Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂತೋಷದಿಂದ ಕೊಡುವ ಪ್ರತಿಯೊಬ್ಬನಿಗೂ

    ತನ್ನ ಜನರನ್ನು ಐಶ್ವರ್ಯವಂತರನ್ನಾಗಿ ಮಾಡುವುದೇ ದೇವರು ತನ್ನ ಸೇವೆಯಮುಂದುವರಿಕೆಗಾಗಿ ಪ್ರತಿಷ್ಠಿಸಿದ ಏಕೈಕ ಮಾರ್ಗವಾಗಿದೆ. ಆತನು ನಮಗೆ ಮಳೆ ಮತ್ತುಸೂರ್ಯನ ಬೆಳಕು ನೀಡುತ್ತಾನೆ, ಸಸ್ಯಗಳು ಸಮೃದ್ಧಿಯಾಗಿ ಬೆಳೆಯುವಂತೆ ಮಾಡುತ್ತಾನೆ,ಅಲ್ಲದೆ ಸಂಪತ್ತನ್ನು ಗಳಿಸಲಿಕ್ಕೆ ಬೇಕಾದ ಆರೋಗ್ಯ ಹಾಗೂ ಸಾಮರ್ಥ್ಯವನ್ನು ಕೊಡುತ್ತಾನೆ.ನಮ್ಮೆಲ್ಲಾ ಆಶೀರ್ವಾದಗಳು ದೇವರ ಧಾರಾಳವಾದ ಕೈಗಳಿಂದಲೇ ಬಂದಿವೆ. ಇದಕ್ಕೆಪ್ರತಿಯಾಗಿ ನಾವು ಕೃತಜ್ಞತೆ ತೋರಿಸುವ ಸಲುವಾಗಿ ದಶಮಭಾಗ, ಕೃತಜ್ಞತಾಕಾಣಿಕೆ,ಸ್ವಇಚ್ಛೆಯಿಂದ ಕೊಡುವ ಹಾಗೂ ಇತರ ಕಾಣಿಕೆಗಳನ್ನು ಧಾರಾಳವಾಗಿಹಿಂತಿರುಗಿಸಬೇಕೆಂದು ದೇವರು ಬಯಸುತ್ತಾನೆ.KanCCh 331.2

    ಮೋಶೆಯಕಾಲದಲ್ಲಿ ದೇವದರ್ಶನದಗುಡಾರ ಹಾಗೂ ದಾವೀದನ ಕಾಲದಲ್ಲಿದೇವಾಲಯ ಕಟ್ಟಲು ಯೆಹೂದ್ಯರು ಧಾರಾಳವಾಗಿ ನೀಡಿದ ಕಾಣಿಕೆಗೆ ಸಮಾನವಾದಉದಾರತನವನ್ನು ಕ್ರೈಸ್ತರಿಗೆ ಸರಿಗಟ್ಟಲಾಗಿಲ್ಲ. ಅವರು ಆಗ ಐಗುಪ್ತದೇಶದಗುಲಾಮತನದಿಂದ ಬಿಡುಗಡೆ ಹೊಂದಿ ಅಡವಿಯಲ್ಲಿ ಅಲೆದಾಡುತ್ತಿದ್ದರು. ಐಗುಪ್ತರಸೈನ್ಯದ ದಾಳಿಯಿಂದ ಇಸ್ರಾಯೇಲ್ಯರು ಅದೇತಾನೇ ರಕ್ಷಣೆಹೊಂದಿದ್ದರು. ಆಗಲೇಕರ್ತನಾದದೇವರು ಮೋಶೆಗೆ“ಇಸ್ರಾಯೇಲ್ಯರು ನನಗೋಸ್ಕರ ಕಾಣಿಕೆಯನ್ನುಮೀಸಲಿಡಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆಕಾಣಿಕೆಯನ್ನು ತೆಗೆದುಕೊಳ್ಳಬೇಕು” ಎಂದು ಆಜ್ಞಾಪಿಸಿದನು (ವಿಮೋಚನಕಾಂಡ 25:2).KanCCh 331.3

