Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವಾಲಯದಲ್ಲಿ ಸಭ್ಯತೆಯಿಂದ ವರ್ತಿಸಬೇಕು

    ವಿಶ್ವಾಸಿಗಳು ಆಲಯಕ್ಕೆ ಪ್ರವೇಶಿಸುವಾಗ, ಸಭ್ಯತೆಯಿಂದ ತಮ್ಮ ಸ್ಥಳಗಳಿಗೆ ಮೌನವಾಗಿತೆರಳಬೇಕು. ದಿನನಿತ್ಯದ ವಿಷಯಗಳನ್ನು ಚರ್ಚಿಸುವುದು, ಪಿಸುದನಿಯಲ್ಲಿ ಮಾತಾಡುವುದು,ನಗುವುದು ಮುಂತಾದವುಗಳನ್ನು, ಆರಾಧನೆಗೆ ಮೊದಲು ಅಥವಾ ಅನಂತರವಾಗಲಿಮಾಡಬಾರದು.ದೇವಾಲಯದಲ್ಲಿ ಭಯಭಕ್ತಿಯಿಂದಿರಬೇಕು.KanCCh 312.3

    ದೇವಾರಾಧನೆ ಆರಂಭವಾಗುವುದಕ್ಕೆ ಇನ್ನೂ ಸ್ವಲ್ಪ ಸಮಯವಿದ್ದಲ್ಲಿ, ವಿಶ್ವಾಸಿಗಳುಮೌನವಾಗಿ ಧ್ಯಾನಮಾಡುತ್ತಾ, ಬರುವಂತ ದೈವಸಂದೇಶವು ತಮ್ಮ ಹೃದಯದಲ್ಲಿಪಾಪದಅರುಹನ್ನು ಹುಟ್ಟಿಸಿ ಸಂಪೂರ್ಣ ಪರಿವರ್ತನೆ ತರುವಂತಿರಲೆಂದು ಪ್ರಾರ್ಥಿಸಬೇಕು.ದೇವದೂತರುಆಲಯದಲ್ಲಿದ್ದಾರೆಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.ಪ್ರಾರ್ಥನೆಯಲ್ಲಿ ನಿರತರಾಗದೆ ದುಗುಡ ಮನಸ್ಸಿನಿಂದ ಚಡಪಡಿಸುತ್ತಿದ್ದಲ್ಲಿ ನಾವು ದೇವರೊಂದಿಗೆ ಮಾತನಾಡುವ ಮಧುರ ಸಮಯ ಕಳೆದುಕೊಳ್ಳುತ್ತೇವೆ. ದೇವಾಲಯದಲ್ಲಿನಮ್ಮ ಮನಸ್ಸು ಹಾಗೂ ಹೃದಯಗಳು ನೀತಿಸೂರ್ಯನಾದ ಕ್ರಿಸ್ತನ ಕಡೆಗೆ ಸೆಳೆಯಲ್ಪಡಬೇಕು.KanCCh 312.4

    ವಿಶ್ವಾಸಿಗಳು ದೇವಾಲಯಕ್ಕೆ ಬಂದಾಗ, ಕರ್ತನ ಬಗ್ಗೆ ಯಥಾರ್ಥವಾದ ಭಯಭಕ್ತಿ,ಪೂಜ್ಯಭಾವನೆ ಹೊಂದಿ ನಾವು ಆತನ ಸನ್ನಿಧಾನದಲ್ಲಿದ್ದೇವೆಂದು ತಿಳಿದುಕೊಂಡಾಗ,ಮೌನದಲ್ಲಿಯೂ ಸಹ ಒಂದು ರೀತಿಯ ಗಾಂಭೀರ್ಯವಿರುತ್ತದೆ. ಮಾರುಕಟ್ಟೆಯಲ್ಲಿ,ಮನೆಯಲ್ಲಿ ಅಥವಾ ಬೇರೆ ಯಾವ ಸ್ಥಳದಲ್ಲಾಗಲಿ ಮಾತಾಡುವುದು, ನಗುವುದುಅಥವಾ ಪಿಸುಗುಟ್ಟುವುದು ಪಾಪವಲ್ಲ. ಆದರೆ ದೇವಾರಾಧನೆಯಲ್ಲಿ ಇವುಗಳನ್ನು ಮಾಡದೆಭಯಭಕ್ತಿಯಿಂದ ಮೌನವಾಗಿರಬೇಕು. ದೇವರವಾಕ್ಯವನ್ನು ಕೇಳಲು ಮನಸ್ಸನ್ನು ಸಿದ್ಧತೆಮಾಡಿಕೊಂಡಾಗ, ಅದು ಹೃದಯದಲ್ಲಿ ಉತ್ತಮ ಪರಿಣಾಮ ಬೀರುವುದು.KanCCh 313.1

