Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಸಂಪತ್ತು ಹೆಚ್ಚಾದಲ್ಲಿ, ಅದರ ಮೇಲೆ ಮನಸ್ಸಿಡಬಾರದು

  ದಶಾಂಶದ ವಿಶೇಷ ವ್ಯವಸ್ಥೆಯು ದೇವರಾಜ್ಞೆಗಳಂತೆಯೇ ನಿರಂತರವಾಗಿ ಉಳಿಯುವಂತಸಿದ್ಧಾಂತದ ಮೇಲೆ ಸ್ಥಾಪಿಸಲ್ಪಟ್ಟಿದೆ. ದಶಾಂಶದ ಈ ವ್ಯವಸ್ಥೆಯು ಯೆಹೂದ್ಯರಿಗೆಆಶೀರ್ವಾದಕರವಾಗಿತ್ತು; ಇಲ್ಲದಿದ್ದಲ್ಲಿ ದೇವರು ಅವರಿಗೆ ಅದನ್ನು ಕೊಡುತ್ತಿರಲಿಲ್ಲ.ಅದರಂತೆಯೇ ದೇವರಿಗೆ ದಶಮಭಾಗ ಕೊಡುವುದು ಅಂತ್ಯಕಾಲದವರೆಗೂ ನಮಗೆಆಶೀರ್ವಾದಕರವಾಗಿರುತ್ತದೆ.KanCCh 340.3

  ಹೆಚ್ಚು ವ್ಯವಸ್ಥಿತವಾಗಿ ಹಾಗೂ ದೇವರಸೇವೆಗೆ ಉದಾರವಾಗಿ ಕೊಡುವ ಸಭೆಗಳುಆತ್ಮೀಕವಿಷಯಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತವೆ. ಐಶ್ವರ್ಯವಂತರು ತಾವುಖರ್ಚುಮಾಡುವ ಒಂದೊಂದು ರೂಪಾಯಿಗೂ ದೇವರಿಗೆ ಲೆಕ್ಕ ಕೊಡಬೇಕಾದ ಜವಾಬ್ದಾರಿಹೊಂದಿದ್ದೇವೆಂದು ತಿಳಿದುಕೊಳ್ಳಬೇಕು. ಅಲ್ಲದೆ ದೇವರು ಕೊಟ್ಟ ಸಂಪತ್ತನ್ನು ವ್ಯರ್ಥವಾದಕಾರ್ಯಗಳಿಗೆಉಪಯೋಗಿಸುವವರೂ ಸಹ, ತಮ್ಮ ವ್ಯವಹಾರದ ಬಗ್ಗೆ ದಣಿಯಾಗಿರುವಕ್ರಿಸ್ತನಿಗೆ ಲೆಕ್ಕ ಕೊಡಬೇಕು.KanCCh 341.1

  ಕ್ರೈಸ್ತರು ತಮ್ಮಲ್ಲಿರುವ ಹಣವನ್ನು ಅಲಂಕಾರ ಮಾಡಿಕೊಳ್ಳಲು ಮತ್ತು ಮನೆಗಳನ್ನುಸೌಂದರ್ಯಗೊಳಿಸಲು ಹಾಗೂ ಆರೋಗ್ಯಕ್ಕೆ ಹಾನಿಕರವಾದ ಆಹಾರದಲ್ಲಿ ಕಡಿಮೆಯಾಗಿಉಪಯೋಗಿಸಿದಲ್ಲಿ, ದೇವರ ಭಂಡಾರಕ್ಕೆ ಹೆಚ್ಚಾಗಿ ಕೊಡಬಹುದು. ಈ ರೀತಿಮಾಡುವುದರಿಂದ ಅವರು ತಮಗೆ ನಿತ್ಯ ಸೌಭಾಗ್ಯ ಕೊಡಲಿಕ್ಕಾಗಿ ಪರಲೋಕದ ಮಹಿಮೆ,ಐಶ್ವರ್ಯವನ್ನು ಬಿಟ್ಟು ನಮಗೋಸ್ಕರ ಬಂದವನಾದ ಯೇಸುಕ್ರಿಸ್ತನ ಮಾದರಿಅನುಸರಿಸಬಹುದು.KanCCh 341.2

