Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತ್ಯಾಗಮನೋಭಾವ ಹಾಗೂ ಪ್ರೀತಿಯಿಂದ ಕೊಡುವ ಕಾಣಿಕೆಗಳನ್ನು ದೇವರು ಯೋಗ್ಯವೆಂದೆಣಿಸುತ್ತಾನೆ

    ಕ್ರಿಸ್ತನಮೇಲಣ ಪ್ರೀತಿಯಿಂದ ಬಡವರಿಗೆ ಮಾಡಿದ ಸಹಾಯವನ್ನು ಪರಲೋಕವುಅವರ ಮೊತ್ತದ ಆಧಾರದಲ್ಲಿ ನಿರ್ಣಯಿಸುವುದಿಲ್ಲ. ಬದಲಾಗಿ ಪ್ರೀತಿಯಿಂದ ಪ್ರೇರಣೆಗೊಂಡುಮಾಡಿದ ತ್ಯಾಗಮನೋಭಾವದ ಮೇಲೆ ನಿರ್ಣಯಿಸುತ್ತದೆ. ಉದಾರಿಯಾದ ಬಡವನುಕೊಡುವುದು ಕಡಿಮೆಯೇ ಇರಬಹುದು, ಆದರೆ ಅದನ್ನೇ ಅವನು ಉದಾರವಾಗಿಕೊಡುವುದರಿಂದ ದೇವರ ವಾಗ್ದಾನವು ಅವನಲ್ಲಿ ಖಂಡಿತವಾಗಿಯೂ ನೆರವೇರುವವು.ಶ್ರೀಮಂತ ವ್ಯಕ್ತಿಯು ತನಗಿರುವುದರಲ್ಲಿ ಸ್ವಲ್ಪ ಪ್ರಮಾಣವನ್ನು ಕೊಡುವುದರಿಂದ ಅವನಿಗೆಯಾವುದೇ ಕೊರತೆಯಾಗುವುದಿಲ್ಲ. ಆದರೆ ಬಡವನು ತನಗಿರುವ ಸ್ವಲ್ಪದರಲ್ಲಿ ಎಲ್ಲವನ್ನೂಕೊಡುವುದರಿಂದ ಅವನಲ್ಲಿ ತ್ಯಾಗ ಮನೋಭಾವ ಕಂಡುಬರುತ್ತದೆ. ಈ ಕಾರಣದಿಂದಬಡವನ ಕಾಣಿಕೆಯಲ್ಲಿ ಪಾವಿತ್ರತೆ ಕಂಡುಬರುತ್ತದೆ. ಆದರೆ ಐಶ್ವರ್ಯವಂತನು ತನ್ನಲ್ಲಿರುವಹೇರಳವಾದ ಸಂಪತ್ತಿನಿಂದ ಅಲ್ಪಭಾಗವನ್ನು ಮಾತ್ರ ಕಾಣಿಕೆಯಾಗಿ ಕೊಡುವುದರಿಂದಅದರಲ್ಲಿ ಪಾವಿತ್ರತೆ ಕಂಡುಬರುವುದಿಲ್ಲ. ದೇವರು ತನ್ನ ಅನುಗ್ರಹದಿಂದ ಮನುಷ್ಯರಪ್ರಯೋಜನಕ್ಕಾಗಿ ಕ್ರಮಬದ್ಧವಾದ ಹಾಗೂ ಉದಾರವಾದ ಸಂಪೂರ್ಣ ಯೋಜನೆಯನ್ನುರೂಪಿಸಿದ್ದಾನೆ. ದೇವರ ಅನುಗ್ರಹವು ಎಂದಿಗೂ ನಿಂತುಹೋಗುವುದಿಲ್ಲ. ದೇವರಸೇವಕರುಆತನ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಸರಿಸಿದಲ್ಲಿ, ಅವರೆಲ್ಲರೂ ಆತನಸೇವೆಯಲ್ಲಿ ಕ್ರಿಯಾಶೀಲರಾದ ಕೆಲಸಗಾರರಾಗಿರುತ್ತಾರೆ.KanCCh 338.1

