Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-43 — ಕ್ರೈಸ್ತ ಸಭೆಯ ಕ್ರಮಬದ್ಧ ವ್ಯವಸ್ಥೆ

    ಕ್ರಿಸ್ತನು ಕೊಟ್ಟ ಆದೇಶ ಹಾಗೂ ವಹಿಸಿದ ಕಾರ್ಯಭಾರವನ್ನು ಯಾರಾದರೂನೆರವೇರಿಸಲೇಬೇಕು; ಹಾಗೂ ಆತನು ಈ ಲೋಕದಲ್ಲಿ ಆರಂಭಿಸಿದ ಕೆಲಸವನ್ನುಯಾರಾದರೂ ಮುಂದುವರಿಸಬೇಕು.ಕ್ರೈಸ್ತಸಭೆಗೆ ಈ ಎರಡು ಜವಾಬ್ದಾರಿಗಳುಕೊಡಲ್ಪಟ್ಟಿವೆ. ಈ ಉದ್ದೇಶಕ್ಕಾಗಿಯೇ ಸಭೆಯುಸುಸಂಘಟಿಸಲ್ಪಟ್ಟಿದೆ.KanCCh 304.1

    ದೇವರ ಸೇವಕರು ಕ್ರಮಬದ್ಧತೆಯನ್ನು ಅನುಸರಿಸಬೇಕು ಹಾಗೂ ತಮ್ಮನ್ನು ತಾವುಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ ತಾನೇ ಅವರು ದೇವರ ಸಭೆಯನ್ನು ಯಶಸ್ವಿಯಾಗಿನಿಯಂತ್ರಿಸಬಹುದುಹಾಗೂ ವ್ಯವಸ್ಥಿತವಾದ ರೀತಿಯಲ್ಲಿ ಸಾಮರಸ್ಯದಿಂದಸೇವೆಮಾಡುವಂತೆ ಇತರರಿಗೆ ಹೇಳಬಹುದು.ಯುದ್ಧಭೂಮಿಯಲ್ಲಿ ಶಿಸ್ತು ಮತ್ತುಕ್ರಮಬದ್ಧ ವ್ಯವಸ್ಥೆಯು ಜಯಗಳಿಸಲು ಹೇಗೆ ಅಗತ್ಯವೋ, ಅದೇರೀತಿ ಕ್ರೈಸ್ತರಾದನಾವು ವೈರಿಯಾದ ಸೈತಾನನಿಗೆ ವಿರುದ್ಧವಾದ ಹೋರಾಟದಲ್ಲಿ ಗೆಲ್ಲಲು ಅವುಅತ್ಯವಶ್ಯವಾಗಿವೆ. ನಾವುಮಾಡುತ್ತಿರುವ ಈ ಹೋರಾಟದಲ್ಲಿ ನಿತ್ಯಜೀವವು ಅಪಾಯದಲ್ಲಿದೆ.KanCCh 304.2

