Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತ್ಯಾಗ ಮತ್ತು ನಿಸ್ವಾರ್ಥ ಮನೋಭಾವ

    ದೇವಕುಮಾರನ ಅಮೂಲ್ಯ ಬಲಿದಾನದಿಂದ ರಕ್ಷಣಾಯೋಜನೆಯು ಹಾಕಲ್ಪಟ್ಟಿತು.ಕ್ರಿಸ್ತನ ಶಿಲುಬೆಯಿಂದ ಪ್ರಕಾಶಿಸುವ ಸುವಾರ್ತೆಯ ಬೆಳಕು ಸ್ವಾರ್ಥವನ್ನು ಬಿಟ್ಟು ಉದಾರತೆಬೆಳೆಸಿಕೊಳ್ಳುವಂತೆ ಉತ್ತೇಜಿಸುತ್ತದೆ. ದೇವರು ತನ್ನ ಅನುಗ್ರಹದಿಂದ ದೇವಜನರುಸಂಕುಚಿತಭಾವನೆ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕೆಂದು ಆಹ್ವಾನ ನೀಡುತ್ತಾನೆ.ಜಗತ್ತಿನಲ್ಲಿ ಆತ್ಮೀಕ ಅಂಧಕಾರ ಕವಿದಿರುವ ಈ ಸಮಯದಲ್ಲಿ ಅಪಾರ ಪ್ರಯತ್ನಬೇಕಾಗಿದೆ.ದೇವರಮಕ್ಕಳು ಲೌಕಿಕತೆ ಮತ್ತು ದುರಾಶೆಗೆ ಒಳಗಾಗುತ್ತಿದ್ದಾರೆ. ದೇವರ ಕರುಣೆಯಿಂದಲೇಅವರ ಎಲ್ಲಾ ಸಂಪತ್ತು ಅಭಿವೃದ್ಧಿ ಹೊಂದುತ್ತದೆಂದು ದೇವಜನರು ನೆನಪಿನಲ್ಲಿಡಬೇಕು.ದೇವರು ಶತಾಧಿಪತಿಯಾದ ಕೊರ್ನೆಲ್ಯನಿಗೆ ನಿನ್ನ ಪ್ರಾರ್ಥನೆಗಳೂ, ನಿನ್ನದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿಬಂದವು” ಎಂದು ಹೇಳುತ್ತಾನೆ(ಅ.ಕೃತ್ಯಗಳು 10:4).KanCCh 345.1

    ನಮ್ಮ ಮನೆಗಳಲ್ಲಿ ಮಿತವ್ಯಯವನ್ನು ಪಾಲಿಸಬೇಕು. ಅನೇಕರು ಹಣವನ್ನು ದೇವರೆಂದುಎಣಿಸಿ ಪೂಜಿಸುತ್ತಾರೆ. ನಿಮ್ಮ ವಿಗ್ರಹಗಳನ್ನೆಲ್ಲಾ ದೂರಮಾಡಿ, ಸ್ವಾರ್ಥದಿಂದ ಕೂಡಿದಸುಖಸಂತೋಷಗಳನ್ನು ತ್ಯಜಿಸಬೇಕು. ನಿಮ್ಮಲ್ಲಿರುವ ಹಣವನ್ನು ನಿಮ್ಮ ಮನೆಯನ್ನುಬೆಲೆಬಾಳುವ ವಸ್ತುಗಳಿಂದ ಅಲಂಕರಿಸಲು ಉಪಯೋಗಿಸಬಾರದು. ಯಾಕೆಂದರೆ ಇದುದೇವರ ಹಣವಾಗಿದೆ ಹಾಗೂ ಅದರ ಅಗತ್ಯ ತಿರುಗಿ ನಿಮಗೆ ಬರಬಹುದೆಂದುಶ್ರೀಮತಿವೈಟಮ್ಮನವರು ನಮ್ಮನ್ನು ಬೇಡಿಕೊಳ್ಳುತ್ತಾರೆ. ತಂದೆತಾಯಿಯರೇ, ದೇವರಹಣವನ್ನು ನಿಮ್ಮ ಮಕ್ಕಳ ಚಪಲತೀರಿಸಲು ಉಪಯೋಗಿಸಬಾರದು. ಈ ಲೋಕದಲ್ಲಿಪ್ರಭಾವ ಗಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ನಿಮ್ಮ ಮಕ್ಕಳು ಆಡಂಬರದ ಢಂಬಾಚಾರಪ್ರದರ್ಶನ ಮಾಡದಂತೆ ತಂದೆತಾಯಿಯರು ಅವರಿಗೆ ಚಿಕ್ಕಂದಿನಿಂದಲೇ ತಿಳಿಯಪಡಿಸಬೇಕು.ಕ್ರಿಸ್ತನು ಪ್ರಾಣಕೊಟ್ಟಂತ ಆತ್ಮಗಳನ್ನು ಇದರಿಂದ ರಕ್ಷಿಸಲು ಸಾಧ್ಯವಾಗುವುದೇ? ಎಂದಿಗೂಇಲ್ಲ. ಆಡಂಬರದ ಡಂಭಾಚಾರವು ದ್ವೇಷ, ಅಸೂಯೆ, ಮತ್ತು ಕೆಟ್ಟ ಅನುಮಾನಗಳಿಗೆಕಾರಣವಾಗುತ್ತದೆ. ಈ ಲೋಕದ ಆಡಂಬರದ ಪ್ರದರ್ಶನಗಳಲ್ಲಿ ನಿಮ್ಮ ಮಕ್ಕಳು ಸ್ಪರ್ಧಿಸಲುಇದು ದಾರಿ ಮಾಡಿಕೊಡುತ್ತದೆ. ಇದಕ್ಕಾಗಿ ಅವರು ದೇವರಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದು ಆರೋಗ್ಯವನ್ನಾಗಲಿ ಇಲ್ಲವೆ ಸಂತೋಷವನ್ನಾಗಲಿ ತರುವುದಿಲ್ಲ.KanCCh 345.2

