Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರು ತಾನು ಕೊಡುವ ಆದಾಯದಲ್ಲಿ ದಶಮಭಾಗ ಕೇಳುತ್ತಾನೆ

    ಹತ್ತರಲ್ಲೊಂದು ಭಾಗ ದೇವರಿಗೆ ಕೊಡುವ ವ್ಯವಸ್ಥೆಯು ಮೋಶೆಯ ಕಾಲಕ್ಕಿಂತಲೂಹಿಂದಿನದು. ಮೋಶೆಯ ಕಾಲದಲ್ಲಿ ವ್ಯವಸ್ಥಿತವಾಗಿ ಕೊಡಬೇಕೆಂಬ ಕ್ರಮವು ಜಾರಿಗೆಬರುವುದಕ್ಕಿಂತ ಮೊದಲಿನಿಂದಲೂ ಧಾರ್ಮಿಕ ಕಾರ್ಯಗಳಿಗಾಗಿ ದೇವರಿಗೆ ದಶಾಂಶಹಾಗೂ ಕಾಣಿಕೆ ಕೊಡಬೇಕೆಂಬ ನಿಯಮವು ಆದಾಮನ ಕಾಲದಿಂದಲೂ ಜಾರಿಯಲ್ಲಿತ್ತು.ದೇವರ ಕರುಣೆ ಮತ್ತು ತಮಗೆ ಕೊಟ್ಟ ಆಶೀರ್ವಾದಗಳಿಗಾಗಿ ಜನರು ಕಾಣಿಕೆಗಳನ್ನುಕೊಡುವ ಮೂಲಕ ತಮ್ಮ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದರು. ಮುಂದಿನ ಸಂತಾನದವರುಇದನ್ನು ಅನುಸರಿಸುತ್ತಿದ್ದರು. ಅಲ್ಲದೆ ಮೂಲಪಿತೃವಾದ ಅಬ್ರಹಾಮನು ಪರಾತ್ಪರನಾದಯೆಹೋವನ ಯಾಜಕನಾದ ಮೇಲ್ಮಜೆದೆಕನಿಗೆ ದಶಾಂಶಕೊಡುವುದರ ಮೂಲಕ ಅದನ್ನುಮುಂದುವರೆಸಿದನು. ಇದೇತತ್ವವು ಯೋಬನಕಾಲದಲ್ಲಿಯೂ ಇತ್ತು. ಯಾಕೋಬನುತನ್ನ ಅಣ್ಣನಾದ ಏಸಾವನಿಗೆ ಹೆದರಿ, ನಿರಾಶ್ರಿತವಾಗಿ ಅಲೆಯುತ್ತಿದ್ದಾಗ ಬೇತೇಲಿನಲ್ಲಿರಾತ್ರಿ ತಾನು ತಲೆಗಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ಕಂಬವಾಗಿನಿಲ್ಲಿಸಿ ಎಣ್ಣೆಹೊಯ್ದು“.... ನಿನ್ನಿಂದ ನನಗೆ ಬರುವಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ನಿನಗೆಸಮರ್ಪಿಸುವೆನು” ಎಂದು ದೇವರಿಗೆ ಹರಕೆ ಮಾಡಿಕೊಂಡನು (ಆದಿಕಾಂಡ 28:22).ದೇವರು ಎಂದಿಗೂ ಸಹ ತನಗೆ ಕಾಣಿಕೆಕೊಡಬೇಕೆಂದು ನಮ್ಮನ್ನು ಒತ್ತಾಯಪಡಿಸುವುದಿಲ್ಲ.ಮನುಷ್ಯರು ಕೊಡುವುದೆಲ್ಲವೂ ಮನಃಪೂರ್ವಕವಾಗಿರಬೇಕು. ಒತ್ತಾಯದಿಂದ ಕೊಡುವಕಾಣಿಕೆಯನ್ನು ದೇವರು ಸಮೃದ್ಧಗೊಳಿಸುವುದಿಲ್ಲ.KanCCh 336.2

