾಗಿ, ಪ್ರತಿಯೊಬ್ಬರೂ ತಾವೇ ಪ್ರತ್ಯೇಕಸಭೆಯಾಗುತ್ತಾರೆ. ಇದು ಸರಿಯಿಲ್ಲದಿದ್ದರೂ, ತಾವು ದೇವರಿಂದಲೇ ನಡೆಸಲ್ಪಟ್ಟಿದ್ದೇವೆಂದುಅವರು ಹೇಳಿಕೊಳ್ಳುತ್ತಾರೆ.KanCCh 300.3
ನಮ್ಮ ರಕ್ಷಕನಾದ ಯೇಸುಕ್ರಿಸ್ತನು ಸಭೆಗೆ ಸಲಹೆ ಕೊಡುವುದರೊಂದಿಗೆ “ಎಲ್ಲಿಇಬ್ಬರಾಗಲಿ, ಮೂವರಾಗಲಿ ನನ್ನ ಹೆಸರಿನಲ್ಲಿ ಕೂಡಿ ಒಟ್ಟಾಗಿ ನನ್ನನ್ನು ಏನು ಬೇಡಿಕೊಂಡರೂ, ಅದು ಅವರಿಗೆ ಕೊಡಲ್ಪಡುವುದು ಎಂದು ವಾಗ್ದಾನ ಮಾಡಿದ್ದಾನೆ.ನಾವು ಇತರರೊಂದಿಗೆ ಒಂದಾಗಿರಬೇಕಲ್ಲದೆ, ಒಂದು ನಿರ್ದಿಷ್ಟವಾದ ಉದ್ದೇಶಕ್ಕಾಗಿಬೇಡಿಕೊಳ್ಳುವಾಗ ನಮ್ಮ ಬಯಕೆಗಳೂ ಸಹ ಒಂದೇ ಆಗಿರಬೇಕೆಂದು ಕ್ರಿಸ್ತನು ತಿಳಿಸುತ್ತಾನೆ.ಏಕ ಮನಸ್ಸಿನಿಂದ ಪ್ರಾರ್ಥಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲ್ಪಟ್ಟಿದೆ. ವೈಯಕ್ತಿಕವಾಗಿಮಾಡುವ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆ. ಆದರೆ ಈ ಸಂದರ್ಭದಲ್ಲಿಯೇಸುಸ್ವಾಮಿಯು ಈ ಲೋಕದಲ್ಲಿ ಹೊಸದಾಗಿ ರಚಿಸಲ್ಪಟ್ಟ ಸಭೆಗೆ ವಿಶೇಷಪರಿಣಾಮಬೀರುವ ಪ್ರಮುಖ ಪಾಠಗಳನ್ನು ತಿಳಿಸುತ್ತಾನೆ, ವಿಶ್ವಾಸಿಗಳು ತಾವು ಯಾವುದಕ್ಕಾಗಿಬೇಡಿಕೊಳ್ಳುತ್ತೇವೆ ಹಾಗೂ ಪ್ರಾರ್ಥಿಸುತ್ತೇವೆ ಎಂಬ ವಿಷಯಗಳ ಬಗ್ಗೆ ಸಹಮತಹೊಂದಿರಬೇಕು. ನಮ್ಮ ಬೇಡಿಕೆಗಳು ಕೇವಲ ಮನಸ್ಸಿನ ಆಲೋಚನೆಗಳು ಮತ್ತುಅವುಗಳ ಪ್ರಯೋಗವಾಗಿರಬಾರದು. ಯಾಕೆಂದರೆ ಇವು ವಂಚನೆಗೆ ಒಳಗಾಗುವಸಾಧ್ಯತೆಯಿದೆ. ಆದರೆ ನಾವು ಮಾಡುವ ಭಿನ್ನಹಗಳು ಅನೇಕ ವ್ಯಕ್ತಿಗಳು ಒಂದೇವಿಷಯದಮೇಲೆಕೇಂದ್ರೀಕೃತವಾಗಿರುವ ಕಳಕಳಿಯುಳ್ಳ ಬೇಡಿಕೆಯಾಗಿರಬೇಕು.KanCCh 300.4
ಕ್ರೈಸ್ತ ಸಭೆಯು ಮಾನವರ ರಕ್ಷಣೆಗಾಗಿ ದೇವರಿಂದ ನೇಮಿಸಲ್ಪಟ್ಟ ಒಂದುಸೇವಾಸಂಸ್ಥೆಯಾಗಿದೆ. ಅದು ಅವರ ಸೇವೆಮಾಡಲಿಕ್ಕಾಗಿ ಸ್ಥಾಪಿತವಾಗಿದ್ದು, ಜಗತ್ತಿಗೆಆತನ ಸುವಾರ್ತೆ ಸಾರುವುದು ಸಭೆಯ ದೈವನಿಯಮಿತ ಕಾರ್ಯವಾಗಿದೆ. ಕ್ರೈಸ್ತಸಭೆಯಮೂಲಕ ತನ್ನ ಪರಿಪೂರ್ಣತೆ ಹಾಗೂಸಾಮರ್ಥ್ಯವನ್ನು ಪ್ರತಿಫಲಿಸಬೇಕೆಂಬುದುಆರಂಭದಿಂದಲೂ ದೇವರ ಯೋಜನೆಯಾಗಿದೆ. ಕತ್ತಲೆಯಿಂದ ತನ್ನ ಆಶ್ಚರ್ಯಕರವಾದಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಹಾಗೂ ಮಹಿಮೆಯನ್ನು (1 ಪೇತ್ರನು2:9) ಸಭೆಯ ವಿಶ್ವಾಸಿಗಳು ತೋರಿಸಬೇಕು. ಸಭೆಯು ಕ್ರಿಸ್ತನ ಹೇರಳವಾದ ಕೃಪೆತುಂಬಿರುವ ಖಜಾನೆಯಾಗಿದೆ. ಈ ಕೃಪೆಯು ಸಭೆಯಮೂಲಕ ದೇವರ ಪ್ರೀತಿಯನ್ನುಪರಿಪೂರ್ಣವಾಗಿ ರಾಜತ್ವಗಳಿಗೂ, ಅಧಿಕಾರಿಗಳಿಗೂ ತೋರಿಸಲ್ಪಡಬೇಕಾಗಿದೆ.KanCCh 301.1