    ಚಿಕ್ಕಮಕ್ಕಳ ಕಾಣಿಕೆಯು ದೇವರಿಗೆ ಮೆಚ್ಚುಗೆಯಾಗಿ ಅಂಗೀಕರಿಸಲ್ಪಡಬಹುದು.ಕಾಣಿಕೆಯ ಮೌಲ್ಯವು ಅದನ್ನು ಕೊಡುವುದರ ಮನೋಭಾವದ ಆಧಾರದಲ್ಲಿನಿರ್ಣಯಿಸಲ್ಪಡುತ್ತದೆ. ಬಡವರು ಅಪೊಸ್ತಲರ ನಿಯಮದಂತೆ ಪ್ರತಿವಾರವೂ ಸ್ವಲ್ಪಹಣವನ್ನುಕೂಡಿಟ್ಟು, ದೇವರಸೇವೆಗೆ ಕೊಟ್ಟಲ್ಲಿ, ಅವರ ಕಾಣಿಕೆಗಳು ಸಂಪೂರ್ಣವಾಗಿ ಆತನಿಗೆಮೆಚ್ಚುಗೆಯಾಗುತ್ತದೆ. ಯಾಕೆಂದರೆ ಅವರು ಐಶ್ವರ್ಯವಂತರಾದ ವಿಶ್ವಾಸಿಗಳಿಗಿಂತಲೂಹೆಚ್ಚಿನ ತ್ಯಾಗಮಾಡುತ್ತಾರೆ. ಕ್ರಮಬದ್ಧವಾದಉದಾರತೆಯಿಂದ ಕಾಣಿಕೆ ಕೊಡುವಯೋಜನೆಯು ಪ್ರತಿಯೊಂದು ಕುಟುಂಬವು ಅನಾವಶ್ಯಕವಾಗಿ ಖರ್ಚು ಮಾಡುವ ಶೋಧನೆಗೆ ವಿರುದ್ಧವಾಗಿ ರಕ್ಷಣೆನೀಡುತ್ತದೆ. ಅದರಲ್ಲಿಯೂ ಶ್ರೀಮಂತರು ದುಂದುವೆಚ್ಚಮಾಡುವುದರ ವಿರುದ್ಧ ರಕ್ಷಣೆನೀಡಿ ಅವರಿಗೆ ಆಶೀರ್ವಾದ ಉಂಟುಮಾಡುತ್ತದೆ.ಮನಃಪೂರ್ವಕವಾಗಿ ಉದಾರತೆಯಿಂದ ಕೊಡುವುದಕ್ಕೆ ಪ್ರತಿಫಲವಿದೆ. ಅದು ನಮ್ಮಮನಸ್ಸು ಹಾಗೂ ಹೃದಯವನ್ನು ಪರಿಶುದ್ಧಾತ್ಮನೊಂದಿಗೆ ನಿಕಟ ಅನ್ನೋನ್ಯತೆಗೆ ನಡೆಸುವಪ್ರತಿಫಲ ನೀಡುತ್ತದೆ.KanCCh 338.2

    ದೇವರಸೇವೆಗೆ ಹೇಗೆ ಉದಾರವಾಗಿ ಕೊಡಬೇಕೆಂಬ ಬಗ್ಗೆ ಪೌಲನು ಒಂದು ನಿಯಮಅನುಸರಿಸಬೇಕೆಂದು ಹೇಳುತ್ತಾನೆ. ಅಲ್ಲದೆ ಇದರಿಂದಾಗಿ ನಮಗೂ ಮತ್ತು ದೇವರಿಗೂಆಗುವ ಫಲಿತಾಂಶವೇನೆಂದೂ ಸಹ ತಿಳಿಸುತ್ತಾನೆ: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆಪ್ರೀತಿಯುಂಟು”,KanCCh 339.1

    “ಆದರೆ ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು. ಹೆಚ್ಚಾಗಿಬಿತ್ತುವವನು ಹೆಚ್ಚಾಗಿ ಕೊಯ್ಯುವನು” “ದೇವರು ಸಕಲ ವಿಧವಾದ ದಾನಗಳನ್ನುನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾದ್ದರಿಂದ, ನೀವು ಯಾವಾಗಲೂಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿಮಾಡುವವರಾಗಿರಬೇಕು” “... ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು,ಉದಾರವಾಗಿ ಕೊಡ ಶಕ್ತರಾಗುವಿರಿ; ಇದಲ್ಲದೆ ನಿಮ್ಮ ದಾನಗಳು ನಮ್ಮ ಕೈಯಿಂದಮತ್ತೊಬ್ಬರಿಗೆ ಸೇರಿದಾಗ, ದೇವರಿಗೆ ಕೃತಜ್ಞತಾ ಸ್ತುತಿಯನ್ನು ಹುಟ್ಟಿಸುವುದು” (2 ಕೊರಿಂಥ9:6-11).KanCCh 339.2