    ದೇವದೂತರು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಸಾಮರಸ್ಯದಿಂದ ಕಾರ್ಯಮಾಡುತ್ತಾರೆ. ಅವರ ಎಲ್ಲಾಕಾರ್ಯಚಟುವಟಿಕೆಗಳಲ್ಲಿ ಒಂದು ಕ್ರಮವಾದ ವ್ಯವಸ್ಥೆಕಂಡುಬರುತ್ತದೆ. ಪರಲೋಕದ ದೇವದೂತರಕ್ರಮಬದ್ಧವ್ಯವಸ್ಥೆ ಹಾಗೂ ಸಾಮರಸ್ಯವನ್ನುನಾವು ಹೆಚ್ಚು ನಿಕಟವಾಗಿ ಅನುಕರಿಸಿದಷ್ಟೂ, ನಮ್ಮ ಪರವಾಗಿ ಅವರಪ್ರಯತ್ನಗಳುಹೆಚ್ಚು ಯಶಸ್ವಿಯಾಗುತ್ತವೆ. ನಾವು ಸಾಮರಸ್ಯವಿಲ್ಲದೆ ಯಾರ ಹತೋಟಿಗೂ ಒಳಪಡದೆಅವ್ಯವಸ್ಥೆಯಿಂದ ಕಾರ್ಯಮಾಡಿದಲ್ಲಿ, ಪರಿಪೂರ್ಣವಾಗಿ ಸಾಮರಸ್ಯದಿಂದ ವರ್ತಿಸುವದೇವದೂತರು ನಮಗಾಗಿ ಯಶಸ್ವಿಯಾಗಿ ಕಾರ್ಯ ಮಾಡಲಾರರು. ದುಃಖಿತರಾದಅವರು ನಮ್ಮನ್ನು ಬಿಟ್ಟುಹೋಗುವರು, ಯಾಕೆಂದರೆ ಎಲ್ಲಿ ಅವ್ಯವಸ್ಥೆ, ಗಲಿಬಿಲಿ ಇರುವುದೋಅದನ್ನು ಆಶೀರ್ವದಿಸಲು ಅವರಿಗೆ ಅಧಿಕಾರ ಕೊಡಲ್ಪಟ್ಟಿಲ್ಲ. ಪರಲೋಕದ ದೇವದೂತರಸಹಕಾರ ಬೇಕೆಂದು ಯಾರು ಬಯಸುತ್ತಾರೋ, ಅವರು ದೇವದೂತರೊಂದಿಗೆಸಾಮರಸ್ಯದಿಂದ ಕಾರ್ಯ ಮಾಡಬೇಕು. ಪರಲೋಕದಿಂದ ಉನ್ನತವಾದ ವಿಚಾರಹೊಂದಿರುವರು ತಮ್ಮೆಲ್ಲಾ ಪ್ರಯತ್ನಗಳಲ್ಲಿ ಶಿಸ್ತು ಕ್ರಮಬದ್ಧತೆ ಹಾಗೂ ಐಕ್ಯತೆಯನ್ನುಉತ್ತೇಜಿಸುತ್ತಾರೆ. ಆಗ ದೇವದೂತರು ಅವರಿಗೆ ಸಹಕಾರ ನೀಡುವರು. ಆದರೆ ಎಲ್ಲಿಅವ್ಯವಸ್ಥೆ, ಗೊಂದಲ, ಅನುಚಿತ ನಡವಳಿಕೆ, ಲೋಪದೋಷಗಳು ಕಂಡುಬರುವವೋ,ಅಲ್ಲಿ ದೇವದೂತರು ಎಂದೆಂದಿಗೂ ತಮ್ಮ ನೀಡುವುದಿಲ್ಲ. ಇಂತಹ ಕೆಟ್ಟಗುಣಗಳು ನಮ್ಮನ್ನು ದುರ್ಬಲಗೊಳಿಸಿ, ನಮ್ಮ ಧೈರ್ಯವನ್ನು ಕುಂದಿಸಿ ಸೇವೆಯನ್ನುಯಶಸ್ವಿಯಾಗಿ ಮಾಡುವುದನ್ನು ತಡೆಗಟ್ಟಲುಸೈತಾನನು ಮಾಡುವ ಪ್ರಯತ್ನಗಳಫಲಿತಾಂಶವಾಗಿವೆ.KanCCh 304.3

