Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕ್ಯಾಂಪ್ ಮೀಟಿಂಗ್‌ಗಳು

    ದೇವಜನರು ಸೇರುವ ಕೂಟಗಳಲ್ಲಿ ಭಾಗವಹಿಸಲು ಎಲ್ಲರೂ ಹೆಚ್ಚಿನ ಪ್ರಯತ್ನಮಾಡಬೇಕು. ದೇವರ ಸಂದೇಶ ಕೇಳುವ ಅವಕಾಶ ಕಳೆದುಕೊಳ್ಳುವುದಕ್ಕಿಂತಲೂ ನಿಮ್ಮದೈನಂದಿನ ವ್ಯಾಪಾರ ವ್ಯವಹಾರ, ಕೆಲಸಕಾರ್ಯಗಳಲ್ಲಿ ನಷ್ಟ ಅನುಭವಿಸುವುದು ಎಷ್ಟೋಉತ್ತಮ. ಆತ್ಮೀಕವಾಗಿ ಬಲ ಹೊಂದುವಂತ ಯಾವುದೇ ಅವಕಾಶವನ್ನೂ ನೀವುಕಳೆದುಕೊಳ್ಳಬಾರದು. ದೈವೀಕವಾದ ಪ್ರತಿಯೊಂದು ಬೆಳಕು ನಿಮಗೆ ಬೇಕಾಗಿದೆ. ನೀವುಸಾತ್ವಿಕತೆ, ವಿನಯ ಹಾಗೂ ಭಯಭಕ್ತಿಯಿಂದ ನಿಮ್ಮಲ್ಲಿರುವ ನಿರೀಕ್ಷೆಯನ್ನುಬಲಪಡಿಸಿಕೊಳ್ಳಬೇಕು. ಅಂತಹ ಯಾವುದೇ ಅವಕಾಶವನ್ನು ನೀವುವ್ಯರ್ಥಮಾಡಿಕೊಳ್ಳಬಾರದು.KanCCh 310.4

    ಕ್ಯಾಂಪ್‌ ಮೀಟಿಂಗ್‌ನಿಂದ ಆಶೀರ್ವಾದ ಹೊಂದುವುದಕ್ಕಾಗಿ ಯಾರೂ ಸಹಬೋಧಕರು ಅಥವಾ ಸುವಾರ್ತಾಸೇವಕರ ಮೇಲೆ ಆತುಕೊಳ್ಳಬಾರದು. ತನ್ನ ಜನರು ಈ ವಿಷಯದಲ್ಲಿ ಬೋಧಕರ ಮೇಲೆ ಆತುಕೊಳ್ಳಬಾರದೆಂದು ದೇವರು ಇಚ್ಛಿಸುತ್ತಾನೆ.ಸಹಾಯಕ್ಕಾಗಿ ಮನುಷ್ಯರನ್ನು ನೆಚ್ಚಿಕೊಂಡು ವಿಶ್ವಾಸಿಗಳು ಆತ್ಮೀಕವಾಗಿಬಲಹೀನರಾಗುವುದನ್ನು ದೇವರು ಬಯಸುವುದಿಲ್ಲ. ಅವರು ಚಿಕ್ಕಮಕ್ಕಳಂತೆಅಸಹಾಯಕರಾಗಿ ಇತರರ ಆಸರೆ ಪಡೆದುಕೊಳ್ಳಬಾರದು. ದೇವರ ಕೃಪೆಯಪಾರುಪತ್ಯಗಾರರಾದ ಪ್ರತಿಯೊಬ್ಬ ಸಭಾಸದಸ್ಯರು ತಮಗೆ ವೈಯಕ್ತಿಕ ಜವಾಬ್ದಾರಿ ಇದೆಎಂಬ ಭಾವನೆ ಹೊಂದಿರಬೇಕು.KanCCh 310.5