    ಬೋಧಕರು ಗಂಭೀರ ಮುಖಭಾವದಿಂದಲೂ ಮತ್ತು ಭಯಭಕ್ತಿಯಿಂದ ಕೂಡಿದಗಾಂಭೀರ್ಯದಿಂದಲೂ ವೇದಿಕೆಗೆಆಗಮಿಸಬೇಕು. ಬಂದ ತಕ್ಷಣವೇ ಮೌನವಾಗಿಪ್ರಾರ್ಥಿಸಿ ದೇವರ ಸಹಾಯಕ್ಕಾಗಿ ಪ್ರಾಮಾಣಿಕವಾಗಿ ಬೇಡಿಕೊಳ್ಳಬೇಕು. ಇದು ಎಂತಹಪ್ರಭಾವ ಬೀರುತ್ತದಲ್ಲವೇ! ವಿಶ್ವಾಸಿಗಳಲ್ಲಿಯೂ ಸಹ ಗಾಂಭೀರ್ಯ ಹಾಗೂ ಭಯಭಕ್ತಿಉಂಟುಮಾಡಬೇಕು. ಬೋಧಕರು ದೇವರೊಂದಿಗೆ ಮಾತಾಡುತ್ತಿದ್ದರೆ, ಸಂದೇಶ ನೀಡಲುಜನರ ಮುಂದೆ ನಿಲ್ಲುವುದಕ್ಕೆ ಮೊದಲು ತನ್ನನ್ನೇ ಅವರು ದೇವರಿಗೆ ಒಪ್ಪಿಸಿಕೊಡುತ್ತಿದ್ದಾರೆ.ದೇವಾಲಯದಲ್ಲಿ ಎಲ್ಲೆಲ್ಲಿಯೂ ಗಾಂಭೀರ್ಯ ಕಂಡುಬಂದಾಗ, ದೇವದೂತರು ನಮ್ಮಸಮೀಪಕ್ಕೆ ಬರುವರು. ಬೋಧಕರು ಮೌನ ಪ್ರಾರ್ಥನೆ ಮಾಡಿ ದೇವರಸಹಾಯಬೇಡುತ್ತಿರುವಾಗ ದೇವರಿಗೆ ಭಯಪಡುವ ಎಲ್ಲಾ ವಿಶ್ವಾಸಿಗಳೂ ಸಹ ಮೌನವಾಗಿತಲೆಬಾಗಿ ಆತನ ಪ್ರಸನ್ನತೆ ಹಾಗೂ ಕೃಪೆಯು ದೊರಕಿ ಸತ್ಯಸಂದೇಶವು ಬೋಧಕರಬಾಯಿಂದ ಬರುವಂತೆ ಪ್ರಾರ್ಥಿಸಬೇಕು.KanCCh 313.2

    ಆಲಯದಲ್ಲಿ ಮಾಡುವಪ್ರಾರ್ಥನೆ ಹಾಗೂ ಸ೦ದೇಶವುಬೇಸರಗೊಳಿಸುವಂತಿರಬಾರದು. ಎಲ್ಲರೂ ಸಹ ಸಮಯಕ್ಕೆ ಸರಿಯಾಗಿ ಬರಬೇಕು.ನಿಗದಿತ ಸಮಯಕ್ಕಿಂತ ಯಾರಾದರೂ ಹದಿನೈದು ನಿಮಿಷ ತಡವಾಗಿ ಬರುತ್ತಾರೆಂದರೆ,ಅವರಿಗಾಗಿ ಕಾಯಬಾರದು. ಆಲಯದಲ್ಲಿ ಕೇವಲ ಇಬ್ಬರು ವಿಶ್ವಾಸಿಗಳಿದ್ದರೂ, ಅವರುದೇವರ ವಾಗ್ದಾನ ಹೊಂದಿಕೊಳ್ಳುವರು. ಎಷ್ಟೇ ಜನರಿರಲಿ, ಸಾಧ್ಯವಾದಷ್ಟು ನಿಗದಿತಸಮಯಕ್ಕೆ ಆರಾಧನೆ ಆರಂಭಿಸಬೇಕು.KanCCh 313.3