    ನಮ್ಮ ಆದಾಯದಲ್ಲಿ ಹತ್ತರಲ್ಲೊಂದು ಭಾಗ ಕೊಡಬೇಕೆಂದು ದೇವರು ನಿರ್ದಿಷ್ಟವಾಗಿತಿಳಿಸಿದ್ದಾನೆ. ಆದರೆ ಇದು ನಮ್ಮ ಮನಸ್ಸಾಕ್ಷಿ ಹಾಗೂ ಉದಾರತೆಗೆ ಸಂಬಂಧಪಟ್ಟಿದೆ.ಯಾವುದೇ ಒತ್ತಾಯವಿಲ್ಲ. ಮೋಶೆಯ ಕಾಲದಲ್ಲಿಯೂ ಇಸ್ರಾಯೇಲ್ಯರು ತಮ್ಮಆದಾಯದಲ್ಲಿ ಹತ್ತನೇ ಒಂದು ಭಾಗವನ್ನು ಕೊಡಬೇಕೆಂದು ದೇವರು ಹೇಳಿದ್ದನು.ಅವರಿಗೆ ಈ ಜೀವನಕ್ಕೆ ಅಗತ್ಯವಾದ ಎಲ್ಲಾ ವಸ್ತುಗಳು ಮತ್ತು ತಲಾಂತುಗಳನ್ನು ಕೊಟ್ಟು,ಅವುಗಳನ್ನು ಅಭಿವೃದ್ಧಿಪಡಿಸಿ ದಶಾಂಶವನ್ನು ತನಗೆಹಿಂದಿರುಗಿಸಬೇಕೆಂದು ಆದೇಶಿಸಿದ್ದನು.“ನನಗೆ ಹತ್ತರೊಲ್ಲಂದು ಭಾಗ ಕೊಡಿರಿ; ಅದುನನ್ನದು. ಉಳಿದ ಒಂಬತ್ತುಭಾಗ ನಿಮಗೆಕೊಡುತ್ತೇನೆ. ಮನುಷ್ಯರು ದಶಾಂಶ ಕೊಡದಿದ್ದಲ್ಲಿ, ಅದು ದೇವರಿಂದ ಕದ್ದುಕೊಂಡಂತೆ,ಪಾಪಪರಿಹಾರ ಕಾಣಿಕೆಗಳು, ಸಮಾಧಾನ ಕಾಣಿಕೆಗಳು ಮತ್ತು ಕೃತಜ್ಞತಾ ಕಾಣಿಕೆಗಳನ್ನೂಸಹ ನೀವು ದಶಾಂಶದೊಡನೆ ಕೊಡಬೇಕು” ಎಂದು ದೇವರು ಹೇಳುತ್ತಾನೆ.KanCCh 337.1

    ಆದಾಯದ ಹತ್ತರಲ್ಲೊಂದು ಭಾಗವನ್ನು ನಾವು ಕೊಡದಿದ್ದಲ್ಲಿ, ಪರಲೋಕದ ಪುಸ್ತಕಗಳಲ್ಲಿಅದು ದೇವರಿಂದ ಕದ್ದುಕೊಂಡದ್ದು ಎಂದು ಬರೆಯಲ್ಪಡುತ್ತದೆ. ಅದು ನಮ್ಮ ಸೃಷ್ಟಿಕರ್ತನಿಗೆವಂಚನೆ ಮಾಡಿದಂತೆ; ನಿರ್ಲಕ್ಷತೆಯಿಂದ ಮಾಡಿದ ಈ ಪಾಪವು ದಶಾಂಶಕೊಡದಿರುವವರ ಗಮನಕ್ಕೆ ಬಂದಾಗ, ಅವರು ಅಂದಿನಿಂದ ಕೊಡಲು ಆರಂಭಿಸಿದಲ್ಲಿಅದು ಸರಿಯಿಲ್ಲ. ದೇವರು ವಿಶ್ವಾಸದಿಂದಅವರಿಗೆ ವಹಿಸಿಕೊಟ್ಟ ಆದಾಯದ ಹಣದದುರುಪಯೋಗವೆಂದು ಪರಲೋಕದ ಪುಸ್ತಕಗಳಲ್ಲಿ ಬರೆಯಲ್ಪಟ್ಟಿರುವುದು ಇದರಿಂದತೆಗೆದುಹಾಕಲ್ಪಡುವುದಿಲ್ಲ. ದೇವರಿಗೆ ಅಪ್ರಾಮಾಣಿಕರಾಗಿರುವುದಕ್ಕೆಹಾಗೂ ಆತನ ಉಪಕಾರಸ್ಮರಿಸದಿರುವುದಕ್ಕೆ ಅಂತವರು ಪಶ್ಚಾತ್ತಾಪ ಪಡಬೇಕು.KanCCh 337.2

