Loading...
Larger font
Smaller font
Copy
Print
Contents

ಕ್ರೈಸ್ತ ಸಭೆಗೆ ಹಿತವಚನಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-47 — ಕೊರತೆ ಮತ್ತು ಸಂಕಟಗಳ ಸಮಯದಲ್ಲಿ ಕ್ರೈಸ್ತರ ಮನೋಭಾವ

    ಮಾನವರು ತಮ್ಮ ನೆರೆಯವರನ್ನು ಪ್ರೀತಿಸುತ್ತಾರೋ ಇಲ್ಲವೋ ಎಂಬುದನ್ನುವ್ಯಕ್ತಪಡಿಸುವ ಅವಕಾಶವನ್ನು ದೇವರು ಇಂದು ಅವರಿಗೆ ಕೊಡುವನು.ದೇವರನ್ನುಮತ್ತು ನೆರೆಯವರನ್ನು ಯಥಾರ್ಥವಾಗಿ ಪ್ರೀತಿಸುವನು ದರಿದ್ರರು, ನಿರ್ಗತಿಕರು, ಕಷ್ಟಸಂಕಟದಲ್ಲಿರುವವರು, ಗಾಯಪಟ್ಟವರು, ಸಾಯಲು ಸಿದ್ಧರಾಗಿರುವವರಿಗೆ ಕರುಣೆತೊರಿಸುತ್ತಾನೆ. ನಾವು ಅಲಕ್ಷ್ಯ ಮಾಡಿದ ಕೆಲಸವನ್ನು ಪೂರೈಸುವಂತೆಯೂ ಹಾಗುಸೃಷ್ಟಿಕರ್ತನ ನೈತಿಕ ಸ್ವರೂಪವನ್ನು ಪುನಃಸ್ಥಾಪಿಸಲು ಪ್ರಯತ್ನಿಸಬೇಕೆಂದು ದೇವರುಪ್ರತಿಯೊಬ್ಬರನ್ನು ಕರೆಯುತ್ತಾನೆ.KanCCh 347.1

    ಇತರಿಗಾಗಿ ಸೇವೆಮಾಡುವ ಪ್ರಯತ್ನದಲ್ಲಿ ನಿಸ್ವಾರ್ಥತೆ, ಹಾಗು ತ್ಯಾಗ ಮನೋಭಾವಹೊಂದಿರಬೇಕು, ದೇವರು ತನ್ನ ಒಬ್ಬನೇ ಮಗನನ್ನು ನಮಗಾಗಿ ಬಲಿಕೊಟ್ಟಂತ ಆತನತ್ಯಾಗಕ್ಕೆ ಹೋಲಿಸಿದಾಗ ನಾವು ಮಾಡುವ ಅಲ್ಪ ತ್ಯಾಗವು ಏನೂ ಅಲ್ಲ.KanCCh 347.2