  ಆದರೆ ಅನೇಕರು ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡಿ ಇನ್ನೂ ಹೆಚ್ಚಿನಶ್ರೀಮಂತರಾಗಲು ಎಷ್ಟು ಸಮಯ ಹಿಡಿಯಬಹುದೆಂದು ಲೆಕ್ಕ ಹಾಕುತ್ತಾರೆ. ಸಂಪತ್ತನ್ನುಶೇಖರಿಸಬೇಕೆಂಬ ಮಾನಸಿಕ ಆತಂಕದಲ್ಲಿ ಅವರು ದೇವರ ವಿಷಯದಲ್ಲಿ ಬಡವರಾಗುತ್ತಾರೆ.ತಮ್ಮ ಹಣ ಹೆಚ್ಚಾದ ಪ್ರಮಾಣದಂತೆ ದೇವರಿಗೆ ಕೊಡುವುದರಲ್ಲಿ ಅವರು ಉದಾರತೆತೋರಿಸುವುದಿಲ್ಲ. ಶ್ರೀಮಂತರಾಗಬೇಕೆಂಬ ಮೋಹ ಹೆಚ್ಚಾದಷ್ಟೂ, ಹಣದಮೇಲಿನ ಅವರಪ್ರೀತಿ ಹೆಚ್ಚಾಗುತ್ತದೆ. ಇನ್ನೂ ಗಳಿಸಬೇಕೆಂಬ ಅವರ ವ್ಯಾಮೋಹವು ತೀವ್ರವಾದಂತೆ,ಕೆಲವರು ದೇವರಿಗೆ ಹತ್ತನೇಒಂದುಭಾಗ ಕೊಡುವುದು. ಅನ್ಯಾಯವಾದ ಮತ್ತು ಕಠಿಣವಾದತೆರಿಗೆಯೆಂದು ಅಭಿಪ್ರಾಯ ಪಡುತ್ತಾರೆ.KanCCh 341.3

  “……. ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ” ಎಂದು ಸತ್ಯವೇದವು ಹೇಳುತ್ತದೆ(ಕೀರ್ತನೆ 62:10). “ಬೇರೆಯವರಂತೆ ನಾನು ಶ್ರೀಮಂತನಾಗಿದ್ದಲ್ಲಿ, ದೇವರಿಗೆ ಹೆಚ್ಚಾಗಿಕಾಣಿಕೆ ಕೊಡುತ್ತಿದೆ; ಅದನ್ನು ಕೇವಲ ದೇವರ ಸೇವೆಗಾಗಿ ಮಾತ್ರ ಉಪಯೋಗಿಸುತ್ತಿದ್ದೆ“ಎಂದು ಅನೇಕರು ಹೇಳಿದ್ದಾರೆ. ಅಂತವರನ್ನು ಪರೀಕ್ಷೆ ಮಾಡಲು ದೇವರು ಕೆಲವರಿಗೆಐಶ್ವರ್ಯ ಕೊಟ್ಟಿದ್ದಾನೆ. ಆದರೆ ಐಶ್ವರ್ಯಬಂದಾಗ ಅವರು ತೀವ್ರವಾದ ಶೋಧನೆಗೆಒಳಗಾಗಿ ಮೊದಲಿಗಿಂತಲೂ ಬಹಳ ಕಡಿಮೆಯಾಗಿ ಕಾಣಿಕೆ ದಶಾಂಶ ಕೊಟ್ಟಿದ್ದಾರೆ.ಅವರ ಮನಸ್ಸು ಹಾಗೂ ಹೃದಯವು ಹೆಚ್ಚಾದ ಹಣದ ಮೇಲಿನ ದುರಾಶೆಯಿಂದತುಂಬಿಕೊಂಡದ್ದರಿಂದ, ಅವರಿಗೆ ಹಣವೇ ಪ್ರಮುಖವಾಯಿತು. ಈ ಕಾರಣದಿಂದಅವರುಎಗ್ರಹಾರಾಧನೆ ಮಾಡುವವರಾಗಿದ್ದಾರೆ.KanCCh 341.4