Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನ ವಿಧಾನಗಳನ್ನು ಅನುಸರಿಸಬೇಕು

    ತಪ್ಪು ಮಾಡಿರುವ ಸಭೆಯ ವಿಶ್ವಾಸಿಗಳೊಂದಿಗೆ ವರ್ತಿಸುವಾಗ ದೇವಜನರು ಮತ್ತಾಯ 18ನೇಅಧ್ಯಾಯದಲ್ಲಿ ನಮ್ಮ ರಕ್ಷಕನು ನೀಡಿರುವ ಸಲಹೆಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು.KanCCh 323.1

    ಯೇಸುಕ್ರಿಸ್ತನು ತನ್ನ ಸ್ವಂತರಕ್ತವೆಂಬ ಅಮೂಲ್ಯ ಕ್ರಯದಿಂದ ಮಾನವರನ್ನುಕೊಂಡುಕೊಂಡದ್ದರಿಂದ, ಅವರು ಆತನಿಗೆ ಸೇರಿದವರಾಗಿದ್ದಾರೆ. ತಂದೆಯಾದ ದೇವರುಹಾಗೂ ಮಗನು ಅವರ ಮೇಲೆ ತೋರಿಸಿದ ಪ್ರೀತಿಯಿಂದ ಅವರು ಬಂಧಿಸಲ್ಪಟ್ಟಿದ್ದಾರೆ.ಅಂದಮೇಲೆ ತಪ್ಪುಮಾಡಿರುವ ಆ ವಿಶ್ವಾಸಿಗಳೊಂದಿಗೆ ನಾವು ವರ್ತಿಸುವಾಗ ಎಷ್ಟೊಂದುಎಚ್ಚರಿಕೆಯಾಗಿರಬೇಕಲ್ಲವೇ! ನಮ್ಮ ಸಹ ವಿಶ್ವಾಸಿಗಳು ಕೆಟ್ಟದ್ದನ್ನು ಮಾಡಿರಬಹುದೆಂದುಊಹಾಪೋಹ ಮಾಡಲಿಕ್ಕೆ ನಮಗೆ ಯಾವ ಅಧಿಕಾರವೂ ಇಲ್ಲ. ತಪ್ಪು ಮಾಡಿರುವಸಹೋದರರೊಂದಿಗೆ ವ್ಯವಹರಿಸುವಾಗ ಸಭಾಸದಸ್ಯರು ತಮ್ಮದೇ ಆದ ಪ್ರವೃತ್ತಿ, ಮನಸ್ಸಿನಪ್ರಚೋದನೆ ಅಥವಾ ಇಷ್ಟ ಅನುಸರಿಸಲು ಯಾವುದೇ ಹಕ್ಕಿಲ್ಲ. ತಪ್ಪು ಮಾಡಿದವರ ಬಗ್ಗೆಸಭಾಸದಸ್ಯರು ಯಾವುದೇ ಪೂರ್ವಾಗ್ರಹಪೀಡಿತ ದ್ವೇಷಭಾವನೆ ವ್ಯಕ್ತಪಡಿಸಬಾರದು.ಕರ್ತನಾದ ಯೇಸುವು ನೀಡಿದ ಮಾರ್ಗದರ್ಶನದಂತೆ ನಡೆಯದಿರುವಾಗ ತಪ್ಪುಗಳನ್ನುಮಾಡುತ್ತಾರೆ ಮತ್ತು ಅನ್ಯಾಯ ನಡೆಯುತ್ತದೆ.KanCCh 323.2