    ಜಗತ್ತಿನ ಯಾವುದೇ ಭಾಗದಲ್ಲಾಗಲಿ ಇಲ್ಲವೆ ಇತಿಹಾಸದ ಯಾವುದೇ ಸಮಯದಲ್ಲಾಗಲಿ,ದೇವಜನರು ಸಂತೋಷದಿಂದಲೂ ಹಾಗೂ ಮನಃಪೂರ್ವಕವಾಗಿಯೂ ಆತನಯೋಜನೆಯಂತೆ ಔದಾರ್ಯದಿಂದ ಕಾಣಿಕೆಗಳನ್ನು ಅರ್ಪಿಸಿದಾಗ, ಅವರ ವಿಧೇಯತೆಗೆದೇವರು ತನ್ನ ವಾಗ್ದಾನದಂತೆಪ್ರತಿಫಲ ನೀಡಿ ಅಭಿವೃದ್ಧಿ ಹೊಂದಿರುವುದನ್ನು ಸ್ವತಃಅವರು ತಿಳುಕೊಂಡಿದ್ದಾರೆ. ಅವರ ಕಣಜಗಳು ದವಸ ಧಾನ್ಯಗಳಿಂದ ತುಂಬಿಸಮೃದ್ಧಿಯಾಗಿರುತ್ತವೆ. ಆದರೆ ಅವರು ದೇವರಿಗೆ ಸಲ್ಲಿಸಬೇಕಾದ ದಶಮಭಾಗ ಹಾಗೂಕಾಣಿಕೆಗಳನ್ನು ಕೊಡದಿದ್ದಲ್ಲಿ ಅವರು ದೇವರಿಂದ ಕದ್ದುಕೊಳ್ಳುವುದು ಮಾತ್ರವಲ್ಲದೆ,ತಮ್ಮಿಂದಲೂ ಕದ್ದುಕೊಳ್ಳುತ್ತಾರೆ. ಆತನಿಂದ ಅವರಿಗೆ ಬರುವ ಆಶೀರ್ವಾದವೂ ಸಹಕಡಿಮೆಯಾಗಿರುತ್ತದೆ.KanCCh 337.3

    ದೇವರಮಕ್ಕಳು ಒಂದುವೇಳೆ ಸಾಲಗಾರರಾಗಿದ್ದಲ್ಲಿ, ಅವರು ದೇವರಿಗೆ ಕೊಡಬೇಕಾದದಶಾಂಶ, ಕಾಣಿಕೆಗಳನ್ನು ತಮ್ಮ ಸಾಲತೀರಿಸಲು ಉಪಯೋಗಿಸಬಾರದು. ದೇವರಿಗೆಸಾಲಗಾರರಾಗಿದ್ದಾರೆ. ಆದರೆ ಅವುಗಳನ್ನು ಮನುಷ್ಯರ ಸಾಲತೀರಿಸುವುದಕ್ಕೆ ಉಪಯೋಗಿಸುವಾಗ ಅವರು ದೇವರಿಗೆ ಎರಡರಷ್ಟು ಸಾಲಗಾರರಾಗುತ್ತಾರೆ. ಪರಲೋಕದಪುಸ್ತಕಗಳಲ್ಲಿ ಅಂತವರ ಹೆಸರಿನ ಮುಂದೆ “ದೇವರಿಗೆ ಅಪನಂಬಿಗಸ್ತರು” ಎಂದುಬರೆಯಲ್ಪಡುತ್ತದೆ. ಅಂತವರು ದೇವರಿಗೆ ಲೆಕ್ಕ ಕೊಡಬೇಕಾಗಿರುತ್ತದೆ. ದೇವರಿಗೆಅಪ್ರಾಮಾಣಿಕರಾದ ಇಂತವರು ತಮ್ಮ ಇತರೆಲ್ಲಾ ವ್ಯವಹಾರಗಳಲ್ಲಿಯೂ ಅಪ್ರಾಮಾಣಿಕರೂ,ವಂಚಕರೂ ಆಗಿರುತ್ತಾರೆ. ದೇವರಿಂದಕದ್ದುಕೊಂಡ ಮನುಷ್ಯರು ಪರಲೋಕರಾಜ್ಯಕ್ಕೆಸೇರದಿರುವಂತ ಗುಣಸ್ವಭಾವ ಬೆಳೆಸಿಕೊಳ್ಳುತ್ತಾರೆ.KanCCh 337.4