    ವ್ಯವಸ್ಥೆ ಹಾಗೂ ಭಿನ್ನಾಭಿಪ್ರಾಯವಿಲ್ಲದೆ ಸಾಮರಸ್ಯವಿರುವಲ್ಲಿ ಮಾತ್ರ ಜಯದೊರೆಯುತ್ತದೆಂದು ಸೈತಾನನಿಗೆ ಚೆನ್ನಾಗಿ ತಿಳಿದಿದೆ. ಪರಲೋಕಕ್ಕೆಸಂಬಂಧಪಟ್ಟಿರುವುದೆಲ್ಲವೂ ಪರಿಪೂರ್ಣ ವ್ಯವಸ್ಥೆಯಿಂದ ಕೂಡಿದೆ ಎಂದು ಅವನುಚೆನ್ನಾಗಿ ಬಲ್ಲನು. ಕ್ರೈಸ್ತರನ್ನುಪರಲೋಕದಿಂದ ಸಾಧ್ಯವಾದಷ್ಟು ದೂರದಲ್ಲಿರಿಸಲುಸೈತಾನನು ತನ್ನೆಲ್ಲಾ ಪ್ರಯತ್ನ ಮಾಡುತ್ತಾನೆ; ಆದುದರಿಂದ ಅವನು ದೇವಜನರನ್ನೂಸಹ ಮೋಸಗೊಳಿಸಿ ಕ್ರಮಬದ್ಧ ವ್ಯವಸ್ಥೆ ಹಾಗೂ ತಮ್ಮನ್ನುಹತೋಟಿಯಲ್ಲಿಡುವುದುಆತ್ಮಿಕತೆಗೆ ವೈರಿಗಳೆಂದು ಅವರು ನಂಬುವಂತೆ ಮಾಡುತ್ತಾನೆ. ಅಲ್ಲದೆ ಪ್ರತಿಯೊಬ್ಬರೂಸಹ ತಮ್ಮದೇ ಆದ ಮಾರ್ಗದಲ್ಲಿ ನಡೆಯುವುದು ಮತ್ತು ಸಾಮರಸ್ಯ ಹಾಗೂಕ್ರಮಬದ್ಧವ್ಯವಸ್ಥೆ ಸ್ಥಾಪಿಸಬೇಕೆಂದು ಶ್ರಮವಹಿಸಿ ಐಕ್ಯತೆಯಿಂದಿರುವ ಕ್ರೈಸ್ತರಿಗಿಂತಬೇರೆಯಾಗಿರುವುದುಮಾತ್ರ ಅವರಿಗೆ ಏಕಮಾತ್ರ ರಕ್ಷಣೆಯಾಗಿದೆ ಎಂದು ಸೈತಾನನು ಅವರನ್ನು ವಂಚಿಸುತ್ತಾನೆ.ಶಿಸ್ತುಬದ್ಧಕ್ರಮವಾದ ವ್ಯವಸ್ಥೆ ಸ್ಥಾಪಿಸುವ ಎಲ್ಲಾ ವಿಧವಾದ ಪ್ರಯತ್ನಗಳುಅಪಾಯಕಾರಿಯೂ ಮತ್ತು ತಮ್ಮ ಹಕ್ಕುಬಾಧ್ಯತೆಯ ಸ್ವಾತಂತ್ರಕ್ಕೆ ಅಡ್ಡಿಯಾಗಿದೆಎಂದು ಅವರು ಪರಿಗಣಿಸುತ್ತಾರೆ ಮತ್ತು ತಮ್ಮ ಮೇಲೆ ಸಭೆಯು ತೋರಿಸುವ ದಬ್ಬಾಳಿಕೆಎಂದು ಅವರು ನೆನಸುತ್ತಾರೆ. ಮೋಸಕ್ಕೊಳಗಾದ ಇವರು ತಾವು ಸ್ವತಂತ್ರವಾಗಿಆಲೋಚಿಸುವುದು ಹಾಗೂ ನಡೆದುಕೊಳ್ಳುವುದು ತಮ್ಮ ಸಾಮರ್ಥ್ಯವೆಂದುಕೊಚ್ಚಿಕೊಳ್ಳುತ್ತಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಅವರು ಯಾರಿಗೂಹೊಣೆಗಾರರಲ್ಲ. ಕ್ರೈಸ್ತ ಸಹೋದರರಾಗಿರುವ ಇತರವಿಶ್ವಾಸಿಗಳಿಗಿಂತ ಸ್ವತಂತ್ರವಾಗಿದ್ದು,ತಮ್ಮದೇ ಆದ ದಾರಿಯಲ್ಲಿ ನಡೆಯುವವರು, ತಾವುಮಾಡುವುದೇ ಸರಿಯೆಂದುಭಾವಿಸುವುದು ಸೈತಾನನ ವಿಶೇಷ ಕಾರ್ಯವಾಗಿದೆ ಎಂದು ಶ್ರೀಮತಿವೈಟಮ್ಮನವರಿಗೆದೇವರು ದರ್ಶನದಲ್ಲಿ ತೋರಿಸಿದ್ದಾನೆ.KanCCh 305.1

    ತನ್ನ ಸಭೆಯನ್ನು ಭೂಲೋಕದಲ್ಲಿ ಬೆಳಕಿನ ಸಂಪರ್ಕ ಮಾಧ್ಯಮವಾಗಿ ದೇವರುಇಟ್ಟಿದ್ದಾನೆ. ಸಭೆಯ ಮೂಲಕ ತನ್ನ ಇಚ್ಛೆ ಹಾಗೂ ಉದ್ದೇಶಗಳನ್ನು ತಿಳಿಸುತ್ತಾನೆ.ಸಭೆಗಿಂತ ಬೇರೆಯಾದ ಮತ್ತು ವಿರುದ್ಧವಾದ ಸಂಗತಿಗಳನ್ನು ದೇವರು ತನ್ನ ಸೇವಕರಿಗೆಕೊಡುವುದಿಲ್ಲ. ಅಲ್ಲದೆ ಕ್ರಿಸ್ತನ ದೇಹವಾದ ಸಭೆಯನ್ನು ದೈವೀಕವಾಗಿ ಕತ್ತಲೆಯಲ್ಲಿಟ್ಟು,ಒಬ್ಬನೇ ವ್ಯಕ್ತಿಗೆ ಸಂಪೂರ್ಣಸಭೆಗೆ ತನ್ನ ಚಿತ್ತವನ್ನು ತಿಳಿಸುವ ಜ್ಞಾನವನ್ನೂ ಕೊಡುವುದಿಲ್ಲ.ಬದಲಾಗಿ ದೇವರು ಮಹಾಕೃಪೆಯಿಂದ ತನ್ನ ಸೇವೆಯಮುಂದುವರಿಕೆಗೆ ಆರಿಸಲ್ಪಟ್ಟಸೇವಕರು ತಮಗಿಂತ ಇತರರ ಮೇಲೆ ಹೆಚ್ಚು ಭರವಸೆಹೊಂದಿರುವಂತೆ ಅವರನ್ನುಸಭೆಯಲ್ಲಿ ನೇಮಿಸಿದ್ದಾನೆ.KanCCh 305.2