Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಭೆಯ ಆಸ್ತಿ

    ಯಾವುದೇ ಊರಿನಲ್ಲಿ ಜನರು ಕ್ರಿಸ್ತನ ಸುವಾರ್ತೆಕೇಳಲು ಆಸಕ್ತಿತೋರಿದಾಗ, ಅದನ್ನು ಮುಂದುವರೆಸಲು ಶ್ರಮಪಡಬೇಕು. ಅಲ್ಲಿ ಬಹಳ ಪ್ರಾಮಾಣಿಕವಾಗಿಯೂ ಹಾಗೂಶ್ರದ್ಧಾಪೂರ್ವಕವಾಗಿಯೂ ಸೇವೆ ಮಾಡಿ ದೇವಾರಾಧನೆಗಾಗಿ ಆಲಯವು ಕಟ್ಟಲ್ಪಡಬೇಕು.ಈ ದೇವಾಲಯವು ದೇವರ ಸಬ್ಬತ್ತಿನ ಸ್ಮಾರಕದ ಗುರುತಾಗಿಯೂ ಹಾಗೂ ಆತ್ಮಿಕಕತ್ತಲೆಯ ನಡುವೆ ಬೆಳಕಾಗಿಯೂ ಇರಬೇಕು. ಅನೇಕ ಸ್ಥಳಗಳಲ್ಲಿ ಇಂತಹ ದೇವಾಲಯಗಳುಸತ್ಯದಸಾಕ್ಷಿಗಳಾಗಿ ಕಟ್ಟಲ್ಪಡಬೇಕು.KanCCh 309.5

    ಸಭೆಗೆ ಸಂಬಂಧಪಟ್ಟ ವಿಷಯಗಳನ್ನು ಅಪೂರ್ಣವಾದ ಸ್ಥಿತಿಯಲ್ಲಿ ಬಿಡಬಾರದು.ಆಲಯಕಟ್ಟಲು ಬೇಕಾದ ಸ್ಥಳವನ್ನು ಕೊಂಡುಕೊಳ್ಳಲು ವ್ಯವಸ್ಥೆ ಮಾಡಬೇಕು. ಈಕಾರ್ಯಕ್ಕೆ ಯಾವುದೇ ಅಡ್ಡಿ ಆತಂಕವಿರಬಾರದು. ದೇವರ ಸೇವೆಗಾಗಿ ವ್ಯಕ್ತಿಗಳುಸಮರ್ಪಿಸುವ ಹಣವಲ್ಲದೆ, ಇತರ ವಸ್ತುಗಳು ಸೈತಾನನ ಕಾರ್ಯಕ್ಕೆ ಉಪಯೋಗವಾಗದಂತೆದೇವರ ಆಲಯಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ಶೀಘ್ರವಾಗಿ ಮಾಡಬೇಕು.KanCCh 310.1

    ದೇವಜನರು ವಿವೇಕದಿಂದ ಕಾರ್ಯ ಮಾಡಬೇಕು ಹಾಗೂ ಸಭೆಯು ಅವರಿಗೆಒಪ್ಪಿಸಿದ ಕೆಲಸಗಳನ್ನು ಅಪೂರ್ಣವಾಗಿ ಬಿಡಬಾರದು. ಅವರು ಮಾಡಬೇಕಾದಕಾರ್ಯಗಳೆಲ್ಲವನ್ನೂ ಮಾಡಿದ ನಂತರ, ದೇವರು ಇವುಗಳನ್ನು ನಡೆಸಿಕೊಡುವಂತೆಆತನಲ್ಲಿ ಭರವಸವಿಡಬೇಕು. ಇದು ಸೈತಾನನು ಕಾರ್ಯ ಮಾಡುವ ಸಮಯವಾಗಿದೆ.ಭವಿಷ್ಯವು ಬಹಳ ಆತಂಕಕಾರಿಯಾಗಿದೆ. ಅವನ ಯೋಜನೆಗಳಿಗೆ ವಿರುದ್ಧವಾಗಿ ನಾವುದೃಢವಾಗಿ ನಿಲ್ಲುವಂತೆ ಸಭೆಯು ಎಚ್ಚರಗೊಂಡು ಏನಾದರೂ ಮಾಡಬೇಕಾದ ಸಮಯವುಇದಾಗಿದೆ. ತನ್ನ ಜನರು ಸಭೆಯ ಕಾರ್ಯಗಳನ್ನು ವ್ಯವಸ್ಥಿತವಾದ ರೀತಿಯಿಲ್ಲದೆKanCCh 310.2

    ಬೇಕಾಬಿಟ್ಟಿಯಾಗಿ ನಡೆಸುವುದು ದೇವರಿಗೆ ಮೆಚ್ಚುಗೆಯಾಗುವುದಿಲ್ಲ. ಇದರಿಂದ ಸೈತಾನನಿಗೆಸಭೆಯ ಕಾರ್ಯಗಳನ್ನು ನಿಯಂತ್ರಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.KanCCh 310.3