    ನೀವು ಜೀವಪಡೆಯಲು ಅಗತ್ಯವಾದ ಷರತ್ತುಗಳನ್ನು ನಮ್ಮ ರಕ್ಷಕನು ನೇರವಾಗಿಯೂಹಾಗು ಅತ್ಯಂತ ಸರಳವಾದ ರೀತಿಯಲ್ಲಿಯೂ ತಿಳಿಸಿದ್ದಾನೆ. ಒಳ್ಳೆ ಸಮಾರ್ಯದವನಸಾಮ್ಯದಲ್ಲಿ (ಲೂಕ 10:30.37) ಕಳ್ಳರ ಕೈಗೆ ಸಿಕ್ಕಿ ಗಾಯಪಟ್ಟಂತಹ ವ್ಯಕ್ತಿಯು ನಾವುಯಾರಿಗೆ ಕರುಣೆ, ಅನುಕಂಪ ಪ್ರೀತಿ, ಆಸಕ್ತಿ ತೋರಿಸಬೇಕೆಂಬುದನ್ನು ಸೂಚಿಸುತ್ತವೆ.ನಮ್ಮ ಗಮನಕ್ಕೆ ಬರುವ ಕಷ್ಟ ದುಃಖದಲ್ಲಿರುವ ನತದೃಷ್ಟರು ಯಾರೇ ಆಗಿರಲಿ ಅಂತವರನ್ನುನಾವು ನಿರ್ಲಕ್ಷಿಸಿದಲ್ಲಿ, ನಮಗೆ ನಿತ್ಯ ಜೀವ ದೊರೆಯುವುದಿಲ್ಲ. ಅವರು ನಮಗೆಯಾವುದೇ ರೀತಿಯಲ್ಲಿ ರಕ್ತಸಂಬಂಧಿಗಳಲ್ಲದ್ದರಿಂದ, ಅವರ ಮೇಲೆ ನಾವು ಅನುಕಂಪಹಾಗು ತೋರಿಸುವುದಿಲ್ಲ. “ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂಬಎರಡನೇ ದೊಡ್ಡ ಆಜ್ಞೆಯನ್ನು ನಾವು ಮೀರಿದಂತಾಗುತ್ತದೆ. [ಮತ್ತಾಯ 22:37-40].ಈ ಆಜ್ಞೆಯ ಮೇಲೆ ಕೊನೆಯ ಆರುಆಜ್ಞೆಗಳು ಆಧಾರಗೊಂಡಿವೆ [ವಿಮೋಚನ ಖಾಂಡ20:12-17]. ಯಾವನಾದರು ಹತ್ತು ಅಜ್ಞೆಗಳಲ್ಲಿ ಒಂದನ್ನು ಮೀರಿದರೂ ಎಲ್ಲಾ ಆಜ್ಞೆಗಳನ್ನುಮೀರಿದಂತಾಗುತ್ತದೆ ” ಯಾಕೆಂದರೆ ಯಾವನಾದರು ಧರ್ಮಶಾಸ್ತ್ರವನೆಲ್ಲ ಕೈಗೊಂಡುನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂಅಪರಾಧಿಯಾಗುತ್ತಾನೆ (ಯಾಕೋಬನು 2-10). ಇತರರ ಕಷ್ಟಸಂಕಟ, ಕೊರತೆಗಳಲ್ಲಿಅನುಕಂಪ ತೋರದಿರುವವರು ಹತ್ತು ಆಜ್ಞೆಗಳಲ್ಲಿ ಮೊದಲಿನ ನಾಲ್ಕು ಆಜ್ಞೆಗಳನ್ನುಮೀರುತ್ತಾರೆ (ವಿಮೋಚನಕಾಂಡ 20:1-11). “ನಿನ್ನ ದೇವರಾದ ಕರ್ತನನ್ನು ನಿನ್ನಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣಪ್ರಾಣದಿಂದಲೂ, ನಿನ್ನ ಪೂರ್ಣಶಕ್ತಿಯಿಂದಲೂ, ನಿನ್ನ ಪೂರ್ಣಬುದ್ದಿಯಿಂದಲೂ ಪ್ರೀತಿಸಬೇಕು” ಎಂಬ ಆಜ್ಞೆಯನ್ನುಅಂತವರು ಮೀರಿ ನಡೆದಂತಾಗುತ್ತದೆ [ಲೂಕ್ 10:27]. ಅವರ ಹೃದಯದಲ್ಲಿ ಸೈತಾನನುವಾಸವಾಗಿರುವುದರಿಂದ, ದೇವರಿಗೆ ಅಂತವರಿಂದ ಗೌರವವುಂಟಾಗುವುದಿಲ್ಲ.KanCCh 347.3

    ಯಾರು ಕರುಣೆ, ಅನುಕಂಪ, ನೀತಿಯನ್ನು ಅಸಡ್ಡೆ ಮಾಡುತ್ತಾರೋ, ಬಡವರನ್ನುತಿರಸ್ಕರಿಸಿ ಮನುಷ್ಯರ ಕಷ್ಟಸಂಕಟಗಳನ್ನು ನಿರ್ಲಕ್ಷಿಸುವರೋ, ಯಾರಲ್ಲಿ ಕರುಣೆ ಮತ್ತುಸೌಜನ್ಯ ಇಲ್ಲವೋ, ಅಂತವರ ಗುಣಸ್ವಭಾವ ಬೆಳವಣಿಗೆಯಲ್ಲಿ ದೇವರು ಸಹಕಾರನೀಡಲಾರನು. ಇದನ್ನು ಅವರು ತಮ್ಮ ಹೃದಯದ ಹಲಗೆಯಲ್ಲಿ ಬರೆದಿಟ್ಟುಕೊಳ್ಳಬೇಕು.ಇತರರ ಬಗ್ಗೆ ಕರುಣೆ ತೋರಿಸಿ ಅವರ ಅಗತ್ಯಗಳನ್ನು ಪೂರೈಸುವುದಕ್ಕೆ ನಮ್ಮ ಶಕ್ತಿಮೀರಿ ಸಹಾಯಮಾಡಿದಾಗ ಬೌದ್ಧಿಕ ಬೆಳವಣಿಗೆಯು ಹೆಚ್ಚು ಸುಲಭವಾಗಿ ಸಾಧ್ಯವಾಗುತ್ತದೆ.ನಮ್ಮಲ್ಲಿರುವುದನ್ನು ಜಿಪುಣತನ ಹಾಗು ಸ್ವಾರ್ಥದಿಂದ ನಾವೇ ಇಟ್ಟುಕೊಂಡಲ್ಲಿ, ಅದುಆತ್ಮೀಕ ಬಡತನವಾಗುತ್ತದೆ. ಕ್ರಿಸ್ತನ ಮಾದರಿ ಅನುಸರಿಸಿ, ದೇವರು ಮಾಡಬೇಕೆಂದಿರುವಕಾರ್ಯಗಳನ್ನು ಮಾಡುವವರು ಕ್ರಿಸ್ತನ ಗುಣಸ್ವಭಾವವನ್ನು ಪಡೆದುಕೊಳ್ಳುವರು.KanCCh 348.1

