Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದಶಮಭಾಗವು ದೇವರಿಂದ ಪ್ರತಿಷ್ಟಿಸಲ್ಪಟ್ಟಿದೆ

    ಮನಃಪೂರ್ವಕವಾಗಿ ಕೊಡುವ ಕಾಣಿಕೆ ಹಾಗೂ ದಶಮಭಾಗವು ಸುವಾರ್ತೆ ಸೇವೆಗೆಮೂಲ ಆದಾಯವಾಗಿದೆ. ದೇವರು ನಮಗೆ ಕೊಟ್ಟಿರುವ ಆದಾಯದಲ್ಲಿ ಹತ್ತನೇಒಂದುಭಾಗವನ್ನು ನಮ್ಮಿಂದ ಅಪೇಕ್ಷಿಸುತ್ತಾನೆ. ದೇವರ ಬೇಡಿಕೆಯು ಇತರೆಲ್ಲಾಬೇಡಿಕೆಗಳಿಗಿಂತ ಪ್ರಾಮುಖ್ಯವಾಗಿದೆ ಎಂದು ನಾವೆಲ್ಲರೂ ನೆನಪಿನಲ್ಲಿಡಬೇಕು. ಆತನುನಮಗೆ ಹೇರಳವಾಗಿ ಕೊಡುತ್ತಾನೆ. ಅದರಲ್ಲಿ ಹತ್ತರಲ್ಲೊಂದು ಭಾಗವನ್ನು ತನಗೆಹಿಂದಿರುಗಿಸಬೇಕೆಂದು ದೇವರು ಮನುಷ್ಯನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾನೆ.ತನ್ನ ಭಂಡಾರವನ್ನು ದೇವರು ಕೃಪೆಯಿಂದಲೇ ತನ್ನ ಪಾರುಪತ್ಯಗಾರರ ವಶಕ್ಕೆ ಕೊಟ್ಟಿದ್ದಾನೆ.ಆದರೆ ದಶಮಭಾಗದ ವಿಷಯದಲ್ಲಿ ಅದು ತನ್ನದೆಂದು ಆತನು ಹೇಳುತ್ತಾನೆ. ದೇವರುಮನುಷ್ಯರಿಗೆಕೊಟ್ಟಿರುವ ಆದಾಯಕ್ಕೆ ಸರಿಯಾಗಿ, ನಾವು ಎಲ್ಲದರಲ್ಲಿಯೂ ಆತನಿಗೆನಂಬಿಕೆಯಿಂದದಶಮಭಾಗವನ್ನು ಹಿಂದಿರುಗಿಸಬೇಕು. ಈ ವಿಶಿಷ್ಟವಾದ ವ್ಯವಸ್ಥಾಕ್ರಮವನ್ನುಸ್ವತಃ ಕ್ರಿಸ್ತನೇ ಮಾಡಿದ್ದಾನೆ.KanCCh 333.1

    ಅಂತ್ಯಕಾಲಕ್ಕೆ ಬೇಕಾದ ಸತ್ಯವು ಜಗತ್ತಿನಲ್ಲಿ ಅಂಧಕಾರದಲ್ಲಿರುವ ಮೂಲೆ ಮೂಲೆಗಳಿಗೆಹೋಗಬೇಕು. ಆದರೆ ಇದೇಸತ್ಯವನ್ನು ಮೊದಲು ಮನೆಯಿಂದಲೇ ಸಾರಲು ಆರಂಭಿಸಬೇಕು.