    ದೇವಜನರಾದ ಇಸ್ರಾಯೇಲ್ಯರು ಶ್ರೀಮಂತರಾಗಿರಲಿಲ್ಲ, ಅಲ್ಲದೆ ಅವರಿಗೆ ಮುಂದೆಉತ್ತಮ ಭವಿಷ್ಯವಿದೆ ಎಂದೂಸಹ ಹೇಳಿರಲಿಲ್ಲ. ದೇವರಿಗಾಗಿ ದೇವದರ್ಶನ ಗುಡಾರ ಕಟ್ಟಬೇಕೆಂಬುದೇ ಅವರ ಮುಂದಿದ್ದ ಏಕೈಕ ಗುರಿಯಾಗಿತ್ತು. ದೇವರು ಆಜ್ಞಾಪಿಸಿದ್ದಾನೆ,ಇಸ್ರಾಯೇಲ್ಯರು ಆತನ ಮಾತಿಗೆ ವಿಧೇಯರಾಗಬೇಕಿತ್ತು. ಅವರು ಏನನ್ನೂ ಇಟ್ಟುಕೊಳ್ಳದೆಉದಾರತೆಯಿಂದ ತಮ್ಮಲ್ಲಿದ್ದ ಸಂಪತ್ತಿನಲ್ಲಿ ಹೆಚ್ಚಿನ ಭಾಗವನ್ನು ದೇವರಿಗೆ ಕಾಣಿಕೆಯಾಗಿಕೊಟ್ಟರು. ಮನಃಪೂರ್ವಕವಾಗಿಯೂ ಹಾಗೂ ಸಂತೋಷದಿಂದಲೂ ಅರ್ಪಿಸಿದಾಗಅದು ದೇವರಿಗೆ ಮೆಚ್ಚುಗೆಯಾಯಿತು. ಎಲ್ಲವೂ ದೇವರಿಗೆ ಸೇರಿದ್ದಲ್ಲವೇ? ಇಸ್ರಾಯೇಲ್ಯರಿಗಿದ್ದಎಲ್ಲಾ ಆಸ್ತಿಯೂ ಆತನೇ ಕೊಟ್ಟಿದ್ದಲ್ಲವೇ? ದೇವರು ಕಾಣಿಕೆಕೊಡಿರಿ ಎಂದು ಕೇಳಿದಾಗ,ಆತನು ಕೊಟ್ಟದ್ದನ್ನು ಆತನಿಗೆ ಹಿಂದಿರುಗಿಸಬೇಕಾದದ್ದು ಅವರ ಕರ್ತವ್ಯವಲ್ಲವೇ?KanCCh 331.4

    ಯಾರಿಗೂ ಒತ್ತಾಯ ಮಾಡಬೇಕಾದ ಅಗತ್ಯವಿರಲಿಲ್ಲ. ಇಸ್ರಾಯೇಲ್ಯರುಅಗತ್ಯಕ್ಕಿಂತಲೂ ಹೆಚ್ಚಾಗಿ ಕೊಟ್ಟರು, ಜನರು ಏನನ್ನೂ ತರುವುದು ಬೇಡವೆಂದು ಮೋಶೆಹೇಳಬೇಕಾಯಿತು. ಸೊಲೊಮೋನನ ಕಾಲದಲ್ಲಿ ಯೆರೂಸಲೇಮಿನಲ್ಲಿ ದೇವಾಲಯಕಟ್ಟುವಾಗಲೂ ಜನರು ಮನಃಪೂರ್ವಕವಾಗಿ ಉದಾರವಾಗಿ ಕೊಟ್ಟರು. ಯಾರೂ ಸಹಒಲ್ಲದ ಮನಸ್ಸಿನಿಂದ ಕೊಡಲಿಲ್ಲ. ದೇವಾರಾಧನೆಗಾಗಿ ಒಂದು ಸುಂದರವಾದ ಆಲಯವುಕಟ್ಟಲ್ಪಡುತ್ತದೆಂದು ಇಸ್ರಾಯೇಲ್ಯರು ಬಹಳವಾಗಿಸಂತೋಷಪಟ್ಟದ್ದಲ್ಲದೆ, ಅಗತ್ಯಕ್ಕಿಂತಲೂಹೆಚ್ಚಾಗಿ ಕೊಟ್ಟರು.KanCCh 332.1