    “ನಿನ್ನ ಸಹೋದರನು ತಪ್ಪು ಮಾಡಿದರೆ, ನೀನು ಹೋಗಿ, ನೀನು ಅವನೂ ಇಬ್ಬರೇಇರುವಾಗ ಅವನ ತಪ್ಪನ್ನು ತಿಳಿಸು” ಎಂದು ಕ್ರಿಸ್ತನು ಹೇಳುತ್ತಾನೆ (ಮತ್ತಾಯ 18:15).ಅವನು ಮಾಡಿರುವ ತಪ್ಪನ್ನು ನಾವು ಇತರರಿಗೆ ತಿಳಿಸಬಾರದು. ಒಬ್ಬರಿಗೆ ಹೇಳಿದಾಗ,ಅವರಿಂದ ಮತ್ತೊಬ್ಬರಿಗೆ ಈ ರೀತಿಯಲ್ಲಿ ಆ ವಿಷಯ ಎಲ್ಲರಿಗೂ ತಿಳಿದು ಸಭೆಗೆತೊಂದರೆಯಾಗುತ್ತದೆ. ಇಬ್ಬರು ವ್ಯಕ್ತಿಗಳು ತಮ್ಮಲ್ಲಿಯೇ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು.ಇದು ದೇವರ ಯೋಜನೆಯೂ ಆಗಿದೆ.KanCCh 323.3

    “ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆಹೋಗಬೇಡ; ಅವನು ನಿನ್ನ ಮಾನ ಕಳೆದಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ. ನೋಡಿಕೋ! ವ್ಯಾಜ್ಯವಾಡಿದವನ ಸಂಗಡಲೇಅದನ್ನು ಚರ್ಚಿಸು; ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ” ಎಂದು ಜ್ಞಾನಿಯಾದಸೊಲೊಮೋನನು ಹೇಳುತ್ತಾನೆ (ಜ್ಞಾನೋಕ್ತಿ 25:89). ನಿನ್ನ ಸಹೋದರನು ಮಾಡಿದಪಾಪವನ್ನು ಸಹಿಸಿಕೊಳ್ಳಬಾರದು. ಆದರೆ ಅದನ್ನು ಎಲ್ಲರಿಗೂ ತಿಳಿಯುವಂತೆ ಡಂಗುರಹೊಡೆದು ಸಾರಬಾರದು. ಈ ರೀತಿ ಮಾಡಿದಲ್ಲಿ ಸಮಸ್ಯೆಯು ಕಠಿಣವಾಗುವುದಲ್ಲದೆ, ಆ ಸಹೋದರನಿಗೆ ನೀನು ಮಾಡಿದ್ದು ತಪ್ಪು ಎಂದು ಹೇಳುವುದು ಪ್ರತೀಕಾರದಂತೆಕಂಡುಬರಬಹುದು. ದೇವರವಾಕ್ಯದ ಪ್ರಕಾರ ಅವನನ್ನು ತಿದ್ದಿ ಸರಿಪಡಿಸಬೇಕು.KanCCh 323.4

    ನಿಮಗಾದ ಅನ್ಯಾಯದಿಂದ ನೀವು ಕೋಪಿಸಿಕೊಂಡಲ್ಲಿ, ಅದು ಹಗೆತನಕ್ಕೆ ತಿರುಗದಂತೆನೋಡಿಕೊಳ್ಳಬೇಕು. ನಿಮ್ಮ ಮನಸ್ಸಿನಲ್ಲಿರುವ ಕೋಪ, ಅಸಮಾಧಾನವು ಕೆಟ್ಟ ಮಾತುಗಳಮೂಲಕ ಹೊರಬರದಂತೆ ನೋಡಿಕೊಳ್ಳಿ. ಇದು ಕೇಳುಗರ ಮನಸ್ಸನ್ನು ಮಲಿನಗೊಳಿಸುತ್ತದೆ.ಕೆಟ್ಟಆಲೋಚನೆಗಳು ನಿಮ್ಮಿಬ್ಬರ ಮನಸ್ಸಿನಲ್ಲಿ ವ್ಯಾಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು.ನಿಮಗೆ ತಪ್ಪು ಮಾಡಿದ ಸಹೋದರನ ಬಳಿಗೆ ನಮ್ರತೆ ಹಾಗೂ ಪ್ರಾಮಾಣಿಕ ಮನಸ್ಸುಳ್ಳವರಾಗಿಹೋಗಿ ನಿಮಗಾದ ಅನ್ಯಾಯದ ವಿಷಯದಲ್ಲಿ ಅವನೊಂದಿಗೆ ಮಾತಾಡಿ.ನಿಮ್ಮ ಸಹೋದರನು ಮಾಡಿದ ತಪ್ಪು ಎಷ್ಟೇ ದೊಡ್ಡದಾಗಿರಲಿ, ನಿಮಗಾದ ಅನ್ಯಾಯಮತ್ತು ನಿಮ್ಮಿಬ್ಬರ ನಡುವೆ ಉಂಟಾಗಿರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲುದೇವರು ತಿಳಿಸಿರುವ ಮಾರ್ಗವನ್ನೇ ಉಪಯೋಗಿಸಬೇಕು (ಮತ್ತಾಯ 18:15). ತಪ್ಪುಮಾಡಿದವನೊಂದಿಗೆ ನೀವೇ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಎಷ್ಟೋಸಮಯದಲ್ಲಿ ಯಶಸ್ವಿಯಾಗುತ್ತದೆKanCCh 324.1