    ಯಾವುದೇ ಕ್ಯಾಂಪ್‌ ಮೀಟಿಂಗ್ ಅಥವಾ ಸುವಾರ್ತಾಕೂಟಗಳ ಯಶಸ್ಸು ಪರಿಶುದ್ಧಾತ್ಮನಪ್ರಸನ್ನತೆಯ ಮೇಲೆ ಆಧಾರಗೊಂಡಿದೆ. ಆತನ ಸುರಿಸುವಿಕೆಗಾಗಿ ನಾವೆಲ್ಲರೂಪ್ರಾಮಾಣಿಕತೆಯಿಂದಲೂ, ಭಯಭಕ್ತಿಯಿಂದಲೂ ಪ್ರಾರ್ಥಿಸಬೇಕು. ದೇವರ ಸೇವೆಗಿರುವಎಲ್ಲಾ ಅಡೆತಡೆಗಳನ್ನು ಸಾಧ್ಯವಾದಷ್ಟು ನಾವು ತೆಗೆದು ಹಾಕಬೇಕು. ಸಭಾಸದಸ್ಯರಲ್ಲಿಪರಸ್ಪರದ್ವೇಷಭಾವನೆ, ಭಿನ್ನಾಭಿಪ್ರಾಯವಿದ್ದಲ್ಲಿ ಪರಿಶುದ್ಧಾತ್ಮನ ಶಕ್ತಿಯು ಎಂದಿಗೂಕೊಡಲ್ಪಡುವುದಿಲ್ಲ. ದ್ವೇಷ, ಹೊಟ್ಟೆಕಿಚ್ಚು, ಇತರರ ಬಗ್ಗೆ ಕೆಟ್ಟ ಮಾತುಗಳನ್ನಾಡುವುದುಹಾಗೂ ಕೆಟ್ಟದ್ದಾಗಿ ಅನುಮಾನ ಪಡುವುದು ಸೈತಾನನಿಂದ ಬರುತ್ತವೆ. ಇಂತಹ ಕೆಟ್ಟಗುಣಗಳುಪವಿತ್ರಾತ್ಮನ ಕಾರ್ಯಕ್ಕೆ ವಿರುದ್ಧವಾಗಿ ಪರಿಣಾಮಕಾರಿಯಾದ ತಡೆಒಡ್ಡುತ್ತವೆ.KanCCh 311.1

    ಕ್ರೈಸ್ತ ಸಭೆಗಿಂತ ಹೆಚ್ಚು ಪ್ರಿಯವಾದದ್ದು ಈ ಲೋಕದಲ್ಲಿ ದೇವರಿಗೆ ಬೇರಾವುದೂಇಲ್ಲ. ಬೇರೆಲ್ಲವುಗಳಿಗಿಂತಲೂ ತನ್ನ ಸಭೆಯನ್ನು ಆತನು ಬಹಳ ಎಚ್ಚರಿಕೆಯಿಂದರಕ್ಷಿಸುತ್ತಾನೆ. ತನ್ನ ಸೇವೆ ಮಾಡುವವರಿಗೆ ಅಡ್ಡಿಯುಂಟು ಮಾಡುವ ಕಾರ್ಯವುದೇವರ ಮನಸ್ಸನ್ನು ಬೇರೆಲ್ಲವುಗಳಿಗಿಂತ ಹೆಚ್ಚಾಗಿ ದುಃಖಪಡಿಸುತ್ತದೆ. ಸೈತಾನನು ದೇವರಸೇವಕರನ್ನು ಸೇವೆ ಮಾಡದಂತೆ ಕಟುವಾಗಿ ಟೀಕಿಸಿ, ನಿರಾಶೆಗೊಳಿಸುತ್ತಾನೆ. ಸೈತಾನನಇಂತಹ ಕಾರ್ಯಕ್ಕೆ ಸಹಾಯ ಮಾಡುವ ಸಭಿಕರು ದೇವರಿಗೆ ಈ ವಿಷಯದಲ್ಲಿ ಲೆಕ್ಕಕೊಡಬೇಕಾಗಿದೆ.KanCCh 311.2

    *****

    Larger font
    Smaller font
    Copy
    Print
    Contents