ಕ್ರಿಸ್ತನ ಅನುಯಾಯಿಗಳು ಸ್ವಾರ್ಥಿಗಳಾಗಿ ಜೀವಿಸಬಾರದು. ಬದಲಾಗಿಕ್ರಿಸ್ತಯೇಸುವಿನಲ್ಲಿದ್ದಂತೆ ಮನಸ್ಸು ನಮ್ಮಲ್ಲಿಯೂ ಇದ್ದು, ಆತನೊಂದಿಗೆಸಾಮರಸ್ಯದಿಂದಕೆಲಸಮಾಡಬೇಕು. ಆತನು ಈ ಲೋಕದಲ್ಲಿ ಮಾಡಲು ಬಂದಂತ ಮಹಾಕಾರ್ಯವನ್ನುನಾವುಲೋಕದಲ್ಲಿ ಮಾಡಬೇಕೆಂದು ನಮಗೆ ವಹಿಸಿಕೊಟ್ಟಿದ್ದಾನೆ. ತನ್ನಜನರ ಉದ್ಯಮವುಸ್ವಪ್ರಯತ್ನದಿಂದಲೇ ಸ್ವಾವಲಂಬಿಯಾಗಿ ನಡೆಯಬೇಕೆಂಬ ಉದ್ದೇಶದಿಂದ ದೇವರುತನ್ನಜನರಿಗೆ ಹಣಕೂಡಿಸಲು ಒಂದು ಯೋಜನೆ ಹಾಕಿದ್ದಾನೆ. ದಶಾಂಶ ವ್ಯವಸ್ಥೆಯಲ್ಲಿದೇವರ ಸುಂದರವಾದ ಯೋಜನೆಯು ಸರಳವೂ ಹಾಗೂ ಸಮಾನತೆಯಿಂದಲೂಕೂಡಿದೆ. ದಶಾಂಶವು ದೇವರಿಂದಲೇ ನೇಮಿಸಲ್ಪಟ್ಟಿರುವುದರಿಂದ ನಂಬಿಕೆ ಮತ್ತುಧೈರ್ಯದಿಂದ ಅದರ ವಾಗ್ದಾನಗಳನ್ನು ನಾವು ಹಕ್ಕಿನಿಂದ ಪಡೆದುಕೊಳ್ಳಬಹುದು. ಇದನ್ನು ಅರ್ಥಮಾಡಿಕೊಂಡು ಅನುಸರಿಸಲು ಯಾವುದೇ ಪಾಂಡಿತ್ಯಬೇಕಾಗಿಲ್ಲ.ಅಮೂಲ್ಯವಾದ ರಕ್ಷಣಾ ಕಾರ್ಯವನ್ನು ಮುಂದುವರಿಸುವಲ್ಲಿ ನಾವೆಲ್ಲರೂಭಾಗವಹಿಸಬಹುದೆಂಬ ಭಾವನೆ ನಮ್ಮೆಲ್ಲರಲ್ಲಿಯೂ ಇರಬೇಕು. ಪ್ರತಿಯೊಬ್ಬ ಸ್ತ್ರೀ ಪುರುಷ,ಯೌವನಸ್ಥರು ದೇವರಖಜಾಂಚಿಗಳಾಗಬಹುದು ಹಾಗೂ ಹಣಕಾಸಿಗೆ ಸಂಬಂಧಪಟ್ಟವಿಷಯಗಳಲ್ಲಿ ಭಾಗವಹಿಸಬಹುದು. “... ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದಸಂಪಾದನೆಯ ಮೇರೆಗೆ... ಗಂಟು ಮಾಡಿಟ್ಟುಕೊಂಡಿರಬೇಕು” ಎಂದು ಅಪೊಸ್ತಲನಾದಪೌಲನು ಹೇಳುತ್ತಾನೆ (1 ಕೊರಿಂಥ 16:2).KanCCh 333.2

    ಇಂತಹ ವ್ಯವಸ್ಥೆಯಿಂದ ಹೆಚ್ಚಿನ ಉದ್ದೇಶಗಳನ್ನು ಸಾಧಿಸಬಹುದು. ಈ ವ್ಯವಸ್ಥೆಯನ್ನುಪ್ರತಿಯೊಬ್ಬರು ಅನುಸರಿಸಿದಲ್ಲಿ ಅವರೆಲ್ಲರೂ ದೇವರಿಗೆ ಪ್ರಾಮಾಣಿಕರೂ, ಜಾಗರೂಕರೂಆದ ಪಾರುಪತ್ಯಗಾರರಾಗಬಹುದು. ಆಗ ಜಗತ್ತಿಗೆ ಕೊನೆಯ ಸಂದೇಶದ ಎಚ್ಚರಿಕೆಯನ್ನುನೀಡಬೇಕಾದಮಹಾಕಾರ್ಯಕ್ಕೆ ಹಣದ ಯಾವುದೇ ಕೊರತೆ ಇರುವುದಿಲ್ಲ. ಎಲ್ಲರೂದೇವರಿಗೆ ಸಲ್ಲಿಸಬೇಕಾದ ದಶಮಭಾಗ ಹಾಗೂ ಮನಃಪೂರ್ವಕವಾಗಿ ಕಾಣಿಕೆಕೊಡುವಕ್ರಮವನ್ನು ಅನುಸರಿಸಿದಲ್ಲಿ, ದೇವರ ಭಂಡಾರವು ಯಾವಾಗಲೂ ತುಂಬಿ ತುಳುಕುವುದು,ಹಾಗೂ ಅಂತವರು ಎಂದಿಗೂಬಡವರಾಗಿರುವುದಿಲ್ಲ. ದೇವರಸೇವೆಗಾಗಿ ಹಣಕೊಡುವಮೂಲಕ ಅವರು ಕೊನೆಯಕಾಲದ ಸತ್ಯದ ಬಗ್ಗೆ ಪೂರ್ಣ ಆಸಕ್ತಿ ಹೊಂದಿ ನಿಷ್ಠರಾಗಿರುತ್ತಾರೆ.ಅವರು “... ವಾಸ್ತವವಾದ (ನಿತ್ಯ) ಜೀವವನ್ನು ಹೊಂದುವುದಕ್ಕೋಸ್ಕರ.... ಮುಂದಿನಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂತವುಗಳನ್ನು ತಮಗೆಕೂಡಿಸಿಟ್ಟುಕೊಳ್ಳುತ್ತಾರೆ” (1 ತಿಮೊಥೆ6:18-19).KanCCh 334.1

    ದೃಢನಿಷ್ಠೆ ಹಾಗೂ ಪ್ರಾಮಾಣಿಕರಾದ ಇಂತವರು ತಮ್ಮ ಉದಾರವಾದ ಪ್ರಯತ್ನವುದೇವರ ಮತ್ತು ನೆರೆಹೊರೆಯ ಜನರ ಪ್ರೀತಿಯನ್ನು ಪೋಷಿಸುವುದಕ್ಕೆ ಕಾರಣವೆಂದುತಿಳಿದಾಗ, ದೇವರೊಂದಿಗೆಜೊತೆ ಕೆಲಸಗಾರರಾಗಿರುವುದು ಎಂತಹ ದೊಡ್ಡಆಶೀರ್ವಾದವಾಗಿದೆ ಎಂದು ಅವರಿಗೆಮನವರಿಕೆಯಾಗುವುದು. ಆದರೆ ಸಾಮಾನ್ಯವಾಗಿಹೇಳುವುದಾದರೆ, ಕ್ರೈಸ್ತಸಭೆಯು ಜಗತ್ತಿನೆಲ್ಲೆಡೆದಟ್ಟವಾಗಿ ತುಂಬಿರುವ ಆತ್ಮೀಕ ಅಂಧಕಾರದವಿರುದ್ಧವಾದ ಹೋರಾಟವನ್ನು ಬೆಂಬಲಿಸಲು ದಶಮಭಾಗ ಹಾಗೂ ಇತರ ಕಾಣಿಕೆಗಳನ್ನುಮನಃಪೂರ್ವಕವಾಗಿ ಕೊಡಬೇಕೆಂಬ ದೇವರವಾಕ್ಯವನ್ನು ನಿರಾಕರಿಸುತ್ತಿದೆ. ಕ್ರೈಸ್ತರುಕ್ರಿಯಾಸಕ್ತರೂ, ಉತ್ಸಾಹಿಗಳೂ ಆದ ಕೆಲಸಗಾರರಾಗದಿದ್ದಲ್ಲಿ, ದೇವರ ಸುವಾರ್ತಾಸೇವೆಎಂದಿಗೂ ಮುಂದುವರಿಯುವುದಿಲ್ಲ.KanCCh 334.2