Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮ್ಮ ಆಸ್ತಿ ಮತ್ತು ದೇವರ ಸೇವೆಗೆ ಉತ್ತೇಜನ

    ದೇವರನ್ನು ಪ್ರಾಮಾಣಿಕವಾಗಿ ಪ್ರೀತಿಸುವವರು ಮತ್ತು ಹಣಕಾಸಿನ ವಿಷಯದಲ್ಲಿಅನುಕೂಲವಾಗಿರುವವರು ದೇವರ ಸೇವೆಗೆ ಉತ್ತೇಜನ ನೀಡಲು ಈಗಲೇ ಸೂಕ್ತಸಮಯವಾಗಿದೆಎಂದು ಶ್ರೀಮತಿ ವೈಟಮ್ಮನವರ ಮೂಲಕ ದೇವರು ಅಪ್ಪಣೆ ಮಾಡಿದ್ದಾನೆ.ಸಭಾಪಾಲಕರಾದ ಬೋಧಕರು ಮಾಡುವ ಆತ್ಮಗಳ ರಕ್ಷಣೆಯ ನಿಸ್ವಾರ್ಥ ಹಾಗೂತ್ಯಾಗಮಯ ಸೇವೆಯಲ್ಲಿ ನಾವೂ ಸಹಸಹಾಯ ಮಾಡುವ ಸಮಯವು ಇದಾಗಿದೆ.ನಿಮ್ಮ ಈ ಸೇವೆಯಿಂದ ರಕ್ಷಿಸಲ್ಪಟ್ಟವರನ್ನು ನೀವು ಪರಲೋಕದಲ್ಲಿ ಸಂಧಿಸಿದಾಗ,ನಿಮಗೆ ಅದ್ಭುತವಾದ ಪ್ರತಿಫಲ ದೊರೆಯುತ್ತದಲ್ಲವೇ?KanCCh 343.2

    ಯಾರೂಸಹ ತಮ್ಮಲ್ಲಿರುವ ಅಲ್ಪ ಕಾಣಿಕೆಯನ್ನು ಇಟ್ಟುಕೊಳ್ಳಬಾರದು. ಹೆಚ್ಚಾಗಿರುವವರುಪರಲೋಕದಲ್ಲಿ ತಮಗೆ ಬಹಳ ಸಿಕ್ಕುವುದೆಂದೂ ಅಲ್ಲಿ ಅದು ಹಾಳಾಗುವುದಿಲ್ಲ. ನುಸಿಹಿಡಿದುಕೆಟ್ಟು ಹೋಗುವುದಿಲ್ಲವೆಂದು ಸಂತೋಷ ಪಡಲಿ. ದೇವರಸೇವೆಯಲ್ಲಿವಿನಿಯೋಗಿಸಲು ನಾವು ನಿರಾಕರಿಸಿದರೆ, ಅದು ನಾಶವಾಗುವುದು. ಅದರಮೇಲೆಪರಲೋಕದ ಬ್ಯಾಂಕಿನಲ್ಲಿ ಯಾವ ಬಂಡವಾಳವೂ ಸೇರಿಸಲ್ಪಡುವುದಿಲ್ಲ.KanCCh 343.3

    ಕರ್ತನಾದ ದೇವರು ಈಗ ಜಗತ್ತಿನೆಲ್ಲೆಡೆ ಇರುವ ಸೆವೆಂತ್ ಡೇ ಅಡ್ಡೆಂಟಿಸ್ಪರನ್ನುಆಹ್ವಾನಿಸುತ್ತಿದ್ದಾನೆ. ಅವರು ಆತನಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ತಮ್ಮ ಸಂದರ್ಭಕ್ಕೆತಕ್ಕಂತೆ ಅತ್ಯುತ್ತಮ ಸೇವೆಸಲ್ಲಿಸಬೇಕು ಹಾಗೂ ಕಾಣಿಕೆ, ದಶಾಂಶಗಳನ್ನು ಧಾರಾಳವಾಗಿಕೊಡುವ ಮೂಲಕ ಆತನ ಆಶೀರ್ವಾದಗಳು ಹಾಗೂ ಕರುಣೆಗೆ ಕೃತಜ್ಞತೆ ಸಲ್ಲಿಸಬೇಕೆಂದುದೇವರು ಅಪೇಕ್ಷಿಸುತ್ತಾನೆ.KanCCh 344.1

    ಯೇಸುಸ್ವಾಮಿಯ ಎರಡನೇಬರೋಣಕ್ಕೆ ಮೊದಲು ಬರುವ ಸಂಕಟದ ಸಮಯದಲ್ಲಿನಮ್ಮ ತಾತ್ಕಾಲಿಕ ಅಗತ್ಯಗಳಿಗಾಗಿ ಮಾಡಿಕೊಳ್ಳುವ ಯಾವುದೇ ಸಿದ್ಧತೆಯು ಸತ್ಯವೇದಕ್ಕೆವಿರುದ್ಧವಾದದ್ದೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ಪದೇಪದೇತಿಳಿಸಿದ್ದಾನೆ. “ದೇವರ ಮಕ್ಕಳು ಇಂತಹ ಸಂಕಟದ ಸಮಯದಲ್ಲಿ ಮನೆಯಲ್ಲಾಗಲಿಅಥವಾ ಹೊಲಗದ್ದೆಗಳಲ್ಲಿ ಆಹಾರಧಾನ್ಯ ಸಂಗ್ರಹಣೆ ಮಾಡಿಟ್ಟುಕೊಂಡಲ್ಲಿ, ಅಪಾಯದಸಂದರ್ಭಗಳಲ್ಲಿ, ಬರಗಾಲ, ಬಾಧೆಗಳ ಸಮಯದಲ್ಲಿ ದುಷ್ಟರು ಬಲಾತ್ಕಾರದಿಂದ ಅದನ್ನುತೆಗೆದುಕೊಳ್ಳುವರು ಮತ್ತು ನಮಗೆ ತಿಳಿಯದ ಅಪರಿಚಿತರು ಹೊಲಗದ್ದೆಗಳ ನಮ್ಮಬೆಳೆಯನ್ನು ಕೊಯ್ದು ಮಾಡುವರು. ಅಂತಹ ಸಮಯದಲ್ಲಿ ನಾವು ದೇವರಲ್ಲಿ ಸಂಪೂರ್ಣಭರವಸೆ ಇಡಬೇಕು ಹಾಗೂ ಆತನು ನಮ್ಮನ್ನು ಪೋಷಿಸುವನು. ನಮಗೆ ಅನ್ನವುಉಚಿತವಾಗಿ ಒದಗಿಸುವುದು, ನೀರೂ ನಿಸ್ಸಂದೇಹ (ಯೆಶಾಯ 33:16). ನಮಗೆ ಯಾವುದೇ ಕೊರತೆಯಾಗದು ಅಥವಾ ಹಸಿವೆಯಿಂದ ಬಾಧೆ ಪಡುವುದಿಲ್ಲ. ಯಾಕೆಂದರೆದೇವರು ಅಡವಿಯಲ್ಲಿಯೂ, ಗುಹೆಗಳಲ್ಲಿಯೂ ನಮಗೆ ಆಹಾರ ಒದಗಿಸುವನು. ಅಗತ್ಯಬಿದ್ದಲ್ಲಿಎಲೀಯ ಪ್ರವಾದಿಗೆ ಕಾಗೆಗಳ ಮೂಲಕ ಆಹಾರ ಒದಗಿಸಿದಂತೆ ನಮಗೂ ದೇವರುಒದಗಿಸುವನು ಅಥವಾ ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ದೇವದೂತರ ಮೂಲಕ ಮನ್ನವನ್ನುಕೊಟ್ಟಂತೆ ನಮಗೂ ಪರಲೋಕದಿಂದ ಮನ್ನವನ್ನು ಮಳೆಯಂತೆ ಸುರಿಸುವನು.KanCCh 344.2

    ಸಂಕಟದಸಮಯದಲ್ಲಿ ದೇವಜನರು ಕೋಪೋದ್ರಿಕ್ತ ಗುಂಪಿನ ಜನರ ಕೈಗೆ ಸಿಕ್ಕದಂತೆಪಲಾಯನ ಮಾಡಬೇಕಾಗಿರುವುದರಿಂದ ಮನೆಗಳಾಗಲಿ ಇಲ್ಲವೆ ಗದ್ದೆ ಹೊಲಗಳಾಗಲಿಅವರಿಗೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಅಲ್ಲದೆ ಆ ಸಮಯದಲ್ಲಿ ದೇವರಸತ್ಯವನ್ನು ಸಾರುವುದಕ್ಕೆ ಅನುಕೂಲವಾಗುವಂತೆ ಅವರ ಆಸ್ತಿಪಾಸ್ತಿಯನ್ನು ಮಾರಲೂಆಗುವುದಿಲ್ಲ. ಆದುದರಿಂದ ದೇವಜನರು ಕಷ್ಟಸಂಕಟ ಸಮಯಕ್ಕೆ ಮೊದಲು ಎಲ್ಲಾವಿಧವಾದ ಆಸ್ತಿಯ ಮೇಲೆ ಇರುವ ಹಕ್ಕುಬಾಧ್ಯತೆಗಳನ್ನು ಬಿಟ್ಟು, ತ್ಯಾಗ ಮಾಡುವುದರಮೂಲಕ ದೇವರೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುವುದು ದೇವರ ಚಿತ್ತವಾಗಿದೆಎಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ದೇವರು ತೋರಿಸಿದ್ದಾನೆ. ಅವರುದೇವರಿಗೆ ಮನಃಪೂರ್ವಕವಾಗಿ ಪ್ರಾರ್ಥಿಸಿದಲ್ಲಿ, ತಮ್ಮ ಹೊಲಗದ್ದೆ, ಮನೆಗಳನ್ನು ಯಾವಾಗಮಾರಾಟ ಮಾಡಬೇಕೆಂದು ದೇವರು ತಿಳಿಸುತ್ತಾನೆ. ಆಗ ಅವರು ಸಂಕಟದ ಸಮಯದಲ್ಲಿಯಾವುದೋ ಹೊಣೆಗಾರಿಕೆಯ ಭಾರವಿಲ್ಲದೆ ಸ್ವತಂತ್ರರಾಗಿರುವರು.KanCCh 344.3