    ಇಸ್ರಾಯೇಲ್ಯರಿಗಿಂತಲೂ ಹೆಚ್ಚಿನ ಬೆಳಕು ನಮಗೆ ದೊರೆತಿದೆ ಎಂದು ಹೆಮ್ಮೆ ಪಡುವಕ್ರೈಸ್ತರು ಅವರಿಗಿಂತಲೂ ಕಡಿಮೆಯಾಗಿ ಕೊಡಬೇಕೆ? ಅಂತ್ಯಕಾಲದಲ್ಲಿ ಜೀವಿಸುತ್ತಿರುವಕ್ರೈಸ್ತರಾದ ನಾವು ಅವರು ಕೊಟ್ಟದ್ದರಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀಡಿ ತೃಪ್ತಿಪಡಬೇಕೇ?ಪರಲೋಕದ ವರಗಳನ್ನು ಉಪಯೋಗಿಸುವವರ ಸ್ವಯಂಪ್ರಯತ್ನ ಹಾಗೂ ಕಾಣಿಕೆಗಳಆಧಾರದಲ್ಲಿ ಸತ್ಯ ಹಾಗೂ ಬೆಳಕು ಪ್ರಸರಗೊಂಡು ಇತರ ಕಡೆಗೆ ಹರಡಬೇಕೆಂದುದೇವರು ಮಾಡಿದ್ದಾನೆ. ಕೆಲವರು ಮಾತ್ರ ಬೋಧಕರು ಅಥವಾ ದೇವರ ಸೇವೆಮಾಡಲುದೇವವಿದೇಶಗಳಿಗೆ ಹೋಗಲು ಕರೆಯಲ್ಪಟ್ಟಿದ್ದಾರೆ. ಆದರೆ ಅಪಾರಸಂಖ್ಯೆಯಲ್ಲಿರುವವಿಶ್ವಾಸಿಗಳು ತಮ್ಮ ಹಣ, ತಲಾಂತು ಹಾಗೂ ಇತರ ಸಾಧನಗಳ ಮೂಲಕ ಕ್ರೈಸ್ತಧರ್ಮದಸತ್ಯ ಸಾರುವುದರಲ್ಲಿ ಸಹಕಾರಮಾಡಬೇಕಾಗಿದೆ.KanCCh 332.2

    ಅಯ್ಯೋ, ಯಾವಾಗ ನೋಡಿದರೂ ಹಣಕೊಡಿ, ಹಣಕೊಡಿ ಎಂದು ಕೇಳುತ್ತಾರೆಂದುಕೆಲವರಿಗೆ ಅನಿಸಬಹುದು; ಕೊಟ್ಟುಕೊಟ್ಟು ಸಾಕಾಗಿದೆ ಎಂದು ನೀವು ಹೇಳಬಹುದು.ನೀವೂಸಹ ಅಂತವರಲ್ಲಿ ಒಬ್ಬರೇ? ಅಂತವರಿಗೆ ಶ್ರೀಮತಿ ವೈಟಮ್ಮನವರು “ದೇವರಿಂದಒಳ್ಳೆಯದನ್ನು ಸ್ವೀಕರಿಸುವಾಗ ನಿಮಗೆ ಬೇಸರವಾಗಿದೆಯೇ?” ಎಂದು ಕೇಳುತ್ತಾರೆ.ದೇವರು ನಿಮಗೆ ತನ್ನ ಆಶೀರ್ವಾದ ಕೊಡುವುದನ್ನು ನಿಲ್ಲಿಸಿದಾಗ, ನೀವು ಆತನಿಗೆಕೊಡಬೇಕಾದ ದಶಾಂಶ, ಕಾಣಿಕೆ ಕೊಡುವುದನ್ನು ನಿಲ್ಲಿಸಬಹುದು. ನೀವು ಇತರರನ್ನುಆಶೀರ್ವದಿಸಲು ಶಕ್ತರಾಗುವಂತೆ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ. ಕ್ರಿಸ್ತನಿಂದ ಬರುವ ಆಶೀರ್ವಾದಗಳನ್ನು ಸ್ವೀಕರಿಸುವುದು ನನಗೆ ಬೇಸರವಾದಾಗ, ನನ್ನ ಕಾಣಿಕೆಗಳನ್ನುಕೊಡುವುದಕ್ಕೆ ಬೇಸರವಾಗುತ್ತದೆಂದು ನೀವು ಹೇಳಬಹುದು. ನಮಗೆ ದೊರೆಯುವಎಲ್ಲಾ ಆದಾಯಗಳಲ್ಲಿಯೂ, ದೇವರು ತನಗಾಗಿ ಒಂದುಭಾಗವನ್ನು ಮೀಸಲಿಡುವಂತೆಕೇಳುತ್ತಾನೆ. ಆತನಿಗೆ ಸಲ್ಲಿಸಬೇಕಾದ್ದನ್ನು ನಾವು ಹಿಂತಿರುಗಿಸಿದಾಗ, ಉಳಿದ ಭಾಗವುಆಶೀರ್ವದಿಸಲ್ಪಡುತ್ತದೆ. ಆದರೆ ಆತನಿಗೆ ಕೊಡಬೇಕಾದದ್ದನ್ನು ಕೊಡದಿದ್ದಲ್ಲಿ, ಉಳಿದದ್ದೆಲ್ಲವೂತಕ್ಷಣದಲ್ಲಿ ಅಥವಾ ಅನಂತರವೋ ಶಾಪಕ್ಕೊಳಗಾಗುತ್ತದೆ. ದೇವರಿಗೆ ಸಲ್ಲುವುದನ್ನುಮೊದಲು ಆತನಿಗೆ ಕೊಡಬೇಕು; ಉಳಿದದ್ದೆಲ್ಲವೂ ಅನಂತರದ ಸ್ಥಾನದಲ್ಲಿದೆ.KanCCh 332.3