    ನಿಮ್ಮ ಮಕ್ಕಳ ಅಹಂಕಾರ, ದುಂದುಗಾರಿಕೆ, ಆಡಂಬರದ ಪ್ರದರ್ಶನವನ್ನುತೃಪ್ತಿಗೊಳಿಸುವುದರ ಮೂಲಕ ನೀವು ಅವರ ಮೇಲಿರುವ ನಿಮ್ಮ ಪ್ರೀತಿಯನ್ನುವ್ಯಕ್ತಪಡಿಸುತ್ತೀರೆಂಬ ಭಾವನೆ ಅವರಲ್ಲಿ ಬಾರದಂತೆ ನೋಡಿಕೊಳ್ಳಿ ಹಣವನ್ನು ಹಿತಮಿತವಾಗಿಬಳಸಬೇಕು. ಬುದ್ಧಿಶಕ್ತಿ, ವಿಚಾರಶೀಲತೆ ನಾಶಮಾಡುವಂತವುಗಳ ಮೇಲೆ ಹಣಖರ್ಚುಮಾಡದೆ, ಹೊಸ ಸ್ಥಳಗಳಲ್ಲಿ ಸುವಾರ್ತೆಸಾರುವುದಕ್ಕೆ ಅದನ್ನು ಉಪಯೋಗಿಸಿ.ಬುದ್ಧಿಶಕ್ತಿಯು ಒಂದು ಪ್ರತಿಭೆ ಅಂದರೆ ತಲಾಂತು. ನಿಮ್ಮಲ್ಲಿರುವ ಹಣ, ತಲಾಂತು,ಸಮಯ ಮುಂತಾದ ಸಾಧನಗಳನ್ನು ಆತ್ಮಗಳನ್ನು ರಕ್ಷಿಸುವುದಕ್ಕೆ ಅತ್ಯುತ್ತಮವಾಗಿಹೇಗೆವಿನಿಯೋಗಿಸಬೇಕೆಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಬುದ್ಧಿಶಕ್ತಿಯನ್ನು ಉಪಯೋಗಿಸಿ, ಸ್ವಾರ್ಥವನ್ನು ಬಿಟ್ಟು ಇತರರ ಒಳ್ಳೆಯದಕ್ಕಾಗಿ ಕಾರ್ಯಮಾಡುವಮತ್ತು ತಮ್ಮನ್ನು ಹಾಗೂ ತಮ್ಮಲ್ಲಿರುವ ಎಲ್ಲವನ್ನೂ ಕ್ರಿಸ್ತನ ಸೇವೆಯಲ್ಲಿಉಪಯೋಗಿಸುವವರು ಸಂತೋಷವನ್ನು ಸಂಪೂರ್ಣವಾಗಿ ತಿಳುಕೊಳ್ಳುವರು. ಸ್ವಾರ್ಥಿಗಳಾದವ್ಯಕ್ತಿಗಳಿಗೆ ಇಂತಹ ಸಂತೋಷದೊರೆಯುವುದಿಲ್ಲ. “ಹಾಗೆಯೇ ನಿಮ್ಮಲ್ಲಿ ಯಾವನೇಆಗಲಿ, ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಲಾರನು“ಎಂದು ರಕ್ಷಕನಾದ ಕ್ರಿಸ್ತನು ಹೇಳಿದ್ದಾನೆ (ಲೂಕ 14:33). “ಪ್ರೀತಿಯು ಸ್ವಪ್ರಯೋಜನವನ್ನುಚಿಂತಿಸುವುದಿಲ್ಲ” (1 ಕೊರಿಂಥ 13:5), ಇದು ನಿಸ್ವಾರ್ಥ ಪ್ರೀತಿ ಹಾಗೂ ಔದಾರ್ಯದಫಲವಾಗಿದ್ದು, ಕ್ರಿಸ್ತನ ಜೀವನವನ್ನು ತೋರಿಸುತ್ತದೆ. ದೇವರಾಜ್ಜೆಗಳು ನಮ್ಮಹೃದಯದಲ್ಲಿರುವಾಗ ಲೌಕಿಕ ವಿಷಯಗಳು ಮರೆಯಾಗಿ ನಿತ್ಯಜೀವದ ಕಡೆಗೆ ನಮ್ಮಮನಸ್ಸು ಯಾವಾಗಲೂ ಹಾತೊರೆಯುತ್ತದೆ.KanCCh 346.1

    *****