    ಕ್ರಿಸ್ತನ ಪ್ರೀತಿ ಹಾಗೂ ಅನುಕಂಪ ತುಂಬಿದ ಹೃದಯದೊಂದಿಗೆ ಅವನ ಬಳಿಹೋಗಿ ಶಾಂತ ಮನಸ್ಸಿನಿಂದ ಅವನ ತಪ್ಪನ್ನು ತಿಳಿಯಪಡಿಸಿ. ಕೋಪದ ಮಾತುಗಳುನಿಮ್ಮ ಬಾಯಿಂದ ಬರಬಾರದು. ಅವನ ಮನಸ್ಸಿಗೆ ಅವನ ತಪ್ಪು ತಿಳಿಯುವ ರೀತಿಯಲ್ಲಿಮಾತಾಡಿ. ನಿಮ್ಮಬ್ಬನು ಸತ್ಯಮಾರ್ಗವನ್ನುತಪ್ಪಿ ಹೋಗಿರಲಾಗಿ, ಮತ್ತೊಬ್ಬನುಅವನನ್ನು ಸನ್ಮಾರ್ಗಕ್ಕೆ ತಂದರೆ- ಒಬ್ಬ ಪಾಪಿಯನ್ನು ತಪ್ಪಾದಮಾರ್ಗದಿಂದತಿರುಗಿಸಿದವನು ಅವನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನುಮುಚ್ಚಿದವನಾದನೆಂದು ತಿಳಿದುಕೊಳ್ಳಿರಿ” ಎಂಬ ವಾಕ್ಯವು ನಿಮ್ಮನೆನಪಲ್ಲಿರಲಿ (ಯಾಕೋಬನು5:20).KanCCh 324.2

    ನಿಮ್ಮ ಸಹೋದರನು ಮಾಡಿದ ತಪ್ಪನ್ನು ಪರಿಹರಿಸುವ ಮಾರ್ಗ ಹುಡುಕಿ, ಅವನಿಗೆನಿಮ್ಮ ಕೈಲಾದ ಸಹಾಯಮಾಡುವುದು ನಿಮ್ಮ ಕರ್ತವ್ಯ. ಸಭೆಯಲ್ಲಿ ಶಾಂತಿ ಹಾಗೂಐಕ್ಯತೇಉಳಿಸಲು ಇದು ನಿಮಗೆ ದೊರೆತ ಒಂದು ಸದವಕಾಶವೆಂದು ತಿಳಿದುಕೊಳ್ಳಬೇಕು.ನಿಮ್ಮ ಮಾತನ್ನು ಆ ಸಹೋದರನು ಕೇಳಿ ತನ್ನ ತಪ್ಪನ್ನು ಒಪ್ಪಿಕೊಂಡಲ್ಲಿ, ಒಬ್ಬ ಸಹೋದರನನ್ನುಸಂಪಾದಿಸಿಕೊಂಡಂತಾಗುವುದು (ಮತ್ತಾಯ 18:15).KanCCh 324.3