    ನಮ್ಮ ರಕ್ಷಕನು ಜಾತಿ, ಮತ, ಬಡವಬಲ್ಲಿದ ಮತ್ತು ಲೌಕಿಕ ಗೌರವ ಹಾಗೂಶ್ರೀಮಂತಿಕೆಯನ್ನು ನಿರಾಕರಿಸಿದನು. ಮನುಷ್ಯರ ಉತ್ತಮ ಗುಣನಡತೆ, ಹಾಗೂಕಾರ್ಯನಿಷ್ಠೆ, ಶ್ರದ್ಧೆಗೆ ಆತನು ಹೆಚ್ಚು ಗೌರವ ನೀಡಿದನು. ಆತನು ಸಮಾಜದಲ್ಲಿಬಲಿಷ್ಟರು ಹಾಗೂ ಲೌಕಿಕತೆಯಲ್ಲಿ ಆಸಕ್ತಿಯುಳ್ಳವರ ಪರವಹಿಸಲಿಲ್ಲ. ಜೀವಸ್ವರೂಪದೇವರ ಮಗನಾದ ಕ್ರಿಸ್ತನು ಪಾಪದಿಂದ ಬಿದ್ದುಹೋಗಿರುವವರನ್ನು ಉದ್ಧರಿಸಲು ದಾಸನರೂಪಧರಿಸಿ ಈ ಲೋಕಕ್ಕೆ ಬಂದನು. ಭರವಸೆಯ ಮಾತುಗಳು, ಸ್ನೇಹಪೂರಿತ ವಾಗ್ದಾನಗಳಮೂಲಕ ಕಳೆದುಹೋಗಿ ಆತ್ಮಿಕವಾಗಿ ನಾಶವಾಗುತ್ತಿರುವವರನ್ನು ತನ್ನಬಳಿಗೆ ಬರುವಂತೆಆತನು ಪ್ರಯತ್ನಿಸಿದನು. ಕ್ರಿಸ್ತನ ಹಿಂಬಾಲಕರಲ್ಲಿ ಯಾರು ಕರುಣೆ, ಅನುಕಂಪ, ದಯೆತೋರಿಸುತ್ತಾರೆಂದು ದೇವದೂತರು ಗಮನಿಸುತ್ತಾರೆ. ದೇವಜನರಲ್ಲಿ ಯಾರು ಕ್ರಿಸ್ತನಂತನಿಸ್ವಾರ್ಥ, ತ್ಯಾಗದಿಂದ ಕೂಡಿದ ಪ್ರೀತಿ ವ್ಯಕ್ತಪಡಿಸುತ್ತಾರೆಂದು ಅವರು ನೋಡುತ್ತಿದ್ದಾರೆ.KanCCh 348.2

    ದೇವರು ನಿಮ್ಮ ಉದಾರವಾದ ಹಣಸಹಾಯ ಮಾತ್ರವಲ್ಲದೆ, ನಿಮ್ಮ ಹಸನ್ಮುಖ.ಮಾತುಗಳು ಹಾಗೂ ನಿಮ್ಮ ಸಹಾಯ ಹಸ್ತವನ್ನೂ ಸಹ ಆಶಿಸುತ್ತಾನೆ.ಕಷ್ಟಬಾಧೆಗಳಿಗೆ ಒಳಗಾದವರನ್ನು ಸಂಧಿಸಿದಾಗ, ಅವರಲ್ಲಿ ಅನೇಕರು ನಿರೀಕ್ಷೆಕಳೆದುಕೊಂಡವರಿರುತ್ತಾರೆ. ಅಂತವರ ಮುಖದಲ್ಲಿ ನಿರೀಕ್ಷೆ ಹಾಗೂ ಸಂತೋಷ ಬರುವಂತೆಮಾಡಿ. ಜೀವದರೊಟ್ಟಿಯ ಅಗತ್ಯವಿರುವವರಿದ್ದಾರೆ. ಅವರಿಗೆ ದೇವರ ವಾಕ್ಯವನ್ನು ಓದಿತಿಳಿಸಿ, ಅನೇಕರ ಮನಸ್ಸು ಕುಗ್ಗಿ ಹೋಗಿದೆ; ಅವರನ್ನು ಯಾವ ವೈದ್ಯರಾಗಲಿ ಅಥವಾಔಷಧವಾಗಲಿ ಗುಣಪಡಿಸಲಾಗದು. ಅವರಿಗಾಗಿ ಪ್ರಾರ್ಥಿಸಿ, ಕ್ರಿಸ್ತನ ಬಳಿಗೆ ತನ್ನಿರಿ.KanCCh 348.3