    ತಪ್ಪು ಮಾಡಿದವನು ಮತ್ತು ಆ ತಪ್ಪಿನಿಂದ ನೋವು ಅನುಭವಿಸಿದವನು- ಇವರಿಬ್ಬರನಡುವಣ ಮಾತುಕತೆಯಲ್ಲಿ ಸಮಸ್ತ ಪರಲೋಕವೇ ಆಸಕ್ತಿ ತೋರಿಸುತ್ತದೆ.ತಪ್ಪು ಮಾಡಿದವನು ತನ್ನ ತಪ್ಪನ್ನು ಒಪ್ಪಿ, ತನ್ನ ಸಹೋದರನ ಮತ್ತು ದೇವರ ಕ್ಷಮೆ ಕೇಳಿದಾಗ,ಪರಲೋಕದ ದೈವೀಕಬೆಳಕು ಅವನ ಹೃದಯವನ್ನು ತುಂಬುವುದು. ಎಲ್ಲಾ ಸಮಸ್ಯೆಮುಕ್ತಾಯವಾಗುವುದು ಹಾಗೂ ಅವರಿಬ್ಬರ ನಡುವಣ ಗೆಳೆತನ ಮತ್ತು ವಿಶ್ವಾಸ ಪುನಃಸ್ಥಾಪಿತವಾಗುವುದು. ಪ್ರೀತಿಯೆಂಬ ಮುಲಾಮು ತಪ್ಪಿನಿಂದಾದ ಗಾಯದ ನೋವನ್ನುಹೋಗಲಾಡಿಸುವುದು. ದೇವರಾತ್ಮನು ಅವರಿಬ್ಬರ ಹೃದಯಗಳನ್ನು ಬಂಧಿಸುವುದರಿಂದ,ಪರಲೋಕದಲ್ಲಿ ಈ ವಿಷಯದಲ್ಲಿ ಸಂತೋಷ ಉಂಟಾಗುವುದು ಹಾಗೂ ದೇವದೂತರುತಮ್ಮ ಸುಮಧುರ ಸಂಗೀತದಿಂದ ದೇವರನ್ನು ಕೊಂಡಾಡುವರು.KanCCh 324.4

    ಈ ರೀತಿ ತಮ್ಮ ನಡುವಿನ ತಪ್ಪನ್ನು ಸರಿಪಡಿಸಿಕೊಂಡು, ಕ್ರೈಸ್ತ ಅನ್ನೋನ್ಯತೆಯಲ್ಲಿಒಂದಾಗುವವರು ತಾವು ನ್ಯಾಯವನ್ನು ಆಚರಿಸುತ್ತೇವೆ, ಕರುಣೆಯಲ್ಲಿ ಆಸಕ್ತರಾಗಿದ್ದು,ದೇವರಿಗೆ ನಮ್ರತೆಯಿಂದ ನಡೆದುಕೊಳ್ಳುತ್ತೇವೆಂದು ದೇವರ ಮುಂದೆ ಹರಕೆಮಾಡಿಪ್ರಾರ್ಥಿಸಿದಾಗ ಅವರಿಗೆ ಪರಲೋಕದಿಂದ ಹೆಚ್ಚಿನ ಆಶೀರ್ವಾದ ಉಂಟಾಗುತ್ತದೆ.ಅವರು ತಪ್ಪು ಮಾಡಿದಾಗ, ಅದಕ್ಕೆ ಪಶ್ಚಾತ್ತಾಪ ಪಟ್ಟು, ಅದನ್ನು ಒಪ್ಪಿಕೊಂಡು ಆತಪ್ಪನ್ನು ಸರಿಪಡಿಸಿಕೊಳ್ಳುವುದನ್ನು ಮಾಡಬೇಕು. ಇದು ಕ್ರಿಸ್ತನ ಧರ್ಮಶಾಸ್ತ್ರವನ್ನುನೆರವೇರಿಸಿದಂತಾಗುತ್ತದೆ.KanCCh 325.1

    ಆದರೆ ತಪ್ಪು ಮಾಡಿದ ಸಹೋದರನು ನಿಮ್ಮ ಮಾತನ್ನು ಕೇಳದೆ ಹೋದರೆ,ಎರಡುಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು” ಎಂದು ಸತ್ಯವೇದವುತಿಳಿಸುತ್ತದೆ (ಮತ್ತಾಯ 18:16). ದೈವಭಕ್ತಿ ಹೊಂದಿರುವಂತವರನ್ನು ನಿಮ್ಮೊಂದಿಗೆಕರೆದುಕೊಂಡು ಹೋಗಿ, ತಪ್ಪು ಮಾಡಿದವನೊಂದಿಗೆ ಮಾತಾಡಬೇಕು. ಸಭಾವಿಶ್ವಾಸಿಗಳಾದತನ್ನ ಸಹೋದರರು ಒಟ್ಟಾಗಿ ಹೇಳುವ ಮಾತುಗಳಿಗೆ ಅವನು ಕಿವಿಗೊಡಬಹುದು.ಅವನು ತನ್ನ ತಪ್ಪನ್ನು ಒಪ್ಪಿಕೊಂಡಾಗ, ಅವನ ಮನಸ್ಸು ದೇವರ ಬೆಳಕಿನಿಂದಹೊಳೆಯುವುದು.KanCCh 325.2

    ಒಂದುವೇಳೆ ತಪ್ಪು ಮಾಡಿದವನು ಅವರ ಮಾತನ್ನೂ ಕೇಳದೆ ಹೋದರೆ, ಏನುಮಾಡಬೇಕು? ಸಭಾಪಾಲನಾ ಸಮಿತಿಯ ಕೆಲವರು ಅವನನ್ನು ಸಭೆಯ ಸದಸ್ಯತ್ವದಿಂದತೆಗೆದುಹಾಕುವ ಜವಾಬ್ದಾರಿ ಹೊತ್ತುಕೊಳ್ಳಬೇಕೆ? “ಅವನು ಅವರ ಮಾತನ್ನು ಕೇಳದೆಹೋದರೆ,ಸಭೆಗೆ ಹೇಳಬೇಕು” (ಮತ್ತಾಯ 18:17). ಸಭಾ ಪಾಲನಾ ಸಮಿತಿಯು ಈ ವಿಷಯದಲ್ಲಿಕ್ರಮ ತೆಗೆದುಕೊಳ್ಳಲಿ. ಆದರೆ ಸಭೆಯ ಮಾತನ್ನೂ ಕೇಳದೆ ಹೋದರೆ, “ಅವನು ನಿನಗೆಅಜ್ಞಾನಿಯಂತೆಯೂ ಭ್ರಷ್ಟನಂತೆಯೂ ಇರಲಿ” ಎಂದು ಸತ್ಯವೇದವು ತಿಳಿಸುತ್ತದೆ(ಆಂಗ್ಲಭಾಷೆಯ ಬೈಬಲ್‌ನಲ್ಲಿ ‘ಅನ್ಯನಂತೆ ಇರಲಿ’ ಎಂದು ತಿಳಿಸುತ್ತದೆ). ತಪ್ಪು ಮಾಡಿದವನುಸಭೆಯ ಮಾತನ್ನು ಕೇಳದೆ, ತನ್ನನ್ನು ತಿದ್ದುವ ಎಲ್ಲಾ ಪ್ರಯತ್ನಗಳನ್ನು ತಿರಸ್ಕರಿಸಿದರೆ,ಅವನನ್ನು ಸಭೆಯ ಸದಸ್ಯತ್ವದಿಂದ ತೆಗೆದುಹಾಕುವ ಜವಾಬ್ದಾರಿಯು ಸಭೆಯ ಮೇಲಿದೆ.ಆಗ ಅವನ ಹೆಸರನ್ನು ಸಭಾಸದಸ್ಯರ ಪುಸ್ತಕದಿಂದ ತೆಗೆದು ಹಾಕಬೇಕು.KanCCh 325.3